ಬೆಳಗಾವಿ: ಜಿಲ್ಲೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನಿರ್ವಾಹಕ ಮತ್ತು ಚಾಲಕರ ಮೇಲೆ ಪ್ರಯಾಣಿಕ ಮಹಿಳೆ ಮತ್ತು ಸಂಬಂಧಿಕರು ಹಲ್ಲೆ ಮಾಡಿದ್ದನ್ನು ಖಂಡಿಸಿ ಹಲ್ಲೆಕೋರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆಗ್ರಹಿಸಿ ಪ್ರತಿಭಟನೆ ಮಾಡುವ ಮೂಲಕ ನೌಕರರು ಒಗ್ಗಟ್ಟು ಪ್ರದರ್ಶಿಸಿದ್ದಾರೆ.
ನಿಜಕ್ಕೂ ಇದು ಒಳ್ಳೆಯ ಬೆಳವಣಿಗೆ. ಏಕೆಂದರೆ ಈ ಹಿಂದೆ ಸಾರಿಗೆ ನಿಗಮಗಳಲ್ಲಿ ನೌಕರರು ಒಬ್ಬರಿಗೊಬ್ಬರು ಆಗದವರಂತೆಯೇ ಕೆಲಸ ಮಾಡಿಕೊಂಡು ಬರುತ್ತಿದ್ದರು. ಈ ಬಗ್ಗೆ ವಿಜಯಪಥ ಸಮಗ್ರವಾದ ವರದಿಗಳನ್ನು ಪದೇಪದೆ ಮಾಡಿ ನೌಕರರು ಒಗ್ಗಟ್ಟು ಪ್ರದರ್ಶಿಸಿದರೆ ಪ್ರತಿಯೊಬ್ಬರೂ ನಿಮಗೆ ಗೌರವ ಕೊಡುತ್ತಾರೆ ಎಂದು ಮನವರಿಕೆ ಮಾಡಿಕೊಡುತ್ತಲೇ ಬಂದಿತು ಈಗಲೂ ಅದೇ ಕೆಲಸ ಮಾಡುತ್ತಿದೆ.
ಇನ್ನು ಈ ನಿಮ್ಮ ಡಿಜಿಟಲ್ ಮೀಡಿಯಾ ವಿಜಯಪಥ ಮನವರಕ್ಕೆ ಮಾಡುತ್ತ ಕಾನೂನಿನ ಅರಿವನ್ನು ಮೂಡಿಸಿದ್ದಕ್ಕೆ ಇಂದು ಬೆಳಗಾವಿಯ ಬೈಲಹೊಂಗಲ ಘಟಕದ ನೌಕರರಿಗೆ ಆದ ಹಲ್ಲೆ, ಹಿಂಸೆ ವಿರುದ್ಧ 4ಗಂಟೆಗಳ ಕಾಲ ಬಸ್ ನಿಲ್ಲಿಸಿ ಒಗ್ಗಟ್ಟು ಪ್ರದರ್ಶಿಸಿದ್ದು ಇಡಿ ನಾಲ್ಕೂ ಸಾರಿಗೆ ನಿಗಮದ ಅಧಿಕಾರಿಗಳು ಮತ್ತು ನೌಕರರು ಹೆಮ್ಮೆಪಡಬೇಕಾದ ವಿಚಾರವಾಗಿದೆ.
ಅಲ್ಲದೆ ಈ ರೀತಿ ತಮ್ಮ ಸಹೋದ್ಯೋಗಿಗಳ ಮೇಲೆ ಯಾರೋ ಕಿಡಿಗೇಡಿಗಳು ಬಂದು ಪದೇಪದೆ ಹಲ್ಲೆ ಮಾಡಿದರೂ ಸಂಬಂಧಪಟ್ಟ ಅಧಿಕಾರಿಗಳು ಈ ಹಿಂದೆ ಆರೋಪಿಗಳ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೆ ನೌಕರರನ್ನೇ ಬೆದರಿಸಿ ಭಯಪಡುವಂತೆ ಮಾಡಿ ಕಳುಹಿಸುತ್ತಿದ್ದರು.
ಈ ಬಗ್ಗೆಯೂ ನಿಮ್ಮ ವಿಜಯಪಥ ಸಮಗ್ರ ವರದಿಗಳನ್ನು ಮಾಡಿ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಮೀರಿ ನಡೆದುಕೊಳ್ಳುತ್ತಿದ್ದರ ಬಗ್ಗೆ ದಿಟ್ಟತನದಿಂದ ವರದಿ ಮಾಡುವ ಜತೆಗೆ ಅರಿವು ಮೂಡಿಸಿದ್ದರಿಂದ ನೌಕರರ ಮೇಲೆ ಆದ ಎಷ್ಟೋ ಪ್ರಕರಣಗಳನ್ನು ಅಧಿಕಾರಿಗಳೇ ಖುದ್ದು ನಿಂತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ನಿಮ್ಮ ಕಣ್ಣಮುಂದಿದೆ.
