ಮೊಹಮ್ಮದ್ ಪೈಗಂಬರ್ ಕುರಿತು ಅವಹೇಳನಕಾರಿಯಾಗಿ ಪೋಸ್ಟ್ ಹಾಕಿದ್ದರೆ ಅದು ತಪ್ಪು. ರಾಮ ಹೇಗೋ ರಹಿಮನು ಹಾಗೆ. ಆದರೆ ವಾತಾವರಣದ ಲಾಭ ಪಡೆದು ಬೆಂಗಳೂರಿನ ಡಿಜೆ ಹಳ್ಳಿ ಪೊಲೀಸ್ ಠಾಣೆಗೆ ನುಗ್ಗಿ ಕಿಡಿಗೇಡಿಗಳು ಗಲಭೆ ಸೃಷ್ಟಿಸಿದ್ದ ಮಾತ್ರ ಖಂಡನಾರ್ಹ !.
ಸ್ವಾತಂತ್ರ್ಯ ನಂತರ ಬಂದ ಆಳುವ ಸರ್ಕಾರಗಳು, ಮಹಮ್ಮದೀಯರು ಅಲ್ಪಸಂಖ್ಯಾತರು, ನಿರಕ್ಷರಕುಕ್ಷಿಗಳು ಎಂಬ ರಿಯಾಯಿತಿಯನ್ನು ಕೊಟ್ಟುಕೊಂಡು ಬಂದಿದ್ದರ ಪರಿಣಾಮ ಇಂದು ಈ ರೀತಿಯ ಅವಘಡಗಳಿಗೆ ಕಾರಣವಾಗಿದೆ !.
ಹಿಂದೊಮ್ಮೆ ಎಂಎಫ್ ಹುಸೇನ್ ಅವರಂತಹ ಕಲಾವಿದರು ಒಳ ಉಡುಪುಗಳ ಮೇಲೆ ಹಿಂದೂ ದೇವರುಗಳ ಚಿತ್ರವನ್ನು ರಚಿಸಿದ್ದರು. ಆಗ ಇದರ ಪರ-ವಿರೋಧ ಇದ್ದ ಮಂದಿ, ಬೌದ್ಧಿಕವಾಗಿ ಈ ವಿಚಾರಕ್ಕೆ ವಿರೋಧ ವ್ಯಕ್ತಪಡಿಸಿದರೆ ಹೊರತು ವಿಧ್ವಂಸಕ ಕೃತ್ಯಕ್ಕೆ ಕೈಹಾಕಿರಲಿಲ್ಲ !
ಬರಿ ಪೊಲೀಸು ಅರೆಮಿಲಿಟರಿ ಗಳಿಂದಲೇ ವಾತಾವರಣ ತಿಳಿಗೊಳಿಸಲು ಪ್ರಯತ್ನ ಮಾಡುತ್ತಿರುವ ರಾಜಕೀಯ ವ್ಯವಸ್ಥೆಯು ಪಕ್ಷಾತೀತವಾಗಿ ಆಡಳಿತ ನಡೆಸುವ ಆತ್ಮಬಲ ಕಳೆದುಕೊಂಡಿದೆ ಅಲ್ಲವೇ?
ಭಾರತ ಸ್ವಾತಂತ್ರ್ಯ ದಿನಾಚರಣೆಯ ಸನಿಹದಲ್ಲೇ ಈ ರೀತಿಯ ದುಷ್ಕೃತ್ಯ ಗಲಭೆ ಬೆಂಗಳೂರಿನಲ್ಲಿ ನಡೆದದ್ದು ಮುಂದಿನ ದಿನಗಳ ಭಯಾನಕ ವಾತಾವರಣದ ಮುನ್ಸೂಚನೆ ಇದ್ದಂತೆ ತೋರುತ್ತಿಲ್ಲ ವೇ?
ಜಾತೀಯತೆ ನಾಶವಾಗಲಿ ಎಂದು ಜನರಿಗೆ ಉಪದೇಶ ಕೊಟ್ಟು ಜಾತಿ ಮನೋಭಾವವನ್ನು ಹೆಚ್ಚು ಮಾಡುತ್ತಿರುವ ರಾಜಕೀಯ ವ್ಯವಸ್ಥೆಯು ಕೇವಲ ವೋಟು ಸೀಟುಗಳಿಗಾಗಿ ಸಮಸ್ಯೆಯನ್ನು ಬ್ಲೋ ಅಪ್ ಮಾಡುತ್ತಿದೆ.
ಜಾತ್ಯತೀತತೆ ಎಂಬ ಪದವೇ ಈಗ ಕ್ಲೀಷೆಯಾಗಿದೆ. ಇದನ್ನರಿತೇ ನಮ್ಮ ಬಸವಣ್ಣನವರು ಬೇವಿನ ಬೀಜವ ಬಿತ್ತಿ, ಬೆಲ್ಲದ ಕಟ್ಟೆಯ ಕಟ್ಟಿ, ಆಕಳ ಹಾಲನೆರೆದು, ಜೇನುತುಪ್ಪವ ಹೊಯ್ದರೆ, ಸಿಹಿ ಆಗಬಲ್ಲದೇ? ಕಹಿ ಯಹುದಲ್ಲದೆ? ಎಂಬ ಮಾತಿನ ತಾತ್ಪರ್ಯವನ್ನು ಗ್ರಹಿಸಿ ಪ್ರೀತಿ ಸಾಮರಸ್ಯ ವಿಶ್ವಾಸಗಳು ಮನಸ್ಸಿನಾಳದಿಂದ ಸ್ವಯಂಪ್ರೇರಣೆಯಿಂದ ಕಾರಂಜಿಯಂತೆ ಹೊರಹೊಮ್ಮಿ ಪುಟಿಯುವ ಮೌಲ್ಯಗಳನ್ನು ಆಗಿ ರೂಪಿಸಬೇಕಾಗಿದೆ.
l ಆರ್. ವೆಂಕಟರಾಜು, ಮಾಜಿ ಸದಸ್ಯರು ಕರ್ನಾಟಕ ನಾಟಕ ಅಕಾಡೆಮಿ ಬೆಂಗಳೂರು
Super