NEWSನಮ್ಮಜಿಲ್ಲೆಶಿಕ್ಷಣ-

ಮಂಡ್ಯ: ದಲಿತ ಶಿಕ್ಷಕಿ ಮೇಲೆ ದೌರ್ಜನ್ಯ, ಅಮಾನತು: ಬಿಇಒ, ಇಸಿಒ, ಮುಖ್ಯಶಿಕ್ಷಕರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಪ್ರತಿಭಟನೆ

ವಿಜಯಪಥ ಸಮಗ್ರ ಸುದ್ದಿ

ಮಂಡ್ಯ: ಮಳವಳ್ಳಿ ತಾಲೂಕು ಕಿರುಗಾವಲು ಹೋಬಳಿಯ ನಲ್ಲೀಗೆರೆ ಸರ್ಕಾರಿ ಶಾಲೆಯ ದಲಿತ ಶಿಕ್ಷಕಿಯೊಬ್ಬರ ವಿರುದ್ಧ ಬಿಇಒ ಮತ್ತು ಇತರರು ಅಮಾನಷವಾಗಿ ನಡೆದುಕೊಳ್ಳುವ ಮೂಲಕ ಅವರನ್ನು ಅಮಾನತು ಮಾಡಿ ದರ್ಪ ಮೆರೆದಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿತು.

ಇಂದು ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ದಸಂಸ ಮತ್ತು ಮಳವಳ್ಳಿ ತಾಲೂಕು ಘಟಕದ ಡಾ. ಬಾಬು ಜಗಜೀವನರಾಮ್‌ ವಿಚಾರ ವೇದಿಕೆಯ ಪದಾಧಿಕಾರಿಗಳು ಶಿಕ್ಷಕಿಗೆ ಕಿರುಕುಳ ನೀಡಿದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಾದಿಗ ಸಮುದಾಯದ ಶಿಕ್ಷಕಿ ಕನ್ನಿಕಾ ಪರಮೇಶ್ವರಿ ಎಂಬುವರು ನಲ್ಲೀಗೆರೆ ಸರ್ಕಾರಿ ಶಾಲೆಯಲ್ಲಿ ಸೇವೆಸಲ್ಲಿಸುತ್ತಿದ್ದಾಗ ನಿಂದನೆಗೆ ಒಳಗಾಗಿದ್ದು, ಅಲ್ಲದೆ ಅಮಾನತಾಗಿರುವ ನೊಂದ ಶಿಕ್ಷಕಿಯಾಗಿದ್ದಾರೆ.

ಕನ್ನಿಕಾ ಪರಮೇಶ್ವರಿ ಅವರ ಮೇಲೆ ಸವರ್ಣಿಯರಾದ ಮಳವಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿ (ಬಿಇಒ) ಚಿಕ್ಕಸ್ವಾಮಿ, ಇಸಿಒ ಸಿದ್ದರಾಜು, ಕಚೇರಿ ಆಧೀಕ್ಷಕರಾದ ಕುಮಾರಸ್ವಾಮಿ, ನೆಲ್ಲೀಗೆರೆ ಶಾಲೆಯ ಮುಖ್ಯ ಶಿಕ್ಷಕಿಯಾದ ಸುವರ್ಣ ಮತ್ತು ನೆಲ್ಲೆಗೆರೆ ಪಕ್ಕದ ಗ್ರಾಮ ಹೊನ್ನಿಗನಹಳ್ಳಿ ಸರ್ಕಾರಿ ಶಾಲೆಯ ಮುಖ್ಯಶಿಕ್ಷಕ ಫ್ರಭುಸ್ವಾಮಿ ಹಾಗೂ ನೆಲ್ಲಿಗೆರೆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಕುಮಾರ ಎಂಬುವರು ವ್ಯವಸ್ಥಿತವಾಗಿ ಪಿತ್ತೂರಿ ನಡೆಸಿ ಅಮಾನತು ಮಾಡಿದ್ದಾರೆ ಎಂದು ಆರೋಪಿಸಿದರು.

ಇನ್ನು ಈ ಶಿಕ್ಷಕಿ ಕನ್ನಿಕಾ ಪರಮೇಶ್ವರಿ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿ ದಲಿತ ಶಿಕ್ಷಕಿ ಎಂದು ಆಗಸ್ಟ್‌ 12-2022 ರಂದು ಅಮಾನತು ಮಾಡಿದ್ದಾರೆ ಮತ್ತು ಅಮಾನತಾದ ವೇಳೆ ಕೊಡಬೇಕಿರುವ ಸಂಬಳವನ್ನು ಕೊಡದೆ ಕಾಡಿದ್ದಾರೆ. ಇದಿಷ್ಟು ಸಾಲದು ಎಂಬಂತೆ ಪದೇಪದೇ ನೋಟಿಸ್‌ ನೀಡಿ ದೌರ್ಜನ್ಯ ಎಸಗಿದ್ದಾರೆ ಎಂದು ಕಿಡಿಕಾರಿದರು.

