NEWSನಮ್ಮಜಿಲ್ಲೆನಮ್ಮರಾಜ್ಯ

ಹಳ್ಳ ಹಿಡಿದ ಸಾರಿಗೆ ನೌಕರರ ಬೆಂಗಳೂರು ಚಲೋ: ನೌಕರರು ಹೋರಾಟ ಮಾಡಲು ಸಿದ್ಧ ಎಂದರೂ ಒಪ್ಪದ ಜಂಟಿಯ “ಒಂಟಿಗಳು”

ವಿಜಯಪಥ ಸಮಗ್ರ ಸುದ್ದಿ
  • ಬೇಡಿಕೆ ಈಡೇರದಿದ್ದರೂ ಹೋರಾಟ ಅಂತ್ಯಗೊಳಿಸಿದ ಕೆಲಸಕ್ಕೆ ಬಾರದ ಸಂಘಟನೆಗಳ ಮುಖಂಡರು
  • ನೌಕರರು ಆಕ್ರೋಶ ಕಟ್ಟೆ ಒಡೆದು ಕೋಗಾಡಿದರು ಕಣ್ಣೀರು ಹಾಕಿದರೂ ಕರಗದ ಜಂಟಿಗಳ ಮನಸ್ಸು ಕಲ್ಲಾಗಿದೆಯೇನೋ?
  • ಇಂಥ ಹೋರಾಟಕ್ಕೆ ಏಕೆ ಕರೆ ಕೊಡಬೇಕು ಶಕ್ತಿಯಿಲ್ಲ ಎಂದರೆ ಸೈಡಲ್ಲಿ ಸೈಲೆಂಟಾಗಿರಬೇಕು
  • ನೌಕರರು ಹೋರಾಟಕ್ಕೆ ಮುಂದಾದರೂ ಜಂಟಿಗಳು ಒಂಟಿಗಳಾಗಿ ನಿರ್ಧರಿಸಿದ್ದರ ಒಳಮರ್ಮವೇನು?
  • ಸೇಲಾಗಿರುವುದು ಯಾರು ಎಂದು ಕೇಳುತ್ತಿದ್ದಾರೆ ನೌಕರರು ಇದಕ್ಕೆ ನಿಮ್ಮ ಬಳಿ ಉತ್ತರವಿದೆಯೇ?
  • ಗುಳ್ಳೇನರಿ ಸರ್ಕಾರದೊಂದಿಗೆ ಕೈ ಜೋಡಿಸಿದ ಮಹಾನುಭವರು ಯಾರು ಎಂದು ಬಹಿರಂಗ ಪಡಿಸುವ ಶಕ್ತಿ ಇದೆಯೇ ಜಂಟಿಯ ಒಂಟಿಗಳಿಗೆ

ಬೆಂಗಳೂರು: 38 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಗೂ 2024ರ ಜನವರಿ 1ರಿಂದ ಜಾರಿಗೆ ಬರುವಂತೆ ವೇತನ ಹೆಚ್ಚಳ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ‘ಬೆಂಗಳೂರು ಚಲೋ’ ಪ್ರತಿಭಟನೆಯನ್ನು ಕರ್ನಾಟಕ ರಾಜ್ಯ ಸಾರಿಗೆ ಕಾರ್ಮಿಕ ಜಂಟಿ ಕ್ರಿಯಾ ಸಮಿತಿ ಸರ್ಕಾರಕ್ಕೆ ಮಾ.2ರ ಡೆಡ್‌ಲೈನ್‌ ನೀಡಿ ಹಿಂಪಡೆದಿದೆ.

