NEWSನಮ್ಮರಾಜ್ಯರಾಜಕೀಯ

ಶಿಕ್ಷಣ, ಆರೋಗ್ಯ, ಸಾರ್ವಜನಿಕ ಸಾರಿಗೆ ಸೇರಿ ಮೂಲ ಸೌಕರ್ಯ ಅಭಿವೃದ್ಧಿಗೆ ಒತ್ತು ನೀಡುವ ಬಜೆಟ್ ಕೊಡಿ: ಆಮ್ ಆದ್ಮಿ ಪಕ್ಷ ಆಗ್ರಹ

ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಸುದ್ದಿಗೋಷ್ಠಿ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ವಿಜಯಪಥ ಸಮಗ್ರ ಸುದ್ದಿ
ಬೆಂಗಳೂರು: ಶಿಕ್ಷಣ, ಆರೋಗ್ಯ, ಸಾರಿಗೆ, ಸಣ್ಣ ಕೈಗಾರಿಕೆ ಹಾಗೂ ಮಹಿಳೆಯರು, ಮೂಲ ಸೌಕರ್ಯಗಳ ಅಭಿವೃದ್ಧಿಗೆ ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಪ್ರಮುಖ ಆದ್ಯತೆ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಆಮ್ ಆದ್ಮಿ ಪಕ್ಷದ ಬೆಂಗಳೂರು ನಗರ ಉಪಾಧ್ಯಕ್ಷ ಬಿ.ಟಿ.ನಾಗಣ್ಣ ಒತ್ತಾಯಿಸಿದ್ದಾರೆ.

ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ವರ್ಷ ಅತ್ಯಂತ ಕಳಪೆ ಬಜೆಟ್ ಮಂಡಿಸಿದ್ದ ಯಡಿಯೂರಪ್ಪ ಅವರು ಕೊಟ್ಟಂತಹ ಒಂದೇ ಒಂದು ಭರವಸೆಯನ್ನು ಈಡೇರಿಸಿಲ್ಲ.
ಇಷ್ಟು ದೊಡ್ಡ ರಾಜ್ಯದಲ್ಲಿ ಇರಬೇಕಾಗಿದ್ದ ಸಮರ್ಪಕ ಆರೋಗ್ಯ ವ್ಯವಸ್ಥೆ ಸಂಪೂರ್ಣವಾಗಿ ಕುಸಿದು ಹೋಗಿದೆ. ರಾಜ್ಯ ಸರ್ಕಾರ ಆರೋಗ್ಯ ಕ್ಷೇತ್ರಕ್ಕೆ ಖರ್ಚು ಮಾಡುತ್ತಿರುವುದು ಕೇವಲ ಶೇ 3.8 ರಷ್ಟು ಮಾತ್ರ. ಜನಸಾಮಾನ್ಯ ಖಾಸಗಿ ಆಸ್ಪತ್ರೆಗಳ ನಡುವೆ ಸಿಲುಕಿಕೊಂಡು ನರಳಿ ಹೋಗುತ್ತಿದ್ದಾನೆ. ಆದ ಕಾರಣ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.

