NEWSನಮ್ಮರಾಜ್ಯ

ಸಾರಿಗೆ ಅಧಿಕಾರಿಗಳಿಗೆ ಜನರ ಪ್ರಾಣಕ್ಕಿಂತ ಆದಾಯವೇ ಮುಖ್ಯವಾಯ್ತಾ

ಬೈಕ್‌ನಲ್ಲಿ ಮೂರುಜನ ವಿಮಾನ, ರೈಲುಗಳಲ್ಲಿ ಒತ್ತೊತ್ತರಿಸಿಕೊಂಡು ಕೂರುತ್ತಾರೆ ಎಂದು ಸಚಿವರ ಬೇಜವಾಬ್ದಾರಿ ಹೇಳಿಕೆ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕೊರೊನಾ ಅಟ್ಟಹಾಸಕ್ಕೆ ಈಗಾಗಲೇ ಜನ ನಲುಗಿ ಹೋಗಿದ್ದಾರೆ ಈ ನಡುವೆ  ಬಸ್‌ಗಳಲ್ಲಿ  ಸಾಮಾಜಿಕ ಅಂತರ ಕಾಪಾಡಿಕೊಂಡು ಹೋದರೆ ಸಾರಿಗೆ ಸಂಸ್ಥೆಗೆ ತುಂಬಾ ನಷ್ಟವಾಗುತ್ತದೆ. ಆದ್ದರಿಂದ ಬಸ್‌ಗಳಲ್ಲಿ ಹೆಚ್ಚು ಜನರನ್ನು ಹತ್ತಿಸಿಕೊಳ್ಳುವುದು ಅನಿವಾರ್ಯ ಎಂದು ಸಾರಿಗೆ ಸಚಿವ ಲಕ್ಷ್ಮಣ ಸವದಿ ಸಮರ್ಥಿಸಿಕೊಂಡಿದ್ದಾರೆ. ಇದು ಜನರಲ್ಲಿ ಮತ್ತಷ್ಟು ಆತಂಕವನ್ನು ಹೆಚ್ಚುವಂತರ ಮಾಡಿದೆ.

ಇನ್ನು ಬೈಕ್‌ನಲ್ಲಿ ಮೂರು ಮೂರು ಜನ ಹೋಗುತ್ತಾರೆ ವಿಮಾನ, ರೈಲುಗಳಲ್ಲಿ ಒತ್ತೊತ್ತರಿಸಿಕೊಂಡು ಕೂರುತ್ತಾರೆ. ಆದರೆ ನಮ್ಮ ಸಾರಿಗೆ ಸಂಸ್ಥೆಯಲ್ಲಿ ಮಾತ್ರ ಸಾಮಾಜಿಕ ಅಂತರ ಪಾಲನೆಯಾಗುತ್ತಿಲ್ಲ ಎಂದು ನೀವು ಹೇಳುತ್ತಿರಲ್ಲ ಎಂದು  ಸಚಿವರು ಬೇಜವಾಬ್ದಾರಿ ಮಾಧ್ಯಮದವರಿಗೆ  ಉತ್ತರ ಕೊಟ್ಟಿರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಸಚಿವರು ಹೇಳಿದಿಷ್ಟು
ಕೊರೊನಾ ಪಾಸಿಟಿವ್‌ ಇರುವ ವಲಯಗಳಲ್ಲಿ ಅಂದರೆ ರೆಡ್‌ ಮತ್ತು ಕಿತ್ತಳೆ ವಲಯಗಳಲ್ಲಿ ಮಾತ್ರ ಸಾಮಾಜಿಕ ಅಂತರ ಕಾಯ್ದುಕೊಂಡು ಉಳಿದೆಡೆ ಸಾಮಾನ್ಯರೀತಿಯಲ್ಲೇ ಬಸ್‌ನಲ್ಲಿ ಪ್ರಯಾಣಿಸಲು ಅನುವು ಮಾಡಿಕೊಡುವುದು ಸಂಸ್ಥೆ ಹಿತದೃಷ್ಟಿಯಿಂದ ಅನಿವಾರ್ಯವಾಗಿದೆ.

ಹಾಗಾಗಿ ಬಸ್‌ಗಳಲ್ಲಿ ಸಾಮಾಜಿ ಅಂತರ ಕಾಯ್ದುಕೊಳ್ಳದೆ ಆರೋಗ್ಯವಾಗಿರುವವರು ಸಂಚರಿಸಬಹುದು. ಇನ್ನು ನಮ್ಮ ಸಂಸ್ಥೆಯಲ್ಲಿ ಮಾತ್ರವಲ್ಲ ರೈಲು ಮತ್ತು ವಿಮಾನಯಾನದಲ್ಲೂ ಇದೇ ರೀತಿ ಪಾಲನೆಯಾಗುತ್ತಿದೆ. ಅದನ್ನು ಬಿಟ್ಟು ನೀವು ನಮ್ಮ ಸಂಸ್ಥೆಯಲ್ಲಿ ಮಾತ್ರ ಎಂಬಂತೆ ಏಕೆ ಕೇಳುತ್ತೀರಿ ಎಂದು ಮಾಧ್ಯಮದವರನ್ನೇ  ಪ್ರಶ್ನಿಸಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

ಇನ್ನು ಸಾರಿಗೆಯ ನಾಲ್ಕು ನಿಗಮಗಳ ಡಿಪೋಗಳ ವ್ಯವಸ್ಥಾಪಕರು ಮತ್ತು ಸಹಾಯಕ ಸಂಚಾರ ನಿರೀಕ್ಷರು ಚಾಲಕ ಮತ್ತು ನಿರ್ವಾಹಕರಿಗೆ ಮಿತಿ ಇಲ್ಲದೆ ಎಷ್ಟು ಜನ ಹತ್ತುತ್ತಾರೋ ಅಷ್ಟು ಪ್ರಯಾಣಿಕರನ್ನು ಹತ್ತಿಸಿಕೊಂಡು ಹೋಗಬೇಕು ಎಂದು ಮೌಖಿಕವಾಗಿ ಆದೇಶಿಸಿದ್ದಾರೆ.

ನೀವು ಸಾಮಾಜಿಕ ಅಂತರ ಕಾಯ್ದುಕೊಂಡರೆ  ಈಗಾಗಲೇ ನಷ್ಟದಲ್ಲಿರುವ ಸಂಸ್ಥೆ ಇನ್ನಷ್ಟು ನಷ್ಟಕ್ಕೆ ಹೋಗಲಿದೆ. ಇದರಿಂದ ನಿಮಗೆ ಸಂಬಳ ಕೊಡಲು ಕಷ್ಟವಾಗಲಿದೆ ಹೀಗಾಗಿ ನೀವು ಆದಷ್ಟು ಎಚ್ಚರಿ ವಹಿಸಿ ಪ್ರಯಾಣಿಕರನ್ನು ಅವರು ತಲುಪಬೇಕಿರುವ ಸ್ಥಳಕ್ಕೆ ತಲುಪಿಸಲು ಮುಂದಾಗಬೇಕು ಎಂದು ಸೂಚಿಸಿದ್ದಾರೆ ಎನ್ನಲಾಗುತ್ತಿದೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ    https://play.google.com/store/apps/detail

Leave a Reply

error: Content is protected !!
LATEST
KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್ KSRTC ಅಧಿಕಾರಿಗಳು-ನೌಕರರಲ್ಲಿ, ನೌಕರರು-ನೌಕರರಲ್ಲೇ ಒಗ್ಗಟ್ಟಿಲ್ಲಕ್ಕೆ ಈ ಸ್ಥಿತಿ: NWKRTC ನಿಗಮದ ಅಧ್ಯಕ್ಷ ಭರಮಗೌಡ KSRTC ನೌಕರರ ವೇತನ ಹೆಚ್ಚಳದ 38 ತಿಂಗಳ ಹಿಂಬಾಕಿ ಬೇಗ ಕೊಟ್ಟರೆ ನನಗೂ ಸಮಾಧಾನ: ಸಚಿವ ರಾಮಲಿಂಗಾ ರೆಡ್ಡಿ KSRTC-ನಮ್ಮ ಸರ್ಕಾರ ಸರಿ ಸಮಾನ ವೇತನ ಕೊಡುತ್ತದೆ ನೆಮ್ಮದಿಯಾಗಿರಿ: ಕಾಂಗ್ರೆಸ್‌ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾಕೃ... KSRTC: ಅಗ್ರಿಮೆಂಟ್‌ ಎಂಬ ಸೆಟಲ್‌ಮೆಂಟ್‌ ಭೂತವನ್ನು ಬುಡಸಮೇತ ಕಿತ್ತೊಗೆಯಬೇಕು - ವಕೀಲ ನಟರಾಜ ಶರ್ಮಾ ವೇತನ ಸಂಬಂಧ 4ವರ್ಷಕ್ಕೊಮ್ಮೆ ಆಗುವ ಅಗ್ರಿಮೆಂಟ್‌ ಬೇಡ ಕೊಟ್ಟ ಭರವಸೆ ಈಡೇರಿಸಿ: ಸಾರಿಗೆ ಸಚಿವರಿಗೆ ಚಂದ್ರು ಒತ್ತಾಯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ 247 ಹುದ್ದೆಗಳಿಗೆ ಅರ್ಜಿ ಆಹ್ವಾನ: 3 ವರ್ಷ ವಯಸ್ಸಿನ ಸಡಿಲಿಕೆ, ಡಿಗ್ರಿ ಅರ್ಹತೆ