ರಾಜ್ಯ ಸರ್ಕಾರಕ್ಕೆ ವೇತನ ಪರಿಷ್ಕರಣೆ ಆದೇಶ ಹಾಗೂ ಹಲವು ತಿಂಗಳ ಹಿಂಬಾಕಿ ನೀಡಲು ಮಾರ್ಚ್ 2ರ ಗಡುವು ನೀಡಿದೆ. 38 ತಿಂಗಳ ಹಿಂಬಾಕಿ ಪೈಕಿ 26 ತಿಂಗಳ ಹಿಂಬಾಕಿ ನೀಡುವುದಾಗಿ ಸರ್ಕಾರ ನಿನ್ನೆ ನಿರ್ಧಾರ ತೆಗೆದುಕೊಂಡಿದೆ. ಅಲ್ಲದೇ ವೇತನ ಪರಿಷ್ಕರಣೆಗೂ ಸಹ ಸರ್ಕಾರ ಒಪ್ಪಿಕೊಂಡಿದೆ. ಆದರೂ ಸಾರಿಗೆ ನೌಕರರಿಗೆ ಇದು ತೃಪ್ತಿ ತಂದಿಲ್ಲ.

ನಮ್ಮ ಬೆವರಿನ ಪರಿಶ್ರಮವನ್ನು ನಾವು ಕೇಳುತ್ತಿದ್ದೇವೆ. ಹೀಗಾಗಿ ಸರ್ಕಾರ 38 ತಿಂಗಳ ಹಿಂಬಾಕಿ ನೀಡಲೇಬೇಕೆಂದು ಪಟ್ಟಿ ಹಿಡಿದಿದ್ದಾರೆ. ಈ ಸಂಬಂಧ ಫ್ರೀಡಂಪಾರ್ಕ್‌​ ನಲ್ಲಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಕೆಎಸ್​ಆರ್​ಟಿಸಿ ಎಂಡಿ ಭೇಟಿ ನೀಡಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳ ಜತೆ ಚರ್ಚಿಸಿದರು. ಬಳಿಕ ಅದಕ್ಕೆ ಒಪ್ಪಿದ ಸಮಿತಿ ಅಂತಿಮವಾಗಿ ಸಭೆ ಮಾಡಿ ಚಲೋವನ್ನು ತಾತ್ಕಾಲಿಕವಾಗಿ ಹಿಂಪಡೆಯಿತು.

ಇನ್ನು ನಾಳೆಯಿಂದ ಬಸ್‌ನಿಲ್ಲಿಸಿ ಮುಷ್ಕರ ನಡೆಸದಿರಲು ಜಂಟಿ ಕ್ರಿಯಾ ಸಮಿತಿ ನಿರ್ಧರಿಸಿದೆ. ಆದರೆ, ಸರ್ಕಾರಕ್ಕೆ ಮಾರ್ಚ್‌ 2ರ ಗಡುವು ನೀಡಿದೆ. ಒಂದು ವೇಳೆ ಮಾ.2ರೊಳಗಾಗಿ ಬೇಡಿಕೆ ಈಡೇರಿಸದಿದ್ದರೆ ಮತ್ತೆ ಪ್ರತಿಭಟನೆ ನಡೆಸುವುದಾಗಿ ಸಮಿತಿ ಸಂಚಾಲಕ ಜಯದೇವರಾಜೇ ಅರಸ್ ಎಚ್ಚರಿಕೆ ನೀಡಿದ್ದಾರೆ. ಈ ನಡುವೆ ಇದಕ್ಕೆ ಸಾರಿಗೆ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದು, ನಾಳೆಯಿಂದ ಮುಷ್ಕರ ನಡೆಸುವಂತೆ ಆಗ್ರಹಿಸಿದ್ದಾರೆ.