ಕೊರೊನಾ ಕಾರಣ ಇಡೀ ಶೈಕ್ಷಣಿಕ ವ್ಯವಸ್ಥೆ ಕುಸಿದು ಹೋಗಿದೆ. ಖಾಸಗಿ ಶಾಲೆಗಳ ಶುಲ್ಕ ಹೆಚ್ಚಳದಿಂದ ಅನೇಕ ಪೋಷಕರು ಈಗಲೂ ಒದ್ದಾಡುತ್ತಿದ್ದಾರೆ. ನಮ್ಮ ಸರ್ಕಾರಿ ಶಾಲೆಗಳು ಸಬಲವಾಗಿ ಇದ್ದಿದ್ದರೆ ಇಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ. ಆದ ಕಾರಣ ಈ ಬಾರಿಯ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹೆಚ್ಚು ಅನುದಾನ ಮೀಸಲಿಡಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ಸಾರಿಗೆ ವ್ಯವಸ್ಥೆ ಕೂಡ ಜನಸಾಮಾನ್ಯರಿಂದ ದೂರವಾಗುತ್ತಲೇ ಇದೆ. ಈ ಕ್ಷೇತ್ರಕ್ಕೂ ಸರಿಯಾದ ಪ್ರಾಶಸ್ತ್ಯ ನೀಡಬೇಕು ಅಲ್ಲದೇ ಆರ್ಥಿಕತೆಯ ಜೀವ ಸೆಲೆಯಂತೆ ಇದ್ದ ಸಣ್ಣ ಕೈಗಾರಿಕೆಗಳು ಲಾಕ್‌ಡೌನ್ ಕಾರಣ ಚೇತರಿಕೆ ಆಗದಷ್ಟು ಹೊಡೆತ ತಿಂದಿವೆ ಆದ ಕಾರಣ ಇವುಗಳ ಪುನಶ್ಚೇತನಕ್ಕೆ ಹೆಚ್ಚಿನ ಅನುದಾನ ನೀಡಲೇಬೇಕು ಎಂದು ಆಗ್ರಹಿಸಿದರು.

ನೀತಿ ಮತ್ತು ಸಂಶೋಧನಾ ವಿಭಾಗದ ಪ್ರಕಾಶ್ ನೆಡುಂಗಡಿ ಮಾತನಾಡಿ, ಹೊಸ ಹಾಗೂ ಹಳೇ ತೆರಿಗೆಗಳನ್ನು ಹೆಚ್ಚಳ ಮಾಡಬಾರದು. ಸರ್ಕಾರದ ಅನವಶ್ಯಕ ಖರ್ಚುಗಳನ್ನು ಕಡಿಮೆ ಮಾಡಬೇಕು ಹಾಗೂ ಭ್ರಷ್ಟಾಚಾರ ನಿಯಂತ್ರಣ ಮಾಡಿದರೆ ಸಾಕು. ಉತ್ತಮ ಬಜೆಟ್ ಮಂಡಿಸಬಹುದು ಎಂದು ಸಲಹೆ ನೀಡಿದರು.

ದೆಹಲಿಯಲ್ಲಿ ಸರ್ಕಾರ ಕಳೆದ 6 ವರ್ಷಗಳಿಂದ ಕಿಂಚಿತ್ತೂ ತೆರಿಗೆ ಹೆಚ್ಚಳ ಮಾಡಿಲ್ಲ ಆದರೂ ಸರ್ಕಾರದ ಆದಾಯ ದ್ವಿಗುಣಗೊಂಡಿದೆ. ಏಪ್ರಿಲ್ 2020 ರಲ್ಲಿ ತಯಾರಿಸಿದ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯ ತೆರಿಗೆಯನ್ನು ಉಳಿಸಿದರು ರಾಜ್ಯ ಸರ್ಕಾರದ ಆದಾಯ ದ್ವಿಗೊಂಡಿದೆ ಏಕೆಂದರೆ ಉತ್ತಮ ಆರ್ಥಿಕ ಶಿಸ್ತು ಇದಕ್ಕೆ ಕಾರಣ. ಈ ರೀತಿಯಲ್ಲಿ ಈ ಬಾರಿಯ ಕರ್ನಾಟಕ ಬಜೆಟ್ ರೂಪಿಸಬೇಕು ಎಂದು ಆಗ್ರಹಿಸಿದರು.

