Please assign a menu to the primary menu location under menu

NEWS

ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಅಧಿಕಾರಿಗಳು ಮತ್ತು ನೌಕರರಿಗೆ ಅವರು ಕೇಳುತ್ತಿರುವ ಸರಿ ಸಮಾನ ವೇತನ ಅಂದರೆ 7ನೇ ವೇತನ ಆಯೋಗದಂತೆ ವೇತನ ಕೊಡಬೇಕು ಎಂದು ಕರ್ನಾಟಕ ರಸ್ತೆ ಸಾರಿಗೆ ಮಜ್ದೂರ್ ಸಂಘ (ಭಾರತೀಯ ಮಜ್ದೂರ್ ಸಂಘಕ್ಕೆ ಸಂಯೋಜಿತ) ಒಕ್ಕೂಟ ಸರ್ಕಾರವನ್ನು ಆಗ್ರಹಿಸಿದೆ.

ಈ ಸಂಬಂಧ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಎಸ್. ಮಹದೇವಯ್ಯ ಮತ್ತೊಮ್ಮೆ ಮನವಿ ಮಾಡಿದ್ದಾರೆ.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯು ಪ್ರಾರಂಭವಾಗಿದ್ದ ದಿನದಿಂದ ಎಲ್ಲ ವೇತನ ಪರಿಷ್ಕರಣೆಯು 4 ವರ್ಷಕ್ಕೆ ಅನುಗುಣವಾಗಿ ವೇತನ ಪರಿಷ್ಕರಣೆ ಸಂಸ್ಥೆ ಮತ್ತು ಸರ್ಕಾರ ಜಾರಿಗೆ ತಂದು ನೌಕರರಿಗೆ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ವೇತನ ಜಾರಿ ಮಾಡಿಕೊಂಡು ಬಂದಿದೆ. ಆದರೆ ಹೆಚ್ಚಿನ ಕಾರ್ಯ ಒತ್ತಡದಿಂದ ಕರ್ತವ್ಯ ನಿರ್ವಹಿಸಿ ಸಾರ್ವಜನಿಕರಿಗೆ ಸಾರಿಗೆ ಉತ್ತಮ ಸೌಲಭ್ಯ ನಿಡುತ್ತಿರುವುದರಿಂದ ಸರ್ಕಾರಕ್ಕೆ ಒಳ್ಳೆಯ ಹೆಸರು ಬಂದಿದೆ.

ತಾವು 2023ರ ಚುನಾವಣೆಯಲ್ಲಿ ನಮ್ಮ ನೌಕರರಿಗೆ ಸಹ ಮತ ನೀಡಿದ್ದರಿಂದ 136 ವಿಧಾನಸಭಾ ಸದಸ್ಯರು ಆಯ್ಕೆಯಾಗಿರುವುದರಲ್ಲಿ ನಮ್ಮ ಸಾರಿಗೆ ನೌಕರರ ಸಹಕಾರವಿದೆ. ನಂತರ ತಾವು 2ನೇ ಬಾರಿಗೆ ಸಾರಿಗೆ ಇಲಾಖೆಗೆ ಸಚಿವರಾಗಿದ್ದಕ್ಕೆ ಸಂಸ್ಥೆಯ ಎಲ್ಲ ಒಂದು ಲಕ್ಷ ಹತ್ತು ಸಾವಿರ ನೌಕರರು ಬಹಳ ಸಂತೋಷ ಪಟ್ಟಿದ್ದಾರೆ.

ನಿಮ್ಮ ಮೇಲೆ ನೌಕರರು ಇನ್ನು ಮುಂದೆ ನಮ್ಮ ವೇತನ ಸೌಲಭ್ಯಗಳು ಉತ್ತಮವಾಗಿರುತ್ತವೆ ಎಂದು ನಿರೀಕ್ಷೆಯಲ್ಲಿದ್ದಾರೆ. ಆದರೆ 2020ರ ವೇತನ ಪರಿಕ್ಷರಣೆ 38ತಿಂಗಳು ಬಾಕಿ ಹಣವನ್ನು ಸಹ ನೌಕರರಿಗೆ ತಾವು ಕೊಡಿಸುವಲ್ಲಿ ಇನ್ನು ಸಫಲರಾಗಿಲ್ಲ. ಇದರ ಜತೆಗೆ ನಂತರ 01/01/2024 ವೇತನ ಪರಿಷ್ಕರಣೆ 11 ತಿಂಗಳಾದರೂ ಜಾರಿ ಬಂದಿಲ್ಲ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರುಗಳು ಆಸಕ್ತಿ ತೋರಿಸುತ್ತಿಲ್ಲ ಎಂಬುವುದು ಕಂಡು ಬರುತ್ತಿದೆ.

ಕೆಎಸ್‌ಆರ್‌ಟಿಸಿ ಆಫೀಸರ್ ವೆಲ್ಫರ್ಸ್‌ ಅಸೋಸಿಯೇಷನ್ ಅವರು 04.10.2024 ರಂದು ತಮಗೆ ಪತ್ರವನ್ನು ನೀಡಿದ್ದು, ಆ ಪತ್ರದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಒಟ್ಟು 799 ಜನ ಅಧಿಕಾರಿಗಳು ಇದ್ದೇವೆ. ನಾವುಗಳು ಬಹಳ ಕಷ್ಟಪಟ್ಟು ಕರ್ತವ್ಯ ಮಾಡುತ್ತಿದ್ದೇವೆ. ಆದ್ದರಿಂದ ನಮಗೂ ಸಹ ಸರ್ಕಾರದ 7ನೇ ವೇತನ ಆಯೋಗದಂತೆ ವೇತನ ನಿಗದಿಪಡಿಸಿಕೊಡಬೇಕೆಂದು ಕೇಳಿಕೊಂಡಿದ್ದಾರೆ.

ಅದರಂತೆ ನಾವೂ ಸಾರಿಗೆ ಕರ್ತವ್ಯ ನಿರ್ವಹಿಸುತ್ತಿರುವ 1.10 ಲಕ್ಷ ನೌಕರರಿಗೂ ಸಹ ಸರ್ಕಾರಿ ನೌಕರರಿಗೆ ಸರ್ಕಾರ ನೀಡಿರುವ 7ನೇ ವೇತನ ಆಯೋಗದಂತೆ ಸಾರಿಗೆ ನೌಕರರಿಗೂ ನಿಗದಿಪಡಿಸಬೇಕು ಎಂದು ಅಥವಾ ಅದಕ್ಕೆ ಅನುಗುಣವಾಗಿ ಶೇಕಡಾವಾರು ನೀಡಬೇಕು ಎಂದು ನಮ್ಮ ಒಕ್ಕೂಟ ಆಗ್ರಹಿಸುತ್ತದೆ ಎಂದು ತಿಳಿಸಿದ್ದಾರೆ.

ಮುಖ್ಯವಾದ ಬೇಡಿಕೆಗಳು: 1) 01/01/2020 ರಿಂದ ಜಾರಿಗೆ ಬಂದ ಪರಿಷ್ಕರಣೆ 01/03/2023 ರಂದು ಜಾರಿ ಮಾಡಿದ್ದು, 38 ತಿಂಗಳ ಬಾಕಿ ಹಣ ನೀಡಲು ಅನೇಕ ಪತ್ರ ವ್ಯವಹಾರಗಳನ್ನು ತಮಗೂ ಮತ್ತು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಿಗೂ ಮಾಡಿದ್ದರೂ ಸಹ ಬಾಕಿ ಹಣ ನೀಡಿರುಲ್ಲ. ಈ ಬಾಕಿ ಹಣವನ್ನು ತಾವು ಯಾವ ದಿನಾಂಕದೊಳಗೆ ನೀಡುತ್ತೀರಾ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಬೇಕು.

2) 01/01/2024 ರಿಂದ ಜಾರಿಗೆ ಬರಬೇಕಾದ ವೇತನ ಪರಿಷ್ಕರಣೆಯನ್ನುಸರ್ಕಾರಿ ನೌಕರರಿಗೆ ಸಮಾನ ವೇತನ ನೀಡಬೇಕೆಂದು ಅದಕ್ಕೆ ಸಮಾನ ವೇತನ ಶೇಕಡವಾರು ಜಾರಿ ಮಾಡಬೇಕು ಇಂಕ್ರಿಮೆಂಟ್‌ ಸ್ಲಾಬ್‌ಗಳನ್ನು ಅಂದರೆ ಈಗಿರುವ ಇಂಕ್ರಿಮೆಂಟ್‌ಗೆ ದುಪ್ಪಟ್ಟು ಮಾಡಿಕೊಡಬೇಕೆಂದು ಆಗ್ರಹ.

3) ಹಿಂದೆ 3ವೇತನ ಪರಿಷ್ಕರಣೆ 2012, 2016, 2020ರ ಸಮಯದಲ್ಲಿ ಭತ್ಯೆಗಳನ್ನು ಹೆಚ್ಚಿಸಿಲ್ಲ. ಇವುಗಳನ್ನು ಮೂರುಪಟ್ಟು ಹೆಚ್ಚಿಗೆ ಮಾಡಬೇಕು. ಅಧಿಕಾರಿಗಳಿಂದ ನೌಕರರಿಗೆ ಆಗುತ್ತಿರುವ ಕಿರುಕುಳ ಹಾಗೂ ಭ್ರಷ್ಟಾಚಾರ ತಪ್ಪಿಸಬೇಕು.

ಸರ್ಕಾರ ಜಾರಿಗೆ ತಂದಿರುವ ಶಕ್ತಿ ಯೋಜನೆ (ಮಹಿಳೆಯರಿಗೆ ಉಚಿತ ಪ್ರಯಾಣ) ಯಿಂದ ಸಾರಿಗೆ ಸಂಸ್ಥೆಯ ಆದಾಯ ಹೆಚ್ಚಿಗೆ ಬರುತ್ತಿದೆ. ಸರ್ಕಾರಕ್ಕೆ ಒಳ್ಳೆಯ ಹೆಸರು ಸಹ ನಮ್ಮ ಸಾರಿಗೆ ನೌಕರರ ಶ್ರಮದಿಂದ ಬಂದಿದೆ. ಸಂಸ್ಥೆಗೆ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದಿಂದ ಸುಮಾರು 140 ಪ್ರಶಸ್ತಿಗಳು ಸಹ ಲಭ್ಯವಾಗಿದ್ದು ಇದೂ ಸಹ ನೌಕರರ ಶ್ರಮದಿಂದಲೇ ಲಭಿಸಿದೆ.

ಈ ಎಲ್ಲ ವಿಷಯಗಳನ್ನು ತಾವು ಸಾರಿಗೆ ನೌಕರರಿಗೆ ರಾಜ್ಯದ ಇತರ ಎಲ್ಲ ಬೇರೆ ನಿಗಮಗಳಂತೆ ಅಂದರೆ KPTCL, BWSSB ಸೇರಿ ಇತರ ನಿಗಮಗಳ ನೌಕರಂತೆ ಹೆಚ್ಚಿನ ವೇತನ ನೀಡಬೇಕು ಎಂದು ಭಾರತೀಯ ರಸ್ತೆ ಸಾರಿಗೆ ಮಜ್ದೂರ್  ಸಂಘ ಒಕ್ಕೂಟ ಸಂಘಟನೆಯು ಒತ್ತಾಯಪೂರಕವಾಗಿ ವೇತನ ನಿಗದಿಪಡಿಸಬೇಕು ಎಂದು ಮನವಿ ಮಾಡಿದೆ.

Leave a Reply

error: Content is protected !!
LATEST
ಸಾರಿಗೆ ಅಧಿಕಾರಿಗಳು-ನೌಕರರ ಬೇಡಿಕೆಯಂತೆ ಸರಿ ಸಮಾನ ವೇತನ ಕೊಡಿ: BMS ತಾಕೀತು NWKRTC: ಹುಬ್ಬಳ್ಳಿ-ಧಾರವಾಡ ಹೈಕೋರ್ಟ್‌ ನಡುವೆ ಹೊಸ ಬಸ್‌ಗಳ ಸಂಚಾರ- ವಕೀಲರ ಮನವಿ ಸ್ಪಂದಿಸಿದ ಅಧಿಕಾರಿಗಳು ಡಿ.1ರಂದು ಲಾಲ್‌ಬಾಗ್‌ನಲ್ಲಿ ಇಪಿಎಸ್ ಪಿಂಚಿಣಿದಾರರ 83ನೇ ತಿಂಗಳ ಸಭೆ ಸಾರಿಗೆ ನೌಕರರಿಗೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆ ಅನುಷ್ಠಾನಗೊಳಿಸಿ : ಸರ್ಕಾರಕ್ಕೆ ಬೈರಣ್ಣ ಒತ್ತಾಯ KSRTC: ಸಮಸ್ತ 4ನಿಗಮಗಳ ಅಧಿಕಾರಿಗಳು-ನೌಕರರು ಇಟ್ಟಿರುವ ಬೇಡಿಕೆಗಳ ಈಡೇರಿಸಿಕೊಳ್ಳುವುದು ಅಸಾಧ್ಯವೆ ಅಲ್ಲ! ಡಿ.9ರಿಂದ ವಿಧಾನಮಂಡಳ ಅಧಿವೇಶನ, ಉಕ ಪ್ರಗತಿಗೆ ಒತ್ತು: ಸ್ಪೀಕರ್ ಖಾದರ್ ವಿವಿಧ ಬೇಡಿಕೆಗಳ  ಈಡೇರಿಸಿ ಆಗ್ರಹಿಸಿ ಇಪಿಎಸ್ ಪಿಂಚಣಿದಾರರ ಪ್ರತಿಭಟನೆ: ಅಧಿಕಾರಿಗಳ ವಿರುದ್ಧ ಆಕ್ರೋಶ ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