ಕೆಎಸ್​​ಆರ್​​ಟಿಸಿ ಎಂಡಿ ಭೇಟಿ: ನೌಕರರ ಸಮಸ್ಯೆಯನ್ನು ಆಲಿಸಿದ KSRTC ಎಂಡಿಕ್ರಮ್‌ ಪಾಷ ಅವರು ನೌಕರರಿಗೆ ಕೆಲ ಭರವಸೆ ನೀಡಿದರು. ಬಳಿಕ ಜಂಟಿ ಕ್ರಿಯಾ ಸಮಿತಿ ಸದಸ್ಯರು, ಮುಖಂಡರು ಚರ್ಚಿಸಿ ಚಲೋವನ್ನು ತಾತ್ಕಾಲಿಕವಾಗಿ ವಾಪಾಸ್ ಪಡೆದರು. ನಮ್ಮ ಎಲ್ಲ ಬೇಡಿಕೆಗಳು ಪೂರ್ಣವಾಗಿ ರಾಜ್ಯ ಸರ್ಕಾರ ಈಡೇರಿಸಬೇಕು. ಅದಕ್ಕಾಗಿ ಹತ್ತು ದಿನಗಳ ಗಡುವು (ಮಾ.2) ನೀಡಲಾಗಿದೆ. ಸದ್ಯ ಇಂದಿನ ಚಲೋ ಹಿಂಪಡೆದಿದ್ದೇವೆ ಎಂದು ಹೇಳಿದರು. ಹೀಗಾಗಿ ಸಾರಿಗೆ ನೌಕರರ ಹೋರಾಟ ತಾತ್ಕಾಲಿಕವಾಗಿ ಅಂತ್ಯವಾಗಿದೆ. ನಾಳೆಯಿಂದ ಎಂದಿನಂತೆ ಬಸ್‌ಗಳು ಸಂಚರಿಸಲಿವೆ.

ಮಾ.2ರಿಂದ ಉಪವಾಸ ಸತ್ಯಾಗ್ರಹ: ರಾಜ್ಯ ಸರ್ಕಾರ ಮುಷ್ಕರ ಮುನ್ನಾದಿನ ಬುಧವಾರ (ಫೆ.18) 24 ತಿಂಗಳ ಹಿಂಬಾಕಿ ವೇತನ ಬಿಡುಗಡೆ ನಿರ್ಧರಿಸಿದ್ದರ ಜತೆಗೆ ವೇತನ ಪರಿಷ್ಕರಣೆಗೆ ಆದೇಶಿಸಿತ್ತು. ಇದರಿಂದ ಬೇಡಿಕೆಗಳ ಪೂರ್ಣ ಈಡೇರಿದಂತಾಗಿಲ್ಲ ಎಂದು ದೂರಿರುವ ಸಾರಿಗೆ ನೌಕರರು ಬೇಡಿಕೆಗಳು ಪೂರ್ಣವಾಗಿ ಈಡೇರಿಸಬೇಕು.

38 ತಿಂಗಳ ಹಿಂಬಾಕಿ ನೀಡಲೇಬೇಕು. ವೇತನ ಹೆಚ್ಚಿಸಬೇಕು. ಅದಕ್ಕಾಗಿ ಸರ್ಕಾರ ನಿರ್ಧಾರ ಕೈಗೊಳ್ಳಲು ಹತ್ತು ದಿನ ಸಮಯ ನೀಡಿದ್ದು, ಅಷ್ಟರದಲ್ಲಿ ನಿರ್ಧಾರ ಪ್ರಕಟಿಸಬೇಕು. ಇಲ್ಲವಾದರೆ ಮಾ.2ರಿಂದ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ.

ಸಾರಿಗೆ ನೌಕರರು ಆಕ್ಷೇಪ: ಇನ್ನು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಇಂದಿನ ಚಲೋ ವಾಪಾಸ್ ಪಡೆದಿದ್ದಕ್ಕೆ ಸ್ವಾತಂತ್ರ್ಯ ಉದ್ಯಾನದಲ್ಲಿ ನೌಕರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಬೇಡಿಕೆಗಳು ಪೂರ್ಣ ಈಡೇರಿಸುವವರೆಗೂ ಹೋರಾಟ ನಿಲ್ಲಿಸಬಾರದೆಂದು ಒತ್ತಾಯಿಸಿದರು. ಬೇಕೆ ಬೇಕು ನ್ಯಾಯಬೇಕು, ಗೆಲ್ಲುವವರೆಗೂ ಹೋರಾಟ ಬೀಡಲ್ಲ ಎಂದು ಘೋಷಣೆ ಕೋಗಿ ಆಕ್ರೋಶ ಹೊರಹಾಕಿದರು. ಬಳಿಕ ಜಂಟಿ ಸಮಿತಿ ಸದಸ್ಯರ ನಡೆಯಿಂದ ನೊಂದು ಒಲ್ಲದ ಮನಸ್ಸಿನಿಂದ ಸಾರಿಗೆ ನೌಕರರು ಕಣ್ಣೀರು ಸುರಿಸುತ್ತ ವಾಪಾಸ್ ಮನೆಗಳತ್ತ ತೆರಳಿದರು.

