ವಿಜಯಪಥ ಸಮಗ್ರ ಸುದ್ದಿ
ನ್ಯೂಡೆಲ್ಲಿ: ಸಾರ್ವಜನಿಕ ವಲಯದ ಬ್ಯಾಂಕ್ ಗಳ ಖಾಸಗೀಕರಣ ವಿರೋಧಿಸಿ ಎಸ್‌ಬಿಐ ನೇತೃತ್ವದ ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ ಮಾರ್ಚ್ 15 ಮತ್ತು 16 ರ ಎರಡು ದಿನಗಳ ಕಾಲ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿದೆ.
ಬ್ಯಾಂಕ್ ನೌಕರರು ಪ್ರತಿಭಟನೆ ಬೆಂಬಲಿಸುವುದರಿಂದ ಬ್ಯಾಂಕಿಂಗ್ ಕೆಲಸ ಕಾರ್ಯಗಳನ್ನು ಮುಗಿಸಿ ಕೊಳ್ಳುವುದಕ್ಕೆ ಗ್ರಾಹಕರಿಗೆ ಉಳಿದಿರುವುದು ಈ ಒಂದು ದಿನ ಅಷ್ಟೇ ಶುಕ್ರವಾರ ಕೈತಪ್ಪಿದರೆ ಇನ್ನೂ ನಾಲ್ಕು ದಿನಗಳ ಕಾಲ ಯಾವುದೇ ಬ್ಯಾಂಕಿಂಗ್ ಸೇವೆಗಳು ಸಿಗುವುದು ಅನುಮಾನವಾಗಿದೆ.
ಇತ್ತೀಚೆಗೆ ನಡೆದ ಸಂಧಾನ ಸಭೆಯಲ್ಲಿ ಯಾವುದೇ ರೀತಿಯ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಾರ್ಚ್ 15 ಮತ್ತು 16 ರಂದು ಸುಮಾರು 10 ಲಕ್ಷ ಬ್ಯಾಂಕ್ ನೌಕರರು ರಾಷ್ಟ್ರವ್ಯಾಪಿ ಮುಷ್ಕರ ನಡೆಸಲಿದ್ದಾರೆ ಎಂದು ಅಖಿಲ ಭಾರತ ಬ್ಯಾಂಕ್ ನೌಕರರ ಸಂಘ ತಿಳಿಸಿದೆ.
ಇದಲ್ಲದೆ ಸಾರ್ವಜನಿಕ ವಲಯದ ಬ್ಯಾಂಕನ್ನು ಖಾಸಗೀಕರಣಗೊಳಿಸುವ ನಿರ್ಧಾರ ಮರುಪರಿಶೀಲಿಸಲು ಒಂದು ವೇಳೆ ಸರ್ಕಾರವು ಒಪ್ಪಿದರೆ ಮುಷ್ಕರವನ್ನು ಮರು ಪರಿಶೀಲಿಸುವುದಾಗಿ ಬ್ಯಾಂಕ್ ನೌಕರರ ಸಂಘಟನೆಗಳು ಹೇಳಿವೆ.
ಮಾರ್ಚ್ 15 ಮತ್ತು 16 ರಂದು ಬ್ಯಾಂಕ್ ಮುಷ್ಕರಕ್ಕೆ ಕರೆ ನೀಡಲಾಗಿದೆ. ಆದರೆಮ ಅದಕ್ಕೂ ಎರಡು ದಿನ ಮೊದಲೇ ಬ್ಯಾಂಕಿಂಗ್ ಸೇವೆಗಳ ಅಲಭ್ಯವಾಗಲಿವೆ. ಏಕೆಂದರೆ ಮಾರ್ಚ್ 13 ಎರಡನೇ ಶನಿವಾರ ವಾಗಿದ್ದು ಮಾರ್ಚ್ 14 ಭಾನುವಾರದ ಕಾರಣ ಬ್ಯಾಂಕ್ ರಜೆ ಇರುತ್ತದೆ. ಅದರ ಜತೆಗೆ ಎರಡು ದಿನಗಳವರೆಗೆ ಬ್ಯಾಂಕ್ ನೌಕರರ ಒಕ್ಕೂಟ ಮುಷ್ಕರಕ್ಕೆ ಕರೆ ಕೊಟ್ಟಿದೆ. ಹೀಗಾಗಿ ಬ್ಯಾಂಕ್ ಸೇವೆ 4 ದಿನಗಳವರೆಗೆ ಸಿಗುವುದು ಅನುಮಾನವಾಗಿದೆ.