NEWSದೇಶ-ವಿದೇಶನಮ್ಮರಾಜ್ಯ

ಪೋಷಕರ ನಿರ್ಲಕ್ಷಿಸುವ ಸರ್ಕಾರಿ ನೌಕರರ ಸಂಬಳದಲ್ಲಿ ಶೇ.15ರಷ್ಟು ವೇತನ ಕಡಿತ: ಸಿಎಂ

ವಿಜಯಪಥ ಸಮಗ್ರ ಸುದ್ದಿ

ಹೈದರಾಬಾದ್: ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ, ಅವರ ಸಂಬಳದ 10 ರಿಂದ 15ರಷ್ಟು ವೇತನವನ್ನು ಕಡಿತಗೊಳಿಸಿ ನಿರ್ಲಕ್ಷ್ಯಕ್ಕೊಳಗಾದ ಪೋಷಕರಿಗೆ ನೀಡುವ ಕಾನೂನನ್ನು ತೆಲಂಗಾಣ ಸರ್ಕಾರ ಜಾರಿಗೆ ತರಲಿದೆ ಎಂದು ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಘೋಷಿಸಿದ್ದಾರೆ.

ಹೊಸದಾಗಿ ಆಯ್ಕೆಯಾದ ಗ್ರೂಪ್-II ಉದ್ಯೋಗಿಗಳಿಗೆ ನೇಮಕಾತಿ ಆದೇಶ ಪತ್ರ ಕೊಡುವ ಮುನ್ನ ಸಭೆಯಲ್ಲಿ ಅವರು ಮಾತನಾಡಿದರು.

ಸಮಸ್ಯೆಗಳೊಂದಿಗೆ ಅಧಿಕಾರಿಗಳನ್ನು ಸಂಪರ್ಕಿಸುವ ಜನರೊಂದಿಗೆ ಸಹಾನುಭೂತಿಯಿಂದ ವರ್ತಿಸಬೇಕು. ಆಗ ರಾಜ್ಯದ ಜನತೆ ಸಮಸ್ಯೆಯಿಂದ ಹೊರಬರಲು ಸಾಧ್ಯ ಎಂದರು.

ಇನ್ನು ನಾವು ಒಂದು ಕಾನೂನನ್ನು ತರುತ್ತಿದ್ದೇವೆ. ಸರ್ಕಾರಿ ನೌಕರರು ತಮ್ಮ ಪೋಷಕರನ್ನು ನಿರ್ಲಕ್ಷಿಸಿದರೆ, ಅಂಥವರ ಸಂಬಳದಲ್ಲಿ 10 ರಿಂದ 15ರಷ್ಟು ಕಡಿತಗೊಳಿಸಿ ಪೋಷಕರ ಬ್ಯಾಂಕ್ ಖಾತೆಗೆ ಜಮಾ ಮಾಡಲಾಗುತ್ತದೆ ಎಂದು ಹೇಳಿದರು.

ಅಲ್ಲದೆ ಈ ಸಂಬಂಧ ಶಾಸನದ ಕರಡು ಪ್ರತಿಯನ್ನು ರಚಿಸುವವರು ನೀವೇ. ನೀವು ಮಾಸಿಕ ಸಂಬಳವನ್ನು ಪಡೆಯುವಂತೆಯೇ, ನಿಮ್ಮ ಪೋಷಕರು ಸಹ ಅದರಿಂದ ಮಾಸಿಕ ಆದಾಯವನ್ನು ಪಡೆಯುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ ಎಂದು ಸಿಎಂ ವಿವರಿಸಿದರು.

