ಬೆಂಗಳೂರು: ಸರ್ಕಾರ ಸಾರಿಗೆ ನೌಕರರ ಬೇಡಿಕೆ ಈಡೇರಿಸುವುದಕ್ಕೆ ಮುಂದಾಗಿದ್ದರು ಕೆಲ ನೌಕರ ವಿರೋಧಿ ಸಂಘಟನೆಗಳ ನಡೆಯಿಂದ ಕೈಗೆ ಬಂದ ತುತ್ತು ಬಾಯಿಗೆ ಬರುವಷ್ಟರಲ್ಲಿ ಮಣ್ಣುಪಾಲಾದಂತಾಗಿದೆ.
ಇನ್ನು ಇದರಿಂದ ನೌಕರರು ಆಕ್ರೋಶಗೊಂಡು ಶತಾಯಗತಾಯ ವೇತನ ಆಯೋಗ ಮಾದರಿಯಲ್ಲೇ ವೇತನ ಪಡೆಯಬೇಕು ಎಂದು ದೃಢ ನಿರ್ಧಾರ ತೆಗೆದುಕೊಂಡು ಇದೇ ಮಾ.24ರಿಂದ ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ನೀಡಲು ಮಾ.23ರಿಂದಲೇ ರಾತ್ರಿ ಪಾಳಿಯ ಡ್ಯೂತಿಗೆ ಹೋಗದೆ ಈ ದಿನದ ಡ್ಯೂಟಿ ಅಷ್ಟೇ ಕೊಡಿ ಎಂದು ಡಿಪೋಗಳಲ್ಲೇ ಹೋರಾಟ ಮಾಡುತ್ತಿದ್ದರು.
ನೌಕರರ ದೃಢ ನಿರ್ಧಾರವನ್ನು ಅರಿತ ಸರ್ಕಾರ ವಾಮ ಮಾರ್ಗದ ಹಿಡಿದು ತಮ್ಮ ರಕ್ಷಣೆಗೆ ಮುಂದಾಯಿತು. ಇದು ಪ್ರಜಾಪ್ರಭುತ್ವ ವಿರೋಧಿ ನಡೆ ಎಂಬುವುದು ಗೊತ್ತಿದ್ದರು, ತನ್ನ ಕೈ ಚಳಕವನ್ನು ತೋರಿಸಿ ನೌಕರರನ್ನು ಇನ್ನು ಮುಷ್ಕರಕ್ಕೆ ಕೆಲವೇ ಗಂಟೆಗಳು ಬಾಕಿ ಇರುವಂತೆಯೇ ಕಟ್ಟಿಹಾಕಿತು.
ಇದನ್ನು ಪಕ್ಕಕ್ಕೆ ಇಟ್ಟು ನೋಡಿದರೆ, ಸಾರಿಗೆ ನೌಕರರಿಗೆ ಸರ್ಕಾರಿ ನೌಕರರ ಸರಿ ಸಮಾನ ವೇತನ ಮತ್ತು ವೇತನ ಆಯೋಗ ಮಾದರಿಯಡಿ ವೇತನ ನೀಡುವುದಕ್ಕೆ ಸರ್ಕಾರ ಬಹುತೇಕ ಎಲ್ಲ ಸಿದ್ಧತೆಯನ್ನು ಮಾಡಿಕೊಂಡಿತು. ಆದರೆ, ಹೀಗೆ ಮಾಡಿ ಬಿಟ್ಟರೆ ನಮ್ಮ ಸಂಘನೆಗಳು ಮೂಲೆಗುಂಪಾಗುತ್ತೇವೆ ಎಂದು ಸರ್ಕಾರದ ದಿಕ್ಕನ್ನೆ ತಪ್ಪಿಸಿ ಕುಂತ್ರದಿಂದ ಕೇವಲ 1000 ರೂ.ಗಳಿಂದ 1500 ರೂ.ಗಳನ್ನು (ಸುಮಾರು 20 ವರ್ಷ ಸೇವೆ ಸಲ್ಲಿಸಿದರಿಗೆ) ಹೆಚ್ಚಳ ಮಾಡಿಸಿ ಬೀಗಿದ್ದೇ ಬೀಗಿದ್ದು.
