NEWSನಮ್ಮಜಿಲ್ಲೆನಮ್ಮರಾಜ್ಯಸಂಸ್ಕೃತಿ

ಬೀಡನಹಳ್ಳಿಯಲ್ಲಿ ಸಡಗರ ಸಂಭ್ರಮದಿಂದ ಜರುಗಿದ ಮಾರಮ್ಮ ದೇವಿಯ ವೀರಹಬ್ಬ

ವಿಜಯಪಥ ಸಮಗ್ರ ಸುದ್ದಿ

ಬೀಡನಹಳ್ಳಿ: ತಿ.ನರಸೀಪುರ ತಾಲೂಕು ಬನ್ನೂರು ಹೋಬಳಿಯ ಬೀಡನಹಳ್ಳಿ ಗ್ರಾಮ ದೇವತೆ ಬೀಡನಹಳ್ಳಿ ಮಾರಮ್ಮನ ದೇವಿಯ ವೀರಹಬ್ಬ ಸಡಗರ ಸಂಭ್ರಮದಿಂದ ಜರುಗಿತು.

ಗ್ರಾಮದಲ್ಲಿ ಪ್ರತಿವರ್ಷದಂತೆ ಕಡೆ ಕಾರ್ತಿಕ ಸೋಮವಾರದ ನಂತರ ಜರುಗುವ ವೀರಹಬ್ಬ ಡಿ.3 ಮತ್ತ ಡಿ.4ರಂದು ಗ್ರಾಮದ ಮುಖಂಡರು ಆಯೋಜನೆ ಮಾಡಿದ್ದು, ಅದರಂತೆ ಸಂಭ್ರಮ ಸಡಗರದಿಂದ ನರವೇರಿತು.

ಬನ್ನೂರು ಹೆಗ್ಗೆರೆಯಿಂದ ಮಂಗಳವಾರ ಸಂಜೆ ಮಜ್ಜನದ ಗಂಗೆ ತಂದು ಪೂಜೆಗಳನ್ನು ಕಟ್ಟಲಾಯಿತು. ಬುಧವಾರ ಮುಂಜಾನೆ ಪೂಜೆಗಳನ್ನು ಹೂ ಹೊಂಬಾಳೆಯಿಂದ ಅಲಂಕರಿಸಿ ಬಾಯಿಬೀಗ ಇರುವವರು ಮಡಿವಂತಿಕೆಯಿಂದ ಒಪ್ಪತ್ತು ಇದ್ದು ಗ್ರಾಮ ದೇವಿಗೆ ಬಾಯಿಬೀಗ ಸೇವೆ ಮಾಡಿ ಹರಕೆ ತೀರಿಸಿದರು.

ಈ ಹಬ್ಬದ ಪ್ರಮುಖ ವಿಷಯವಾದ ವೀರರ ಕುಣಿತ ಅಭಿಮಾನಿಗಳ ಸೂರೆಗೊಂಡಿತು. ಹೌದು ಪ್ರತಿ ವರ್ಷವೂ ನಂಜಾಪುರ ಗ್ರಾಮದ ವೀರರು ಬಂದು ಈ ಸಾಂಪ್ರದಾಯಿಕ ಹಾಗೂ ಸಾಸ್ಕೃತಿಕ ಕಾರ್ಯವನ್ನು ನಡೆಸಿಕೊಡುತ್ತಾರೆ. ಅದರಂತೆ ಪ್ರತಿ ವರ್ಷವರು ಅವರಿಗೆ ಸಂಭಾವನೆ ಕೊಡುವ ಮೂಲಕ ಆಮಂತ್ರಣ ನೀಡಿ ಕರೆಯಲಾಗುತ್ತದೆ.

ಬೀಡನಹಳ್ಳಿ ಗ್ರಾಮದ ಮುಖಂಡರ ಆಹ್ವಾನವನ್ನು ಸ್ವೀಕರಿಸಿ ಈ ಹಬ್ಬಕ್ಕೆ ಕಳಸಪ್ರಾಯವಾದ ವೀರರ ಕುಣಿತವನ್ನು ಮಾಡುವ ಮೂಲಕ ಹಬ್ಬಕ್ಕೆ ಮೆರುಗನ್ನು ನೀಡುತ್ತ ಬಂದಿದ್ದಾರೆ. ಅದರಂತೆ ಮಂಗಳವಾರ ರಾತ್ರಿಯಿಂದ ಬುಧವಾರ ಮುಂಜಾನೆ ವರೆಗೂ ತಮ್ಮ ವೀರರ ಪ್ರದರ್ಶನವನ್ನು ಸಾಂಸ್ಕೃತಿಕವಾಗಿ ತೋರಿಸಿ ಹಾಡು ಕುಣಿತದೊಂದಿಗೆ ಮನರಂಜನೆ ಜತೆಗೆ ಭಕ್ತಿಯನ್ನು ಸಾರುವ ಕೈಂಕರ್ಯವನ್ನು ನೆರವೇರಿಸಿದರು.