ಕಾನೂನನ್ನು ರೂಪಿಸಲು ಅಧಿಕಾರಿಗಳ ಸಮಿತಿಯನ್ನು ರಚಿಸುವಂತೆ ರೇವಂತ್ ರೆಡ್ಡಿ ಮುಖ್ಯ ಕಾರ್ಯದರ್ಶಿ ರಾಮಕೃಷ್ಣ ರಾವ್ ಅವರಿಗೆ ಸೂಚಿಸಿದರು. ಅಲ್ಲದೆ ಇದು ವಯಸ್ಸಾದ ಪೋಷಕರು ಯಾವುದೇ ಸಮಸ್ಯೆ ಇಲ್ಲದೆ ಜೀವನ ಸಾಗಿರುವುದಕ್ಕೆ ದಾರಿಯಾಗಲಿದೆ ಎಂದು ಹೇಳಿದರು.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿಯೋಜನೆಗೆ ಮತ್ತೆ ಹೊಸದಾಗಿ ಅರ್ಜಿ ಸ್ವೀಕರಿಸುವ ಚಿಂತನೆಯಲ್ಲಿ ಸರ್ಕಾರ! ಮೂರು ಕೋಟಿಗೂ ಹೆಚ್ಚು ಫಲಾನುಭವಿಗಳಿಗೆ ‘ಶಕ್ತಿ ಸ್ಮಾರ್ಟ್ ಕಾರ್ಡ್’ ವಿತರಿಸಲು ಸರ್ಕಾರ ನಿರ್ಧಾರ: ಸಾರಿಗೆ ಸಚಿವ ಬೈರತಿ ... ಹಣ ದುರುಪಯೋಗ, ಕರ್ತವ್ಯ ಲೋಪ ಎಸಗಿದ ಆರೋಪ ಸಾಬೀತು: ಮಹೇಶ್ ಜೋಶಿ ಕಸಾಪ ಆಜೀವ ಸದಸ್ಯತ್ವ ರದ್ದು ಮುಖ್ಯ ಶಿಕ್ಷಕರ ಕಿರುಕುಳಕ್ಕೆ ಬೇಸತು 10ನೇ ತರಗತಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಜಿಗಿದು ಆತ್ಮಹತ್ಯೆ KSRTC ಎಂಡಿ ಅಕ್ರಮ್‌ಪಾಷ ವರ್ಗಾವಣೆ ಪ್ರಭಾರ ಎಂಡಿಯಾಗಿ ಡಾ.ಆರ್‌. ಸೆಲ್ವಮಣಿ ನೇಮಕ ಮಾಡಿ ಸರ್ಕಾರದ ಆದೇಶ 4.30 ಲಕ್ಷ ಮೃತಪಟ್ಟ, ಅನರ್ಹರ ಗೃಹಲಕ್ಷ್ಮಿ ಯೋಜನೆಯಿಂದ ಹೊರಗಿಟ್ಟ ಸರ್ಕಾರ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಗೋಕುಲದ ಅಧ್ಯಕ್ಷ ಲಯನ್ ಅರವಿಂದ ಕೆ.ಆರ್.ಮಾರುಕಟ್ಟೇಲಿ ಅಗ್ನಿ ಅವಘಡ ತಡೆಗೆ ಫೈರ್ ಆಡಿಟ್: ಮುಖ್ಯ ಆಯುಕ್ತ ಮಹೇಶ್ವರ್ ರಾವ್ KSRTC ಫ್ರೀ ಬಸ್‌ಪಾಸ್‌ ಈ ತಿಂಗಳು ಸಿಗುವುದು ಡೌಟ್‌- ನಿತ್ಯ ಹಣಕೊಟ್ಟು ಓಡಾಡುತ್ತಿರುವ ವಿದ್ಯಾರ್ಥಿಗಳ ಗೋಳು ಕೇಳುವವರು... ಉಕ್ಕು ಸ್ಥಾವರ ದುರಂತ: ಮೃತರ ಕುಟುಂಬಕ್ಕೆ 25 ಲಕ್ಷ ರೂ. ಗಾಯಗೊಂಡವರಿಗೆ 10 ಲಕ್ಷ ರೂ. ಪರಿಹಾರ: ಕೇಂದ್ರ ಸಚಿವ ಎಚ್‌ಡಿಕ...