ನ್ಯೂಡೆಲ್ಲಿ: ಕೊರೊನಾ ಸೋಂಕಿನಿಂದ ಆರ್ಥಿಕತೆ ಕುಸಿಗೊಂಡಿರುವ ನಡುವೆಯೂ ಕೇಂದ್ರ ಸರ್ಕಾರದ ಸಿ ಮತ್ತು ಡಿ ದರ್ಜೆ ನೌಕರರಿಗೆ ಬೋನಸ್ ನೀಡಲು ಸಚಿವ ಸಂಪುಟ ಸಭೆ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ತಿಳಿಸಿದ್ದಾರೆ.
ಬುಧವಾರ ತನ್ನ ನೌಕರರಿಗೆ 2019-2020ನೇ ಸಾಲಿನ ಬೋನಸ್ ಘೋಷಿಸಿದೆ. ಇದರ ಲಾಭವನ್ನು 30 ಲಕ್ಷ ಉದ್ಯೋಗಿಗಳು ಪಡೆಯಲಿದ್ದಾರೆ ಎಂದು ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯ ಬಳಿಕ ಸುದ್ದಿಗಾರರಿಗೆ ವಿವರಿಸಿದರು.
ಬೋನಸ್ ನ ಒಟ್ಟು 3,737 ಕೋಟಿ ರೂಪಾಯಿ ಆಗಿದ್ದು, ಕನಿಷ್ಠ 30 ಲಕ್ಷ ನಾನ್ ಗೆಜೆಟೆಡ್ ಉದ್ಯೋಗಿಗಳಿಗೆ ಇದರಿಂದ ಅನುಕೂಲವಾಗಲಿದೆ. ವಿಜಯ ದಶಮಿಗೆ ಮುಂಚೆ ಒಂದೇ ಸಲಕ್ಕೆ ಈ ಬೋನಸ್ ಮೊತ್ತವನ್ನು ವಿತರಣೆ ