NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ನೌಕರರ ಸಮಸ್ಯೆ / ಬೇಡಿಕೆ ಈಡೇರಿಸಿ ಇಲ್ಲ ಉಪವಾಸ ಸತ್ಯಾಗ್ರಹಕ್ಕೆ ಅವಕಾಶಕೊಡಿ – ಎಂಡಿಗೆ ಕೂಟದ ಪದಾಧಿಕಾರಿಗಳ ಎಚ್ಚರಿಕೆ ಮನವಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಇವರಿಗೆ
ವ್ಯವಸ್ಥಾಪಕ ನಿರ್ದೇಶಕರು
NWKRTC ಕೇಂದ್ರ ಕಚೇರಿ ಹುಬ್ಬಳ್ಳಿ

ವಿಷಯ: ನೌಕರರ ಹಲವಾರು ಸಮಸ್ಯೆಗಳ ಈಡೇರಿಸದಿದ್ದರೆ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳುವುದು ಸೇರಿ ಇತರ ಬೇಡಿಕೆಗಳ ಈಡೇರಿಕೆ ಬಗ್ಗೆ

ಮಾನ್ಯರೆ:-
ಮುಷ್ಕರದ ನಂತರ KSRTC ಹಾಗೂ KKRTC ಯಲ್ಲಿ ವರ್ಗಾವಣೆ, ಅಮಾನತು ಆದರರಿಗೆ ಮಾತೃ ಘಟಕಗಳಲ್ಲೇ ಡ್ಯೂಟಿ ಕೊಡುವಂತೆ ಆದೇಶ ಹೊರಡಿಸಿದೆ. ಆದರೆ, ನಮ್ಮ NWKRTC ಯಲ್ಲಿ ಆದೇಶಗಳು ಆಗುತ್ತಿಲ್ಲ. ವರ್ಗಾವಣೆ ಆದವರು ಕೆಲವರನ್ನು ಮಾತ್ರ ಬೆರಳಣಿಕಯಷ್ಟು ಮಾತೃ ಘಟಕಕ್ಕೆ ಮರಳಿ ಆದೇಶ ಮಾಡಿದ್ದಾರೆ. ಇನ್ನು ಅನೇಕರು ಅಂದರೆ ವಿಭಾಗದ ಒಳಗಡೆ ವರ್ಗಾವಣೆ ಆದವರು ಶಿರಸಿ ವಿಭಾಗದಲ್ಲಿ 64 ಕಾರ್ಮಿಕರು ಆಗಿದ್ದು ಹಾಗೂ ಚಿಕ್ಕೋಡಿ ವಿಭಾಗದಲ್ಲಿ. 15/20 ಕಾರ್ಮಿಕರು ಹಾಗೂ ಕೇಂದ್ರ ಕಚೇರಿಯ ಆದೇಶ ವರ್ಗಾವಣೆ ಆದವರು 25/30 ಕಾರ್ಮಿಕರು ಹಾಗೂ ಅಮಾನತು ಆದವರು, ಇಲ್ಲಿಯ ತನಕ ಮಾತೃ ಘಟಕಕ್ಕೆ ಮರಳುವ ಆದೇಶ ಮಾಡೇ ಇಲ್ಲ.

ಹೀಗಾಗಿ ಮಾನ್ಯರು ದಯಾಳುಗಳಾದ  (ವ್ಯವಸ್ಥಾಪಕ ನಿರ್ದೇಶಕರು) ತಾವು ಇಲ್ಲಿಯವರೆಗೆ ನಮ್ಮ ಮನವಿಗೆ ಸ್ಪಂದಿಸದ ಕಾರಣ ನಾವು ತಮಗೆ ಮತ್ತೊಮ್ಮೆಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇವೆ. ಈಗಾಗಲೇ KSRTC ಹಾಗೂ KKRTC ಯಲ್ಲಿ ವರ್ಗಾವಣೆ ಹಾಗೂ ಅಮಾನತು ಆದವರು ಯಾವುದೇ ನಿಬಂಧನೆಯಿಲ್ಲದೆ ಮಾತೃ ಘಟಕಕ್ಕೆ ಬಂದು 3/4 ತಿಂಗಳಿನಿಂದ ಡ್ಯೂಟಿ ಮಾಡುತ್ತಿದ್ದಾರೆ. ಅದರ ಉಲ್ಲೇಖ ಸಂಖ್ಯಾ ಆದೇಶಗಳು ತಮಗೆ ತಲುಪಿಸಲಾಗಿದೆ. ಆದ್ರೂ ಯಾವುದೇ ಕ್ರಮ ಕೈಗೊಂಡಿಲ್ಲ.

ಇನ್ನು ಎಲ್‌ಎಂಎಸ್‌ (LMS) ರಜೆಗಳು ನಮ್ಮ ನೌಕರರಿಗೆ ಅನುಕೂಲಕ್ಕಿಂತ ಅನಾನುಕೂಲಗಳೇ ಜಾಸ್ತಿ ಆಗಿವೆ. ಕಾರಣ ತಮಗೆ ಬೇಕಾದವರಿಗೆ LMS ರಜೆ ಹಾಕುತ್ತಾರೆ. ಆದರೆ ಮುಷ್ಕರದಲ್ಲಿ ಭಾಗಿಯಾಗಿ ಶಿಕ್ಷೆಗಳು ಅನುಭವಿಸಿದವರಿಗೆ ರಜೆಗಳು ಮಂಜೂರಾಗುತ್ತಿಲ್ಲ. ಕಾರಣ ಅಧಿಕಾರಿಗಳು ಡಿವಿಜನ್ ಆಫೀಸಿನಲ್ಲಿ ಹೋಗಿ ವಿಚಾರಿಸಿ ಎಂದು ಹೇಳಿದರೆ, ಡಿವಿಜನ್ ಆಫೀಸ್‌ನಲ್ಲಿ ನಮ್ಮಲ್ಲಿ ಏನು ಇಲ್ಲ ಸೆಂಟ್ರಲ್ ಆಫೀಸಿನಲ್ಲಿ ವಿಚಾರಿಸಿ ಎಂದು ಹೇಳುತ್ತಾರೆ. ಅಲ್ಲಿಗೆ ಹೋಗಿ ಕೇಳಿದರೆ ಸರಿ ಆಯ್ತು ಸರಿ ಮಾಡುತ್ತೇವೆ ಕೆಲವು ದಿನಗಳು ಬಿಟ್ಟು ಘಟಕದಲ್ಲಿ ಕೇಳಿರಿ ಎಲ್ಲವೂ ಸರಿ ಆಗುತ್ತೆ ಅಂತ ಕಳಿಸುತ್ತಾರೆ.
ಆದರೆ, ಅದು ಕೆಲವರಿಗೆ ಮಾತ್ರ ಅನುಕೂಲ ಆಗಿದೆಯೇ ಹೊರತು ಮುಷ್ಕರದಲ್ಲಿ ಭಾಗಿ ಆದವರ LMS ರಜೆ ಬೀಳುತ್ತಿಲ್ಲ. ಒಂದು ವೇಳೆ ರಜೆ ಹಾಕಿದರೆ LMS ರಜೆ ಕ್ಯಾನ್ಸಲ್ ಮಾಡುತ್ತಾರೆ. ಅದಕ್ಕೆಲ್ಲ ಅಡಕಾಗಳು ಲಗತ್ತಿಸಿದ್ದೇವೆ.

ಕೂಟದ ಕಡೆಯಿಂದ ಈ ಸಂಬಂಧ ಅನೇಕ ಬಾರಿ ಸಿಟಿಎಂ ಸಾಹೇಬರ ಹಾಗೂ ಎಂಡಿ ಸಾಹೇಬರ ಗಮನಕ್ಕೆ ತಂದರು ಯಾವುದೇ ಪ್ರಯೋಜನ ಆಗಿಲ್ಲ.

