ಬೆಂಗಳೂರು: ಸ್ವಾಮೀಜಿಗಳು ಸಮಾಜದಲ್ಲಿ ಪ್ರತಿಯೊಬ್ಬರನ್ನೂ ಸಮಾನವಾಗಿ ಕಾಣಬೇಕು. ಆದರೆ ನಮ್ಮ ಸಮುದಾಯ ನಮ್ಮ ಸಮಾಜ ಎಂದು ಸ್ವಾಮೀಜಿಗಳು ಒಂದೊಂದು ಸಮುದಾಯಕ್ಕೆ ಅಂಕಿಕೊಂಡು, ಸ್ವಾಮೀಜಿಗಳ ವಿಶಾಲ ಮನೋಭಾವನೆಯನ್ನು ಇಂದಿನ ಸ್ವಾಮೀಜಿಗಳು ಬುಡಮೇಲು ಮಾಡುತ್ತಿರುವುದನ್ನು ನೋಡಿದರೆ ಇವರು ಒಂದು ಸಮುದಾಯಕ್ಕಷ್ಟೇ ಸ್ವಾಮೀಜಿಗಳ ಎಂಬ ಖೇದ ಉಂಟಾಗುತ್ತಿದೆ.
ನಮ್ಮ ತುಮಕೂರು ಸಿದ್ಧಗಂಗಾ ಮಠದ ಶಿವೈಕ್ಯರಾದ ಶ್ರೀ ಶವಕುಮಾರಸ್ವಾಮೀಜಿ ಅವರ ಆದರ್ಶ ಇಂದಿನ ಸ್ವಾಮೀಜಿಗಳಲ್ಲಿ ಕಾಣದಾಗುತ್ತಿದೆ. 500ಕ್ಕೂ ಹೆಚ್ಚು ಸ್ವಾಮೀಜಿಗಳು ಒಬ್ಬ ವ್ಯಕ್ತಿಯ ಬಗ್ಗೆ ನಿಲ್ಲುತ್ತಾರೆ ಎಂದರೆ ಅವರನ್ನು ಸಮಾಜ ಸುಧಾರಕರು ಎನ್ನಬೇಕೋ ಇಲ್ಲ ಯಾವುದೋ ಒಂದು ಸಮುದಾಯಕ್ಕೆ ಸೀಮಿತವಾಗಿ ಈ ಹೇಳಿಕೆ ಕೊಡುತ್ತಿದ್ದಾರೆ ಎನ್ನಬೇಕೋ ಇಂಥ ಸ್ವಾಮೀಜಿಗಳ ಬಗ್ಗೆ ಜನರೇ ತೀರ್ಮಾನ ತೆಗೆದುಕೊಳ್ಳಬೇಕು.
ಇನ್ನು ರಾಜ್ಯದಲ್ಲಿ ರಾಜಕೀಯ ಮಾಡಲು ಇಂಥ ಸ್ವಾಮೀಜಿಗಳು ಮುಂದಾಗುತ್ತಿರುವುದು ರಾಜ್ಯ ಉದ್ಧಾರವಾಗುವ ಯಾವುದೇ ಲಕ್ಷಣಗಳು ಕಾಣಿಸುತ್ತಿಲ್ಲ. ತಮ್ಮ ಖಜಾನೆಗಳನ್ನು ತುಂಬಿಸಿಕೊಳ್ಳವ ನಿಟ್ಟಿನಲ್ಲಿ ಸ್ವಾಮೀಜಿಗಳು ಬೀದಿಗಳಿದಿದ್ದಾರೆಯೇ ಎಂಬ ಪ್ರಶ್ನೆ ಮೂಡುತ್ತಿದೆ. ಸಮಾಜ ಉದ್ಧಾರದ ಬಗ್ಗೆ ಮಾತನಾಡುವ ಸ್ವಾಮೀಜಿಗಳು ಮೊದಲು ತಮ್ಮ ಘನತೆ ಎನೆಂಬುದನ್ನು ತಿಳಿದುಕೊಂಡು ಅದರಂತೆ ನಡೆದುಕೊಂಡರೆ ಉತ್ತಮ ಎಂಬ ಭಾವನೆ ಸಾಮಾನ್ಯ ನಾಗರಿಕನದ್ದಾಗಿದೆ.
