ಬೆಂಗಳೂರು: ಮುಷ್ಕರ ವೇಳೆ ವರ್ಗಾವಣೆ ಮಾಡಲಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅಂಗವಿಕಲ ನೌಕರರ ವರ್ಗಾವಣೆಗೆಯನ್ನು ರದ್ದುಗೊಳಿಸಿ ನೌಕರರು ಸೇವೆ ಸಲ್ಲಿಸುತ್ತಿದ್ದ ಸ್ಥಳ ಮತ್ತು ಹುದ್ದೆಯಲ್ಲಿ ಮುಂದುವರಿಯುವಂತೆ ಹಾಗೂ ಅವರಿಗೆ ತಡೆಹಿಡಿದಿರುವ ವೇತನ ಹಾಗೂ ಇತರ ಭತ್ಯೆಗಳನ್ನು ತುರ್ತಾಗಿ ಪಾವತಿಸುವಂತೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರು ಇದೇ ಅ.12ರಂದು ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ಕರ್ನಾಟಕ ರಾಜ್ಯ ವಿಕಲಚೇತನ ರಕ್ಷಣಾ ಸಮಿತಿಯ ಕಾರ್ಯಾಧ್ಯಕ್ಷ ಚಂದ್ರಶೇಖರ್ ಪುಟ್ಟಪ್ಪ, ಕರ್ನಾಟಕ ರಾಜ್ಯ ಸರಕಾರಿ/ ಅರೆ ಸರಕಾರಿ ವಿಕಲಚೇತನ ನೌಕರರ ಸಂಘ ಬೆಂಗಳೂರು ಎಸ್.ಎಲ್ ರಾಥೋಡ್, ಜಿಲ್ಲಾ ಘಟಕ ಕರ್ನಾಟಕ ಪಬ್ಲಿಕ್ ಸ್ಕೂಲ್, ಕುಂಬ್ರಾ ಪುತ್ತೂರು ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ (ಮಂಗಳೂರು) ಹಾಗೂ ರಾಮಣ್ಣ ಆರ್ ಬಿನ್ ಲೇಟ್ ರಂಗಯ್ಯ, ನಿರ್ವಾಹಕಿ ಚಂಪಕಾವತಿ, ಕೆಎಸ್ಆರ್ಟಿಸಿ ಚಿತ್ರದುರ್ಗ ಘಟಕದ ನಿರ್ವಾಹಕ ಬಾಬುರಾಜ್ ಇವರು ರಾಜ್ಯ ಆಯುಕ್ತರು ಅಂಗವಿಕಲ ವ್ಯಕ್ತಿಗಳ ಅಧಿನಿಯಮ 2016 ಇವರ ನ್ಯಾಯಾಲಯದಲ್ಲಿ ದಾಖಲಿಸಿದ್ದ ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಧೀಶರು ಈ ಆದೇಶ ಹೊಡಿಸಿದ್ದಾರೆ.
ನಿಗಮವು ಕಳೆದ ಏಪ್ರಿಲ್ 9 -ರಂದು ವಿವಿಧ ಸಾಮಾನ್ಯ ಸಿಬ್ಬಂದಿ/ ಅಲ್ಲಿನ ಅಂಗವಿಕಲ ನೌಕರರ ವರ್ಗಾವಣೆ ಮಾಡಿರುವುದನ್ನು ರದ್ದುಗೊಳಿಸಿದ ನೌಕರರು ಈ ಹಿಂದೆ ಸೇವೆ ಸಲ್ಲಿಸುತ್ತಿದ್ದ ಸ್ಥಳ ಮತ್ತು ಹುದ್ದೆಯಲ್ಲಿಯೇ ಮುಂದುವರಿಯುವಂತೆ ರಾಜ್ಯ ಅಂಗವಿಕಲ ವ್ಯಕ್ತಿಗಳ ಆಯುಕ್ತರಾದ ಡಾ. ವಿ. ಮುನಿರಾಜು ಅವರು ಮಧ್ಯಂತರ ಆದೇಶ ಹೊರಡಿಸಿದ್ದಾರೆ.
ಇನ್ನು ಏಪ್ರಿಲ್ 9 ರಿಂದ ಪುನಃ ಕರ್ತವ್ಯಕ್ಕೆ ಹಾಜರುಪಡಿಸಿ ಕೊಳ್ಳುವ ವರೆಗಿನ ಅವಧಿಯನ್ನು ಕರ್ತವ್ಯದ ಅವಧಿಯೆಂದೇ ಪರಿಗಣಿಸಿ, ಕ್ರಮಕೈಗೊಂಡ ಬಗ್ಗೆ ರಾಜ್ಯ ಆಯುಕ್ತರು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ.
ಈ ಮಧ್ಯಂತರ ಆದೇಶವನ್ನು ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ 2016ರ ಕಲಂ 82 ಮತ್ತು 82 (2) ರ ಚಾರಿತ್ಯ ಆಯುಕ್ತರಿಗೆ ನೀಡಿರುವ ಅಧಿಕಾರದನ್ವಯ ಹೊರಡಿಸಲಾಗಿದೆ. ಈ ಮಧ್ಯಂತರ ಆದೇಶ ಜಾರಿಯಾದ ಮೂವತ್ತು ದಿನಗಳೊಳಗಾಗಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ಮೇಲ್ಕಂಡ ಅಧಿಕಾರಿಗಳಿಗೆ ಸೂಚಿಸಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.
ಈ ಮೂಲಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು ನೌಕರರ ವಿರುದ್ಧ ಮನ ಬಂದಂತೆ ನಡೆದುಕೊಳ್ಳುವುದಕ್ಕೆ ನ್ಯಾಯಾಲಯದ ಆಯಕ್ತರು ಕಡಿವಾಣ ಹಾಕಿದ್ದಾರೆ. ಇದು ಒಂದು ರೀತಿ ನೌಕರರ ಹೋರಾಟಕ್ಕೆ ಜಯ ಸಿಕ್ಕಂತ್ತಾಗಿದೆ.