BMTC ಮೆಜೆಸ್ಟಿಕ್: ಪ್ಲಾಟ್ಫಾರಂ-05ರಲ್ಲಿ ಸೂಪರ್ ಟಾಕೀಸ್ಆದ ಸುಜಾತಾ ಟಾಕೀಸ್; ಅತೀ ಚಿಕ್ಕದಾಗಿ ಕಾಣುವ ಅಕ್ಷರಗಳು

- ಸಮಸ್ಯೆ ಆಲಿಸದ ಎಂಡಿ ಈವರೆಗೂ ಕಚೇರಿಯಿಂದ ಹೊರಗೆ ಬಂದೇಇಲ್ಲ
- ಈ ಹಿಂದೆ ಇದ್ದ ಎಂಡಿ ಕತೆಯೂ ಇದೇ ಆಗಿತ್ತು ಇವರು ಅದೇ ರೀತಿ.. ಪ್ರಯೋಜನಕ್ಕೆ ಬಾರದವರು
ಬೆಂಗಳೂರು: ದಿನಕ್ಕೆ ಸಾವಿರಾರು ಸಂಖ್ಯೆಯಲ್ಲಿ ಮೆಜೆಸ್ಟಿಕ್ ನಿಲ್ದಾಣಕ್ಕೆ ಬರುವ ಜನಸಾಮಾನ್ಯರ ಪ್ರಯಾಣವನ್ನು ಸುಲಭವಾಗಿಸುವುದು ಬಿಎಂಟಿಸಿ ಜವಾಬ್ದಾರಿಯೇ ಹೊರತು ಅವರನ್ನು ಬಸ್ ನಂಬರ್ ಹುಡುಕುತ್ತಾ ಸಮಯ ವ್ಯರ್ಥ ಮಾಡಿಸುವುದಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರಿಗೆ ಅಟಾಚ್ಮಾಡಿ ಮಮತ ಎಂಬುವರು ಸಾಮಾಜಿಕ ಜಾಲತಾಣದಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗೆ ಮೆಜೆಸ್ಟಿಕ್ ಪ್ಲಾಟ್ಫಾರಂನಲ್ಲಿ ಬಸ್ ರೂಟ್ಗಳ ಬಗ್ಗೆ ಮಾಹಿತಿ ನೀಡಲು ಹಾಕಿರುವ ಬೋರ್ಡ್ನಲ್ಲಿ ಅತೀ ಚಿಕ್ಕದಾಗಿ ಬರೆಯಲಾಗಿದ. ಇದನ್ನು ಭೂತಗನ್ನಡಿ ಹಿಡಿದುಕೊಂಡು ನೋಡುವಂತಾಗಿದೆ. ಈ ಹಿಂದೆ ಇದ್ದ ಬೋರ್ಡ್ನಲ್ಲಿ ಎಲ್ಲವೂ ಸರಿಯಾಗಿದ್ದವು ಅಂದರೆ ಸ್ಪಷ್ಟವಾಗಿಯೇ ಕಾಣುತ್ತಿತ್ತು. ಆದರೆ ಸಂಸ್ಥೆಯ ಅಧಿಕಾರಿಗಳು ಈ ರೀತಿ ಹಾಕಿಸಿ ಸಾರ್ವಜನಿಕ ಹಣವನ್ನು ವ್ಯರ್ಥ ಮಾಡಿದ್ದಾರೆ.
ಹೌದು! ಕೆಲವೊಂದು ವಿಷಯಗಳು ಅತೀ ಚಿಕ್ಕವು ಅಂತ ಕೆಲವರಿಗೆ ಅನ್ನಿಸಬಹುದು. ಆದರೆ, ಸಣ್ಣ ಸಣ್ಣ ಕಿರಿಕಿರಿ ಒಂದು ಇಡೀ ದಿನದ ಮೇಲೆ ಪ್ರಭಾವ ಬೀರುತ್ತೆ. ಅಂತ ಕೆಲಸವನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಅಧಿಕಾರಿಗಳು ಮಾಡಿದ್ದಾರೆ ಎಂದು ಮಮತ ಎಂಬುವರು ನಯವಾಗಿಯೇ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಸಾರ್ವಜನಿಕರ ಹಣದಲ್ಲಿ ಮಾಡುವ ಅಭಿವೃದ್ಧಿ ಕೆಲಸಗಳು, ಜನರಿಗಾಗಿ ಮಾಡುವ ಬದಲಾವಣೆಗಳು, ಅವರಿಗೆ ಉಪಯೋಗಕ್ಕೆ ಬರಬೇಕೇ ಹೊರತು ಹೀಗೆ ಬೇಕಾಬಿಟ್ಟಿಯಾಗಬಾರದು ಎಂದು ಹೇಳಿದ್ದಾರೆ.
ಒಂದು ಬೋರ್ಡ್ ನಲ್ಲಿ ಇಷ್ಟು ತಪ್ಪು ಇರುವಾಗ ಇಡೀ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿರುವ ಎಲ್ಲ ಹೊಸ ಬೋರ್ಡ್ ಗಳಲ್ಲಿ ಇನ್ನೆಷ್ಟು ತಪ್ಪುಗಳಿರಬೇಕು? ಬೋರ್ಡ್ ಹಾಕುವ ಮೊದಲು ಒಮ್ಮೆ ಪರಿಶೀಲಿಸಬೇಕು ಅನ್ನುವ ಸಣ್ಣ ತಿಳುವಳಿಕೆ ಇಲ್ಲದೆ ಹೋದದ್ದು ಸರಿಯಲ್ಲ.
