NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: 45 ಕುಶಲಕರ್ಮಿಗಳಿಗೆ ಮುಂಬಡ್ತಿ ನೀಡಿ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರ ಆದೇಶ

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ತಾಂತ್ರಿಕ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ 45 ಕುಶಲಕರ್ಮಿಗಳಿಗೆ ಮುಂಬಡ್ತಿ ನೀಡಿ ಸ್ಥಳ ನಿಯೋಜನೆಯೊಂದಿಗೆ ವರ್ಗಾವಣೆ ಮಾಡಿ ಮುಖ್ಯಸ ಸಿಬ್ಬಂದಿ ವ್ಯವಸ್ಥಾಪಕರು ಆದೇಶ ಆದೇಶ ಹೊರಡಿಸಿದ್ದಾರೆ.

ಇದೇ ಮೇ 16ರಂದು ಆದೇಶ ಹೊರಡಿಸಿರುವ ಮುಖ್ಯ ಸಿಬ್ಬಂದಿ ವ್ಯವಸ್ಥಾಪಕ ಅವರು, ಕುಶಲಕರ್ಮಿಗಳಾಗಿದ್ದ 45 ಮಂದಿಗೂ ಪಾರುಪತ್ತೆಗಾರ (ದರ್ಜೆ-3) ಹುದ್ದೆಗೆ ಮುಂಬಡ್ತಿ ನೀಡಿ, ಕಾರ್ಯನಿರ್ವಹಣೆ (ಅಫಿಷಿಯೇಟಿಂಗ್) ಆಧಾರದ ಮೇಲೆ ಕಾರ್ಯನಿರ್ವಹಿಸಲು ನಿಯೋಜಿಸಿದ್ದಾರೆ..

ಇನ್ನು ಈ ಸಂಬಂಧ ಇಲಾಖಾ ಮುಂಬಡ್ತಿ ಸಮಿತಿ ಸಭೆ ಇದೇ ಮೇ 14ರಂದು ನಡೆದಿದ್ದು, ಬಳಿಕ ವ್ಯವಸ್ಥಾಪಕ ನಿರ್ದೇಶಕರು ಈ 45 ಮಂದಿಗೂ ಮುಂಬಡ್ತಿ ನೀಡಲು ಮೇ 16ರಂದು ಆದೇಶ ಹೊರಡಿಸಿದ್ದರು. ಸೂಕ್ತಾಧಿಕಾರಿಗಳ ಆದೇಶದನ್ವಯ ಕುಶಲಕರ್ಮಿ (ದರ್ಜೆ-3) ರಿಂದ ಪಾರುಪತ್ತೆಗಾರ (ದರ್ಜೆ-3) ಹುದ್ದೆಗೆ ಮುಂಬಡ್ತಿ ನೀಡಿ ನಿಯೋಜಿಸಲಾಗಿದೆ ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ತಿಳಿಸಿದ್ದಾರೆ.

ಮುಂಬಡ್ತಿ ಪಡೆದವರ ವಿವರ: ಎ.ಜಿ.ಮಾಗುಂಡ, ಧಾರವಾಡ(ಗ್ರಾ) ವಿಭಾಗ. ಎಂ.ಆರ್.ಸುತಾರ, ಬೆಳಗಾವಿ ವಿಭಾಗ. ಎಸ್.ಪಿ.ದಿನ್ನಿ, ಬೆಳಗಾವಿ ವಿಭಾಗ. ಕೇಶವ ವಿ.ಶಿಮುನಗೌಡ, ಧಾರವಾಡ(ಗ್ರಾ) ವಿಭಾಗ. ಅನ್ನಪೂರ್ಣ ಬೀರನಾಯ್ಕರ, ಗದಗ ವಿಭಾಗ. ಬಸೀರಹೃದ ಯಾ. ಕರ್ನೂಲ, ಬಾಗಲಕೋಟೆ ವಿಭಾಗ. ಜೆ.ಪಿ. ಪಾಟೀಲ, ಹುಬ್ಬಳ್ಳಿ(ಗ್ರಾ) ವಿಭಾಗ.

ಬಿ.ಎನ್.ಅವರಖೋಡ, ಚಿಕ್ಕೋಡಿ ವಿಭಾಗ. ವಿನಯ ಚಂದ್ರಶೇಖರ ಬುರ್ಲಿ, ಚಿಕ್ಕೋಡಿ ವಿಭಾಗ. ಬಿ.ಎಂ.ಅಗಸರ, ಬೆಳಗಾಔಇ ವಿಭಾಗ. ಎಸ್.ಟಿ. ಮಾಲದ, ಬಾಗಲಕೊನೆ ವಿಭಾಗ. ಎಸ್.ಎಸ್. ಹೊಕ್ರಾಣಿ, ಹುಬ್ಬಳ್ಳಿ(ಗ್ರಾ) ವಿಭಾಗ. ಆರ್. ಆರ್. ಹೊಸಮನಿ, ಹುಬ್ಬಳ್ಳಿ(ಗ್ರಾ ವಿಭಾಗ. ಸಿ.ಎಸ್. ಕೊಳೂರಮಠ, ಚಿಕ್ಕೋಡಿ ವಿಭಾಗ. ಐ.ಟಿ.ನನದಿ, ಚಿಕ್ಕೋಡಿ ವಿಭಾಗ.

