NEWSನಮ್ಮಜಿಲ್ಲೆ

ವಾಯವ್ಯ ಸಾರಿಗೆ: ಎಂಡಿ ಆದೇಶ ಪಾಲಿಸದ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲು

ಬೆಳಗಾವಿ ಘಟಕ-1ರ ಬಸ್‌ಅನ್ನು ತನಿಖೆಗೊಳಪಡಿಸಿದಾಗ ಒಟ್ಟು 13 ಜನ ಪ್ರಯಾಣಿಕರಿದ್ದರು. ಈ ವೇಳೆ ಪೂನಾದಿಂದ- ಬೆಳಗಾವಿ ನಡುವೆ ಕಾರ್ಯಚರಣೆ ಮಾಡುತ್ತಿದ್ದಾಗ ನೀವು ನಿಮ್ಮ ಆಸನದಲ್ಲಿ ಅಂದರೆ ನಿಮಗೆ ನಿಗದಿ ಪಡಿಸಿದ ಆಸನದಲ್ಲಿ ಕುಳಿತುಕೊಳ್ಳದೇ ಚಾಲಕರ ಪಕ್ಕದಲ್ಲಿ ಕುಳಿತುಕೊಂಡಿದ್ದೀರಿ ಎಂದು ಕಾರಣ ಕೇಳಿ ಮೆಮೋ ನೀಡಿದ್ದಾರೆ ತನಿಖಾ ಸಿಬ್ಬಂದಿ

ವಿಜಯಪಥ ಸಮಗ್ರ ಸುದ್ದಿ

ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ನಿರ್ವಾಹಕ ತಮ್ಮ ಸೀಟ್‌ನಲ್ಲಿ ಕೂರದೆ ಚಾಲಕರ ಬಳಿ ಹೋಗಿ ನಿಂತಿದ್ದಕ್ಕೆ ತನಿಖಾ ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ಮೆಮೋ ಕೊಟ್ಟಿರುವ ಘಟನೆ ಶನಿವಾರ ಬೆಳಗಾಯಲ್ಲಿ ನಡೆದಿದೆ.

ಸಂಸ್ಥೆಯ ಬೆಳಗಾವಿ ವಿಭಾಗದ ಬೆಳಗಾವಿ ಘಟಕ-1ರ ಚಾಲಕ ಕಂ ನಿರ್ವಾಹಕ ಬಿ.ಎಸ್‌. ಬಸವರಾಜ್‌ ಎಂಬುವರಿಗೆ ತನಿಖಾ ಸಿಬ್ಬಂದಿಗಳಾದ ಟಿಐ ಎಸ್‌.ಟಿ.ಬೇಡರ್‌ ಹಾಗೂ ಎಟಿಐ ಎಸ್‌.ಜಿ.ಬೇವಿನಕಟ್ಟಿ ಅವರು ಮೆಮೋ ನೀಡಿದ್ದಾರೆ.

ಈ ವಾಹನವನ್ನು ತನಿಖೆಗೊಳಪಡಿಸಲಾಗಿದ್ದು, ಒಟ್ಟು 13 ಜನ ಪ್ರಯಾಣಿಕರಿದ್ದರು. ಈ ವೇಳೆ ಪೂನಾದಿಂದ- ಬೆಳಗಾವಿ ನಡುವೆ ಕಾರ್ಯಚರಣೆ ಮಾಡುತ್ತಿದ್ದಾಗ ನೀವು ನಿಮ್ಮ ಆಸನದಲ್ಲಿ ಅಂದರೆ ನಿಮಗೆ ನಿಗದಿ ಪಡಿಸಿದ ಆಸನದಲ್ಲಿ ಕುಳಿತುಕೊಳ್ಳದೇ ಚಾಲಕರ ಪಕ್ಕದಲ್ಲಿ ಕುಳಿತುಕೊಂಡಿದ್ದೀರಿ.

ನೀವು ತನಿಖಾ ಸಮಯದಲ್ಲಿ ಚಾಲಕರ ಪಕ್ಕ ಕುಳಿತುಕೊಂಡಿದ್ದು ಕಂಡು ಬಂದಿದೆ. ಹೀಗಾಗಿ ನೀವು ಸಂಸ್ಥೆಯ ನಿಯಮಾವಳಿಗಳನ್ನು ಉಲ್ಲಘಿಸಿದ್ದೀರಿ ಎಂದು ಆರೋಪಿಸಿ ಮೆಮೋ ನೀಡಿದ್ದಾರೆ.

