NEWSನಮ್ಮಜಿಲ್ಲೆನಮ್ಮರಾಜ್ಯ

KSRTC: 2025ರ ಜನವರಿ 1ರಿಂದ ವೇತನ ಒಪ್ಪಂದವೋ ಸರಿ ಸಮಾನ ವೇತನವೋ- ಬಿಗ್‌ಟ್ವಿಸ್ಟ್‌ ಕೊಡಲು ಸರ್ಕಾರದ ಸಿದ್ಧತೆ!?

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರರಿಗೆ ಇದೇ ಫೆ.18-2026ರಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಘೋಷಣೆ ಮಾಡಿರುವಂತೆ 26 ತಿಂಗಳ ವೇತನ ಹಿಂಬಾಕಿ ಹಾಗೂ 2025ರ ಏಪ್ರಲ್‌ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳವಾಗಲಿದೆ.

ಈಗಾಗಲೇ ಏನು 38 ತಿಂಗಳ ಹಿಂಬಾಕಿ ಬರಬೇಕಿತ್ತೊ ಅದಕ್ಕೆ ಬದಲಾಗಿ 26 ತಿಂಗಳ ಹಿಂಬಾಕಿ ಕೊಡುವ ಬಗ್ಗೆ ಈ ಹಿಂದೆಯೇ ಏನು ಅಂತಿಮ ತೀರ್ಮಾನವಾಗಿತ್ತೋ ಅದರಂತೆ ಸರ್ಕಾರ ಆದೇಶ ಮಾಡಿದ್ದು, ಇದು ಮುಂದಿನ ದಿನಗಳಲ್ಲಿ ಬದಲಾಗುತ್ತದೆ ಅಂದುಕೊಂಡರೆ ಅದು ತೀವ್ರತರವಾದ ಹೋರಾಟವೇ ಆಗಬೇಕು. ಆದರೆ, ಈ ಹೋರಾಟಕ್ಕೆ ಇಳಿಯುವ ನೌಕರರ ವಿರುದ್ಧ ಕಾನೂನು ಕ್ರಮತೆಗೆದುಕೊಳ್ಳುವುದರಿಂದ ಈಗಿನ ಪರಿಸ್ಥಿತಿಯಲ್ಲಿ ನೌಕರರು ಹೋರಾಟಕ್ಕೆ ಇಳಿಯುವುದಿಲ್ಲ, ಹೀಗಾಗಿ 26 ತಿಂಗಳ ವೇತನ ಹಿಂಬಾಕಿಯಷ್ಟೇ ನೌಕರರಿಗೆ ಸಿಗುವುದು.

ಇನ್ನು 2024 ಜನವರಿ 1ರಿಂದ ವೇತನ ಪರಿಷ್ಕರಣೆ ಆಗಬೇಕಿತ್ತು ಆದರೆ, ಸರ್ಕಾರ ಇದನ್ನು ಕೂಡ 2025ರ ಏಪ್ರಿಲ್‌ 1ರಿಂದ ಜಾರಿ ಮಾಡುವುದಾಗಿ ತಿಳಿಸಿದೆ. ಇನ್ನು ಶೇಕಡಾ ಎಷ್ಟನ್ನು ಕೊಡಬೇಕು ಎಂಬುದರ ಬಗ್ಗೆಯೂ ಕಳೆದ ಫೆ.18ರಂದೆ ಘೋಷಣೆ ಮಾಡುತ್ತಿತ್ತು ಸರ್ಕಾರ. ಆದರೆ, ನೌಕರರು ಆಕ್ರೋಶಗೊಳ್ಳುತ್ತಾರೆ ಎಂದು ತಿಳಿದ ಸರ್ಕಾರ ಅದನ್ನು ಹಾಗೆಯೇ ಉಳಿಸಿಕೊಂಡಿದೆ.

ಹೀಗಾಗಿ ಇದು ಮಾರ್ಚ್‌ 2ರ ಒಳಗೆ ಸಾರಿಗೆ ಸಂಘಟನೆಗಳ ಮತ್ತೊಂದು ಸುತ್ತಿನ ಸಭೆಯನ್ನು ನಾಮ್‌ ಕೇ ವಾಸ್ತೆ ಎಂಬಂತೆ ಕರೆದು ಕಳೆದ ಬಾರಿ ಆಗಿರುವ ಶೇ.15ದಕ್ಕಿಂತ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಅದು 2025ರ ಜನವರಿ 1ರಿಂದ ಜಾರಿಗೆ ಬರುವಂತೆ ಹೆಚ್ಚಳ ಮಾಡಿ ಸರ್ಕಾರ ಆದೇಶ ಹೊರಡಿಸುತ್ತದೆ. ಆ ವೇಳೆ ಸಾರಿಗೆ ಕಾರ್ಮಿಕರ ಸಂಘಟನೆಗಳ ಮುಖಂಡರು ಇದಕ್ಕೆ ನಮ್ಮ ವಿರೋಧವಿದೆ ಎಂದು ಮಾಧ್ಯಮಗಳ ಮುಂದೆ ಬಂದು ಕೂಗಾಡುತ್ತಾರೆ.

ಈ ನಾಟಕಗಳೆಲ್ಲ ಕಳದು ಒಂದೆರಡು ದಿನಗಳಾದ ಬಳಿಕ ಸಿಎಂ ಮತ್ತು ಸಾರಿಗೆ ಸಚಿವರ ಬಳಿ ಹೋಗಿ ಹೂಗುಚ್ಛ ನೀಡಿ ಅಭಿನಂದನೆ ಸಲ್ಲಿಸುತ್ತಾರೆ. ಅಲ್ಲಿಗೆ ಈ ಎಲ್ಲ ಹೈಡ್ರಾಮಕ್ಕೂ ತೆರೆ ಬೀಳುತ್ತದೆ ಎಂದು ಬಹುತೇಕ ಬಲ್ಲ ಮೂಲಗಳಿಂದ ಬಂದಿರುವ ಮಾಹಿತಿಯಾಗಿದೆ.

ಆದರೆ, ಮತ್ತೆ ಇನ್ನೊಂದು ಬಿಗ್ ಟ್ವಿಸ್ಟ್‌ ಕೂಡ ಆಗುತ್ತದೆ. ಈ ಎಲ್ಲದಕ್ಕೂ ಶೆಡ್‌ ಹೊಡೆಯುವ ರೀತಿಯಲ್ಲಿ ಸರ್ಕಾರ ಈ ಏನು 2025ರ ಜನವರಿ 1ರಿಂದ ವೇತನ ಒಪ್ಪಂದಂತೆ ಹೆಚ್ಚಳ ಮಾಡುತ್ತದೆ ಎಂದುಕೊಂಡಿರುವುದು ಸುಳ್ಳು ಅದು ಬೇರೆಯೇ ಆಗುತ್ತದೆ ಎಂದು ಮತ್ತೊಂದು ಮೂಲದಿಂದ ಮಾಹಿತಿ ಬಂದಿದ್ದು, ಈ ಮಾಹಿತಿ ಪ್ರಕಾರ ನೌಕರರಿಗೆ ಮುಂದಿನ ದಿನಗಳಲ್ಲಿ ಈ ರೀತಿ ಅನ್ಯಾಯವಾಗುವುದಕ್ಕೆ ಸರ್ಕಾರ ಕೂಡ ಬಿಡುವುದಿಲ್ಲ. ನೌಕರರ ಪರವಾದ ಸಿಹಿ ಸುದ್ದಿಯನ್ನೇ ಕೊಡುತ್ತದೆ ಎನ್ನಲಾಗುತ್ತಿದೆ.