ಅದೇ ರೀತಿ ಏ.25ರಂದು ನಿರ್ವಾಹಕ ಮತ್ತು ಚಾಲಕರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಮೆರವಣಿಗೆ ಮಾಡಿ ಪೊಲೀಸ್ ಠಾಣೆ ಮುಂದೆ ಜಮಾವಣೆಗೊಂಡು ಹಲ್ಲೆಕೋರರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಇಡೀ ನೌಕರ ಸಮೂಹ ಒತ್ತಾಯಿಸಿದ್ದು, ನೌಕರರ ಒಗ್ಗಟ್ಟು ಪ್ರದರ್ಶನಕ್ಕೆ ಸಾಕ್ಷಿಯಾಯಿತು. ಅಲ್ಲದೆ ಇದರಿಂದ ವಿಜಯಪಥ ವರದಿಗೆ ಫಲಸಿಗುತ್ತಿದೆ ಎಂಬ ಹೆಮ್ಮೆಯೂ ಆಗುತ್ತಿದೆ. ಇದು ನೌಕರರಲ್ಲಿ ಹೀಗೆಯೇ ಅನುದಿನವು ಇರಲಿ ಎಂಬುವುದೆ ನಮ್ಮ ಆಶಯ..
ಘಟನೆ ವಿವರ: ಕ್ಷುಲ್ಲಕ್ಕ ಕಾರಣಕ್ಕೆ ನಿರ್ವಾಹಕ ಮತ್ತು ಚಾಲಕನ ಮೇಲೆ ಇದೇ ಏ.25ರಂದು ಮುಸ್ಲಿಂ ಯುವಕರ ಗುಂಪು ಬೈಲಹೊಂಗಲ ಬಸ್ ನಿಲ್ದಾಣದಲ್ಲಿ ಹಲ್ಲೆ ಮಾಡಿತ್ತು.
ಎಕ್ಕುಂಡಿ ಗ್ರಾಮದ ಹಿಮಾಮ್ ಹುಸೇನ್ ದಿನಿಮನಿ, ಸಬ್ಬೀರ್ ದಿನಿಮನಿ, ಬೋರಿಮಾ ದಿನಿಮನಿ ಮತ್ತು ಓರ್ವ ಮಹಿಳೆ ನಿರ್ವಾಹಕ ಮತ್ತು ಚಾಲಕರ ಮೇಲೆ ಹಲ್ಲೆ ಮಾಡಿದ ಆರೋಪಿಗಳು.
ಬಸ್ ಬೈಲಹೊಂಗಲದಿಂದ ಧಾರವಾಡಕ್ಕೆ ಹೊರಟ್ಟಿತ್ತು ಈ ವೇಳೆ ಓಡಿ ಬಂದು ಬಸ್ ಹತ್ತಿದ್ದಕ್ಕೆ ಏನಾದರು ಹೆಚ್ಚುಕಡಿಮೆ ಆದರೆ ಯಾರು ಹೊಣೆ ಎಂದು ನಿರ್ವಾಹಕ ಕೇಳಿದಕ್ಕೆ ಈ ಹಲ್ಲೆ ಮಾಡಿದ್ದಾರೆ.
ಇನ್ನು ನಿರ್ವಾಹಕರ ಮೇಲೆ ಆರೋಪಿಗಳು ಮನಬಂದಂತೆ ಹಲ್ಲೆ ಮಾಡುತ್ತಿದ್ದ ವೇಳೆ ಜಗಳ ಬಿಡಿಸಲು ಬಂದ ಚಾಲಕರ ಮೇಲೆಯೂ ಹಲ್ಲೆ ಮಾಡಿದ್ದರು ಆರೋಪಿಗಳು. ಅಷ್ಟಕ್ಕೇ ಸುಮ್ಮನಾಗದ ಕಿಡಿಗೇಡಿಗಳು ಬಸ್ ನಿಲ್ದಾಣದಲ್ಲಿದ್ದ ಕಂಟ್ರೋಲರ್ ಕೊಠಡಿಗೆ ನುಗ್ಗಿ ಗಲಾಟೆ ಮಾಡಿ ಕೊಠಡಿಯ ಗ್ಲಾಸ್ಕೂಡ ಒಡೆದುಹಾಕಿದ್ದಾರೆ.
ಇದರಿಂದ ಬೈಲಹೊಂಗಲ ಘಟಕದ ಚಾಲಕರು ಮತ್ತು ನಿರ್ವಾಹಕರು ಬೈಲಹೊಂಗಲ ಬಸ್ ನಿಲ್ದಾಣದಿಂದ ಹೊರಡುವ ಬಸ್ಗಳನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ್ದಾರೆ. ನಂತರ ಬೈಲಹೊಂಗಲ ಪೊಲೀಸ್ ಠಾಣೆವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿ ಪೊಲೀಸ್ಠಾಣೆ ಮುಂದೆ ಜಮಾವಣೆಗೊಂಡು ಹಲ್ಲೆ ಮಾಡಿದವರನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.