ಬೆಳಗಾವಿ: ಆರ್‌ಎಸ್‌ಎಸ್ ಮುಖಂಡರ ರೀತಿ ನಾವು ಶತ್ರುಗಳನ್ನು ತಯಾರು ಮಾಡಲ್ಲ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಬಿ.ಕೆ.ಹರಿಪ್ರಸಾದ್ ಆರ್‌ಎಸ್‌ಎಸ್‌ಗೆ ಟಾಂಗ್ ಕೊಟ್ಟಿದ್ದಾರೆ.
ಭಾನುವಾರ ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಲಾಠಿ ಹಿಡಿದರೆ ಬೇರೆಯವರಿಗೆ ಸಹಾಯವಾಗುತ್ತದೆ. ಆದರೆ ಬೇರೆ ಸಂಘಟನೆಗಳು ಕೆಲವರನ್ನು ಭಯ ಬಿಳಿಸಲು ಲಾಠಿ ಹಿಡಿಯುತ್ತವೆ. ಇದು ದೇಶದ ಭವಿಷ್ಯಕ್ಕೆ ಮಾರಕ ಎಂದು ಹೇಳಿದರು.
ಕಾಂಗ್ರೆಸ್ ಆರ್‌ಎಸ್‌ಎಸ್ ನವರಿಂದ ಕಲಿಯಲು ಏನೂ ಇಲ್ಲ. ಅವರೇ ನಮ್ಮಿಂದ ಸಾಕಷ್ಟು ವಿಷಯಗಳನ್ನು ಕಲಿಯಬೇಕಿದೆ ಎಂದು ವಾಗ್ದಾಳಿ ನಡೆಸಿದರು.
ಆರ್‌ಎಸ್‌ಎಸ್ ಹಾಗೇ ಸೇವಾದಳ ತಯಾರಿ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಆರ್‌ಎಸ್‌ಎಸ್‌ನ ಹಾಗೇ ಶತ್ರುಗಳನ್ನು ನಾವು ತಯಾರು ಮಾಡೋದಿಲ್ಲ. ಆ ರೀತಿ ಸಂಘಟನೆ ನಮಗೆ ಬೇಕಾಗೂ ಇಲ್ಲ. ಕಾಂಗ್ರೆಸ್ ಸಿದ್ಧಾಂತದಡಿಯಲ್ಲಿಇತಿಹಾಸ ಗಮನದಲ್ಲಿಟ್ಟುಕೊಂಡು ದೇಶದ ಅಭಿವೃದ್ಧಿಯ ಮೂಲ ದೃಷ್ಟಿಕೋನದಡಿ ಕಾರ್ಯಕರ್ತರಿಗೆ ಶಿಬಿರದಲ್ಲಿ ತರಬೇತಿ ನೀಡಲಾಗುತ್ತಿದೆ ಎಂದರು.
ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಸಮಿತಿ ಮಾಡಿಕೊಂಡು ಪಕ್ಷದ ಕಾರ್ಯಕರ್ತರ ಬೆಳವಣಿಗೆ ದೃಷ್ಟಿಯಿಂದ ಶಿಬಿರ ಮಾಡಲಾಗುತ್ತಿದೆ ಎಂದರು.
ಬೆಳಗಾವಿ ಕಾಂಗ್ರೆಸ್ ಉಸ್ತುವಾರಿ ಪಿ.ವಿ.ಮೋಹನ, ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಇನ್ನಿತರರು ಉಪಸ್ಥಿತರಿದ್ದರು.