Megha
the authorMegha

Leave a Reply

error: Content is protected !!
Latest news
ಗೃಹಲಕ್ಷ್ಮಿ, ಗೃಹಜ್ಯೋತಿಗೆ  ಹೊಸದಾಗಿ ಅರ್ಜಿ ಸಲ್ಲಿಸಬೇಕೆಂಬ ನಿರ್ಧಾರ ಸ್ವಾಗತಾರ್ಹ KSRTC ಪುತ್ತೂರು: ಡ್ರಿಂಕ್ಸ್ ಪರೀಕ್ಷಿಸಲು ಮಷೀನ್ ತಂದಿದ್ದಾರೆ ಎಂದು ತಪ್ಪು ತಿಳಿದು ಹೆದರಿದ ನೌಕರ- ಮೆಟ್ಟಲುಗಳಿಂದ ಬಿ... 2037ರ ವೇಳೆಗೆ ಬೆಂಗಳೂರು ಆಗಲಿದೆ ಜಾಗತಿಕ ಆರ್ಥಿಕ ಶಕ್ತಿಕೇಂದ್ರ: 35 ಲಕ್ಷ ಕೋಟಿ ರೂ.ಗೂ ಅಧಿಕ ಕಾಂಚಾಣ, 30 ಲಕ್ಷ ಹೊಸ ... ಪಂಜಾಬ್ ಮಾದರಿ ಕರ್ನಾಟಕದಲ್ಲೂ ಹೆದ್ದಾರಿ ಟೋಲ್‌ ರದ್ದತಿಗೆ ಆಗ್ರಹಿಸಿ 23ರಂದು ರೈತ ಸಂಘಟನೆಗಳ ಒಕ್ಕೂಟದಿಂದ ಪ್ರತಿಭಟನೆ KSRTC ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಓಂಕಾರಪ್ಪನ ಸಹಿ ಮಾಡುವ ಅಧಿಕಾರ ರದ್ದುಗೊಳಿಸಿ ತನಿಖೆಗೆ ಹೈ ಕೋರ್ಟ್‌ ಆದೇಶ BMTC: 30ನೇ ಘಟಕದ ಎಲೆಕ್ಟ್ರಿಕ್‌ ಬಸ್‌ಗಳ ಅಸಮರ್ಪಕ ಕಾರ್ಯಾಚರಣೆ ವಿರುದ್ಧ ಸಿಎಸ್‌ಗೆ ದೂರು ನೀಡಿದ ನಿರ್ವಾಹಕರು ಪಬ್‌ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡ -ಅಬಕಾರಿ ಡಿಸಿ ಅಮಾನತಿಗೆ ಶಿಫಾರಸು: ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೊಲದ ಕೂಲಿ ಕೆಲಸ ಬಿಟ್ಟು ಮತ್ತೆ ಶಿಕ್ಷಣದತ್ತ ಹೆಜ್ಜೆ ಇಟ್ಟ ವಿದ್ಯಾರ್ಥಿನಿ: ಪ್ರಾಂಶುಪಾಲರ ಮಾನವೀಯತೆಗೆ ಬೆಲೆ ಕಟ್ಟಲಾದ... ಕನಿಷ್ಠ ವಿದ್ಯಾರ್ಹತೆ SSLC ಪಾಸ್‌: ಡಿಪ್ಲೊಮಾ ಇನ್ ಕೋ ಆಪರೇಟಿವ್ ಮ್ಯಾನೇಜ್‌ಮೆಂಟ್ ಪ್ರವೇಶಕ್ಕೆ ಅರ್ಜಿ ಆಹ್ವಾನ ಕರ್ನಾಟಕದಲ್ಲಿ ‘ಕರ್ತವ್ಯ’ ಕ್ರಾಂತಿ: ಸ್ವದೇಶಿ ಎಐ ತಂತ್ರಜ್ಞಾನದ ಹೊಸ ಹೆಜ್ಜೆ