NEWSನಮ್ಮಜಿಲ್ಲೆನಮ್ಮರಾಜ್ಯ

38ನೇ ದಿನ ಚಿತ್ರದುರ್ಗದಲ್ಲಿ ಸಾರಿಗೆ ನೌಕರರ ಜಾಥಾ ಯಶಸ್ವಿ- ನೌಕರರು ಸಾಥ್‌

ವಿಜಯಪಥ ಸಮಗ್ರ ಸುದ್ದಿ

ಚಿತ್ರದುರ್ಗ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ರಾಜ್ಯಾದ್ಯಂತ ಕಳೆದ ಅ.10ರಂದು ಬಳ್ಳಾರಿಯಲ್ಲಿ ಚಾಲನೆ ನೀಡಿರುವ ಬೃಹತ್‌ ಸೈಕಲ್‌ ಜಾಥಾವು  ಬುಧವಾರಕ್ಕೆ 38 ದಿನಗಳನ್ನು ಪೂರ್ಣಗೊಳಿಸಿದೆ. ಈ ದಿನ ಚಿತ್ರದುರ್ಗದಲ್ಲಿ ಸಂಚರಿಸುತ್ತಿದ್ದು, ನೌಕರರು ಅತ್ಯಂತ ಉತ್ಸಾಹದಿಂದಲೇ ನೌಕರರು ಭಾಗವಸಿದ್ದರು.

ಇನ್ನು ಈ ವೇಳೆ ಜಿಲ್ಲಾಧಿಕಾರಿಗಳ ಮೂಲಕ ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರವನ್ನು ಒತ್ತಾಯಿಸಿ ಮನವಿ ಸಲ್ಲಿಸಲು ನೂರಾರು ನೌಕರರು ಸಂಗಮಗೊಂಡಿದ್ದು, ಸರ್ಕಾರದ ನಡೆಯನ್ನು ಖಂಡಿಸಿದರು. ಕೊಟ್ಟ ಮಾತು ಈಡೇರಿಸದ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಾರಿಗೆ ಸಂಸ್ಥೆಯಲ್ಲಿ ಖಾಸಗೀಕರಣ ನೀತಿಯನ್ನು ಕೈ ಬಿಡಬೇಕು. ಕೂಟದ ನಡೆ ಕಾರ್ಮಿಕರ ಏಳಿಗೆಯ ಕಡೆ. ನಡೆಸಿ ನಡೆಸಿ ಸಾರಿಗೆ ಕಾರ್ಮಿಕ ಸಂಘಟನೆಗಳ ಚುನಾವಣೆ ನಡೆಸಿ ಎಂಬುವುದು ಸೇರಿದ ವಿವಿಧ ಸ್ಲೋಗನ್‌ಗಳಿರುವ ಬ್ಯಾನರ್‌ಗಳನ್ನು ಹಿಡಿದು ಕಾರ್ಮಿಕರು ಘೋಷಣೆಗಳನ್ನು ಕೂಗಿದರು.

ಮುಷ್ಕರದ ಸಮಯದಲ್ಲಿ ಆಗಿರುವಂತಹ ಸುಳ್ಳು ಪೊಲೀಸ್‌ ಕೇಸ್‌ ಹಿಂಪಡೆಯಬೇಕು. ಚೌಕಾಸಿ ವೇತನ ಪರಿಷ್ಕರಣೆ ತೊಲಗಿಸಿ ಸಾರಿಗೆ ಕಾರ್ಮಿಕರನ್ನು ಉಳಿಸಿ, ಬೇಕೇಬೇಕು ವೇತನ ಆಯೋಗವೇ ಬೇಕು.

ಅಗ್ರಿಮೆಂಟ್‌ ಬಾಳು ಕಾರ್ಮಿಕರ ಕುಟುಂಬ ಬೀದಿಪಾಲು. ನಾಲ್ಕು ವರ್ಷಕ್ಕೊಮ್ಮೆ ಸಾರಿಗೆ ಕಾರ್ಮಿಕರ ಬಲಿ ನಿಲ್ಲಲ್ಲಿ ಎಂದು ಒತ್ತಾಯಿಸಿ ಇಂದು ನಗದ ಜಿಲ್ಲಾಧಿಕಾರಿ ಕಚೇರಿ ಮುಂದೆ ಜಮಾಯಿಸಿದ ನೂರಾರು ಸಾರಿಗೆ ನೌಕರರು ಸೈಕಲ್‌ ಜಾಥಾಕ್ಕೆ ಸಾಥ್‌ ನೀಡಿದರು.

ಇನ್ನು ಈಗಾಗಲೇ 15ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಸಂಚರಿಸಿರುವ ಸಾರಿಗೆ ನೌಕರರ ಸೈಕಲ್‌ ಜಾಥಾ ನಿರಂತರವಾಗಿ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸುತ್ತಿದೆ. 1600ಕ್ಕೂ ಹೆಚ್ಚು ಕಿಮೀ ಕ್ರಮಿಸಿರುವ ಸೈಕಲ್‌ ಜಾಥಾ ನಿರಂತರವಾಗಿ ತನ್ನ ಸಂಚಾರವನ್ನು ಮುಂದುವರಿಸಿದೆ.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?