ಡಿ.ಡಿ.ಜಾಧವ, ಚಿಕ್ಕೋಡಿ ವಿಭಾಗ. ಎಸ್.ಎಂ. ದೇಶಪಾಂಡೆ, ಚಿಕ್ಕೋಡಿ ವಿಭಾಗ. ಎಸ್.ಐ. ಹಿರೇಮಠ, ಚಿಕ್ಕೋಡಿ ವಿಭಾಗ. ಜೆ.ಎಸ್. ಪೂಜಾರಿ, ಚಿಕ್ಕೋಡಿ ವಿಭಾಗ. ಎ.ಬಿ. ಚೌಗಲಾ, ಬೆಳಗಾವಿ ವಿಭಾಗ. ಎನ್.ಎನ್.ಕಟ್ಟಿ, ಬಾಗಲಕೋಟೆ ವಿಭಾಗ. ಎ.ಎಂ.ಕಟ್ಟಿಮನಿ, ಬಾಗಲಕೋಟೆ ವಿಭಾಗ.

ಎಸ್‌.ಕೆ.ಅಂಚಟಗೇರಿ, ಹುಬ್ಬಳ್ಳಿ (ಗ್ರಾ ವಿಭಾಗ. ಬಸವರಾಜ ಎಚ್‌.ಗರಗ, ಗದಗ ವಿಭಾಗ. ಎಸ್‌.ಬಿ.ಕಲಬುರ್ಗಿ, ಬಾಗಲಕೋಟೆ ವಿಭಾಗ. ರಾಘವೇಂದ್ರ ವಿ ಪಾರ್ಥವಾಟ, ಬೆಳಗಾವಿ ವಿಭಾಗ. ಅರವಿಂದ ಸಿ.ಪಾಟೀಲ, ಗದಗ ವಿಭಾಗ. ದುರ್ಗಪ್ಪಾ ಜಿ. ಕಲ್ಲವಡ್ಡರ, ಹುಬ್ಬಳ್ಳಿ ಗ್ರಾಮಾಂತರ ವಿಭಾಗ.

ಎನ್.ಎಂ.ಕೋತವಾಲ, ಬಾಗಲಕೋಟೆ ವಿಭಾಗ. ಸಚಿನ ನಿಂಗಣ್ಣನವರ, ಬೆಳಗಾವಿ ವಿಭಾಗ. ಪ್ರವೀಣ ಜಿ. ಪಾಲನಕರ, ಉತ್ತರ ಕನ್ನೆ ವಿಭಾಗ. ಪುರೂರವ ಕೆ. ಪಟಗಾರ, ಉತ್ತರ ಕನ್ನಡ ವಿಭಾಗ. ಶಿವಕುಮಾರ ಎಂ.ಇರಳಿ, ಚಿಕ್ಕೋಡಿ ವಿಭಾಗ. ಮಂಜುನಾಥ ಯತ್ನಟ್ಟಿ, ಬಾಗಲಕೋಟೆ ವಿಭಾಗ.

ಗೋವಿಂದರೆಡ್ಡಿ ಯರಗುಪ್ಪಿ, ಗದಗ ವಿಭಾಗ. ಶಿವಕುಮಾರ ನಿಂಗೊಳ್ಳಿ, ಭಾಗಲಕೋಟೆ ವಿಭಾಗ. ಅಜಿತಕುಮಾರ ಎಲ್. ಬೈರೋಜಿಯವರ, ಪ್ರಾ.ಕಾ.ಹುಬ್ಬಳ್ಳಿ. ರಮೇಶ್ ಕೆ.ಶಿಂಗಾಡಿ, ಗದಗ ವಿಭಾಗ. ವಿನಾಯಕ ಪಾಟೀಲ, ಬೆಳಗಾವಿ ವಿಭಾಗ. ಸಂತೋಷ್ ಕಲಾಲ, ಗದಗ ವಿಭಾಗ. ಸಿ.ಎಸ್. ಬಾರಕೇರ, ಪ್ರಾ.ಕಾ.ಹುಬ್ಬಳ್ಳಿ. ಎಫ್.ಎಂ. ವಾಲ್ಮೀಕಿ , ಪ್ರಾ.ಕಾ.ಹುಬ್ಬಳ್ಳಿ ಹಾಗೂ ಬಿ.ಎಚ್.ಹಾರೋಗೇರಿ, ಬಾಗಲಕೋಟೆ ವಿಭಾಗ.

