ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದ ಪ್ರತಿ ಮಗುವಿಗೂ ಉತ್ತಮ ಶಿಕ್ಷಣ ಸಿಗಬೇಕು ಎಂಬ ದೃಷ್ಟಿಯಿಂದ ಹುಟ್ಟುಹಾಕಿದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಂಗ್ಲ ಮಾಧ್ಯಮದ ದಾಖಲಾತಿಯ ಸಂಖ್ಯೆಯನ್ನು ಮಿತಿಗೊಳಿಸುವುದು ಮಕ್ಕಳ ಜ್ಞಾನ ವೃದ್ಧಿಗೆ ಹಿನ್ನಡೆಯಾಗಲಿದೆ ಎಂಬ ಕೂಗ ಈಗ ರಾಜ್ಯಾದ್ಯಂತ ಕೇಳಿ ಬರುತ್ತಿದೆ.
ಹೌದು..! 2019 -20 ನೇ ಸಾಲಿನಿಂದ ಪ್ರಾರಂಭಿಸಲಾದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ (ಕೆಪಿಎಸ್) ಆಂಗ್ಲ ಮಾಧ್ಯಮದ ದಾಖಲಾತಿಯ ಸಂಖ್ಯೆಯನ್ನು 30 ಮಕ್ಕಳಿಗಷ್ಟೇ ಮಿತಿಗೊಳಿಸುವುದು ಸರಿಯಲ್ಲ ಎಂದು ಪಾಲಕರು ಶಿಕ್ಷಣ ಸಚಿವರಲ್ಲಿ ಮನವಿ ಮಾಡಿದ್ದಾರೆ.
2019-20 ನೇ ಸಾಲಿನಲ್ಲಿ ಹೊಸದಾಗಿ ಕರ್ನಾಟಕ ರಾಜ್ಯಾದ್ಯಂತ ಒಂದು ಸಾವಿರ ಕೆಪಿಎಸ್ ಶಾಲೆಗಳನ್ನು ತೆರೆಯಲಾಗಿದೆ. ಶಾಲೆಗಳಲ್ಲಿ 2019-20, 2020-21 ಮತ್ತು 2021-22 ನೇ ಸಾಲಿನಲ್ಲಿ ಖಾಸಗಿ ಶಾಲೆಗಳ ಫೀಜ್ ಭರಿಸಲಾಗದೆ ಪಾಲಕರು ಕೆಪಿಎಸ್ ಶಾಲೆಗಳಲ್ಲಿ ಮಕ್ಕಳನ್ನು ದಾಖಲಿಸಲು ಮುಂದಾಗುತ್ತಿದ್ದಾರೆ. ಆದರೆ ಒಂದನೇ ತರಗತಿಗೆ ಕೇಲವ 30 ಮಕ್ಕಳನಷ್ಟೇ ದಾಖಲಿಸಿಕೊಳ್ಳಬೇಕು ಎಂಬ ನಿಯಮ ಮಾಡಿರುವುದು ಈಗ ಪಾಲಕರಿಗೆ ನುಂಗಲಾರದ ತುತ್ತಾಗಿ ಪರಿಣಮಿಸುತ್ತಿದೆ.
ಕೊರೊನಾ ಮಹಾಮಾರಿಯಿಂದ ಹೆಚ್ಚಿನ ತಂದೆ-ತಾಯಿಗಳು ತಮ್ಮ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಅಲ್ಲದೆ ಅನೇಕ ಪೋಷಕರು ನಗರಗಳನ್ನು ತೊರೆದು ತಮ್ಮ ಸ್ವಂತ ಗ್ರಾಮಗಳಿಗೆ ಹಿಂದಿರುಗಿದ್ದಾರೆ. ಈ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಂದ ಬಿಡಿಸಿ ಸರ್ಕಾರಿ ಶಾಲೆಗಳಲ್ಲಿ ದಾಖಲು ಮಾಡುತ್ತಿದ್ದಾರೆ.
ಈ ಸಮಯದಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯು ಕೆಪಿಎಸ್ ಆಂಗ್ಲಮಾಧ್ಯಮ ತರಗತಿಗೆ ದಾಖಲಾತಿಯನ್ನು ನೀಡುವ ಸಂದರ್ಭದಲ್ಲಿ ದಾಖಲಾತಿಯ ಸಂಖ್ಯೆಯನ್ನು ಮಿತಿಗೊಳಿಸುವುದು ಎಷ್ಟು ಸಮಂಜಸವಾಗಿದೆ. ಪೋಷಕರು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮಕ್ಕೆ ದಾಖಲೆಯನ್ನು ಬಯಸಿದ್ದ ಸಮಯದಲ್ಲಿ ಸಚಿವರು ಹೆಚ್ಚಿನ ಮಕ್ಕಳ ದಾಖಲಾತಿಯನ್ನು ಮಾಡುವಂತೆ ಆದೇಶ ಮಾಡುವ ಮೂಲಕ ಸರ್ಕಾರಿ ಶಾಲೆಯಲ್ಲಿ ದಾಖಲಾತಿಯನ್ನು ಹೆಚ್ಚಿಸಬೇಕು.
ಆದರೆ, ಆಂಗ್ಲ ಮಾಧ್ಯಮಕ್ಕೆ ನಿಗದಿಪಡಿಸಿದ ಸಂಖ್ಯೆಯ ದಾಖಲಾತಿ ಮುಕ್ತಾಯವಾದ ಬಳಿಕ ಉಳಿದ ಮಕ್ಕಳು ಕನ್ನಡ ಮಾಧ್ಯಮಕ್ಕೆ ದಾಖಲಾತಿಯನ್ನು ಪಡೆಯಬೇಕು ಎಂಬ ಆದೇಶವನ್ನು ನೀಡಿದ್ದಾರೆ. ಅಲ್ಲದೆ ಇಂತಿಷ್ಟೇ ಆಂಗ್ಲ ಮಾಧ್ಯಮಕ್ಕೆ ದಾಖಲಿಸಿಕೊಳ್ಳಬೇಕು ಎಂಬ ನಿಯಮ ಮಾಡಿದ್ದು, ಅದರಲ್ಲಿ ಒಂದನೇ ತರಗತಿಗೆ ಒಂದು ಶಾಲೆಯಲ್ಲಿ 30 ಮಕ್ಕಳನ್ನಷ್ಟೇ ದಾಖಲಿಸಿಕೊಳ್ಳಬೇಕು ಎಂದು ನಿರ್ಧರಿಸಿರುವುದು ಎಷ್ಟು ಸಮಂಜಸ. ಒಂದು ತಾಲೂಕು, ನಗರದಲ್ಲಿ ಎರಡು ಶಾಲೆಯನ್ನು ತೆರೆಯಲಾಗಿದ್ದು ಒಂದರಿಂದ ಮೂರನೇ ತರಗತಿಗೆ 30 ಸಂಖ್ಯೆಯ ದಾಖಲಾತಿಯನ್ನು ನಿಗದಿಪಡಿಸಿದರೆ ಉಳಿದ ಮಕ್ಕಳಿಗೆ ಅನ್ಯಾಯವಾಗುವುದಿಲ್ಲವೆ.
ಅಲ್ಲದೆ ಮೊದಲು ದಾಖಲಾತಿಯನ್ನು ಪಡೆದ ಮಕ್ಕಳು 30 ಸಂಖ್ಯೆಯನ್ನು ನಿಗದಿಪಡಿಸಿದ ದಾಖಲಾತಿಗೂ ಹೆಚ್ಚಿನ ಸಂಖ್ಯೆಯಲ್ಲಿ ಆಂಗ್ಲ ಮಾಧ್ಯಮಕ್ಕೆ ದಾಖಲಾತಿಯನ್ನು ಬಯಸಿ ಅರ್ಜಿ ಸಲ್ಲಿಸಿದರೆ. ಅಂಥ ಸಂದರ್ಭದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಬೇಕು ಎಂದಿರುವುದು ಯಾವ ರೀತಿಯ ಮಾನದಂಡವಾಗಿದೆ. ಲಾಟರಿ ಎತ್ತುವ ಮೂಲಕ ಆಯ್ಕೆ ಮಾಡಿ ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ಸರ್ಕಾರ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಹೊರಟಿದೆ. ಆದರೆ ಹೀಗೆ ಏನೂ ತಿಳಿಯದ ಮಕ್ಕಳ ಅದೃಷ್ಟ ಪರೀಕ್ಷೆ ಮಾಡುವುದು ಎಷ್ಟು ಸರಿ ಎಂದು ಪಾಲಕರು ಪ್ರಶ್ನಿಸಿದ್ದಾರೆ.
ಇನ್ನು ಈ ಕೋವಿಡ್ ಸಮಯದಲ್ಲಿ ಪೋಷಕರು ಸರ್ಕಾರಿ ಶಾಲೆಗೆ ಮಕ್ಕಳ ಸೇರಿಸಲು ಮುಂದಾಗುತ್ತಿದ್ದಾರೆ. ಆದ್ದರಿಂದ ದಾಖಲಾತಿ ಬಯಸಿ ಬರುವ ಎಲ್ಲ ಮಕ್ಕಳನ್ನು ಸೇರಿಸಿಕೊಂಡು ಆಂಗ್ಲಮಾಧ್ಯಮದ ಹಾಗೂ ಕನ್ನಡ ಮಾಧ್ಯಮದ ತರಗತಿವಾರು ವಿಭಾಗವನ್ನು ಹೆಚ್ಚಿಸಬೇಕು ಎಂದು ಆಗ್ರಹಿಸಿದ್ದಾರೆ.
