Vijayapatha – ವಿಜಯಪಥ
Saturday, November 2, 2024
NEWS

5ನೇದಿನಕ್ಕೆ ಸಾರಿಗೆ ನೌಕರರ ಸೈಕಲ್‌ ಜಾಥಾ: ಇದು ನಾಮ್‌ ಕೇ ವಾಸ್ತೆಗಾಗಿ ಅಲ್ಲ, ನಿಮಗಾಗಿ, ನಿಮಗೋಸ್ಕರ, ನಿಮ್ಮಿಂದಲೇ ನೀವೇ ನಡೆಸುತ್ತಿರುವ ಜಾಥಾ

Vijayapatha - ವಿಜಯಪಥ
ವಿಜಯಪಥ ಸಮಗ್ರ ಸುದ್ದಿ

ಮಾನ್ವಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ಸರ್ಕಾರ ನೀಡಿರುವ ಲಿಖಿತ ಭರವಸೆಗಳನ್ನು ಈಡೇರಿಸಬೇಕು ಮತ್ತು ನೌಕರರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಒತ್ತಾಯಿಸಿ ಸಾರಿಗೆ ನೌಕರರ ಕೂಟ ಆರಂಭಿಸಿರುವ ಸೈಕಲ್‌ಜಾಥಾ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ.

Loading poll ...
KSRTC ನೌಕರರಿಗೆ ಸರಿಸಮಾನ ವೇತನ OR ಅಗ್ರಿಮೆಂಟ್‌ ನಿಮ್ಮ ಆಯ್ಕೆ ಯಾವುದು?

ರಾತ್ರಿ ಮಾನ್ವಿಯ ಅಣ್ಣಮಯ ಮಠದಲ್ಲಿ ವಾಸ್ತವ್ಯ ಹೂಡಿದ ಜಾಥಾ ಇಂದು (ಅ.14) ಮುಂಜಾನೆ ಎದ್ದು, ನಿತ್ಯ ಕ್ರಮಗಳನ್ನು ಮುಗಿಸಿಕೊಂಡು ಬೆಳಗ್ಗೆ 9ಗಂಟೆ ಸುಮಾರಿಗೆ ತಿಂಡಿಯನ್ನು ಸೇವಿಸಿ ಜಾಥಾ ಮುಂದುವರಿಸಿದ್ದಾರೆ.

ರಾತ್ರಿ ಸುರಿದ ಮಳೆಯಿಂದ ಓಡಾಡುವುದಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆ ಆಗಿದೆ. ಆದ ಕಾರಣ ಜತೆಗೆ ಇಂದು 45 ಕಿಮೀ ಇರುವ ರಾಯಚೂರಿಗೆ ಜಾಥಾ ಹೊರಡುವುದರಿಂದ ಸ್ವಲ್ಪ ತಡವಾಗಿ ಶುರುವಾಗುತ್ತಿದೆ.

ಕೀಳು ಭಾವನೆ ಬಿಡಿ: ಸಾರಿಗೆ ನೌಕರರನ್ನು ಕೀಳಾಗಿ ಕಾಣುತ್ತಿರುವ ಸಾರಿಗೆ ನಿಗಮಗಳ ಆಡಳಿತ ಮಂಡಳಿ ಮತ್ತು ಸರ್ಕಾರದ ನಡೆಯನ್ನು ಖಂಡಿಸಿ ಮತ್ತು ತಮ್ಮ ಬೇಡಿಕೆಗಳ ಈಡೇರಿಸಲು ಮೀನಮೇಷ ಎಣಿಸುತ್ತಿರುವ ನಿಗಮದ ಕೆಲ ಅಧಿಕಾರಿಗಳ ವಿರುದ್ಧ ಸಿಡಿದೆದ್ದು ಈ ಜಾಥಾವನ್ನು ನೌಕರರು ನಡೆಸುತ್ತಿದ್ದಾರೆ.

ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ವಾರದ ರಜೆ, ದೀರ್ಘ ರಜೆ ಇರುವ ನೌಕರರು ಮತ್ತು ವಜಾಗೊಂಡ ನೌಕರರು ತಮ್ಮ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಜಾಥಾದಲ್ಲಿ ಭಾಗವಹಿಸುತ್ತಿದ್ದಾರೆ. ಶಾಲೆಯಲ್ಲಿ ಕಲಿಯುತ್ತಿರುವ ಮಕ್ಕಳು ಜಾಥಾದಲ್ಲಿ ಭಾಗವಹಿಸುತ್ತಿದ್ದಾರೆ ಎಂದರೆ ನೌಕರರ ಕುಟುಂಬಗಳು ಎಷ್ಟು ನೊಂದಿರಬೇಕು. ಆ ಬಗ್ಗೆ ಸರ್ಕಾರ ಕಿಂಚಿತ್ತು ಕಾಳಜಿ ತೋರದೆ ಅಮಾನುಷವಾಗಿ ನಡೆದುಕೊಳ್ಳುತ್ತಿರುವುದು ಎಷ್ಟು ಸರಿ ಎಂಬ ಪ್ರಶ್ನೆಯನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ.