ಈ ಎಲ್ಲ ಸಿಬ್ಬಂದಿಯ ಕಾರ್ಯ ಕ್ಷೇತ್ರದಲ್ಲಿ ಬದಲಾವಣೆ ಇರುವ ಸಿಬ್ಬಂದಿಗಳು ಮಾತ್ರ ನಿಯಮಾನುಸಾರ ನಿಯೋಜನಾ ಸೌಲಭ್ಯಗಳಿಗೆ ಅರ್ಹರಿರುತ್ತಾರೆ. ಮುಂದುವರಿದಂತೆ, ಈ ಬಡ್ತಿಯು ವರಿಷ್ಠತಾ ಪಟ್ಟಿಯ ಪರಿಷ್ಕರಣೆಯಿಂದ ಹಾಗೂ ಜೇಷ್ಠತೆಯಲ್ಲಿ ಹಿರಿಯರಿರುವ ಯಾರಾದರೂ ಪೂರ್ವಾನ್ವಯ ಬಡ್ತಿಗೆ ಅರ್ಹತೆ ಪಡೆದುಕೊಂಡಲ್ಲಿ, ಜೇಷ್ಠತಾ ಪಟ್ಟಿಯಲ್ಲಿ ಕಿರಿಯರಿರುವ ಅಧಿಕಾರಿಗಳನ್ನು ಹಿಂಬಡ್ತಿಗೊಳಿಸುವ ಷರತ್ತಿಗೊಳಪಟ್ಟಿದೆ.

ಈ ಸಿಬ್ಬಂದಿಯವರು ಪದೋನ್ನತಿ ಮೇರೆಗೆ ನಿಯೋಜನೆಗೊಂಡ ಸ್ಥಳದಲ್ಲಿ ಕೂಡಲೇ ವರದಿ ಮಾಡಿಕೊಳ್ಳತಕ್ಕದ್ದು. ಒಂದು ವೇಳೆ ಬಡ್ತಿಯನ್ನು ಒಪ್ಪಿಕೊಳ್ಳದೇ ಇದ್ದಲ್ಲಿ ಬಡ್ತಿ ನಿರಾಕರಣೆಯ ಮನವಿಯನ್ನು ಏಳು(7) ದಿನಗಳೊಳಗಾಗಿ ಕೇಂದ್ರ ಕಚೇರಿಗೆ ಸಲ್ಲಿಸತಕ್ಕದ್ದು. ಇಂತಹ ಪ್ರಕರಣಗಳನ್ನು ಸುತ್ತೋಲೆ ಸಂಖ್ಯೆ: 1344, 17-05-2006ರ ಅನ್ವಯ ಕ್ರಮ ಕೈಗೊಳ್ಳಲಾಗುವುದು.

ಮುಂದುವರಿದಂತೆ, ಬಡ್ತಿ ಆದೇಶ ಹೊರಡಿಸಿದ ದಿನಾಂಕದಂದು, ಸಿಬ್ಬಂದಿಗಳ ವಿರುದ್ದ ಪ್ರಸ್ತುತ ಅಪರಾಧ ಪ್ರಕರಣಗಳು ಬಾಕಿ ಇದ್ದಲ್ಲಿ, ದಂಡನೆ ಚಾಲ್ತಿ ಇದ್ದಲ್ಲಿ ಅಥವಾ ಅಮಾನತಿನಲ್ಲಿದ್ದಲ್ಲಿ ಯಾವುದೇ ಕಾರಣಕ್ಕೂ ಬಡ್ತಿಯ ಆದೇಶವನ್ನು ಜಾರಿಗೊಳಿಸತಕ್ಕದ್ದಲ್ಲ. ಇಂತಹ ಪ್ರಕರಣಗಳು ಕಂಡುಬಂದಲ್ಲಿ ಕೂಡಲೇ ಕೇಂದ್ರ ಕಚೇರಿಗೆ ಮಾಹಿತಿಯನ್ನು ನೀಡಬೇಕು ಎಂದು ಮುಖ್ಯ ಸಿಬ್ಬಂದಿ ವ್ಯವಸ್ಥಾಪಕರು ಆದೇಶದಲ್ಲಿ ತಿಳಿಸಿದ್ದಾರೆ.

ಮುಂಬಡ್ತಿ ಪಡೆದವರ ಸಂಪೂರ್ಣ ಮಾಹಿತಿಗೆ ಈ ಪಿಡಿಎಫ್‌ ನೋಡಿ: Chargemen GEO 4714, 16-5-25

Megha
the authorMegha

Leave a Reply

error: Content is protected !!