ಇನ್ನು ಈ ಬಗ್ಗೆ ಇದೇ ಜೂನ್‌ 20ರಂದು ವಿಜಯಪಥ NWKRTC: ಡೋರ್‌ ಹಾಕದಿದ್ದರೆ, ಚಾಲಕರ ಬಳಿ ಕುಳಿತಿದ್ದರೆ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲಿಸಿ- ತನಿಖಾಧಿಕಾರಿಗಳಿ ಡಿಸಿ ಆದೇಶ ಎಂಬ ಶೀರ್ಷಿಕೆಯಡಿ ಸಮಗ್ರ ವರದಿ ಮಾಡಿತ್ತು. ಆದರೂ ನಿರ್ವಾಹಕರು ಈ ರೀತಿ ತಪ್ಪು ಮಾಡುತ್ತಾರೆ ಎಂದರೆ ಏನು ಹೇಳಬೇಕು?

ಆದೇಶದಲ್ಲೇನಿದೆ?: ವಾಯವ್ಯ ಸಾರಿಗೆ ಸಂಸ್ಥೆಯ ಎಲ್ಲ ವಿಭಾಗಗಳ ಎಲ್ಲ ಘಟಕಗಳ ಚಾಲನಾ ಸಿಬ್ಬಂದಿ ಅನುಸೂಚಿ ಕಾರ್ಯಾಚರಣೆ ಮೇಲೆ ಇರುವ ವಾಹನಗಳ ಬಾಗಿಲುಗಳು ಹಾಕದಿದ್ದರೆ (Door Close) ಈ ಸಂಬಂಧ ತನಿಖೆಗೊಳಪಡಿಸಿ ಎಂದು ಸಂಸ್ಥೆಯ ಎಂಡಿ ವಿಭಾಗೀಯ ನಿಯಂತ್ರಣಾಧಿಕಾರಿಗಳಿಗೆ ಆದೇಶ ಮಾಡಿದ್ದರು.

ಇನ್ನು ಈ ವಿಷಯಕ್ಕೆ ಸಂಬಂಧಿಸಿದಂತೆ ಜೂನ್‌ 19 ರಂದು ನಿಗಮದ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ಅಪಘಾತ ಕುರಿತು ಜರುಗಿದ ವಿಡಿಯೋ ಕಾನ್ಫರೆನ್ಸ್‌ ಸಭೆಯಲ್ಲಿ ಚಾಲನಾ ಸಿಬ್ಬಂದಿಗಳು ಅನುಸೂಚಿ ಕಾರ್ಯಾಚರಣೆಯ ಮೇಲೆ ಕರ್ತವ್ಯ ನಿರ್ವಹಿಸುತ್ತಿರುವಾಗ ವಾಹನಗಳ ಬಾಗಿಲುಗಳನ್ನು ಮುಚ್ಚದೆ ಇರುವುದರಿಂದ ಪ್ರಯಾಣಿಕರು ಬಿದ್ದು ಹೆಚ್ಚು ಅಪಘಾತಗಳು ಸಂಭವಿಸುತ್ತಿರುವ ಬಗ್ಗೆ ಚರ್ಚಿಸಿದ್ದರು.

ಅಲ್ಲದೆ ನಮ್ಮ ವಿಭಾಗದಲ್ಲಿಯೆ ವಾಹನಗಳ ಬಾಗಿಲುಗಳು ಮುಚ್ಚದಿರುವುದರಿಂದ 4 ಅಪಘಾತಗಳು ಸಂಭವಿಸಿವೆ ಎಂದು ವ್ಯವಸ್ಥಾಪಕ ನಿರ್ದೇಶಕರಾದ ಪ್ರಿಯಾಂಗಾ ಅವರು ಗದಗ ವಿಭಾಗವನ್ನು ಗುರುತಿಸಿದ್ದರು. ಹೀಗಾಗಿ ಈ ವಿಷಯವನ್ನು ಗಂಭಿರವಾಗಿ ಪರಿಗಣಿಸಿ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ತನಿಖಾ ಸಮಯದಲ್ಲಿ ಅನುಸೂಚಿ ಕಾರ್ಯಾಚರಣೆ ಮೇಲಿರುವ ವಾಹನಗಳ ಬಾಗಿಲುಗಳನ್ನು ನಿರ್ವಾಹಕರು ಮುಚ್ಚಿರುವ (Door Close) ಬಗ್ಗೆ ತನಿಖೆಗೊಳಿಸುವುದು ಅವಶ್ಯವಾಗಿದೆ.

ಆದ್ದರಿಂದ ಇಂದಿನಿಂದಲೇ (ಶುಕ್ರವಾರದಿಂದಲೇ) ಜಾರಿಗೆ ಬರುವಂತೆ ತನಿಖಾ ಸಮಯದಲ್ಲಿ ಕರ್ತವ್ಯ ನೀರತ ಚಾಲನಾ ಸಿಬ್ಬಂದಿಗಳು ಮಾರ್ಗ ಮಧ್ಯೆ ವಾಹನಗಳ ಬಾಗಿಲುಗಳನ್ನು ಹಾಕಿಕೊಂಡು ಕಾರ್ಯಾಚರಣೆಗೊಳಿಸಿರುತ್ತಾರೊ ಅಥವಾ ಇಲ್ಲವೋ? ಎಂಬುವುದನ್ನು ಕಡ್ಡಾಯವಾಗಿ ತನಿಖೆ ಮಾಡಬೇಕು ಎಂದು ಎಲ್ಲ ತನಿಖಾ ಸಿಬ್ಬಂದಿಗಳಿಗೆ ಆದೇಶ ಮಾಡಿದ್ದಾರೆ.

ಇನ್ನು ತನಿಖೆಗೊಳಪಡಿಸಿದ ಸಂದರ್ಭದಲ್ಲಿ ವಾಹನಗಳ ಬಾಗಿಲುಗಳು ಸುಸ್ಥಿತಿಯಲ್ಲಿ/ ದುರಸ್ಥಿ ಸ್ಥಿತಿಯಲ್ಲಿ ಇರುವುದನ್ನು ಕಡ್ಡಾಯವಾಗಿ ಪರಿಶೀಲಿಸುವುದು. ಒಂದು ವೇಳೆ ವಾಹನಗಳ ಬಾಗಿಲುಗಳು ಸುಸ್ಥಿತಿಯಲ್ಲಿದ್ದು, ನಿರ್ವಾಹಕರು ಬಾಗಿಲುಗಳನ್ನು ಮುಚ್ಚದೆ (Door Close) ಬಸ್‌ ಚಾಲನೆಯಲ್ಲಿದ್ದರೆ ಕಡ್ಡಾಯವಾಗಿ ನಿರ್ವಾಹಕರ ಮೇಲೆ ಪ್ರಕರಣವನ್ನು ದಾಖಲಿಸಬೇಕು ಎಂದು ಆದೇಶದಲ್ಲಿ ಸ್ಪಷ್ಠವಾಗಿ ಹೇಳಿದ್ದಾರೆ.

ಅಲ್ಲದೆ ನಿರ್ವಾಹಕರು ವಾಹನದಲ್ಲಿ ತಮಗೆ ನಿಗದಿಪಡಿಸಿದ ಆಸನದ ಮೇಲೆ ಕುಳಿತುಕೊಳ್ಳದೇ ಚಾಲಕರ ಸೀಟಿನ ಪಕ್ಕದಲ್ಲಿ ಕುಳಿತು ಕರ್ತವ್ಯ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಹೀಗಾಗಿ ನಿರ್ವಾಹಕರು ತಮಗೆ ನಿಗದಿಪಡಿಸಿದ ಆಸನದಲ್ಲಿ ಕೂರದೆ ಚಾಲಕರ ಪಕ್ಕದಲ್ಲಿ ಕುಳಿತಿರುವುದು ಕಂಡು ಬಂದಲ್ಲಿ ಪರಿಶೀಲಿಸಿ ಕಡ್ಡಾಯವಾಗಿ ಅಂತಹ ನಿರ್ವಾಹಕರ ಮೇಲೆ ಪ್ರಕರಣ ದಾಖಲಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದ್ದಾರೆ.

ಈ ಎಲ್ಲ ನಿರ್ದೇಶನದಂತೆ ತನಿಖಾ ಸಮಯದಲ್ಲಿ ಕಡ್ಡಾಯವಾಗಿ ಪರಿಸೀಲನೆ ಮಾಡಿ ಲೋಪ-ದೋಷಗಳು ಕಂಡು ಬಂದಲ್ಲಿ ಪ್ರಕರಣಗಳನ್ನು ದಾಖಲಿಸುವಲ್ಲಿ ಅಗತ್ಯ ಕ್ರಮ ಕೈಗೊಂಡು ಕೈಗೊಂಡ ಕ್ರಮಗಳ ಬಗ್ಗೆ ಸಂಚಾರ ಶಾಖೆಗೆ ಕಡ್ಡಾಯವಾಗಿ ಮಾಹಿತಿಯನ್ನು ಸಲ್ಲಿಸಬೇಕು ಎಂದು ಈ ಆದೇಶಿಸಲಾಗಿದೆ. ಪರಿಣಾಮ ನಿನ್ನೆ ನಿರ್ವಾಹಕನ ವಿರುದ್ಧ ಪ್ರಕರಣ ದಾಖಲಾಗಿದೆ.

Deva
the authorDeva

Leave a Reply

error: Content is protected !!
Latest news
ವಾಯವ್ಯ ಸಾರಿಗೆ: ಎಂಡಿ ಆದೇಶ ಪಾಲಿಸದ ಕಂಡಕ್ಟರ್‌ ವಿರುದ್ಧ ಪ್ರಕರಣ ದಾಖಲು ನಾಳೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ BMTC- KSRTC ನಿವೃತ್ತ ನೌಕರರ ಸಂಘದಿಂದ ಬೃಹತ್‌ ಪ್ರತಿಭಟನೆ ರಾಜ್ಯ ಸರ್ಕಾರದಿಂದ ಸಿಹಿ ಸುದ್ದಿ: 72,186 ಹುದ್ದೆಗಳ ನೇರ ನೇಮಕಾತಿಗೆ ಆದೇಶ ಬಸ್‌ಗಳು ಸರ್ಕಾರದ್ದು, ಆದರೂ ನೌಕರರು ಸರ್ಕಾರಿ ನೌಕರರಲ್ಲ-ಹೇಗಿದೆ ಲೆಕ್ಕಾಚಾರ!? KSRTC ನೌಕರರ ಸರಿಸಮಾನ ವೇತನ ವಿಚಾರ: ಮಠದ ಪರಮ ಭಕ್ತ ಸಿಎಂಗೆ ಸಲಹೆ ನೀಡಿ ಅಂತ ಅಜ್ಜಯ್ಯನವರಲ್ಲಿ ನಿವೇದಿಸಿಕೊಂಡ ಕೂಟ ಸಂಭ್ರಮದ 517ನೇ ಕೆಂಪೇಗೌಡ ಜಯಂತಿ: ನಾಡಪ್ರಭುವಿಗೆ ನಮಿಸಿದ ಸಿಎಂ ಶಿವಕುಮಾರ್ BMTC: ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಾಹಕರು ಡ್ಯೂಟಿಗೆ ಹಾಜರಾದರೂ ರಜೆ ಪಡೆಯುವುದು ತಪ್ಪಿಸಿ- ಎಂಡಿಗೆ ಮನವಿ ಮಾಡಿದ ಶ್ರೀ... ನಮ್ಮ ಪತ್ರಿಕೋದ್ಯಮದ ಮೂಲ ತತ್ವವೇ 'ಮೂಲಗಳ ಗೌಪ್ಯತೆ ಕಾಯ್ದುಕೊಳ್ಳುವುದು' ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕಸರತ್ತು: 48 ಗಂಟೆಯೊಳಗೆ ಪ್ರಧಾನಿ ಮೋದಿ ಪಡೆಯಲ್ಲಿ ಆಗುತ್ತಾ ಭಾರಿ ಬದಲಾವಣೆ? ಬಿಡದಿ ಟೌನ್‌ಶಿಪ್ ವಿವಾದ: ಡಿಕೆಶಿ-ಎಚ್‌ಡಿಕೆ ನಡುವೆ ಮುಂದುವರಿದ ಸಮರ