ಆರೋಗ್ಯಕ್ಕಾಗಿ ಸರ್ಕಾರ ಖರ್ಚು ಮಾಡುವ ಸರಾಸರಿ ಹಣ ಪ್ರತಿಯೊಬ್ಬರಿಗೆ ₹ 1,328
ಕರ್ನಾಟಕದಲ್ಲಿ ಆರೋಗ್ಯಕ್ಕಾಗಿ ಸರ್ಕಾರವು ಖರ್ಚು ಮಾಡುವ ಸರಾಸರಿ ಹಣ ಪ್ರತಿಯೊಬ್ಬರಿಗೆ ₹ 1,328 ಮತ್ತು ದೆಹಲಿಯಲ್ಲಿ ₹ 2,568 ಅಂದರೆ ಸುಮಾರು ಶೇ 50ರಷ್ಟು ಜಾಸ್ತಿ. 2020-21ರ ಬಜೆಟ್‌ನಲ್ಲಿ 10,000 ಹಾಸಿಗೆಗಳಿಂದ 26,000 ಹಾಸಿಗೆಗಳಿಗೆ ವಿಸ್ತರಿಸಲು ಸುಮಾರು 724 ಕೋಟಿ ರೂ. ಅದೇ ರೀತಿ 325 ಕೋಟಿ ವೆಚ್ಚದಲ್ಲಿ ಮೊಹಲ್ಲಾ ಚಿಕಿತ್ಸಾಲಯಗಳ ಸಂಖ್ಯೆಯನ್ನು 425 ರಿಂದ 1,000 ಕ್ಕೆ ದ್ವಿಗುಣಗೊಳಿಸಲಾಗುತ್ತಿದೆ.

ಕರ್ನಾಟಕದ ಒಟ್ಟು ಖರ್ಚು ಕೇವಲ 3.8% ರಷ್ಟು ಮಾತ್ರ. 2018-19 ಮತ್ತು 2020-21ರ ನಡುವೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವೆಚ್ಚಗಳ ಬೆಳವಣಿಗೆ ಕೇವಲ 7% ಆಗಿದೆ, ದೆಹಲಿ ತನ್ನ ಸಾರ್ವಜನಿಕ ಖರ್ಚಿನ ಶೇ 12 ರಷ್ಟನ್ನು ಆರೋಗ್ಯಕ್ಕಾಗಿ ಖರ್ಚು ಮಾಡುತ್ತದೆ. 20-21ರಲ್ಲಿ, ಹಿಂದಿನ ವರ್ಷಕ್ಕಿಂತ ಯೋಜಿತ ಹೆಚ್ಚಳವು 26% ನಷ್ಟು ಹೆಚ್ಚಾಗಿದೆ ಮುಂದಿನ 3 ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ತನ್ನ ಆರೋಗ್ಯ ವೆಚ್ಚವನ್ನು ವಾರ್ಷಿಕ ಕನಿಷ್ಠ 30% ರಷ್ಟು ಹೆಚ್ಚಳ ಮಾಡುವ ಪ್ರಸ್ತಾಪ ಸಲ್ಲಿಸಿದೆ.

ಶಿಕ್ಷಣಕ್ಕಾಗಿ ಕೇವಲ 13% ಖರ್ಚು
ಕರ್ನಾಟಕ ಸರ್ಕಾರ ಶಿಕ್ಷಣಕ್ಕಾಗಿ ಕೇವಲ 13% ಖರ್ಚು ಮಾಡುತ್ತಿದರ ಈ ಹಣವನ್ನು ಸಹ ಸರಿಯಾಗಿ ಖರ್ಚು ಮಾಡದ ಕಾರಣ ಸರ್ಕಾರಿ ಶಾಲೆಗಳಲ್ಲಿ ಕಳಪೆ ಫಲಿತಾಂಶಕ್ಕೆ ಕಾರಣವಾಗಿದೆ. ದೆಹಲಿಯ ಸರ್ಕಾರಿ ಶಾಲೆಗಳ ಮಕ್ಕಳು 98% ರಷ್ಟು ಉತ್ತೀರ್ಣರಾಗಿದ್ದರೆ, ಕರ್ನಾಟಕ ಸರ್ಕಾರಿ ಶಾಲೆಗಳಲ್ಲಿನ ಸಂಖ್ಯೆ ಕೇವಲ 70% ಮಾತ್ರ! ಇದಲ್ಲದೆ, ದೆಹಲಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳು ಭಾರತದ ಅತ್ಯುತ್ತಮ ಕಾಲೇಜುಗಳಿಗೆ ಪ್ರವೇಶ ಪಡೆದಿದ್ದಾರೆ.

