NEWSದೇಶ-ವಿದೇಶಸಿನಿಪಥ

‘ಮದಗಜ’ ತೆಲುಗು ವರ್ಷನ್​ನ ಟೀಸರ್​ ರಿಲೀಸ್​

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಿನಿಸುದ್ದಿ
ಬೆಂಗಳೂರು: ಭರಾಟೆ ನಂತರ ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯಿಸುತ್ತಿರುವ ಸಿನಿಮಾ ಮದಗಜ,  ಟೈಟಲ್ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ. ಈಗ ಇದೇ ಸಿನಿಮಾದ ತೆಲುಗು ವರ್ಷನ್​ನ ಟೀಸರ್​ ರಿಲೀಸ್​ ಆಗಿದೆ.

ಕನ್ನಡದ ಕೆಜಿಎಫ್​ ಸಿನಿಮಾ ಪರಭಾಷೆಗಳಲ್ಲಿ ತೆರೆಕಂಡು ಯಶಸ್ಸು ಪಡೆದ ನಂತರ ಕನ್ನಡದ ಹಲವಾರು ಸಿನಿಮಾಗಳು ತೆಲುಗು ಹಾಗೂ ತಮಿಳಿನಲ್ಲಿ ರಿಲೀಸ್​ ಆಗಲು ಸಜ್ಜಾಗುತ್ತಿದೆ. ಧ್ರುವ ಸರ್ಜಾ ಅಭಿನಯದ ಪೊಗರು ಸಹ ತೆಲುಗು ಹಾಗೂ ತಮಿಳಿನಲ್ಲಿ ತೆರೆ ಕಾಣಲು ಸಿದ್ಧವಾಗಿದೆ.

ಇಂತಹ ಸಾಲಿಗೆ ಕನ್ನಡದ ಮತ್ತಷ್ಟು ಸಿನಿಮಾಗಳು ಈಗ ಸೇರಿಕೊಂಡಿವೆ. ಅಯೋಗ್ಯ ಸಿನಿಮಾ ಖ್ಯಾತಿಯ ಮಹೇಶ್​ ನಿರ್ದೇಶನದ ಮದಗಜ ಸಿನಿಮಾದ ಕನ್ನಡದ ಟೀಸರ್ ಈಗಾಗಲೇ ಬಿಡುಗಡೆಯಾಗಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಈಗ ಇದೇ ಸಿನಿಮಾದ ತೆಲುಗು ವರ್ಷನ್​ನ ಟೀಸರ್​ ರಿಲೀಸ್​ ಆಗಿದೆ.

‘ಉಗ್ರಂ’ ಸಿನಿಮಾದ ಮೂಲಕ, ನಟ ಶ್ರೀಮುರಳಿ ಅವರ ಸಿನಿ ಜೀವನಕ್ಕೆ ತಿರುವು ಸಿಕ್ಕಿದ್ದು, ಶ್ರೀಮುರಳಿ ಹುಟ್ಟುಹಬ್ಬದ ಪ್ರಯುಕ್ತ ಬಹುನಿರೀಕ್ಷಿತ​ ಫಸ್ಟ್​ ಲುಕ್​ ಟೀಸರ್​ ಅನ್ನು ಲಾಂಚ್​ ಮಾಡಲಾಗಿತ್ತು. ಆ ಚಿತ್ರವನ್ನು ನಿರ್ದೇಶಿಸಿದ್ದ ಪ್ರಶಾಂತ್ ನೀಲ್​, ‘ಮದಗಜ’ ಚಿತ್ರದ ಲುಕ್​ ರಿವೀಲ್​ ಮಾಡಿದ್ದರು. ವಿಶೇಷ ಎಂದರೆ ಇದುವರೆಗೂ ಕಾಣಿಸಿಕೊಂಡಿರದ ಹೊಸ ಲುಕ್‌ನಲ್ಲಿ ಮುರಳಿ ಇಲ್ಲಿ ಮಿಂಚಿದ್ದಾರೆ.

ಧೂಳೆಬ್ಬಿಸುವ ಖಡಕ್ ಡೈಲಾಗ್​ನೊಂದಿಗೆ ಮುರಳಿ ಅಭಿಮಾನಿಗಳೆದುರು ಮತ್ತೆ ಬಂದಿದ್ದಾರೆ. ಡಿಸೆಂಬರ್​ 17ರಂದು ರಿಲೀಸ್​ ಆದ ಮದಗಜ ಚಿತ್ರದ 1.42 ಸೆಕಂಡ್ ಇರುವ ಟೀಸರ್​, ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಯೂ ಟ್ಯೂಬ್​ನಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದುಕೊಂಡಿತು. ಈಗ ಟೀಸರ್​ಗೆ 3 ಕೋಟಿಗೂ ಅಧಿಕ ವೀಕ್ಷಣೆ ಸಿಕ್ಕಿದೆ.

ಇನ್ನು ಹೊಸ ವರ್ಷಕ್ಕೆಂದು ಮದಗಜ ಚಿತ್ರತಂಡ ತೆಲುಗು ಪ್ರೇಕ್ಷಕರಿಗೆ ತೆಲುಗು ಟೀಸರ್ ಅನ್ನು ಉಡುಗೊರೆಯಾಗಿ ನೀಡಿದೆ. ಈ ತೆಲುಗು ಟೀಸರ್​ಗೆ ಶ್ರೀಮುರಳಿ ಅವರೇ ಕಂಠದಾನ ಮಾಡಿದ್ದಾರೆ. ಖಕಡ್​ ವಾಯ್ಸ್​ನಲ್ಲಿ ಹೇಳಿರುವ ಪಂಚಿಗ್ ಡೈಲಾಗ್ಸ್​ಗೆ ಟಾಲಿವುಡ್​ ಪ್ರೇಕ್ಷಕರೂ ಫಿದಾ ಆಗುತ್ತಿದ್ದಾರೆ.

ಮದಗಜ ಚಿತ್ರವನ್ನು ವಾರಣಾಸಿ, ಮೈಸೂರು, ಬೆಂಗಳೂರು ಭಾಗಗಳಲ್ಲಿ ಚಿತ್ರೀಕರಿಸಲಾಗಿದೆ. ರಾಬರ್ಟ್​ ನಿರ್ಮಾಪಕ ಉಮಾಪತಿ ಅವರು ತಮ್ಮ ಬ್ಯಾನರ್​ ಉಮಾಪತಿ ಫಿಲಂಸ್​ ಅಡಿ ಮದಗಜ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.​ ಮದಗಜ ಚಿತ್ರದ ಮೊದಲ ಕಂತು ವಾರಾಣಸಿಯಲ್ಲಿ ಮುಗಿಸಿರುವ ಚಿತ್ರತಂಡ, ಮೈಸೂರಿನಲ್ಲಿ ಎರಡನೇ ಹಂತ ಮುಗಿಸಿ, ಈಗ ಮೂರನೇ ಹಂತದ ಚಿತ್ರೀಕರಣ ಮಾಡುತ್ತಿದೆ. ಶ್ರೀಮುರಳಿಗೆ ಜೊತೆಯಾಗಿ ಅಶಿಕಾ ರಂಗನಾಥ್ ಅಭಿನಯಿಸುತ್ತಿಯಾದ್ದರೆ. ರವಿ ಬಸ್ರೂರ್ ಸಂಗೀತ ನೀಡುತ್ತಿದ್ದು ನವೀನ್ ಕುಮಾರ್ ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ.

Leave a Reply

error: Content is protected !!
LATEST
ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