ಸುಜಾತಾ ಟಾಕೀಸ್ ಬಸ್ ನಿಲ್ದಾಣವನ್ನು ಸೂಪರ್ ಟಾಕೀಸ್ ಎಂದು ಹಾಕಿದ್ದಾರೆ. ಈ ರೀತಿ ಹಾಕಿಸಿದ್ದು ಪ್ಲಾಟ್ಫಾರಂ 05ರಿಂದ ನಾನು ನಿತ್ಯ ಓಡಾಡುವುದರಿಂದ ನನಗೆ ಈ ವಿಷಯಗೊತ್ತಾಯಿತು. ಇದೇ ರೀತಿ ಪ್ಲಾಟ್ಫಾರಂಗಳಲ್ಲಿ ಎಷ್ಟು ತಪ್ಪುಗಳಿವೆಯೇ ಗೊತ್ತಿಲ್ಲ.
ಈ ಅಧಿಕಾರಿಗಳು ಮಾಡಿರುವ ಬದಲಾವಣೆಯಿಂದ ಜನರಿಗೆ ಉಪಯೋಗಕ್ಕೆ ಬರದಿದ್ದರೆ ಅದಕ್ಕೆ ಹಾಕಿರುವ ಹಣ ವ್ಯರ್ಥವಾದಂತೆ ಅಲ್ಲವೇ. ಹೀಗೆ ಪಬ್ಲಿಕ್ಮನಿಯನ್ನು ಉಪಯೋಗಿಸಿದರೆ ಪ್ರಯೋಜನವೇನು? ಈ ಹೊಸ ಬೋರ್ಡ್ ರೆಡಿಯಾದಮೇಲೆ ಅದು ಸರಿಯಿದೆಯೇ ಎಂದು ಗಮನಿಸದ ಅಧಿಕಾರಿ ಇನ್ನಾವುದರ ಪ್ರಯೋಜನಕ್ಕೆ ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.
ಇನ್ನಾದರೂ ಈ ರೀತಿ ಆಗಿರುವ ತಪ್ಪುಗಳನ್ನು ಸರಿಪಡಿಸಿ ಜತೆಗೆ ಅಕ್ಷರಗಳು ಸ್ಪಷ್ಟವಾಗಿ ಕಾಣುವಂತೆ ಹಾಕಬೇಕು. ಪ್ರಮುಖವಾಗಿ ಈ ಪ್ಲಾಟ್ಫಾರಂನಿಂದ ಬಸ್ಗಳು ಹೆಚ್ಚಾಗಿ ಶಾರದ ಕಾಲೋನಿ ಮತ್ತು ಬಸವೇಶ್ವರ ನಗರ ಮಾರ್ಗವಾಗಿ ಓಡಾಡುತ್ತವೆ. ಪ್ರಮುಖವಾಗಿ ಈಗ ಇಲ್ಲಿ ಶಾರದ ಕಾಲೋನಿ ಹೆಸರೇ ಇಲ್ಲ. ಈ ರೀತಿ ಬೇಕಾಬಿಟ್ಟಿಯಾಗಿ ಬೋರ್ಡ್ ಹಾಕಿಸಿದ್ದಾರೆ ಎಂದು ಕಿಡಿಕಾರಿದ್ದಾರೆ ಮಮತ.
ಎಂಡಿ ನಾಪತ್ತೆ : ಇನ್ನು ಬಿಎಂಟಿಸಿ ಎಂಡಿ ಶಿವಕುಮಾರ್ ಅಧಿಕಾರ ವಹಿಸಿಕೊಂಡ ದಿನದಿಂದ ಈವರೆಗೂ ಯಾವುದೇ ಪ್ರಮುಖ ಬಸ್ ನಿಲ್ದಾಣಗಳಲ್ಲಾಗಲಿ ಅಥವಾ ನೌಕರರ ಸಮಸ್ಯೆಗಳನ್ನು ಆಲಿಸುವುದಕ್ಕೆ ಘಟಕಗಳಿಗಾಗಲಿ ಭೇಟಿ ನೀಡಿದ್ದರ ಬಗ್ಗೆ ನಮಗೆ ತಿಳಿದೇ ಇಲ್ಲ. ಇಂಥ ಎಂಡಿಗಳು ಸಂಸ್ಥೆಯಲ್ಲಿ ಇದ್ದರೆ ಈ ರೀತಿಯ ತಪ್ಪುಗಳನ್ನು ಅಧಿಕಾರಿಗಳು ಯಾವುದೇ ಭಯವಿಲ್ಲದೇ ಮಾಡುತ್ತಾರೆ ಎನ್ನುವುದಕ್ಕೆ ಇದೇ ತಾಜಾ ನಿದರ್ಶನವಾಗಿದೆ.
ಇನ್ನಾದರೂ ಎಂಡಿ ಶಿವಕುಮಾರ್ ಕಚೇರಿಯಿಂದ ಹೊರಗೆ ಬಂದು ನೌಕರರ ಮತ್ತು ಪ್ರಯಾಣಿಕ ಜನರ ಸಮಸ್ಯೆ ಬಗ್ಗೆ ಗಮನಹರಿಸಬೇಕು ಎಂದು ಸಾರ್ವಜನಿಕರು ತಾಕೀತು ಮಾಡಿದ್ದಾರೆ.
Related