ಇನ್ನು ಗ್ರಾಮದಲ್ಲಿ ಎರಡು ದಿನಗಳು ಜರುಗಿದ ಈ ಹಬ್ಬಕ್ಕೆ ಗ್ರಾಮಸ್ಥರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ನೂರಾರು ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದೆ. ಜತೆಗೆ ನಯನಮನೋಹರವಾದ ವೀರರ ಕುಣಿತವನ್ನು ರಾತ್ರಿ ಪೂರ್ತಿ ಕಣ್ತುಂಬಿಕೊಂಡರು. ಬುಧವಾರ ಬೆಳಗ್ಗೆ ಗ್ರಾಮದ ಪ್ರತಿ ಮನೆಯ ಹೆಂಗಳೆಯದರು ತಂಬಿಟ್ಟಿನ ಆರತಿಯೊಂದಿಗೆ ಬಂದು ಮಾರಮ್ಮ ದೇವಿಗೆ ಸಾಮೂಹಿಕವಾಗಿ ಪೂಜೆ ನೆರವೇರಿಸುವ ಮೂಲಕ ಹಬ್ಬ ಪೂರ್ಣಗೊಳಿಸಿದರು.

Leave a Reply

error: Content is protected !!

Discover more from VIJAYAPATHA.IN

Subscribe now to keep reading and get access to the full archive.

Continue reading

LATEST
ಹೆಚ್ಚುವರಿ ಬಡ್ಡಿ ವಿಧಿಸುವ ನೋಂದಾಯಿತ ಲೇವಾದೇವಿಸಂಸ್ಥೆಗಳ ವಿರುದ್ಧ ದೂರು ನೀಡಿ KSRTC: 38+13 ತಿಂಗಳ ವೇತನ ಹಿಂಬಾಕಿ ಯಾವಾಗ ಬರುತ್ತದೆ ಒಕ್ಕೂಟದ ವಿರುದ್ಧ ನೌಕರರು ಕಿಡಿ BMTC: ಅಪಘಾತದಲ್ಲಿ ಮೃತಪಟ್ಟ ನೌಕರರ ಕುಟುಂಬಕ್ಕೆ ₹1 ಕೋಟಿ ಪರಿಹಾರ ಚೆಕ್‌ ವಿತರಿಸಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಸಾರಿಗೆ ನಿವೃತ್ತ ನೌಕರರಿಗೆ ಮತ್ತೊಮ್ಮೆ ಮೊಗದೊಮ್ಮೆ ನಿರಾಸೆ: ಭಾರಿ ಆಕ್ರೋಶಗೊಂಡ EPS ನಿವೃತ್ತರು ಕಾರು ಡೋರ್‌ಗೆ ಬೈಕ್‌ ಗುದ್ದಿ ಕೆಳಗೆ ಬಿದ್ದ ಮಹಿಳೆ ಮೇಲೆ ಹರಿದ ಬಿಎಂಟಿಸಿ ಬಸ್‌ ನಾಟಿ ಕೋಳಿ ಸಾರಿನ ಜತೆ ರಾಗಿಮುದ್ದೆ ನುಂಗಿದವರಿಗೆ ಗೊತ್ತು ಅದರ ಗಮ್ಮತ್ತು ನೀವು ಗಬಗಬನೆ ಊಟ ಮಾಡುವವರಿದ್ದೀರಾ? ಹಾಗಿದ್ದರೆ ನಿಮಗೆ ಈ ಸಮಸ್ಯೆ ಕಾಡದಿರದು! BMTC ನೌಕರರಿಗೆ ಆನ್-ಲೈನ್ ಮೂಲಕ ವೇತನ ಚೀಟಿ ಪಡೆಯುವ ವ್ಯವಸ್ಥೆ- ಜಾರಿ ಸ್ಕೂಟರ್‌ಗೆ ಕಾರು ಡಿಕ್ಕಿ- ಮೊಪೆಡ್‌ನಲ್ಲಿ ತೆರಳುತ್ತಿದ್ದ ಮಾವ-ಸೊಸೆ ದಾರುಣ ಸಾವು ಪೊಲೀಸ್‌ ಠಾಣೆ ಮೆಟ್ಟಿಲೇರಿದ ಹಿಟ್‌ ಧಾರಾವಾಹಿಗಳ ನಿರ್ದೇಶಕ, ನಿರ್ಮಾಪಕ ರಾಮ್​ಜೀ