NEWSನಮ್ಮಜಿಲ್ಲೆನಮ್ಮರಾಜ್ಯ

ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು!

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಸರ್ಕಾರಗಳು ಕೊಡಬೇಕಿರುವುದನ್ನು ಕಾಲಕಾಲಕ್ಕೆ ಸರಿಯಾಗಿ ಕೊಡದಿರುವುದರಿಂದ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿಯನ್ನು ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳು ಎದುರಿಸುತ್ತಿದ್ದು, ಅಲ್ಲದೆ ಪ್ರತಿಯೊಂದಕ್ಕೂ ಸರ್ಕಾರದ ಮುಂದೆ ಕೈಯೊಡ್ಡುವ ಪರಿಸ್ಥಿತಿಯಿದೆ.

ಹಿಂದಿನ ಬಜೆಪಿ ಸರ್ಕಾರ ಸಾರಿಗೆ ನಿಗಮಗಳಿಗೆ 5900 ಕೋಟಿ ರೂ.ಗಳನ್ನು ಪಾವತಿಸದೆ ಆರ್ಥಿಕ ಸಂಕಷ್ಟಕ್ಕೆ ದೂಡಿ ಹೋಗಿದೆ. ಇನ್ನು ಇಂದಿನ ಕಾಂಗ್ರೆಸ್‌ ಸರ್ಕಾರವೂ ಕೂಡ ಶಕ್ತಿ ಯೋಜನೆ ಸೇರಿದಂತೆ ಇತರೆ ವಿವಿಧ ಯೋಜನೆಗಳಡಿ ಕೊಡುತ್ತಿರುವ ರಿಯಾಯಿತಿ ಪಾಸ್‌ಗಳ ಹಣವನ್ನು ನಿಗಮಗಳಿಗೆ ಸಮರ್ಪಕವಾಗಿ ಕೊಡದೆ ಬಾಕಿ ಉಳಿಸಿಕೊಂಡಿರುವುದರಿಂದ ಕಳೆದ ಹಲವು ತಿಂಗಳಿನಿಂದ ನೌಕರರ ಭವಿಷ್ಯ ನಿಧಿ ಪಾವತಿಸುವಲ್ಲೂ ನಿಗಮಗಳು ಹೆಣಗಾಡುತ್ತಿವೆ.

ಹೀಗಾಗಿ ಸಾರಿಗೆ ನಿಗಮಗಳ ಎಂಡಿಗಳು ಸರ್ಕಾರ ಕೊಡಬೇಕಿರುವುದನ್ನು ನೇರವಾಗಿ ಕೇಳಲಾಗದೆ ಆರ್ಥಿಕ ನೆರವು ನೀಡುವಂತೆ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಆದರೂ ಸರ್ಕಾರ ಮಾತ್ರ ಸಾರಿಗೆ ನಿಗಮಗಳ ಬಗ್ಗೆ ತಾತ್ಸಾರ ತೋರುತ್ತಿದ್ದು ನೌಕರರನ್ನು ಆರ್ಥಿಕವಾಗಿ ಸಂಕಷ್ಟಕ್ಕೆ ದೂಡುತ್ತಿದೆ.

ಇನ್ನು ಭವಿಷ್ಯ ನಿಧಿ ಕಾಯ್ದೆ ಪ್ರಕಾರ ಪ್ರತಿ ತಿಂಗಳು ನೌಕರರ ವೇತನದಲ್ಲಿ ಭವಿಷ್ಯ ನಿಧಿ ಮೊತ್ತ ಕಡಿತಗೊಳಿಸುವುದು ಹಾಗೂ ಉದ್ಯೋಗದಾತರು ಅದಕ್ಕೆ ಸಮಾನವಾದ ಮೊತ್ತವನ್ನು ನೌಕರರ ಭವಿಷ್ಯ ನಿಧಿಖಾತೆಗೆ ಪಾವತಿಸಬೇಕಿದೆ. ಆದರೆ, ನೌಕರರ ವೇತನದಿಂದ ಕಡಿತಗೊಳಿಸಿದ ಮತ್ತು ತಮ್ಮ ಪಾಲವನ್ನು ಭವಿಷ್ಯ ನಿಧಿ ನ್ಯಾಸಕ್ಕೆ ಪಾವತಿಸುವಲ್ಲಿ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ನಾಲ್ಕೂ ನಿಗಮಗಳು ಪರದಾಡುತ್ತಿವೆ.