ಈ ವಿಚಾರವಾಗಿ ಕಳೆದ ಸೆ.29 ರಂದು ಕಿರುಗಾವಲು ಪೊಲೀಸ್‌ ಠಾಣೆಯಲ್ಲಿ ಕನ್ನಿಕಾ ಪರಮೇಶ್ವರಿ ಅವರು ಮಳವಳ್ಳಿ ತಾಲೂಕು ಘಟಕದ ಡಾ. ಬಾಬು ಜಗಜೀವನರಾಮ್‌ ವಿಚಾರ ವೇದಿಕೆಯ ಪದಾಧಿಕಾರಿಗಳ ಸಹಾಯಪಡೆದು ಈ ಎಲ್ಲರ ವಿರುದ್ಧ ಎಸ್‌ಸಿ, ಎಸ್‌ಟಿ ದೌರ್ಜನ್ಯ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

ಆದರೆ, ಅಂದಿನಿಂದ ಈವರೆಗೂ ಕನ್ನಿಕಾ ಪರಮೇಶ್ವರಿ ಅವರಿಗೆ ಮತ್ತು ಕುಟುಂಬದವರಿಗೆ ಕೊಟ್ಟಿರುವ ದೂರನ್ನು ವಾಪಸ್‌ ತೆಗೆದುಕೊಂಡು ರಾಜೀಮಾಡಿಕೊಳ್ಳುವಂತೆ ಕೆಲವರು ಮಾನಸಿಕ ಹಿಂಸೆ ನೀಡುತ್ತಿದ್ದಾರೆ. ನೀನು ಕೇಸ್‌ ವಾಪಸ್‌ ಪಡೆಯದೆ ಹೋದರೆ ಹೇಗೆ ಮಳವಳ್ಳಿಯಲ್ಲಿ ಇನ್ನು ಮುಂದೆ ಕೆಲಸಮಾಡುತ್ತೀಯ ನೋಡುತ್ತೇವೆ ಎಂದು ಬೆದರಿಕೆ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.

ಇನ್ನೊಂದೆಡೆ ಪ್ರಕರಣ ದಾಖಲಾಗಿ 10 ದಿನ ಕಳೆದರು ಪೊಲೀಸ್‌ ಮತ್ತು ಶಿಕ್ಷಣ ಇಲಾಖೆ ಯಾವುದೇ ಕ್ರಮ ಕೈ ಗೊಂಡಿಲ್ಲ ಮತ್ತು FRI ಆಗಿ ಅರೋಪಿ ಸ್ಥಾನದಲ್ಲಿರುವವರು ಸೇವೆಯಲ್ಲಿ ನಿರತರಾಗಿದ್ದಾರೆ. ಇಂತಹ ದೌರ್ಜನ್ಯವನ್ನು ಎಸಗಿರುವವರನ್ನು ನ್ಯಾಯಂಗ ಬಂಧನಕ್ಕೆ ಒಳಪಡಿಸಬೇಕು ಮತ್ತು ಆರೋಪಿಗಳನ್ನು ಕೂಡಲೇ ಅಮಾನತು ಮಾಡಬೇಕು ಎಂದು ಪ್ರತಿಭಟನ ಧರಣಿ ನಿರತರು ಒತ್ತಾಯಿಸಿದರು.

ಇನ್ನು ದೌರ್ಜನ್ಯಕೊಳಗಾದ ಶಿಕ್ಷಕಿ ಕನ್ನಿಕಾ ಪರಮೇಶ್ವರಿ ಅವರ ಅಮಾನತು ಆದೇಶವನ್ನು ಹಿಂಡೆಯಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Leave a Reply

error: Content is protected !!
LATEST
ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ... KSRTC ನೌಕರರು ಈಗಾಗಲೇ ಮುಷ್ಕರಕ್ಕೆ ಸಿದ್ಧ, ನಾವು ದಿನಾಂಕ ಘೋಷಣೆ ಮಾಡುತ್ತೇವೆ -ಸರ್ಕಾರಕ್ಕೆ ಜಂಟಿ ಕ್ರಿಯಾ ಸಮಿತಿ ಎಚ್... KSRTC: ಮೊಬೈಲ್‌ನಲ್ಲಿ ಮಾತನಾಡಿಕೊಂಡು ಬಸ್‌ ಚಾಲನೆ - ಚಾಲಕನ ನಿರ್ಲಕ್ಷ್ಯಕ್ಕೆ ಕಿಡಿ KSRTC ಕೋಲಾರ: ನೌಕರರ ಪರ ನಿಲ್ಲಬೇಕಾದ ಕಾರ್ಮಿಕ ಕಲ್ಯಾಣ ಅಧಿಕಾರಿಯೇ ವಿರುದ್ಧ ನಿಂತರೆ ಎಲ್ಲಿ ಸಿಗಲಿದೆ ನ್ಯಾಯ?