ವಿಡಿಯೋ

ಕೋವಿಡ್-19 ತಡೆ ವಿಷಯದಲ್ಲಿ ನುಣುಚಿಕೊಳ್ಳದಿರಿ

ಜನರಿಗೆ ಸಚಿವ ಸಿ.ಸಿ.ಪಾಟೀಲ್‌ ಎಚ್ಚರಿಕೆಯ ಮನವಿ

ವಿಜಯಪಥ ಸಮಗ್ರ ಸುದ್ದಿ

ಗದಗ: ಜಿಲ್ಲೆಯ ಚಿಕಿತ್ಸೆಯಲ್ಲಿದ್ದ ಕೋವಿಡ್-19 ಸೋಂಕಿತರು ಸಂಪೂರ್ಣವಾಗಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿರುವುದು ನಮಗೆಲ್ಲ ಒಂದು ಹಂತದ ನೆಮ್ಮದಿ ನೀಡಿದೆ.  ಆದರೆ ಕೋವಿಡ್-19 ಸೋಂಕು ತಡೆ ಕುರಿತ ಜಿಲ್ಲೆಯ ಸಾರ್ವಜನಿಕರು, ಯುವಜನರ ಮತ್ತು ಅಧಿಕಾರಿ ಸಿಬ್ಬಂದಿಯಾದಿಯಾಗಿ ಸರ್ವರೂ ಹೆಚ್ಚಿನ ಜವಾಬ್ದಾರಿಯಿಂದ ಜೀವನವನ್ನು ನಡೆಸಬೇಕಾಗಿದೆ   ಗಣಿ ಭೂವಿಜ್ಞಾನ ಇಲಾಖೆ ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ್‌ ಎಚ್ಚರಿಕೆಯ ಮನವಿ ಮಾಡಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

ಕೋವಿಡ್-19 ಸೋಂಕಿನ ತಡೆ ಮತ್ತು ನಿಯಂತ್ರಣ ಕುರಿತು ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವ, ಅನವಶ್ಯಕ ಓಡಾಟ, ಪ್ರಯಾಣ ನಿಲ್ಲಿಸುವ, ಮುಖಕ್ಕೆ ಮಾಸ್ಕ್‌, ಸ್ಯಾನಿಟೈಜರ್ ಉಪಯೋಗ , ಆಗಾಗ ಕೈಗಳನ್ನು ಚೆನ್ನಾಗಿ ತೊಳೆದುಕೊಳ್ಳುವದು ನಮ್ಮ ನಿತ್ಯದ ಅಭ್ಯಾಸವಾಗಬೇಕು. ಎಂದರು.

ಎಲ್ಲರೂ ಈ ಮುಂಜಾಗ್ರತಾ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿದಲ್ಲಿ ಮಾತ್ರ ಕೋವಿಡ್-19 ಸೋಂಕನ್ನು ಯಶಸ್ವಿಯಾಗಿ ತಡೆಗಟ್ಟಬಹುದು, ಕೋವಿಡ್-19 ಈಗ ದೇಶದ ಸರ್ಕಾರದ ಸಮಸ್ಯೆ ಮಾತ್ರವಲ್ಲ ಪ್ರತಿ ವ್ಯಕ್ತಿ, ಕುಟುಂಬ, ಸಮಾಜಗಳ ಅಳಿವು ಉಳಿವಿನ ಪ್ರಶ್ನೆ ಎಂಬುದನ್ನು ನಾವು ಅರಿತುಕೊಂಡು ತಪ್ಪದೇ ವೈಯಕ್ತಿಕ, ಸಾಮಾಜಿಕ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಲು  ಮನವಿ ಮಾಡಿದ್ದಾರೆ.

ನಿಮ್ಮ ನೆಚ್ಚಿನ ಸುದ್ದಿಗಳಿಗೆ ವಿಜಯಪಥ ಆಪ್‌ ಡೌನ್ಲೋಡ್‌ ಮಾಡಿಕೊಳ್ಳಲು ಇಲ್ಲಿ ಕ್ಲಿಕ್ಕಿಸಿ https://play.google.com/store/apps/detail

Leave a Reply