ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಎಸ್. ಭರತ್ಅವರನ್ನು ಸಾರಿಗೆ ನೌಕರರ ಕೂಟದ ಗೌರವ ಅಧ್ಯಕ್ಷ ಪಿ.ಎಚ್. ನೀರಲಕೇರಿ ಮತ್ತು ಸದಸ್ಯರು ಭೇಟಿ ಮಾಡಿದರು.
ಸಾರಿಗೆಯ ಹುಬ್ಬಳ್ಳಿ ಕೇಂದ್ರ ಕಚೇರಿಯಲ್ಲಿ ಭೇಟಿ ಮಾಡಿದ ವೇಳೆ ಕೂಟದ ಪದಾಧಿಕಾರಿಗಳು ಶಾಲು ಹಾಕಿ, ಹೂ ಗುಚ್ಛ ನೀಡಿ ಗೌರವಿಸಿದರು.
ಈ ಸಮಯದಲ್ಲಿ ಎಂಡಿ ಭರತ್ ಅವರಿಗೆ ನೌಕರರ ಸಮಸ್ಯೆಗಳನ್ನು ಶೀಘ್ರವಾಗಿ ಬಗೆಹರಿಸುವಂತೆ ಮನವಿ ಸಲ್ಲಿಸಿದರು.
ಸಾರಿಗೆ ಮುಷ್ಕರ ಸಮಯದಲ್ಲಿ ಮಾಡಿರುವ ಎಲ್ಲ ಆರೋಪ ಮತ್ತು ಪೊಲೀಸ್ ಪ್ರಕರಣ ಗಳನ್ನು ಮಾನವೀಯತೆಯ ನೆಲೆಯಲ್ಲಿ ಪರಿಗಣಿಸಿ ಸೇವಾ ಅವಧಿಯಲ್ಲಿ ಯಾವುದೇ ನಷ್ಟವುಂಟು ಮಾಡದೆ 6-04-2021ರ ಯಥಾಸ್ಥಿತಿ ಕಾಪಾಡುವಂತೆ ಕೇಳಿಕೊಂಡರು.
ಸಾರಿಗೆ ನೌಕರರ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವಂತೆ ಮನವಿ ಮಾಡಿದಕ್ಕೆ ವ್ಯವಸ್ಥಾಪಕ ನಿರ್ದೇಶಕರು ಸಕಾರಾತ್ಮಕವಾಗಿ ಸ್ಪಂದಿಸಿ ಎಲ್ಲ ಈ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸಿ ಪರಿಹರಿಸುವುದಾಗಿ ಭರವಸೆ ನೀಡಿದರು.