ಒಟ್ಟಾರೆ ನಾಲ್ಕೂ ನಿಗಮಗಳು ಭವಿಷ್ಯ ನಿಧಿ ನ್ಯಾಸಕ್ಕೆ ಭವಿಷ್ಯ ನಿಧಿ ಬಾಕಿ ಹಾಗೂ ವಿಳಂಬಕ್ಕೆ ಬಡ್ಡಿ ಸೇರಿದಂತೆ 2024ರ ಅಕ್ಟೋಬರ್‌ವರೆಗೆ 2,792.61 ಕೋಟಿ ರೂ. ಪಾವತಿಸುವುದು ಬಾಕಿ ಉಳಿದಿದೆ. ಈ ಮೊತ್ತ ಪಾವತಿಸಲು ತಮಗೇ ಸಾಧ್ಯವೇ ಇಲ್ಲ ಎಂದು ಹೇಳಿರುವ ನಿಗಮಗಳು, ಅದಕ್ಕಾಗಿ ಸರ್ಕಾರದಿಂದ ಆರ್ಥಿಕ ನೆರವು ನೀಡುವಂತೆ ಪತ್ರದ ಮೂಲಕ ಕೋರಿವೆ.

523.52 ಕೋಟಿ ರೂ. ಬಡ್ಡಿ ಪಾವತಿಸಬೇಕು: ರಾಜ್ಯ ರಸ್ತೆ ಸಾರಿಗೆ ನಿಗಮಗಳ ಲೆಕ್ಕದಂತೆ ಒಟ್ಟು 2,269.09 ಕೋಟಿ ರೂಪಾಯಿ ಭವಿಷ್ಯ ನಿಧಿ ಬಾಕಿ ಉಳಿಸಿಕೊಂಡಿವೆ. ಅಲ್ಲದೆ, ಹೀಗೆ ನಿಗದಿತ ಸಮಯದಲ್ಲಿ ಭವಿಷ್ಯ ನಿಧಿ ಪಾವತಿಸದೆ ವಿಳಂಬ ಮಾಡಿದ್ದಕ್ಕಾಗಿ 523.52 ಕೋಟಿ ರೂಪಾಯಿ ಬಡ್ಡಿ ಪಾವತಿಸಬೇಕಿದೆ. ಅದರಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮವು 2021ರ ಸೆಪ್ಟೆಂಬರ್‌ನಿಂದ 2024ರ ಅಕ್ಟೋಬರ್ ವರೆಗೆ ಸತತ 3 ವರ್ಷಗಳ ಕಾಲ ಭವಿಷ್ಯ ನಿಧಿ ಮೊತ್ತ ಪಾವತಿಸಿಲ್ಲ. ಹೀಗಾಗಿ 821.48 ಕೋಟಿ ರೂ. ಭವಿಷ್ಯ ನಿಧಿ ಬಾಕಿಗೆ 232.9 ಕೋಟಿ ರೂ. ವಿಳಂಬ ಬಡ್ಡಿ ಪಾವತಿಸಬೇಕಾಗಿದೆ.

ಭವಿಷ್ಯ ನಿಧಿ ಹಣ ಪಾವತಿಸಿಲ್ಲವೇಕೆ?: ಭವಿಷ್ಯ ನಿಧಿಮೊತ್ತ ಪಾವತಿಗೆ ಸಂಬಂಧಿಸಿದಂತೆ ಆರ್ಥಿಕ ನೆರವು ನೀಡುವಂತೆ ಕೆಎಸ್ಸಾರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ.ಅನ್ಬುಕುಮಾರ್ ಸರ್ಕಾರಕ್ಕೆ ಪತ್ರದ ಮೂಲಕ ಕೋರಿದ್ದಾರೆ.