ಮಕ್ಕಳ ಶಾಲಾ ದಾಖಲಾತಿಗೆ ಲಾಟರಿಯಿಂದ ಆಯ್ಕೆ ಮಾಡುವ ಮೂಲಕ ಏನೂ ಅರಿವಿರದ ಮಕ್ಕಳ ಅದೃಷ್ಟವನ್ನು ಪರೀಕ್ಷಿಸುವುದು ಸರಿಯಲ್ಲ. ಈ ರೀತಿ ಶಿಕ್ಷಣ ಇಲಾಖೆ ದಾಖಲಾತಿ ಸಂಖ್ಯೆಯನ್ನು ಮಿತಿಗೊಳಿಸಿದರೆ ಪೋಷಕರು ಮತ್ತು ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲು ಮಾಡುವಂತೆ ಉತ್ತೇಜನ ನೀಡಿದಂತೆ ಆಗುತ್ತದೆ. ಅಲ್ಲದೆ ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳನ್ನು ಅವನತಿಗೆ ದುಡಿದಂತೆ ಆಗುತ್ತದೆ. ಆದ್ದರಿಂದ ಕೆಪಿಎಸ್ ಆಗುವ ಇತರ ಸರ್ಕಾರಿ ಶಾಲೆಗಳಲ್ಲಿ ಆಂಗ್ಲ ಮತ್ತು ಕನ್ನಡ ಮಾಧ್ಯಮಕ್ಕೆ ದಾಖಲೆ ಬಯಸಿದ ಮಕ್ಕಳಿಗೆ ದಾಖಲಾತಿಯ ಪ್ರಮಾಣವನ್ನು ನಿಗದಿ ಪಡಿಸುವ ಬದಲು ಪೋಷಕರು ಹಾಗೂ ಮಕ್ಕಳು ಬಯಸಿದ ಮಾಧ್ಯಮಕ್ಕೆ ದಾಖಲಿಸಿಕೊಳ್ಳುವ ಮೂಲಕ ಎಲ್ಲರಿಗೂ ಅವಕಾಶ ಮಾಡಿ ಕೊಡಬೇಕು. ಜತೆಗೆ ಸರ್ಕಾರಿ ಶಾಲೆಗಳ ಗುಣಮಟ್ಟವನ್ನು ಹೆಚ್ಚಿಸಬೇಕು.
l ಎಚ್.ಬಿ.ಶಿವರಾಜು, ವಕೀಲರು, ಸುಪ್ರೀಂ ಕೋರ್ಟ್ ಹಾಗೂ ಕರ್ನಾಟಕ ಹೈ ಕೋರ್ಟ್
ಸರ್ ಎಲ್ಕೆಜಿ ಇಂದ
ನಾಲಕ್ಕನೇ ತರಗತಿವರೆಗೆ
ಪ್ರೈವೇಟ್ ಸ್ಕೂಲ್ ಓದಿ ಸೇರುತ್ತೇವೆ
ಎಲ್ಕೆಜಿ ಎಲ್ಲಿ
34000 ಡೊನೇಶನ್ ಪಡೆದಿರುತ್ತಾರೆ
ಆದರೆ ನಾಲ್ಕನೇ ತರಗತಿಯಲ್ಲಿ
ಆನ್ಲೈನ್ ಕ್ಲಾಸ್ ಎಂದು
ಹಣ ಹೆಚ್ಚಿಗೆ ಪಡೆಯುತ್ತಿದ್ದು
ಅದಕ್ಕೆ ನಾವು ಬೇರೆ ಶಾಲೆಯಲ್ಲಿ
ಓದಿಸಲು ಮುಂದಾದಾಗ
ಮೊದಲು ಆನ್ಲೈನ್ ಕ್ಲಾಸಿಂದ 15000
ಕಟ್ಟಿಸಿ ಕೊಂಡಿರುತ್ತಾರೆ
ಟಿ ಸಿ ಕೇಳಲು ಹೋದಾಗ
ಇನ್ನು 14000
ಬಾಕಿ ಕಟ್ಟಬೇಕು ಎಂದು
ಟಿಸಿ ಕೊಡದೆ ಕಳಿಸಿರುತ್ತಾರೆ
ಏನು ಮಾಡೋದು ಸರ್
ಎಎಪಿ ಅವರು ಕೊಟ್ಟಿರುವ ಮೊ.ನಂ: 7292022063ಗೆ ಕರೆ ಮಾಡಿ ಸಹಾಯ ಪಡೆಯಬಹುದು.