ಅಲ್ಲದೆ ಸಾರಿಗೆ ನೌಕರರ ಹೋರಾಟವನ್ನು ಜೀವಂತವಾಗಿ ಇಟ್ಟುಕೊಂಡರೆ ನಾಲ್ಕುವರ್ಷಕ್ಕೊಮ್ಮೆ ಸಂಘಟನೆಗಳು ಇವೆ ಎಂಬುದನ್ನು ತೋರಿಸಬಹುದು ಎಂಬ ಲೆಕ್ಕಚಾರದಲ್ಲಿ ಕೆಲ ಮುಖಂಡರು ಸರಿ ಸಮಾನ ವೇತನದ ಬದಲಿಗೆ ಅಗ್ರಿಮೆಂಟ್ ಮೂಲಕವೇ ವೇತನ ಹೆಚ್ಚಳ ಮಾಡಿ ಎಂದು ಸರ್ಕಾರವನ್ನು ಒತ್ತಾಯಿಸಿ ಅದರಲ್ಲಿ ಅವರು ಅಂದುಕೊಂಡಷ್ಟು ವೇತನ ಹೆಚ್ಚಳ ಮಾದಿದ್ದರೂ, ಸನ್ಮಾನಿಸಿ ಖುಷಿಪಟ್ಟರು.
ಇದಲ್ಲದೆ ಮುಖ್ಯಮಂತ್ರಿಗಳು ಕೂಡ ಸಾರಿಗೆ ನೌಕರರ ಸಮಸ್ಯೆ ಏನೆಂದು ನಮಗೆ ಗೊತ್ತಿದೆ ಸೂಕ್ತ ಸಮಯಕ್ಕೆ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಮೂಲಕ ಒಂದು ಶಾಶ್ವತ ಪರಿಹಾರ ನೀಡುತ್ತೇವೆ ಎಂದು ಸಾರಿಗೆ ಸಮಾರಂಭಗಳಲ್ಲಿ ಮತ್ತು ನೌಕರರು ಮನವಿ ಸಲ್ಲಿಸುವ ವೇಳೆಯು ಭರವಸೆ ನೀಡಿದ್ದರು. ಆದರೆ ನುಡಿದಂತೆ ನಡೆದುಕೊಳ್ಳದೆ ಮಾತು ತಪ್ಪಿದ ಸಿಎಂ ಎಂಬ ಹಣೆಪಟ್ಟಿಯನ್ನು ಕಟ್ಟಿಕೊಂಡರು.
ಒಟ್ಟಾರೆ ಸರ್ಕಾರ ಸಾರಿಗೆ ನೌಕರರಿಗೆ ಕೊಟ್ಟ ಮಾತನ್ನು ಚುನಾವಣೆ ಸಮೀಪದಲ್ಲಿ ಉಳಿಸಿಕೊಳ್ಳುದೆ ಎಂಬ ನೌಕರರ ಭಾವನೆಗೆ ಧಕ್ಕೆಯಾಗುವ ರೀತಿ ನಡೆದುಕೊಂಡಿದ್ದು, ನಿಜಕ್ಕೂ ನೋವಿನ ಸಂಗತಿಯಾಗಿದೆ. ಅಲ್ಲದೆ ಸರ್ಕಾರ ತಾನೇ ಲಿಖಿತವಾಗಿ ಕೊಟ್ಟ ಭರವಸೆಯನ್ನು ಈಡೇರಿಸದೆ ನೌಕರರು ಮತ್ತು ಅವರ ಕುಟುಂಬದವರ ಮನಸ್ಸಿಗೆ ತುಂಬ ನೋವನ್ನು ಉಂಟುಮಾಡಿದ್ದು, ಇದರ ಪರಿಣಾಮವನ್ನು ಮುಂದಿನ ದಿನಗಳಲ್ಲಿ ಎದುರಿಸಲೇ ಬೇಕು.