ಬೆಂಗಳೂರು: ವಿಶ್ವಾದ್ಯಂತ ಯಮಸ್ವರೂಪಿ ಕೊರೊನಾ ಸೋಂಕು ಜನರನ್ನು ಕಾಡುತ್ತಿದ್ದು, ಅದಕ್ಕೆ ರಾಜ್ಯದ ಮಂದಿಯೂ ಪೀಡನೆಯಿಂದ ಹೊರಬಂದಿಲ್ಲ. ಈ ವೇಳೆ ಸ್ಯಾಂಡಲ್ವುಡ್ ಮಂದಿಯೂ ತುಂಬ ಸಮಸ್ಯೆಯನ್ನು ಜೀವನದಲ್ಲಿ ಎದುರಿಸುವಂತಾಗಿದೆ.
ಈ ಹಿನ್ನೆಲೆಯಲ್ಲಿ ಕಲಾವಿದರಿಗೆ ನೀವು ನೆರವಾಗಬೇಕು ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಬಿಜೆಪಿ ನಾಯಕಿ, ಹಿರಿಯ ನಟಿ ತಾರಾ ಅನುರಾಧಾ ಪತ್ರ ಬರೆಯುವ ಮೂಲಕ ಚಿತ್ರರಂಗಕ್ಕೂ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail
ಕೊರೊನಾ ಹೆಮ್ಮಾರಿಯಿಂದ ರಾಜ್ಯದ ವಿವಿಧ ವೃತ್ತಿಪರ ವಿಭಾಗಗಳಿಗಾಗಿ 1610 ಕೋಟಿ ರೂಪಾಯಿ ಮಂಜೂರು ಮಾಡುವ ಮೂಲಕ ನಾಡಿನ ಆ ಜನರ ಸಮಸ್ಯೆಗೆ ಸ್ಪಂದಿಸಿದ್ದೀರಿ ಅದರಂತೆ ಚಿತ್ರರಂಗವೂ ಸಹ ವೃತ್ತಿಪರ ವಿಭಾಗವೇ ಆಗಿದ್ದು, ಕೊರೊನಾ ಲಾಕ್ ಡೌನ್ ಪರಿಣಾಮ ಸಂಕಷ್ಟದಲ್ಲಿದೆ. ತಾವು ಈವಿಭಾಗಕ್ಕೂ ನೆರವು ನೀಡಿ ಅದಕ್ಕಾಗಿ 1610 ಕೋಟಿ ರೂ. ನೆರವು ಪಟ್ಟಿಯಲ್ಲಿ ನಮ್ಮ ಚಿತ್ರರಂಗವನ್ನು ಸೇರಿಸಿ ಎಂದು ಕೇಳಿಕೊಂಡಿದ್ದಾರೆ.
ರಾಜ್ಯದಲ್ಲಿ ಲಾಕ್ ಡೌನ್ ಆರಂಭವಾದ ದಿನದಿಂದಲೂ ಚಿತ್ರರಂಗದ ಚಟುವಟಿಕೆಗಳು ಸ್ತಬ್ಧವಾಗಿವೆ. ಯಾವುದೇ ಹೊಸ ಚಿತ್ರಗಳು ಸೆಟ್ಟೇರಿಲ್ಲ. ಆರಂಭವಾಗಿರುವ ಚಿತ್ರಗಳ ಶೂಟಿಂಗ್ ಅರ್ಧಕ್ಕೇ ನಿಂತಿದೆ. “ಸದ್ಯಕ್ಕೆ ಚಿತ್ರೀಕರಣಕ್ಕೆ ಅವಕಾಶವಿಲ್ಲ. ರೆಕಾರ್ಡಿಂಗ್, ಡಬ್ಬಿಂಗ್ ಮೊದಲಾದ ಕಾರ್ಯಗಳನ್ನು ಮುಗಿಸಿಕೊಳ್ಳಿ” ಎಂದು ಕಂದಾಯ ಸಚಿವ ಆರ್. ಅಶೋಕ ಈಗಾಗಲೇ ಸಲಹೆ ನೀಡಿದ್ದಾರೆ. ಆದರೆ ಅದಕ್ಕೂ ಈ ಮಹಾಮಾರಿಯ ಭಯ ಕಾಡುತ್ತಿದ್ದು, ಚಿತ್ರರಂಗದ ಮಂದಿಯ ಕೈ ಕಟ್ಟಿಹಾಕಿದೆ. ಆದ್ದರಿಂದ ತಾವು ಸ್ಯಾಂಡಲ್ವುಡ್ ಮಂದಿಯ ಕಷ್ಟಕ್ಕೆ ಸಹಾಯ ಮಾಡಬೇಕು ಎಂದು ವಿನಂತಿಸಿಕೊಂಡಿದ್ದಾರೆ.
ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್ ಡೌನ್ಲೋಡ್ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail