KSRTC: 38ರಲ್ಲಿ ಸರ್ಕಾರ 26 ತಿಂಗಳು ಕೊಟ್ಟಿದೆ ಉಳಿದ 12 ತಿಂಗಳು ನಿಗಮಗಳ ಆದಾಯದಿಂದ ನೌಕರರಿಗೆ ಕೊಡಿ- ಜಂಟಿ ಕ್ರಿಯಾ ಸಮಿತಿ ಆಗ್ರಹ

- ಬೇಡಿಕೆ ಅಥವಾ ಸಲಹೆ ಒಪ್ಪದ ಆಡಳಿತ ಮಂಡಳಿ ಸಭೆ ವಿಫಲ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ವೇತನ ಸಂಬಂಧ ಇಂದು (ಮಾ.2ರ ಸಂಜೆ 4 ಗಂಟೆಗೆ ಸಂಸ್ಥೆಯ ಕೇಂದ್ರ ಕಚೇಯಲ್ಲಿ ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕರ ಅಧ್ಯಕ್ಷತೆಯಲ್ಲಿ ನಡೆದ ಜಂಟಿ ಕ್ರಿಯಾ ಸಮಿತಿ ಜತೆಗಿನ ಸಭೆ ವಿಫಲವಾಯಿತು.

ಕಾರಣ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ಸರ್ಕಾರ 38 ತಿಂಗಳ ಹಿಂಬಾಕಿಯಲ್ಲಿ 26 ತಿಂಗಳ ಹಿಂಬಾಕಿ ನೀಡಿದೆ ಉಳಿದ 12 ತಿಂಗಳ ಹಿಂಬಾಕಿಯನ್ನು ನಾಲ್ಕೂ ನಿಗಮಗಳು ಆಯಾಯಾ ಸಂಸ್ಥೆಯ ನೌಕರರಿಗೆ ಭರಿಸಬೇಕು ಜತೆಗೆ 1.1.2024ರಿಂದ ವೇತನ ಒಪ್ಪಂದವಾಗಬೇಕು ಎಂಬ ಬೇಡಿಕೆ ಇಟ್ಟರು. ಇದಕ್ಕೆ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು, ಹಿರಿಯ ಅಧಿಕಾರಿಗಳು ಇದ್ದ ಸಭೆ ಒಮ್ಮತಕ್ಕೆ ಬರಲಿಲ್ಲ.
ಇನ್ನು ಕೆಎಸ್ಆರ್ಟಿಸಿ ವ್ಯವಸ್ಥಾಪಕ ನಿರ್ದೇಶಕ ಅಕ್ರಮ್ ಪಾಷ ಅವರು ಪ್ರಾಸ್ತವಿಕವಾಗಿ ಸರ್ಕಾರದ ಹಾಗೂ ಆಡಳಿತ ವರ್ಗದ ಪರವಾಗಿ ವಿಷಯ ಮಂಡಿಸಿ 18.02.2026 ರಂದು ಹೊರಡಿಸಿರುವ ಸರ್ಕಾರದ ಆದೇಶದ ಚೌಕಟ್ಟಿನಲ್ಲಿಯೇ ಚರ್ಚೆ ನಡೆಯಬೇಕು, ಅದರ ಪ್ರಕಾರ 01.04.2025 ರಿಂದ ವೇತನ ಹೆಚ್ಚಳದ ಪ್ರಮಾಣದ ಬಗ್ಗೆ ಮಾತ್ರ ಚರ್ಚಿಸುವುದು ಸೂಕ್ತ ಎಂದು ತಿಳಿಸಿದರು.
ಈ ವೇಳೆ ಜಂಟಿ ಕ್ರಿಯಾ ಸಮಿತಿ ಆಡಳಿತ ವರ್ಗದ ವಾದವನ್ನು ಒಪ್ಪದೆ 01.01.2020 ರಿಂದ 38 ಬಾಕಿ ಹಣವನ್ನು ನೌಕರರರಿಗೆ ಪಾವತಿಸಬೇಕು. ಜತೆಗೆ ಇದು ನಾಲ್ಕೂ ಸಾರಿಗೆ ನಿಗಮಗಳ ಜವಾಬ್ದಾರಿಯಾಗಿದೆ ಎಂದು ಬಲವಾಗಿ ಒತ್ತಾಯಿಸಿತು. ಅಲ್ಲದೆ ಸರ್ಕಾರ 1272 ಕೋಟಿ ರೂಪಾಯಿಗಳನ್ನು ಕೊಡಲು ಆದೇಶ ಹೊರಡಿಸಿದೆ. ಹೀಗಾಗಿ ಉಳಿದ 521 ಕೋಟಿ ರೂಪಾಯಿಗಳನ್ನು ನಾಲ್ಕೂ ಸಾರಿಗೆ ನಿಗಮಗಳು ಹಂಚಿಕೊಂಡು ಪಾವತಿಸಿದರೆ ಸರಾಸರಿ 120 ಕೋಟಿ ರೂ.ಗಳಿಗೂ ಕಡೆಯಾಗುತ್ತದೆ. ಯಾವುದೇ ಕಾರಣಕ್ಕೂ ಸಾರಿಗೆ ನೌಕರರಿಗೆ 38 ತಿಂಗಳ ಹಿಂಬಾಕಿ ನೀಡುವುದನ್ನು ನಿರಾಕರಿಸಬಾರದು ಎಂದು ಆಗ್ರಹಿಸಿದರು.
ಅಲ್ಲದೆ 01.01.2024 ರಿಂದ ಎಲ್ಲ ಕಾರ್ಮಿಕ ಸಂಘಟನೆಗಳೂ ಹಾಗೂ ಜಂಟಿ ಕ್ರಿಯಾ ಸಮಿತಿ ವತಿಯಿಂದ ಬೇಡಿಕೆ ಪಟ್ಟಿ ಕೊಟ್ಟಿದ್ದೇವೆ, ಅಂದಿನ ಸರ್ಕಾರದ 17.03.2023ರ ಆದೇಶವನ್ನು ಇಂದಿನ ಸರ್ಕಾರ ನೌಕರರಿಗೆ ಪ್ರತಿಕೂಲವಾಗುವಂತೆ ಅರ್ಥೈಸಿ ವೇತನ ಪರಿಷ್ಕರಣೆಯ ದಿನಾಂಕವನ್ನು 15 ತಿಂಗಳು ಮುಂದೂಡುವುದು ಕಾರ್ಮಿಕ ವಿರೋಧಿ ನೀತಿಯಾಗುತ್ತದೆ.
ಶಕ್ತಿ ಯೋಜನೆಯಲ್ಲಿ ಸಾರಿಗೆ ನೌಕರರು ಹಾಗೂ ಅಧಿಕಾರಿಗಳೂ ಹಲವು ಇತಿ ಮಿತಿಗಳ ನಡುವೆಯೂ, ಶ್ರಮವಹಿಸಿ ಕೆಲಸ ಮಾಡಿ ಸರ್ಕಾರಕ್ಕೆ ಒಳ್ಳೆಯ ಹೆಸರನ್ನು ತಂದು ಕೊಟ್ಟಿದ್ದಾರೆ. ಆದ್ದರಿಂದ ವೇತನ ಪರಿಷ್ಕರಣೆ 01.01.2024 ರಿಂದಲೇ ಜಾರಿಯಾಗಬೇಕು ಎಂದು ದೃಢವಾಗಿ ತಿಳಿಸಿರುವುದಾಗಿ ಜಂಟಿ ಕ್ರಿಯಾ ಸಮಿತಿ ಪದಾಧಿಕಾರಿಗಳು ತಿಳಿಸಿದ್ದಾರೆ.
ಆದರೆ, ಕಳೆದ ಫೆ.19ರಂದು ಹಮ್ಮಿಕೊಂಡಿದ್ದ ಹೋರಾಟವನ್ನು ಅಂದಿಗೆ ಮೊಟಕುಗೊಳಿಸಿ ಇದೇ ಜಂಟಿಯವರು ನೌಕರರ ಸಹನೆಯನ್ನು ಕೆಣಕಿದ್ದಾರೆ. ಅಲ್ಲದೆ ಇವರು ಒಳ ಒಪ್ಪಂದ ಮಾಡಿಕೊಂಡು ನೌಕರರ ಮುಂದೆ ಒಂದು ರೀತಿ ಸರ್ಕಾರ, ಅಧಿಕಾರಿಗಳ ಮುಂದೆ ಮತ್ತೊಂದು ರೀತಿ ನಾಟಕವಾಡುತ್ತಿದ್ದಾರೆ ಎಂಬ ಆರೋಪವನ್ನು ಸ್ವತಃ ನೌಕರರೇ ಮಾಡುತ್ತಿದ್ದಾರೆ.
ಈ ಎಲ್ಲವನ್ನು ನೋಡಿದರೆ ನಮ್ಮನ್ನು ನರಕಕ್ಕೆ ತಳ್ಳುವುದಕ್ಕೆ ಈ ಜಂಟಿ ಕ್ರಿಯಾ ಸಮಿತಿಯವರು ಮುಂದಾಗಿದ್ದಾರೆ ಅನಿಸುತ್ತಿದೆ. ಇದನ್ನು ಬಿಟ್ಟು ನೀವು ಈ ಮೇಲೆ ಕೇಳಿವುದಕ್ಕೆ ಬದ್ಧರಾಗಿ ನಿಂತರೆ ನಾವು ನಿಮಗೆ ಬೆಂಬಲ ಕೊಡುತೇವೆ ಆದರೆ, ಊಸರವಳ್ಳಿಯಾಗಬೇಡಿ ಎಂದು ನೌಕರರು ಒತ್ತಾಯಿಸಿದ್ದಾರೆ.
Related