ಹೀಗಾಗಿ ನಾವು ನಿಮ್ಮ ಗಮನಕ್ಕೆ ತಂದ ವಿಷಯಗಳು ಏನು ಎಂದು ಮತ್ತೊಮ್ಮೆ ನೆನಪಿಸುತ್ತಿದ್ದೇವೆ.

ಮುಷ್ಕರದಲ್ಲಿ ಭಾಗಿ ಆಗಿ ಶಿಕ್ಷೆಗಳು ಆದವರು. 1 .ಕೇಂದ್ರ ಕಚೇರಿ ಆದೇಶಕ್ಕಿಂತ ಮುಂಚೆನೇ ನೌಕರರ ವರ್ಗಾವಣೆ ಮಾತೃ ಘಟಕಕ್ಕೆ ಕೆಲವೊಂದು ವಿಭಾಗಳಲ್ಲಿ ಆದೇಶಗಳು ಆಗಿವೆ..

2. ಅಮಾನತು ಆದವರು, ಕೆಲವರು ಮೂಲ ಘಟಕಕ್ಕೆ ಆದೇಶಗಳು ಆಗಿವೆ.

3 ವಜಾ ಆದ ಕೆಲ ನೌಕರರನ್ನುಮೂಲ ಘಟಕಕ್ಕೆ ಆದೇಶ ಮಾಡಿದ್ದಾರೆ.

ಇವೆಲ್ಲವುಗಳನ್ನು ತಮ್ಮ ಗಮನಕ್ಕೆ ತಂದರು ಅವರು ಹೇಗೆ ಮಾತೃ ಘಟಕಕ್ಕೆ ಬಂದರು ಎಂದು ಕೇಳಿದರೆ ಅದಕ್ಕೆ ಹಾರಿಕೆಯ ಉತ್ತರ ಕೊಟ್ಟಿದ್ದೀರಿ. ಅದರಂತೆಯೇ ಉಳಿದ ನೌಕರರನ್ನು. ಮಾತೃ ಘಟಕಕ್ಕೆ ಆದೇಶ ಮಾಡಿರಿ ಎಂದರೆ ಇಲ್ಲಿಯತನಕ ಅವರು ಮಾತೃಘಟಕಕ್ಕೆ ಬಂದೇ ಇಲ್ಲ, ಏಕೆ ಶತಾಯಿಸುತ್ತಿದ್ದೀರಿ. ಕಾರಣ ಏನು?

ಶಿರಸಿ ವಿಭಾಗದ ಒಳಗಡೆ ವರ್ಗಾವಣೆ ಒಟ್ಟು 64. ಆದರೆ, ಈಗ ಕೆಲವರು ಅದರಲ್ಲಿಯೇ ಯಾವ ರೀತಿ ವರ್ಗಾವಣೆ ಮಾಡಿದ್ದಾರೋ ಗೊತ್ತು. ಇಲ್ಲಿ ಭ್ರಷ್ಟಾಚಾರದ (ಹಣ ತಗೊಂಡು) ಮೇರೆಗೆ ವರ್ಗಾವಣೆ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಬಹುದು. ಅದಕ್ಕೆ ನಮ್ಮ ಬಳಿ ದಾಖಲೆ ಕೇಳುವ ಬದಲು ನೀವೇ ಮಂಪರು ಪರೀಕ್ಷೆ ಮಾಡಿದರೆ ಸತ್ಯ ಹೊರ ಬರುತ್ತದೆ. ಆ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಿ.