ಆದರೆ, ಈ ಸಿಹಿ ಸುದ್ದಿ ಏನು ಎಂಬುವುದನ್ನು ತಿಳಿದುಕೊಳ್ಳುವುದಕ್ಕೆ ನಾವು ಕುತೂಹಲದಿಂದ ಕಾಯುತ್ತಿದ್ದೇವೆ. ಅದು ಅತೀ ಶೀಘ್ರದಲ್ಲೆ ಸರ್ಕಾರ ಕೊಡುತ್ತದೆ ಎಂಬ ಬಗ್ಗೆ ಮತ್ತೊಂದು ಮೂಲ ಭಾರಿ ವಿಶ್ವಾಸದಿಂದಲೇ ಹೇಳಿಕೆ ನೀಡಿದ್ದು, ಏನಾಗಬಹುದು ಎಂಬ ಕುತೂಹಲವನ್ನು ಮಾತ್ರ ಹಾಗೆಯೇ ಉಳಿಸಿಕೊಂಡಿದೆ.

Megha
the authorMegha

Leave a Reply

error: Content is protected !!
Latest news
ತಂದೆ-ತಾಯಿ ಇಬ್ಬರೂ IAS ಆಗಿದ್ದರೆ ಮಕ್ಕಳಿಗೆ ಮೀಸಲಾತಿ ಸೌಲಭ್ಯ ಏಕೆ ಮುಂದುವರಿಯ -ಬೇಕು: ಸುಪ್ರೀಂ ಕೋರ್ಟ್‌ ಮಹತ್ವದ ಪ್... KARNATAKA GOVT: ಕಾರ್ಮಿಕರ ಕನಿಷ್ಠ ವೇತನ ನಿಗದಿ ಮಾಡಿ ಸರ್ಕಾರದ ಆದೇಶ- ಮೇ 22ರಿಂದಲೇ ಜಾರಿ- ಕಾರ್ಮಿಕ ಅಧಿಕಾರಿ ತುಳಸ... ಕಲ್ಲಿದ್ದಲು ಗಣಿಯಲ್ಲಿ ಗ್ಯಾಸ್‌ ಸ್ಫೋಟ: 90 ಜನರು ಮೃತ, 100ಕ್ಕೂ ಹೆಚ್ಚು ಕಾರ್ಮಿಕರಿಗೆ ಗಾಯ KSRTC ತುಮಕೂರು ಡಿಸಿಗೆ ಲಂಚ ಸಂಗ್ರಹ ಆರೋಪ: ಸಂಬಂಧಿಕರ ಫೋನ್‌ ಪೇ ಬಳಸಿ ಸಿಕ್ಕ ಬಿದ್ದ ನೌಕರ ಆತ್ಮಹತ್ಯೆಗೆ ಯತ್ನ- ಪಾರ... ಬಿಎಂಟಿಸಿ ಹೊಸ ವೇಗದೂತ ಬಸ್‌ಗಳ ಸೇವೆಗೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಚಾಲನೆ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವು ನಿವೇಶನ ರಹಿತ 500 ಬಡ ಕುಟುಂಬಗಳಿಗೆ ಜೂನ್ ತಿಂಗಳಲ್ಲಿ ನಿವೇಶನ ವಿತರಣೆ: ಸಚಿವ ಮುನಿಯಪ್ಪ ಸಿಬಿಎಸ್‌ಇ ತ್ರಿಭಾಷಾ ನೀತಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಪಾಲಕರು: ಮುಂದಿನ ವಾರ ವಿಚಾರಣೆ ಫೆಬ್ರವರಿ 2025- ಮಾರ್ಚ್‌ 2025ರ ಎರಡು ತಿಂಗಳ ಗೃಹಲಕ್ಷ್ಮಿ ಹಣ ಬಿಡುಗಡೆಗೆ ನಿರ್ದೇಶನ ನೀಡಲು ಹೈ ಕೋರ್ಟ್‌ ಮೆಟ್ಟಿಲೇರಿ... BMTC ನೌಕರರಿಗೆ ಏಪ್ರಿಲ್-2018 ರಿಂದ ಜುಲೈ-2018 ರವರೆಗಿನ 4ತಿಂಗಳ ಮೂಲ ತುಟ್ಟಭತ್ಯೆ ಮೇ 2026ರ ವೇತನದೊಂದಿಗೆ ಪಾವತಿಸಲ...