ವೇತನ ತಾರತಮ್ಯತೆ ನಿವಾರಿಸಬೇಕಾದ..: ಇನ್ನು ವೇತನ ತಾರತಮ್ಯತೆ ನಿವಾರಿಸಬೇಕಾದ, ಜವಾಬ್ದಾರಿ ಹೊತ್ತಿಕೊಂಡಿರುವ ನೌಕರರ ಸಂಘಟನೆಗಳು ಈಗವರೆಗೂ ಆ ಬಗ್ಗೆ ಚಕಾರವೆತ್ತದೆ. ಎತ್ತಿದರೂ ನಾಮ್‌ ಕೇ ವಾಸ್ತೆ ಎಂಬಂತೆ ನಡೆದುಕೊಂಡು ಸುಮ್ಮನಾಗಿರುವುದರಿಂದ ಇಂದು ನೌಕರರು ಸಮಸ್ಯೆ ಎದುರಿಸುವ ಸ್ಥಿತಿಗೆ ತಲುಪಿದ್ದಾರೆ. ನೌಕರರು ಕೊಡುತ್ತಿರುವ ದೇಣಿಗೆಯಿಂದಲೇ ನಡೆಯುತ್ತಿರುವ ಬಹುತೇಕ ಸಾರಿಗೆಯ ಎಲ್ಲ ಸಂಘಟನೆಗಳು, ಈ ನೌಕರರನ್ನೇ ಬಲಿಪಶುವಾಗಿಸುತ್ತಿರುವುದು ದುರ್ದೈವದ ಸಂಗತಿಯಾಗಿದೆ.

ಹೀಗಾಗಿ ಈ ಸೈಕಲ್‌ ಜಾಥಾ ಯಾರದೋ ಹೊಟ್ಟೆ ತುಂಬಿಸಲು ಅಥವಾ ನಂಬಿಸಲು ಮಾಡುತ್ತಿರುವ ನಾಮ್‌ ಕೇ ವಾಸ್ತೆ ಜಾಥಾವಲ್ಲ. ಇದು ನೌಕರರು ಸಮಾಜದಲ್ಲಿ ಇತರರಂತೆ ಬದುಕು ಕಟ್ಟಿಕೊಳ್ಳಬೇಕು ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವುದು. ನೂರಾರು ಕಿಲೋ ಮೀಟರ್‌ ದೂರದಲ್ಲಿ ತಮ್ಮ ತಮ್ಮ ಸಂಸಾರವನ್ನು ಬಿಟ್ಟು ಒಂದು ರೀತಿ ಅನಾಥರಂತೆ ಈ ನೌಕರರು ಇಂದು ಜಾಥಾ ನಡೆಸುತ್ತಿದ್ದಾರೆ. ಅವರು ಮಾಡುತ್ತಿರುವ ಹೋರಾಟ ಅವರಿಗಾಗಿ ಅಲ್ಲ ನಮಗಾಗಿ ಎಂದು ತಿಳಿದು ಪ್ರತಿಯೊಬ್ಬ ನೌಕರನೂ ಇದರಲ್ಲಿ ಭಾಗವಹಿಸಬೇಕು.

ಇಲ್ಲವೆಂದರೆ ನೌಕರರ ಕುಟುಂಬದ ಒಬ್ಬ ಸದಸ್ಯರಾದರೂ ಇದರಲಿಲ್ಲ ಭಾಗವಹಿಸಬೇಕು. ಆ ಮೂಲಕ ನಾವು ಒಗ್ಗಟ್ಟಾಗಿದ್ದೇವೆ, ಜತೆಗೆ ಇದು ನಮ್ಮ ಜೀವನದ ಏಳುಬೀಳಿನ ನಡೆಯಾಗಿರುವುದರಿಂದ ಇದಕ್ಕೆ ನಾವು ಸಾಥ್‌ ನೀಡುತ್ತೇವೆ ಎಂದು ರೂಜಾಥಾದಲ್ಲಿ ಭಾಗವಹಿಸುವ ಮೂಲಕ 10-20-40-80-160 ಹೀಗೆ ಜಾಥಾ ಪೂರ್ಣಗೊಳ್ಳುವ ಸಮಯಕ್ಕೆ ಒಂದು ಲಕ್ಷ ನೌಕರರು ಮತ್ತು ಅವರ ಕುಟುಂಬದವರು ಸೇರಬೇಕು.

ಎಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು: ಇದು ಯಾರನ್ನು ಕರೆಯುವ ಜಾಥಾವಲ್ಲ ಎಲ್ಲರೂ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು. ಏಕೆಂದರೆ ಇದು ನಿಮಗಾಗಿ ನಿಮ್ಮಿಂದಲೇ ನಿಮಗೋಸ್ಕರ ನೀವೇ ನಡೆಸುತ್ತಿರುವ ಜಾಥಾ. ಹೀಗಾಗಿ ಇದು ಮೀನಮೇಷ ಎಣಿಸುತ್ತಾ ಕೂರುವ ಸಮಯವಲ್ಲ. ನೀವು ಇಲ್ಲ ನಿಮ್ಮ ಮನೆಯ ಸದಸ್ಯರು ಭಾಗವಹಿಸುವ ಮೂಲಕ ಜಾಥಾ ಯಶಸ್ವಿಗೆ ಡೈರಕ್‌ ಇಲ್ಲ ಹಿಂಡೈರಕ್ಟ್‌ ಆಗಿ ನಿಲ್ಲಬೇಕಿದೆ.

ಇದಿಷ್ಟೇ ಅಲ್ಲದೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಈ ಬೃಹತ್‌ ಜಾಥಾ ನಡೆಯುತ್ತಿದ್ದು, ಸರ್ಕಾರ ಸ್ಪಂದಿಸಬೇಕು, ನಮಗೂ ಇತರರಂತೆ ಬದುಕಲು ಅವಕಾಶ ನೀಡಬೇಕು ಎಂದು ಸರ್ಕಾರದ ಗಮನ ಸೆಳೆಯಲು ಹೊರಟಿದ್ದಾರೆ. ಇದರಿಂದ ನಿಮ್ಮ ಕುಟುಂಬಗಳು ತಕ್ಕ ಮಟ್ಟಿಗಾದರೂ ಭವಿಷ್ಯವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ನೆರವಾಗುತ್ತದೆ. ಅಲ್ಲದೆ ಸಾರಿಗೆ ನೌಕರರಲ್ಲೂ ಒಗ್ಗಟ್ಟಿದೆ ಎಂಬುದನ್ನೂ ತೋರುವ ಮತ್ತೊಂದು ಅವಕಾಶ ನಿಮ್ಮದಾಗಿದೆ.

Leave a Reply

error: Content is protected !!
LATEST
ಕನ್ನಡ- ಕನ್ನಡಿಗರ ನಿಂದಿಸಿದರೆ ಕಠಿಣ ಕ್ರಮ: ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ಅನ್ಯ ಭಾಷಿಕರಿಗೆ ಅಭಿಮಾನದಿಂದ ಕನ್ನಡ ಕಲಿಸಿ: ಪುರಸಭೆ ಅಧ್ಯಕ್ಷೆ ಪಂಕಜಾ ಕನ್ನಡ ಭಾಷೆ ಅತ್ಯಂತ ಶ್ರೀಮಂತ ಭಾಷೆ: ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ KSRTC: ದೀಪಾವಳಿ ಹಬ್ಬದಲ್ಲೂ ಕರ್ತವ್ಯ ನಿರತ ನಾಡಿನ ಸೈನಿಕರಾದ ಸಾರಿಗೆ ನೌಕರರಿಗೆ ಸಲಾಮ್‌! ಬೆಲೆ ಏರಿಕೆ ಬಿಸಿ ನಡುವೆಯೂ ಹಣತೆ, ಹೂವು, ಪಟಾಕಿ, ಹಣ್ಣುಗಳ ವ್ಯಾಪಾರ ವಹಿವಾಟು ಜೋರು ಚನ್ನಪಟ್ಟಣದಲ್ಲಿ ಬಿಜೆಪಿ ಜೆಡಿಎಸ್ ಕಾರ್ಯಕರ್ತರ ಬೃಹತ್ ಸಮಾವೇಶ: ನಿಖಿಲ್ ಗೆಲುವಿಗೆ ಒಗ್ಗಟ್ಟು ಪ್ರದರ್ಶನ ತೂಬಗೆರೆ ಗ್ರಾಮ ಪಂಚಾಯಿತಿಗೆ ಅವಿರೋಧವಾಗಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಇಪಿಎಸ್ ಪಿಂಚಣಿದಾರರ ಬೃಹತ್ ಪ್ರತಿಭಟನೆ - ಸರ್ಕಾರ, ಅಧಿಕಾರಿಗಳ ವಿರುದ್ಧ ಆಕ್ರೋಶ ವರ್ಷ ಮೂರು ಮರೆಯದ ನೆನಪು ನೂರಾರು: ಸಹೋದರ ಪುನೀತ್‌ ಸ್ಮರಿಸಿದ ರಾಘಣ್ಣ ಕೌಟುಂಬಿಕ ಕಲಹ: ರೈಲಿಗೆ ತಲೆಕೊಟ್ಟು ಜೀವನ ಕೊನೆಗಾಣಿಸಿಕೊಂಡ ಮಹಿಳೆ