ಬಳ್ಳಾರಿ: 1.30 ಲಕ್ಷ ನೌಕರರ ಪರವಾಗಿ ಇಂದು ಬಳ್ಳಾರಿಯಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ಆರಂಭಿಸಿದರೆ ಯಾವೊಬ್ಬ ನೌಕರನೂ ಬಂದು ಸಾಥ್ ನೀಡದೆ ಸೀರೆ ಸುತ್ತಿಕೊಂಡವರ ರೀತಿ ಕುಳಿತಿದ್ದಾರೆ.
ನಿಮಗೆ ನಾಚಿಕೆಯಾಗಬೇಕು. ತೂ.. ನಿಮ್ಮ … ನಾಯಿಯರೀತಿ ಹುಟ್ಟಿ, ನಾಯಿಯ ರೀತಿ ಸಾಯುವ ಬದಲಿಗೆ ನಾವು ದೇಶದ ಪ್ರಜೆಗಳು ನಮಗೂ ಇತರರಂತೆ ಬದುಕುವ ಹಕ್ಕಿದೆ ಎಂಬುದನ್ನು ತಿಳಿದುಕೊಂಡು ಇನ್ನಾದರೂ ನಿಮ್ಮ ಪೌರುಷತನವನ್ನು ತೋರಿಸಿ. ನಮಗೆ ಏನಾಗುವುದೋ ಎಂದು ಮೂಲೆ ಸೇರಿಕೊಂಡರೆ ನಿಮ್ಮ ಹುಟ್ಟು ನಾಯಿಗಿಂತ ಕೀಳಾಗುತ್ತದೆ.
ನಿಮಗಲ್ಲದಿದ್ದರೂ ನಿಮ್ಮ ಮಕ್ಕಳ ಭವಿಷ್ಯಕ್ಕಾದರೂ ನಿಮ್ಮ ಸಂವಿಧಾನ ಬದ್ಧ ಹಕ್ಕುಗಳನ್ನು ಪಡೆಯುವ ಪಣತೊಡಿ, ಇಲ್ಲದಿದ್ದೆ ನಿಮ್ಮನ್ನು ನೋಡಿ ಬೆಳೆಯುವ ಮಕ್ಕಳು ನಿಮ್ಮ ದಾರಿಯಲ್ಲೇ ಸಾಗುತ್ತಾರೆ. ನೀವು ಜೀತದಾಳುಗಳಂತೆ ಬದುಕುತ್ತಿದ್ದೀರಿ, ನಿಮ್ಮ ಮಕ್ಕಳನ್ನು ಜೀತ ದಾಳುಗಳಾಗಿ ಮಾಡಬೇಕಾ?
ಇನ್ನಾದರೂ ನಾವು ಗಂಡಸರು ನ್ಯಾಯಬದ್ಧವಾದ ಬೇಡಿಕೆ ಈಡೇರಿಸಿಕೊಳ್ಳುವ ಹಕ್ಕು ಸಂವಿಧಾನ ಬದ್ಧವಾಗಿ ನಮಗೂ ಇದೆ ಎಂದು ತೋರಿಸಿಕೊಳ್ಳಿ. ಇಲ್ಲ ಇದೇ ರೀತಿ ಸೀರೆ ಸುತ್ತಿಕೊಂಡು ಮನೆಯಲ್ಲಿ ಕುಳಿತುಕೊಂಡು ನಿಮ್ಮ ಹೆಂಡತಿ, ಮಕ್ಕಳನ್ನು ಭಿಕ್ಷೆ ಬೇಡಲು ಬಿಡಿ.
ನೋಡಿ ಮಹಾರಾಷ್ಟ್ರದಲ್ಲಿ ಇಂದಿನಿಂದ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ. ಆದರೆ ನೀವು ತಿನ್ನಲು ಗಂಜಿಗೂ ಗತಿಯಿಲ್ಲ ಎಂದು ಫೋನ್ ಮೇಲೆ ಪೋನ್ ಮಾಡಿಕೊಂಡು ಒಂದು ರೀತಿ ಪುರುಷತ್ವ ಕಳೆದುಕೊಂಡವರಂತೆ ಜೀವಿಸುತಿದ್ದೀರಿ. ಇದು ಒಂದು ಬದುಕಾ? ನಿಮಗೆ ಸಂವಿಧಾನ ಬದ್ಧವಾಗಿ ಕೊಟ್ಟಿರುವ ವೃತ್ತಿಯನ್ನು ಬೇಡಿ ಪಡೆಯುವ ದುರ್ಗತಿ ಬಂದಿದೆಯೇನು?
ನಮ್ಮ ಸಂವಿಧಾನ ನಿಮ್ಮ ಅರ್ಹತೆಗೆ ತಕ್ಕದಾದ ಹುದ್ದೆ ಕೊಟ್ಟಿದೆ. ಅದನ್ನು ಸದುಪಯೋಗ ಪಡಿಸಿಕೊಂಡು ಮುಂದೆ ಬನ್ನಿ. ನಿಮ್ಮ ಹಕ್ಕನ್ನು ಬೇರೆಯವರು ಕಸಿದುಕೊಳ್ಳುತ್ತಿದ್ದರೂ ಆ ಬಗ್ಗೆ ಮಾತಾಡದೆ ಸುಮ್ಮನಿದ್ದರೆ. ಮುಂದೊಂದು ದಿನ ಬೆತ್ತಲಾಗಿಸಿ ಬಿಡುತ್ತಾರೆ ಈ ಗೋ ಮುಖ ವೇಷದಲ್ಲಿರುವ ಮಂದಿ.