ಇನ್ನು ನಾನು ಅಂದುಕೊಂಡಂತೆ ಸಿದ್ಧಗಂಗಾಶ್ರೀಗಳು ಈ ರೀತಿ ಒಬ್ಬ ವ್ಯಕ್ತಿಯ ಪರವಾಗಿ ಮಾತಾಡುತ್ತಾರೆ ಎಂದುಕೊಂಡಿರಲಿಲ್ಲ. ಕಾರಣ ಅವರ ಬಗ್ಗೆ ನಮಗೆ ಅಪಾರವಾದ ಗೌರವ ಮಠದ ಕೈಂಕರ್ಯಗಳ ಬಗ್ಗೆ ಅಗಾಧವಾದ ನಂಬಿಕೆ ಇರುವುದರಿಂದ.ಆದರೆ ಅಂಥ ಸ್ವಾಮೀಜಿಗಳು ಇಂದು ತಮ್ಮ ಸ್ಥಾನದಿಂದ ಒಂದು ಹಂತ ಕೆಳಗಿಳಿದು ಮಾತನಾಡಿರುವುದು ತುಂಬ ನೋವು ತಂದಿದೆ.
ಇನ್ನು ಉಳಿದ ಸ್ವಾಮೀಜಿಗಳು ಮಾತನಾಡಿರುವ ಬಗ್ಗೆ ಹೇಳಬೇಕೆಂದರೆ ಅವರಾರಿಗೂ ತಮ್ಮ ಸ್ಥಾನದ ಘನತೆಯ ಬಗ್ಗೆಯೇ ಗೊತ್ತಿಲ್ಲ ಎಂದೆ ಹೇಳಬಹುದು. ಒಬ್ಬ ಸ್ವಾಮೀಜಿ ಆದವರು ದೇವರಿಗೆ ಸಮ ಅಂದರೆ ನಾವು ಸ್ವಾಮೀಜಿಗಳಲ್ಲಿ ದೇವರನ್ನು ಕಾಣುತ್ತೇವೆ. ಅಂದರೆ ದೇವರು ಎಲ್ಲರನ್ನು ಸಮಾನವಾಗಿಯೇ ಕಾಣುತ್ತಾನೆ ಎಂಬ ನಂಬಿಕೆ. ಆದರೆ ಇಲ್ಲಿ ಸ್ವಾಮೀಜಿಗಳು ತಮ್ಮ ಅನಿಸಿಕೆಗಳನ್ನು ವ್ಯಕ್ತಿಗತವಾಗಿ ಹೇಳುವ ಮೂಲಕ ತಮ್ಮ ಸ್ಥಾನಕ್ಕೆ ತಾವೆ ಚ್ಯುತಿ ತಂದುಕೊಳ್ಳುತ್ತಿದ್ದಾರೆ.
ರಾಜಕೀಯಕ್ಕೆ ಎಂಟ್ರಿಕೊಡುವುದಕ್ಕೆ ಸ್ವಾಮೀಜಿಗಳು ಆತೊರೆಯುತ್ತಿರುವುದು ಏತಕ್ಕೆ. ರಾಜಕೀಯ ಮಾಡಲೆಂದೆ ಒಂದಷ್ಟು ಜನ ಇದ್ದಾರೆ. ಅವರನ್ನು ನಾವು ಈಗಾಗಲೇ ಗುರುತಿಸಿದ್ದೇವೆ ಅವರು ರಾಜಕಾರಣಿಗಳು ಎಂದು. ಅವರ ಕೆಲಸವನ್ನು ಅವರು ಮಾಡಲು ಬಿಡಿ ಅದನ್ನು ಬಿಟ್ಟು ನೀವೆ ರಾಜಕೀಯದಲ್ಲಿ ಮೂಗುತೂರಿಸಿ ಇಣಿಕಿ ನೋವುದು ಎಷ್ಟರ ಮಟ್ಟಿಗೆ ಸರಿ ಸ್ವಾಮೀಜಿಗಳೆ ಎಂದು ಜನ ಸಾಮಾನ್ಯ ನಿಮ್ಮ ಘನತೆಯ ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾನೆ. ಈಗಲಾದರೂ ನಿಮ್ಮ ಘನತೆ ಉಳಿಸಿಕೊಳ್ಳುವತ್ತ ಮುಂದಾಗಬೇಕು ಎಂಬುವುದು ನಮ್ಮ ಕಳಕಳಿಯ ಮನವಿ.