ಇನ್ನು 64 ರಲ್ಲಿ ಈಗ 53/54 ಜನ ಕಾರ್ಮಿಕರು ಉಳಿದಿದ್ದಾರೆ. ಇನ್ನು ಕೆಲವರಿಗೆ ಮುಷ್ಕರದಲ್ಲಿ ಭಾಗಿಯಾಗಿ ಅಮಾನತು ಆದವರು ಕಲಘಟಗಿ ಘಟಕದಲ್ಲಿ ಇದ್ದವರಿಗೆ ಶಾಶ್ವತವಾಗಿ 2 ಇಂಕ್ರಿಮೆಂಟ್‌ ತಗೆದಿದ್ದಾರೆ. ಹಾಗೂ ಎಫ್‌ಐಆರ್‌ ಆದ ಬಾಗಲಕೋಟೆ ವಿಭಾಗದಲ್ಲಿ 3 ಜನ ನೌಕರರಿಗೆ ಕನಿಷ್ಠ ಬೇಸಿಕ್ ಮಾಡಿದ್ದಾರೆ. ಏನ್ರೀ ಇದು ಅನ್ಯಾಯ ಇವೆಲ್ಲೆ? ಯಾವಾಗ ಸರಿ ಪಡಿಸಿಕೊಡುವುದು. ಎಲ್ಲೋ ಒಂದು ಕಡೆ ಅಧಿಕಾರಿಗಳು ಒಂದು ಕಣ್ಣಿಗೆ ಸುಣ್ಣ ಒಂದು ಕಣ್ಣಿಗೆ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎನಿಸುತ್ತಿದೆ.

ಇವೆಲ್ಲವುಗಳ ಬಗ್ಗೆ ವಿವರವಾಗಿ ಮೇಲಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಈವರೆಗೂ ಯಾವುದೇ ಪ್ರಯೋಜನ ಆಗಿಲ್ಲ. ಆದರೂ ಕೆಲವರು ಕಾನೂನು ಹೋರಾಟ ಮಾಡುವುದಾಗಿ ನಮಗೆ ತಿಳಿಸಿದ್ದಾರೆ. ಕಾರಣ ಇವೆಲ್ಲವೂ ನಮಲ್ಲಿಯೆ ಮೇಲ್ಮನೆ ಪ್ರಾಧಿಕಾರ ಇದ್ದು ಇಲ್ಲಿಯೇ ಬಗೆ ಹರಿಸಿ ಕೊಡಬಹುದಾಗಿತ್ತು. ಆದರೂ ಅಧಿಕಾರಿಗಳು ತಾರತಮ್ಯ ನೀತಿ ಅನುಸರಿಸುತ್ತಿದ್ದಾರೆ.

ಅವರ ದುಡ್ಡು ಹೋಗುತ್ತದೆ ಹೋಗಲಿ ಅನ್ನುವ ಅಧಿಕಾರಿಗಳು ಇದ್ದಾರೆ: ನ್ಯಾಯಾಲಕ್ಕೆ ಹೋದರೆ ಅವರ ದುಡ್ಡು ಹೋಗುತ್ತದೆ ಹೋಗಲಿ ಅನ್ನುವ ಅಧಿಕಾರಿಗಳು ಇದ್ದಾರೆ. ಈಗಾಗಲೇ ನಾವು ಒಂದಲ್ಲ ಒಂದು ನಮ್ಮ ಸಂಸ್ಥೆಯ ಹಗರಣಗಳನ್ನು ಮಾಧ್ಯಮದಲ್ಲಿ ನೋಡುತ್ತಿದ್ದೇವೆ. ಆದರೂ ಯಾವೊಬ್ಬ ಅಧಿಕಾರಿಯ ವಿರುದ್ಧವೂ ಯಾವುದೇ ಕ್ರಮ ಕೈಗೊಂಡಿಲ್ಲ. ಇವೆಲ್ಲವುಗಳ ಬಗ್ಗೆ ನಮ್ಮ ವಾಯುವು ಕೂಟದ ಗೌರವ ಅಧ್ಯಕ್ಷರ ಹಾಗೂ ಹೈಕೋರ್ಟ್‌ನ ವಕೀಲರಾದ ಪಿ.ಎಚ್‌. ನೀರಲಕೇರಿ ಸಾಹೇಬರ ಗಮನಕ್ಕೆ ತರಲಾಗಿದೆ.

ಮುಂದಿನ ದಿನಗಳಲ್ಲಿ ಉಪವಾಸ ಸತ್ಯಾಗ್ರಹಕ್ಕೆ ದಿನಾಂಕ ಸ್ಥಳ ನಿಗದಿ ಮಾಡಲಾಗುವುದು ಎಂದು ನೀರಲಕೇರಿ ಸಾಹೇಬರು ತಿಳಿಸಿದ್ದಾರೆ. ಅದರಂತೆಯೇ ವಾಯುವ್ಯ ವಿಭಾಗದ ಕೂಟದ ಪದಾಧಿಕಾರಿಗಳು ಸತ್ಯಾಗ್ರಹ ಮಾಡಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ತಾವು ಈಗಲಾದರೂ ಆಗಿರುವ ಸಮಸ್ಯೆಯನ್ನು ಸರಿಪಡಿಸಬೇಕು. ಇಲ್ಲದಿದ್ದರೆ ನಮಗೆ ವಿಧಿಯಿಲ್ಲ ಸತ್ಯಾಗ್ರಹ ಮಾಡುತ್ತೇವೆ.

ಕೂಟದ ಒತ್ತಾಯಗಳು:

1. ತಪ್ಪಿತಸ್ಥ ಅಧಿಕಾರಿಗಳ ಮೇಲೆ ಶಿಸ್ತು ಕ್ರಮ ಕೈಗೊಳ್ಳಬೇಕು.

2. KSRTC& KKRTCಯಂತೆ ನಮ್ಮಲ್ಲೂ ಆದೇಶಗಳು ಜಾರಿಗೆ ತಂದು ನೌಕರರನ್ನು ಡ್ಯೂಟಿ ಮಾಡಲು ಬಿಡಬೇಕು.

3.LMS ರಜೆ ತೊಂದರೆ ನಿವಾರಣೆ ಹಾಗೂ ಇನ್ನು ಉಳಿದ SL 15 ರಜೆಗಳು ಪೂರ್ತಿಯಾಗಿ ವರ್ಷದ ಒಳಗಡೆ ರಜೆ ಹಾಕಿಕೊಳ್ಳುವುದಕ್ಕೆ ಬಿಡಬೇಕು.

4. ಮುಷ್ಕರದ ನಂತರ ಮಾಡಿರುವ ಮರಣ ಶಾಸನದ ಶಿಕ್ಷೆಗಳನ್ನು ಹಿಂಪಡೆಯಬೇಕು.

5. ಘಟಕದ ಕುಂದು ಕೊರತೆಗಳ ನಿವಾರಣೆಗೆ ಶೀಘ್ರವೇ ಕ್ರಮ ಕೈಗೊಳ್ಳ ಬೇಕು.

ಈ ಎಲ್ಲವುಗಳನ್ನು ಕೂಡಲೇ ಈಡೇರಿಸಬೇಕು ಎಂದು ಒತ್ತಾಯಿಸಿ ಮುಂದಿನ ದಿನಗಳಲ್ಲಿ ಹುಬ್ಬಳ್ಳಿಯ ಸಾರಿಗೆ ಕಚೇರಿ ಬಳಿ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದೇವೆ.

ವಂದನೆಗಳೊಂದಿಗೆ

 l ವಾ.ಕ.ಸಾ.ನೌ.ಕೂಟ ಹುಬ್ಬಳ್ಳಿ

ದಿನಾಂಕ:15_11_2022

ಸ್ಥಳ: ಹುಬ್ಬಳ್ಳಿ

Leave a Reply

error: Content is protected !!
LATEST
ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ... BBMP: ಮಳೆಯಿಂದ ಸಮಸ್ಯೆ ಆಗಿದ್ದರೆ ಕೂಡಲೇ 1533ಕ್ಕೆ ಕರೆ ಮಾಡಿ ದೂರು ನೀಡಿ