ಬೆಂಗಳೂರು: ವಿಶ್ವಮಾರಿ ಕೊರೊನಾ ರಾಜ್ಯದಲ್ಲಿ ಇಂದು ಕೂಡ ತನ್ನ ಅಟ್ಟಹಾಸವನ್ನು ಮುಂದುವರಿಸಿದ್ದು, 2738 ಹೊಸ ಸೋಂಕಿತರು ಪತ್ತೆಯಾಗಿದ್ದಾರೆ. ಇನ್ನು ಈವರೆಗೆ ರಾಜ್ಯದಲ್ಲಿ ಒಟ್ಟು 41581 ಮಂದಿ ಸೋಂಕಿಗೆ ಒಳಗಾಗಿದ್ದಾರೆ.
ಇಂದು 73 ಮಂದಿ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಈವರೆಗೆ ರಾಜ್ಯದಲ್ಲಿ 761 ಮಂದಿ (ಅನ್ಯಕಾರಣಕ್ಕೆ 4 ಮಂದಿ ಸೇರಿ) ಮೃತಪಟ್ಟಿದ್ದಾರೆ. ಇಂದು ರಾಜ್ಯದ 73 ಮಂದಿ ಅಸುನೀಗಿದ್ದಾರೆ. ಇನ್ನು ಬೆಂಗಳೂರಿನಲ್ಲಿ 1315, ಯಾದಗಿರಿ 162, ಮೈಸೂರು 151, ದಕ್ಷಿಣ ಕನ್ನಡ 131, ಬಳ್ಳಾರಿ 106, ಕಲಬುರಗಿ 89, ವಿಜಯಪುರ 86, ಶಿವಮೊಗ್ಗ 74, ಧಾರವಾಡ 71, ಉಡುಪಿ 53, ತುಮಕೂರು 48, ರಾಯಚೂರು 45, ದಾವಣಗೆರೆ 45, ಚಿಕ್ಕಬಳ್ಳಾಪುರ 42, ಉತ್ತರ ಕನ್ನಡ ಮತ್ತು ಬಾಗಲಕೋಟೆ ತಲಾ 37, ಕೊಪ್ಪಳ 31, ಮಂಡ್ಯ 30, ಕೊಡಗು 29, ಬೆಳಗಾವಿ 27, ಹಾಸನ 25, ಬೀದರ್ 23, ಬೆಂಗಳೂರು ಗ್ರಾಮಾಂತರ ಮತ್ತು ಕೋಲಾರ ತಲಾ 21, ಚಿಕ್ಕಮಗಳೂರು 10, ಚಾಮರಾಜನಗರ 9, ಚಿತ್ರದುರ್ಗ 8, ಗದಗ ಮತ್ತು ಹಾವೇರಿ ತಲಾ 6 ಸೇರಿ ರಾಜ್ಯದಲ್ಲಿ 2738 ಮಂದಿ ಸೋಂಕಿಗೆ ಇಂದು ಒಳಗಾಗಿದ್ದಾರೆ.
ರಾಜದ ಬೆಂಗಳೂರಿನ 47, ಮೈಸೂರು 6, ಶಿವಮೊಗ್ಗ 3, ಧಾರವಾಡ 5, ಬಾಗಲಕೋಟೆ, ಕೊಡಗು, ಬೆಳಗಾವಿಯಲ್ಲಿ ತಲಾ 2, ತುಮಕೂರು, ದಾವಣಗೆರೆ, ಉತ್ತರ ಕನ್ನಡ, ಹಾವೇರಿ ಮತ್ತು ಹಾಸನದಲ್ಲಿ ತಲಾ ಒಬ್ಬರು ಸೋಮವಾರ ಕೊರೊನಾಗೆ ಬಲಿಯಾಗಿದ್ದಾರೆ.
ಇನ್ನು ಇಂದು 839 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ, ಈವರೆಗೆ ಒಟ್ಟಾರೆ 16248 ಮಂದಿ ಗುಣಮುಖರಾಗಿದ್ದಾರೆ. ಇನ್ನು 24572 ಮಂದಿ ನಿಗದಿತ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ಐಸಿಯುನಲ್ಲಿ 545 ಮಂದಿ ಇದ್ದಾರೆ.
ದೇಶದಲ್ಲಿ 898,680 ಕ್ಕೇರಿದ ಸೋಂಕಿತರ ಸಂಖ್ಯೆ
ಇನ್ನು ದೇಶದಲ್ಲಿ ಈವರೆಗೆ 898,680 ಮಂದಿಗೆ ಸೋಂಕು ಇರುವುದು ದೃಢಪಟ್ಟಿದೆ. 23,569 ಮಂದಿ ಮೃತಪಟ್ಟಿದ್ದಾರೆ. 566,664 ಮಂದಿ ರೋಗಮುಕ್ತರಾಗಿದ್ದಾರೆ. 308,447 ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಪಂಚಾದ್ಯಂತ ಈವರೆಗೆ 13,114,856 ಜನರಲ್ಲಿ ಸೋಂಕು ಇರುವುದನ್ನು ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದೆ. ಇನ್ನು 572,908 ಜನರು ಮೃತಪಟ್ಟಿದ್ದಾರೆ, 7,635,546 ಮಂದಿ ರೋಗದಿಂದ ಮುಕ್ತಗೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail