VIJAYAPATHA.IN > ವಿಜಯಪಥ > NEWS > ವಿಡಿಯೋ > ಗೌರಿಬಿದನೂರಿನ ಇಬ್ಬರು ಮತ್ತು ಬೆಂಗಳೂರಿನ ಒಬ್ಬರಲ್ಲಿ ಕೊರೊನಾ ವೈರಸ್
ಗೌರಿಬಿದನೂರಿನ ಇಬ್ಬರು ಮತ್ತು ಬೆಂಗಳೂರಿನ ಒಬ್ಬರಲ್ಲಿ ಕೊರೊನಾ ವೈರಸ್
admin.savhnMarch 21, 2020
ಚಿಕ್ಕಬಳ್ಳಾಪುರ: ಗೌರಿಬಿದನೂರಿನ ಇಬ್ಬರು ಮತ್ತು ಬೆಂಗಳೂರಿನಲ್ಲಿ ಒಬ್ಬರಿಗೆ ಕೊರೊನಾ ವೈರಸ್ ಶಂಕೆ ವ್ಯಕ್ತವಾಗಿದ್ದು ಕಟ್ಟೆಚ್ಚರ ವಹಿಸುವಂತೆ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಶನಿವಾರ ಚಿಕ್ಕ ಬಳ್ಳಾಪುರದಲ್ಲಿ ಮಾತನಾಡಿ, ರಾಜ್ಯದಲ್ಲಿ ಇಂದು ಮೂರನ್ನು ಸೇರಿಸಿ ಒಟ್ಟು 18 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ. ಗೌರಿಬಿದನೂರು ತಾಲೂಕಿನ ಹಿರೇಬಿದನೂರಿನಲ್ಲಿರುವ ತಾಯಿ ಮತ್ತು ಮಗ ಇಬ್ಬರಿಗೆ ವೈರಸ್ ತಗುಲಿರುವ ಕುರಿತು ಶಂಕೆ ವ್ಯಕ್ತವಾಗಿದೆ. ಈ ನಿಟ್ಟಿನಲ್ಲಿ ಪ್ರಾಥಮಿಕ ಹಂತವಾಗಿ ಅವರ ಜತೆ ಸಂಪರ್ಕ ಹೊಂದಿರುವವರು ಪತ್ತೆ ಹಚ್ಚಿ ಕ್ವಾರೆಂಟೈನ್ ಮಾಡಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
![](https://vijayapatha.in/wp-content/uploads/2024/02/QR-Code-VP-1-1-300x62.png)
Related
admin.savhn