443 ವಿದ್ಯಾರ್ಥಿಗಳು ಐಐಟಿ ಮುಖ್ಯ ಪರೀಕ್ಷೆ ಪಾಸು ಮಾಡಿದ್ದಾರೆ. 569 ಮಕ್ಕಳು ನೀಟ್ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಉತ್ತಮ ಗುಣಮಟ್ಟದ ಸರ್ಕಾರಿ ಶಾಲೆಗಳಿಂದ ದೆಹಲಿಯಲ್ಲಿ ಶಾಲಾ ದಾಖಲಾತಿ ಹೆಚ್ಚಳವಾಗಿದೆ. ಕರ್ನಾಟಕವು ಶಿಕ್ಷಣಕ್ಕಾಗಿ ಸಾರ್ವಜನಿಕ ಖರ್ಚನ್ನು ವರ್ಷಕ್ಕೆ 20% ಕ್ಕೆ ಹೆಚ್ಚಿಸಬೇಕೆಂಬುದು ನಮ್ಮಗಳ ಆಗ್ರಹ.

ಕರ್ನಾಟಕ ಬಜೆಟ್ ಅನ್ನು ಆಮೂಲಾಗ್ರವಾಗಿ ಸುಧಾರಿಸಬಹುದಾದ ಹಲವಾರು ಕ್ಷೇತ್ರಗಳಿವೆ
ಅಲ್ಪಾವಧಿಯ ಸಬ್ಸಿಡಿಗಳು, ಮನ್ನಾ ಮತ್ತು ಚಾರ್ಜಿಂಗ್ ಕೇಂದ್ರಗಳ ಸ್ಥಾಪನೆಯ ಮೂಲಕ ಇವಿಗಳ ಆರಂಭಿಕ ಆಯ್ಕೆ ಮತ್ತು ಬಳಕೆಯನ್ನು ಗಮನಾರ್ಹವಾಗಿ ಬೆಂಬಲಿಸುತ್ತದೆ – ರಾಜ್ಯದಲ್ಲಿ ಪೂರ್ವ-ಪಶ್ಚಿಮ ಸಂಚಾರ ಕಾರಿಡಾರ್‌ಗಳನ್ನು ಅಭಿವೃದ್ಧಿಪಡಿಸುವುದು – ಸಾರ್ವಜನಿಕ ಸಾರಿಗೆಯ ಪ್ರವೇಶವನ್ನು ಸುಧಾರಿಸಲು ಬಸ್‌ಗಳ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸುವುದು.

ಸಣ್ಣ ಉದ್ಯಮಗಳ ಪುನರುಜ್ಜೀವನ ಲಾಕ್ ಡೌನ್ ಸಮಯದಲ್ಲಿ ಸಣ್ಣ ಉದ್ಯಮಗಳು ಮತ್ತು ಸ್ವಯಂ ಉದ್ಯೋಗಿಗಳಿಗೆ ಹೆಚ್ಚು ತೊಂದರೆಯಾಗಿದೆ. ಕರ್ನಾಟಕದಲ್ಲಿ 5.5 ಲಕ್ಷ ಸಣ್ಣ ಉದ್ಯಮಗಳಿವೆ ಮತ್ತು ಅವು ರಾಜ್ಯದ ಮುಖ್ಯ ಉದ್ಯೋಗ ಮತ್ತು ಸುಸ್ಥಿರ ಬೆಳವಣಿಗೆಯ ಮೂಲಗಳಾಗಿವೆ. ಹಿರಿಯ ನಾಗರಿಕರಿಗೆ ಬೆಂಬಲ ಹಿರಿಯ ನಾಗರಿಕರ ಪಿಂಚಣಿ ಯೋಜನೆಯ ವರ್ಧನೆಯು ಬೇರೆ ಯಾವುದೇ ಬೆಂಬಲವಿಲ್ಲದ ಹಿರಿಯ ನಾಗರಿಕರಿಗೆ ಘನತೆಯ ಜೀವನವನ್ನು ನಡೆಸಲು ಅನುವು ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಆದಾಯದ ಮೂಲಗಳನ್ನು ಸೃಷ್ಟಿಸಲು ಮತ್ತು ಖರ್ಚು ಆದ್ಯತೆಗಳನ್ನು ನಿರ್ಧರಿಸಲು ಬಜೆಟ್ ಅನ್ನು 6-7 ವಲಯಗಳಿಗೆ ಕೇಂದ್ರೀಕರಿಸಬೇಕೆಂಬುದು ನಮ್ಮ ಪ್ರಮುಖ ಒತ್ತಾಯವಾಗಿದೆ.

Leave a Reply

error: Content is protected !!
LATEST
KKRTC ಇಂಡಿ ಘಟಕದ ಡಿಎಂ ಕರ್ಮಕಾಂಡ: 1-2ದಿನ ರಜೆಗೆ ಕೊಡಬೇಕು 2ಸಾವಿರ - ನೌಕರರ ಕಿತ್ತು ತಿನ್ನುತ್ತಿರುವ ನರರೂಪದ ರಕ್ಕಸ ವಿಜಯಪಥ: ಸಂಬಳ ಕುರಿತ KSRTC ಅಧಿಕಾರಿಗಳು/ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವೇತನ ಸಂಬಂಧ ಸಾರಿಗೆ  4 ನಿಗಮಗಳ ನೌಕರರ ಅಭಿಪ್ರಾಯ ಸಂಗ್ರಹ ಅಭಿಯಾನ KSRTC ಚಾಲನಾ ಸಿಬ್ಬಂದಿ ತಮ್ಮ ಜೀವವನ್ನು ಪಣಕ್ಕಿಟ್ಟು ಸಲ್ಲಿಸುವ ಸೇವೆ ಅವಿಸ್ಮರಣೀಯ- ಶ್ರೀ ಸೌಮ್ಯನಾಥ ಸ್ವಾಮೀಜಿ ಶ್ಲಾಘ... ಬನ್ನೂರು: ಸ್ಮಶಾನ ರಸ್ತೆಗಾಗಿ ಶವವಿಟ್ಟು ಮುಖ್ಯರಸ್ತೆ ಬಂದ್‌ಮಾಡಿ ಪ್ರತಿಭಟನೆ ದೀಪಾವಳಿಗೂ ಮುನ್ನ ಸರ್ಕಾರಿ ನೌಕರರಿಗೆ ಗಿಫ್ಟ್‌: ಶೇ.3ರಷ್ಟು ತುಟ್ಟಿಭತ್ಯೆ ಹೆಚ್ಚಳ KSRTC: ಒಂದೇ ಆಧಾರ್‌ನ 3ಜೆರಾಕ್ಸ್‌ ಪ್ರತಿ ಹಿಡಿದು ಟಿಕೆಟ್‌ ಕೇಳಿದ ನಾರಿಮಣಿಗಳು- ಪರಿಶೀಲಿಸಿದ ಕಂಡಕ್ಟರ್‌ಗೆ ನಾನು ಸರ... ಅ.21 ರಿಂದ ನ.20 ರವರೆಗೆ 6ನೇ ಸುತ್ತಿನ ಕಾಲುಬಾಯಿ ಲಸಿಕೆ: DC ಡಾ.ಶಿವಶಂಕರ ಪೋಕ್ಸೋ ಕಾಯ್ದೆಯನ್ವಯ ಸಂತ್ರಸ್ತ ಮಕ್ಕಳಿಗೆ ಸೇವೆ ಸಲ್ಲಿಸಲು ಅರ್ಜಿ ಆಹ್ವಾನ ಬೆಂ.ಗ್ರಾಂ.ಜಿಲ್ಲೆ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಮಹೇಶ್ವರಿಗೆ 1 ಲಕ್ಷ ರೂ. ಪ್ರೋತ್ಸಾಹ ಧ...