Vijayapatha – ವಿಜಯಪಥ
Saturday, November 2, 2024
Breaking NewsNEWSನಮ್ಮರಾಜ್ಯ

ಸಾರಿಗೆ ನೌಕರರು ವೈಯಕ್ತಿಕವಾಗಿ ಲೇಬರ್‌ ಕೋರ್ಟ್‌ ಮೊರೆ ಹೋಗಬೇಡಿ: ವಕೀಲ ಶಿವರಾಜು

ಕರ್ನಾಟಕ ಹೈ ಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ವಕೀಲ ಎಚ್‌.ಬಿ.ಶಿವರಾಜು.
Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರು ಕಾರ್ಮಿಕ ನ್ಯಾಯಾಲಯ (ಲೇಬರ್‌ ಕೋರ್ಟ್‌)ದ ಮೊರೆ ಹೋಗುತ್ತಿರುವ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಯಾರು ಜುಲೈ 16ರವರೆಗೆ ಕಾರ್ಮಿಕ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಹೋಗಬೇಡಿ ಎಂದು ಕರ್ನಾಟಕ ಹೈ ಕೋರ್ಟ್‌ನಲ್ಲಿ ವಕಾಲತು ವಹಿಸಿರುವ ಸುಪ್ರೀಂ ಕೋರ್ಟ್‌ ಮತ್ತು ಹೈ ಕೋರ್ಟ್‌ ವಕೀಲರಾದ ಎಚ್‌.ಬಿ.ಶಿವರಾಜು ಸಲಹೆ ನೀಡಿದ್ದಾರೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ಈಗಾಗಲೇ ರಾಜ್ಯದ ಉಚ್ಚನ್ಯಾಯಾಲಯದಲ್ಲಿ ನೌಕರರ ಪ್ರಕರಣ ಇರುವುದರಿಂದ ಅದು ಇದೇ ಜುಲೈ 16ರಂದು ಹೈ ಕೋರ್ಟ್‌ ಮುಖ್ಯನ್ಯಾಯಾಧೀಶರ ಪೀಠದ ಮುಂದೆ ವಿಚಾರಣೆಗೆ ಬರುವುದರಿಂದ ಅಂದು ಪ್ರಕರಣ ಏನಾಗುತ್ತದೆಯೋ ಅದನ್ನು ನೋಡಿಕೊಂಡು ಮುಂದಿನ ತೀರ್ಮಾನ ತೆಗೆದುಕೊಳ್ಳೋಣ ಎಂದು ತಿಳಿಸಿದ್ದಾರೆ.

ಇನ್ನು ಜುಲೈ 16ರವರೆಗೆ ಸಾರಿಗೆ ನೌಕರರಾರು ಕಾರ್ಮಿಕ ನ್ಯಾಯಾಲಯದ ಮೊರೆ ಹೋಗುವುದು ಬೇಡ. ಒಂದು ವೇಳೆ ಕಾರ್ಮಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದರೆ ಅಲ್ಲಿ ನೀವು ವೈಯಕ್ತಿಕವಾಗಿ ವಕೀಲರನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಪ್ರತಿಯೊಬ್ಬರಿಗೂ ಅದು ಆರ್ಥಿಕ ಹೊರೆಯಾಗುವ ಜತೆಗೆ ನ್ಯಾಯ ಸಿಗುವುದು ವಿಳಂಬವಾಗುತ್ತದೆ. ಆದ್ದರಿಂದ ಯಾರೂ ವೈಯಕ್ತಿಕವಾಗಿ ಕಾರ್ಮಿಕ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಡಿ ಎಂದು ತಿಳಿಸಿದ್ದಾರೆ.

ಇನ್ನು ಇದೇ ಜುಲೈ 16ರಂದು ನೌಕರರ ಪ್ರಕರಣದ ವಿಚಾರಣೆ ನಡೆದ ಬಳಿಕ ಒಂದುವೇಳೆ ನೌಕರರ ವಿರುದ್ಧವಾಗಿ ತೀರ್ಪು ಬಂದರೆ ಮುಂದಿನ ಕಾನೂನು ಹೋರಾಟದ ಬಗ್ಗೆ ಕೂಟದ ವತಿಯಿಂದ ಕಾರ್ಮಿಕರೆಲ್ಲರನ್ನೂ ಒಳಗೊಂಡಂತೆ ಒಂದು ಸಭೆ ನಡೆಸಿ ರೂಪುರೇಷೆ ರೂಪಿಸಬೇಕು. ಹೀಗಾಗಿ ಸದ್ಯದ ಪರಿಸ್ಥಿತಿಯಲ್ಲಿ ಯಾರು ಕಾರ್ಮಿಕ ನ್ಯಾಯಾಲಯಕ್ಕೆ ಹೋಗುವುದು ಸರಿಯಲ್ಲ ಎಂದು ಸಲಹೆ ನೀಡಿದ್ದಾರೆ.

ಜತೆಗೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಕಾರ್ಮಿಕರ ಪರ ವಕಾಲತು ವಹಿಸಲು ಆಯಾಯ ಜಿಲ್ಲೆಗಳಲ್ಲಿ ವಕೀಲರನ್ನು ನೇಮಿಸಿಕೊಳ್ಳಲಾಗುವುದು. ಈ ಮೂಲಕ ನಾವು ಕಾನೂನಿನ ಹೋರಾಟ ಮಾಡಬೇಕಿದೆ. ಆದ್ದರಿಂದ ಯಾರು ವೈಯಕ್ತಿಕವಾಗಿ ಕೋರ್ಟ್‌ ಮೊರೆ ಹೋಗುವುದು ಸಮಂಜಸವಲ್ಲ. ಏಕೆಂದರೆ ಅದು ನಿಮಗೇ ಹೊರೆಯಾಗುವುದು ಎಂದು ವಿವರಿಸಿದ್ದಾರೆ.

ಇನ್ನು ಕಾರ್ಮಿಕರು ಕಾನೂನು ಬದ್ಧವಾದ ಬೇಡಿಕೆಗಳನ್ನು ಈಡೇರಿಸಿಕೊಳ್ಳಲು ಕಾನೂನು ರೀತಿಯಲ್ಲೇ ಹೋರಾಟ ಮಾಡಿರುವುದರಿಂದ ಯಾರು ಭಯಪಡುವ ಅಗತ್ಯವಿಲ್ಲ. ಎಲ್ಲರೂ ಧೈರ್ಯವಾಗಿರಿ ನಿಮ್ಮ ಕಾನೂನು ಹೋರಾಟದಲ್ಲಿ ಜಯ ಸಿಗುವುದು ನೂರಕ್ಕೆ ನೂರು ಪರ್ಸೆಂಟ್‌ ಖಚಿತ ಎಂದು ವಕೀಲ ಶಿವರಾಜು ಆದ ನಾವು ಭರವಸೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