ನ್ಯೂಡೆಲ್ಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಮೊಬೈಲ್ ಫಂಡ್ ವರ್ಗಾವಣೆಗೆ ಕಡಿತಮಾಡುತ್ತಿದ್ದ ಎಸ್‌ಎಂಎಸ್ ಶುಲ್ಕವನ್ನು ಮನ್ನಾ ಮಾಡಿರುವುದಾಗಿ ಘೋಷಿಸಿದೆ.
ಹೀಗಾಗಿ ಎಸ್‌ಬಿಐ ಗ್ರಾಹಕರು ಈಗ ವಹಿವಾಟು ಮಾಡಲು ಯುಎಸ್‌ಎಸ್‌ಡಿ ಸೇವೆಗಳನ್ನು ಹೆಚ್ಚುವರಿ ಶುಲ್ಕವಿಲ್ಲದೆ ಬಳಸಿಕೊಳ ಬಹುದಾಗಿದೆ.
ಎಸ್‌ಬಿಐಯ ಅಧಿಕೃತ ಟ್ವಿಟ್ಟರ್ ಖಾತೆಯ ಪ್ರಕಾರ, “ಮೊಬೈಲ್ ಫಂಡ್ ವರ್ಗಾವಣೆಯ ಮೇಲೆ ಎಸ್‌ಎಂಎಸ್ ಶುಲ್ಕಗಳನ್ನು ಈಗ ಮನ್ನಾ ಮಾಡಲಾಗಿದೆ. ಬಳಕೆದಾರರು ಈಗ ಯಾವುದೇ ಹೆಚ್ಚುವರಿ ಶುಲ್ಕಗಳಿಲ್ಲದೆ ಅನುಕೂಲಕರವಾಗಿ ವಹಿವಾಟು ನಡೆಸಬಹುದು ಎಂದು ವಿವರಿಸಿದೆ.
ಈ ಸೇವೆ ಹೇಗೆ ಬಳಸುವುದು ?: ಕೇವಲ * 9# ಅನ್ನು ಡಯಲ್ ಮಾಡಿ ಮತ್ತು ಬ್ಯಾಂಕಿಂಗ್ ಸೇವೆಗಳನ್ನು ಸಂಪೂರ್ಣವಾಗಿ ಉಚಿತವಾಗಿ ಪಡೆದುಕೊಳ್ಳಿ, ಇದು ವಿಶೇಷವಾಗಿ ಫೀಚರ್ ಫೋನ್ ಬಳಕೆದಾರರಿಗೆ ಆಗಿದೆ. ಬ್ಯಾಂಕ್ ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ತಮ್ಮ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ್ದರೆ ಮತ್ತು ಎಟಿಎಂ/ಡೆಬಿಟ್ ಕಾರ್ಡ್ ಹೊಂದಿದ್ದರೆ ಈ ಸೇವೆ ಬಳಸಬಹುದಾಗಿದೆ.