ಪತ್ರದಲ್ಲಿ ಕೊರೊನಾ ಅವಧಿಯಲ್ಲಿ ನಿಗಮಗಳು ತೀವ್ರ ಆರ್ಥಿಕ ಸಂಕಷ್ಟವನ್ನು ಎದುರಿಸಿವೆ. ಅದರ ಜತೆಗೆ ತೈಲ ಬೆಲೆ, ವೇತನ ಹೆಚ್ಚಳದಿಂದಾಗಿ ನಿಗಮಗಳ ವೆಚ್ಚ ಹೆಚ್ಚಳವಾಗುತ್ತಿದೆ. ಪರಿಣಾಮ ನೌಕರರ ಮತ್ತು ನಿಗಮಗಳ ವಂತಿಗೆಯ ಭವಿಷ್ಯ ನಿಧಿ ಮೊತ್ತವನ್ನು ಪಾವತಿಸಲು ಸಾಧ್ಯವಾಗಿಲ್ಲ. ಹೀಗಾಗಿ ಆರ್ಥಿಕ ನೆರವು ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಭವಿಷ್ಯ ನಿಧಿ ಆಯುಕ್ತರ ಆಕ್ಷೇಪ: ಹಲವು ತಿಂಗಳಿನಿಂದ ಭವಿಷ್ಯ ನಿಧಿ ಮೊತ್ತ ಪಾವತಿಸದೆ ಬಾಕಿ ಉಳಿಸಿಕೊಂಡಿರುವುದಕ್ಕೆ ಭವಿಷ್ಯ ನಿಧಿ ಕಚೇರಿಯ ಪ್ರಾದೇಶಿಕ ಆಯುಕ್ತರು ಗಂಭೀವಾಗಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಸಾರಿಗೆ ನಿಗಮಗಳಿಗೆ ನೀಡಲಾಗಿರುವ ಭವಿಷ್ಯ ನಿಧಿ ವಿನಾಯಿತಿಯನ್ನು ರದ್ದು ಮಾಡುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಹೀಗಾಗೊಇ ಸಾರಿಗೆ ನಿಗಮಗಳು ಬಿಕ್ಕಟ್ಟಿಗೆ ಸಿಲುಕಲಿವೆ. ಅಲ್ಲದೆ ಇದರಿಂದ ಸಾರಿಗೆ ನೌಕರರಿಗೂ ಸಮಸ್ಯೆ ಎದುರಾಗಲಿ ಎಂದು ಅನ್ಸುಕುಮಾ‌ರ್ ಅವರು ಸರ್ಕಾರ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಮೊತ್ತ 2,269.09 ಕೋಟಿ ರೂ. ಪಾವತಿಸದೆ ಬಾಕಿ ಉಳಿಸಿಕೊಂಡಿದ್ದು, ಇದಕ್ಕೆ ಎಲ್ಲ ಸರ್ಕಾರಗಳು, ಆಡಳಿತ ಮಂಡಳಿಗಳ ಎಡವಟ್ಟಿನ ನಿರ್ಧಾರದಿಂದಾಗಿ ಕಳೆದೊಂದು ವರ್ಷದಿಂದ ನೌಕರರ ಭವಿಷ್ಯ ನಿಧಿ ಮೊತ್ತ ಪಾವತಿಸಲು ವಿಳಂಬವಾಗುತ್ತಿದ್ದು, ಅಅದಕ್ಕೆ ಬಡ್ಡಿ ಸೇರಿದಂತೆ 2,792.61 ಕೋ ರೂ.ಗಳನ್ನು ಬಾಕಿ ಉಳಿದಿದೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...