NEWSನಮ್ಮರಾಜ್ಯರಾಜಕೀಯಲೇಖನಗಳು

ಪಂಚಾಯಿತಿಗಳ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರ ವೇತನ ಎಷ್ಟು?

ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ವಿಶೇಷ ವರದಿ
ಮೈಸೂರು: ಗ್ರಾಮಪಂಚಾಯಿತಿ ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಎಷ್ಟು ಸಂಬಳವಿದೆ ಎಂಬುವುದು ಜನ ಸಾಮಾನ್ಯರಿಗೆ ಗೊತ್ತಿಲ್ಲ. ಹೀಗಾಗಿ ಜಿಪಂ ತಾಪಂ ಮತ್ತು ಗ್ರಾಪಂಗೆ ಆಯ್ಕೆಯಾದವರ ಮಾಸಿಕ ವೇತನ ಎಷ್ಟು ಎಂಬುದರ ಮಾಹಿತಿಯನ್ನು ನಿಮ್ಮ ವಿಜಯಪಥ ನೀಡುತ್ತಿದೆ.

2017ರಲ್ಲೇ ಎರಡು ಪಟ್ಟು ಏರಿಕೆ ಆಯಿತು ವೇತನ
ಗ್ರಾಮ ಪಂಚಾಯಿತಿ ಅಧ್ಯಕ್ಷರಿಗೆ ಈ ಮೊದಲು ತಿಂಗಳಿಗೆ 1 ಸಾವಿರ ರೂ.ಗಳಂತೆ ವರ್ಷಕ್ಕೆ ಕೇವಲ 12 ಸಾವಿರ ರೂ. ವೇತನ ದೊರೆಯುತ್ತಿತ್ತು. ಆ ಮೊತ್ತವನ್ನು 2017ರಲ್ಲೇ ಮಾಸಿಕ 3 ಸಾವಿರ ರೂ.ಗಳಂತೆ ಹೆಚ್ಚಿಸಿರುವುದರಿಂದ ವರ್ಷಕ್ಕೆ 36 ಸಾವಿರ ರೂ. ಕೈ ಸೇರಲಿದೆ. ಅಧ್ಯಕ್ಷ ಸ್ಥಾನದಲ್ಲಿ 5ವರ್ಷ ಮುಂದುವರಿದರೆ, 1.80ಲಕ್ಷ ರೂ. ದೊರೆಯಲಿದೆ. 600ರೂ. ಪಡೆಯುತ್ತಿದ್ದ ಉಪಾಧ್ಯಕ್ಷರಿಗೂ ಇನ್ಮುಂದೆ ತಿಂಗಳಿಗೆ 2 ಸಾವಿರ ರೂ. ಸಿಗಲಿದೆ. 500ರೂ. ಇದ್ದ ಗ್ರಾ.ಪಂ. ಸದಸ್ಯರ ತಿಂಗಳ ವೇತನವನ್ನು 1 ಸಾವಿರ ರೂ.ಗೆ ಹೆಚ್ಚಿಸಲಾಗಿದೆ. ತಾಲೂಕು ಪಂಚಾಯಿತಿ ಅಧ್ಯಕ್ಷರಿಗೆ 1500ರೂ., ಉಪಾಧ್ಯಕ್ಷರಿಗೆ 1 ಸಾವಿರ ರೂ., ಸದಸ್ಯರಿಗೆ 1500 ರೂ. ಹೆಚ್ಚಳವಾಗಿರುವುದರಿಂದ ಮೊದಲಿಗಿಂತ ದುಪ್ಪಟ್ಟು ಸಂಬಳ ಸಿಗುವುದು ಖಾತರಿಯಾಗಿದೆ.

ಯಾರಿಗೆ ಎಷ್ಟು ಸಂಬಳ? (ರೂ.ಗಳಲ್ಲಿ)

                                  ಗ್ರಾಪಂ            ತಾಪಂ                ಜಿಪಂ


ಅಧ್ಯಕ್ಷರು            3000 ರೂ.         6000 ರೂ.       35000 ರೂ.


ಉಪಾಧ್ಯಕ್ಷರು   2000 ರೂ.         4000 ರೂ.      15000 ರೂ.


ಸದಸ್ಯರು          1000 ರೂ.          3000 ರೂ.           5000 ರೂ.


ಅಂದಹಾಗೆ ಬರಬೇಕಿರುವ ಮಾಸಿಕ ವೇತನಕ್ಕಾಗಿ ಹಿಂದಿನಂತೆ ವರ್ಷಗಟ್ಟಲೇ ಕಾಯಬೇಕಿಲ್ಲ. ವೇತನ ಹೆಚ್ಚಳ ಆದೇಶ ಅನುಷ್ಠಾನಕ್ಕೂ ಒತ್ತಾಯಿಸಬೇಕಿಲ್ಲ. ಈಗ ರಾಜ್ಯ ಸರ್ಕಾರವೇ ಫಟಾಫಟ್ ಹಣ ನೀಡುತ್ತಿರುವುದರಿಂದ ಮೂರು ಹಂತಗಳ ಪಂಚಾಯಿತಿ ಸದಸ್ಯರಿಗೆ ಅದೃಷ್ಟವೇ ಖುಲಾಯಿಸಿದೆ.

ಅನುದಾನ ಬಿಡುಗಡೆ
ಕಳೆದ 2017ರ ಮೇ 3ರಂದು ಹೆಚ್ಚಳ ಆದೇಶ ಹೊರಡಿಸಿದ ಮರುದಿನವೇ ಎಲ್ಲ ಸದಸ್ಯರಿಗೆ ಪಾವತಿಸಬೇಕಿರುವ ಮೊತ್ತವನ್ನು ಬಿಡುಗಡೆ ಮಾಡಲಾಗಿತ್ತು. ಅಧ್ಯಕ್ಷರು, ಉಪಾಧ್ಯಕ್ಷರನ್ನು ಒಳಗೊಂಡಂತೆ 30 ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ 1023 ಸದಸ್ಯರಿಗೆ 1 ಕೋಟಿ 46 ಲಕ್ಷ 49 ಸಾವಿರ ರೂ. ನೀಡಲಾಗಿದೆ. ತಾಲೂಕು ಪಂಚಾಯಿತಿಯ 3551ಸದಸ್ಯರಿಗೆ 3 ಕೋಟಿ 14ಲಕ್ಷ 72 ಸಾವಿರ ರೂ., ಗ್ರಾಮ ಪಂಚಾಯಿತಿಯ 85,043 ಸದಸ್ಯರಿಗೆ 28 ಕೋಟಿ 24 ಲಕ್ಷ 62 ಸಾವಿರ ರೂ. ಹಂಚಿಕೆ ಮಾಡಲಾಗಿದೆ. ರಾಜ್ಯ ಖಜಾನೆಯ ಮೂಲಕ ಹಣ ಪಡೆದು ಖಾತೆಗೆ ತಲುಪಿಸುವಂತೆ ಸೂಚಿಸಲಾಗಿತ್ತು.

2017-18ನೇ ಸಾಲಿಗೆ ವೇತನ ಹೆಚ್ಚಳಮಾಡಿ 2017ರ ಮೇ 3ರಂದು ಆದೇಶ ಹೊರಡಿಸಿ‌ದ್ದ ಮರುದಿನವೇ ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. ಚುನಾಯಿತರ ವಲಯದಲ್ಲಿ ಸಂತಸ ಮೂಡಿಸಿದೆ. ಜಿಲ್ಲಾ ಪಂಚಾಯಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ನೀಡಿದ ಬಳಿಕ ಅವರ ವೇತನವನ್ನು ಹೆಚ್ಚಳಗೊಳಿಸಲಾಗಿತ್ತು. ಆದರೆ, ಮೂರು ಹಂತಗಳ ಪಂಚಾಯಿತಿ ಸದಸ್ಯರು, ಉಪಾಧ್ಯಕ್ಷರ ವೇತನ ಪರಿಷ್ಕರಣೆಯಾಗಿರಲಿಲ್ಲ.

2014-15ನೇ ಸಾಲಿನಲ್ಲಿ ಪರಿಷ್ಕರಣೆ ಆಧರಿಸಿ ಇವರು ವೇತನ ಪಡೆಯುತ್ತಿದ್ದರು. ಮೂರೇ ವರ್ಷಗಳಲ್ಲಿ ಅವರ ಮಾಸಿಕ ವೇತನವನ್ನು ಹೆಚ್ಚಿಸಿ ಬಂಪರ್ ಕೊಡುಗೆ ನೀಡಲಾಗಿದೆ. ಬರುವ ಮೊತ್ತ ಭಾರಿ ಕಡಿಮೆಯೆಂದು ಜನಪ್ರತಿನಿಧಿಗಳ ಮನವೊಲಿಸುವ ಪ್ರಯತ್ನವಾಗಿ ಬಜೆಟ್‌ನಲ್ಲಿ ಘೋಷಿಸಿದಂತೆ ಅಂದಿನ ಕಾಂಗ್ರೆಸ್‌ ಸರ್ಕಾರ ಹಣ ನೀಡಿತ್ತು.

ಈಗ ಫಟಾಫಟ್ ಸಂಬಳ
2014-15ನೇ ಸಾಲಿಗಿಂತಲೂ ಮುನ್ನ ಎರಡ್ಮೂರು ವರ್ಷ ಕಳೆದರೂ ವೇತನ ಮೊತ್ತ ಬಿಡುಗಡೆಯಾಗಿಲ್ಲವೆಂದು ಅಧ್ಯಕ್ಷ, ಉಪಾಧ್ಯಕ್ಷರ ಒಕ್ಕೂಟಗಳು ರಾಜ್ಯ ಸರ್ಕಾರವನ್ನು ಒತ್ತಾಯಿಸುವುದು ಸಾಮಾನ್ಯವಾಗಿತ್ತು. ಅಗತ್ಯ ಅಧಿಕಾರ , ಅನುದಾನ ಕೇಳುವುದಕ್ಕಾಗಿಯೇ ರಚನೆಯಾದ ಮೂರು ಹಂತಗಳ ಪಂಚಾಯಿತಿ ಸಂಘಟನೆಗಳು ಬಾಕಿ ವೇತನ ಕೊಡಿ ಎಂದು ಮನವಿ ಸಲ್ಲಿಸಿದ್ದನ್ನು ಹಲವರು ಮರೆತಿಲ್ಲ. ಜತೆಗೆ, ಬಹುತೇಕರು 2014ಕ್ಕಿಂತಲೂ ಇದ್ದ ಕಡಿಮೆ ಮೊತ್ತದ ಕುರಿತಾಗಿಯೂ ತಾತ್ಸಾರ ಮೂಡಿದ್ದರಿಂದ ಬಂದಾಗ ಬರಲೆಂದೇ ಕಾಯುತ್ತಿದ್ದರು. ಇದೀಗ ಮೊತ್ತ ಏರಿಕೆಯ ಜತೆಗೆ ಅಡ್ವಾನ್ಸ್ ಮೊತ್ತ ಪಂಚಾಯಿತಿಗಳ ಕೈಸೇರುತ್ತಿರುವುದು ಚುನಾಯಿತರ ವಲಯದಲ್ಲಿ ಸಂಭ್ರಮ ಮೂಡಿಸಿದೆ.

ಈ ಹಿಂದೆ ಇದ್ದ ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ಸದಸ್ಯರಿಗೆ ಸದ್ಯ ನೀಡುತ್ತಿರುವ ವೇತನದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಪ್ರಸ್ತುತ ಆಯ್ಕೆಯಾಗಿರುವ ಗ್ರಾಪಂ ನೂತನ ಸದಸ್ಯರಿಗೆ ವೇತನ ಪರಿಷ್ಕರಣೆ ಆಗಬೇಕಿದೆ.

1 Comment

Leave a Reply

error: Content is protected !!
LATEST
KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ ಮುನಿರತ್ನಗೆ ಜಾಮೀನು ಮಂಜೂರು ಮಾಡಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಹೋರಾಟ ಪಂಜಾಬ್, ಹರಿಯಾಣ ರೈತರದಷ್ಟೇ ಎಂಬಂತೆ ಬಿಂಬಿಸುವ ಸುಪ್ರೀಂ ಆದೇಶ ಪುನರ್ ಪರಿಶೀಲಿಸಿ: ಕುರುಬೂರ್‌ ಶಾಂತಕುಮಾರ್