NEWSದೇಶ-ವಿದೇಶನಮ್ಮರಾಜ್ಯಸಂಸ್ಕೃತಿ

ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಗಳಿಗೆ ಜನ್ಮದಿನದ ಶುಭಾಶಯ ಕೋರಿದ ಮಾಜಿ ಪ್ರಧಾನಿ ಎಚ್‌ಡಿಡಿ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ‌ ಪರಮ ಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿಗಳಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಭಗವಂತ ತಮಗೆ ದೀರ್ಘಾಯುಷ್ಯ,ಉತ್ತಮ ಆರೋಗ್ಯ ನೀಡಲಿ ಹಾಗೂ ನಾಡಿಗೆ ತಮ್ಮ ಮಾರ್ಗದರ್ಶನ, ಆಶೀರ್ವಾದ ನಿರಂತರವಾಗಿರಲಿ ಎಂದು ಕಾಲಭೈರವೇಶ್ವರನಲ್ಲಿ ಮಾಜಿ ಪ್ರಧಾನಮಂತ್ರಿ ಎಚ್‌.ಡಿ. ದೇವೇಗೌಡ ಪ್ರಾರ್ಥಿಸಿದ್ದಾರೆ.

ಟ್ವಿಟರ್‌ ಮೂಲಕ ಶ್ರೀಗಳಿಗೆ ಜನ್ಮದಿನದ ಶುಭಾಶಯಕೋರಿರುವ ಅವರು, ನಮ್ಮ ನೆಚ್ಚಿನ ಕನ್ನಡ ಕುಲದ, ಪುರಾತನ ನಾಥ ಪರಂಪರೆಯ, ಒಕ್ಕಲಿಗ ಸಾಮ್ರಾಜ್ಯದ ಭೈರವ ಗುರುಪೀಠದ ನಗು ಮೊಗದ ಹಸನ್ಮುಖಿ ಗುರುವರ್ಯ! ಇರುರು.

ವಿದ್ಯೆಯಲ್ಲಿ ಸ್ನಾತಕೋತ್ತರ ಪದವಿ ಪಡೆದು ವಿಜ್ಞಾನಿಯಾಗಿ ಭಾರತದ ಭವಿಷ್ಯವ ಬೆಳಗಹೊರಟ ಪುತ್ರನನ್ನು ತಾಯಿ ಭಾರತೀಯು ಧರ್ಮ ರಕ್ಷಣೆಗಾಗಿ ಚುಂಚನಗಿರಿಯ ಕಾಲಭೈರವನ ಕರೆಗೆ ಕಳುಹಿಸುತ್ತಾಳೆ ಎಂದು ಸಂತಸದಿಂದ ಹೇಳಿದ್ದಾರೆ.

ಹಿಂದು ಧರ್ಮರಕ್ಷಣೆಯ, ಅನ್ನನೀಡುವ ಒಕ್ಕಲಿಗ ಕುಲದ ಏಳಿಗೆಗಾಗಿ ಹಾಗೂ ಕನ್ನಡ ಮಕ್ಕಳ ಭವಿಷ್ಯವ ಮುತ್ತಿನ ಪಲ್ಲಕ್ಕಿಯಲ್ಲಿ ಮೆರೆಸಲು ದೊಡ್ಡ  ಗುರುಗಳಾದ ಭೈರವೈಕ್ಯ ಶ್ರೀ ಬಾಲಗಂಗಾಧರನಾಥ ಮಹಾಸ್ವಾಮಿಗಳು ಕೊಟ್ಟ ಜವಾಬ್ದಾರಿಯನ್ನು ಕೊಂಚವು ಲೋಪವಿಲ್ಲದೆ ನಡೆಸುತ್ತಿರುವ ಕರುನಾಡ ಕಳಶಪ್ರಾಯ,  ವಿದ್ಯಾಕಳಶ, ಸರ್ವರಿಗೂ ಸನ್ನಡತೆಯ ಮಾರ್ಗದರ್ಶನ ಮಾಡುತ್ತಿರುವ ನಮ್ಮ ಗುರುವರ್ಯರಿವರು.

ಮೊಗದಲ್ಲಿ ನಿಷ್ಕಲ್ಮಷ ಭಾವ, ಮಾತಿನಲ್ಲಿ ಸನ್ನಡತೆ, ಜ್ಞಾನ ವಿಜ್ಞಾನದ ದೀವಿಗೆ, ದೂರಾಲೋಚನೆ, ಸಂಯಮ, ಸಣ್ಣ ನಗು, ಸ್ಪೂರ್ತಿಯ ಚಿಂತನೆ, ಕರುಣೆಯ ಸಾಗರ, ದೈವಾಚರಣೆ; ಇವೆಲ್ಲದರ ಸಂಗಮದಂತಿರುವ ನೀವು, ನೆಮ್ಮದಿಯ ನೀಡುವ ತಂಪಾದ ಧರ್ಮದ ಹೊಂಗೆಯ ಮರದಂತಿದ್ದು ಹುಲುಮಾನವರಿಗೆ ನೆರಳು ನೀಡುತ್ತಿರುವ, ನಿಮ್ಮ ಮಾರ್ಗದರ್ಶನ ಹಾಗೂ ಆಶೀರ್ವಾದ ಸದಾ ದೇಶದ ಮತ್ತು ಸರ್ವ ಕನ್ನಡಿಗರ ಮೇಲಿರಲಿ ಎಂದು ಈ ಸಂಧರ್ಭದಲ್ಲಿ ಮನ ಪೂರ್ವಕವಾಗಿ ಪ್ರಾರ್ಥಿಸುತ್ತೇನೆ ಎಂದು ದೇವೇಗೌಡರು  ಸ್ವಾಮೀಜಿ ಯವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಮತ್ತೊಮ್ಮೆ ಕೋರಿದ್ದಾರೆ.

Leave a Reply

error: Content is protected !!
LATEST
ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ? ಮೈಸೂರು: ಸಾಲದ 1ಕಂತು ಕಟ್ಟಿಲ್ಲದ್ದಕ್ಕೆ ಟ್ರ್ಯಾಕ್ಟರ್ ಜಪ್ತಿ ಮಾರಾಟ - ಕೋಟಕ್ ಮಹೇಂದ್ರ ಬ್ಯಾಂಕ್‌ಗೆ ರೈತರ ಮುತ್ತಿಗೆ ಕೆಟ್ಟು ನಿಂತಿದ್ದ KSRTC ಬಸ್‌ ರಿಪೇರಿ ವೇಳೆ ಕಾರು ಡಿಕ್ಕಿ-ಕಂಡಕ್ಟರ್‌  ಮೃತ BMTC: ಸ್ಕೂಟರ್​​ಗೆ ಸೈಡ್​ ಬಿಡಲಿಲ್ಲ ಎಂದು ಬಸ್‌ ಚಾಲಕನ ಮೇಲೆ ಕಿಡಿಗೇಡಿಯಿಂದ ಹಲ್ಲೆ- ಇದು 9ನೇ ಪ್ರಕರಣ- ಆತಂಕದಲ್ಲಿ ...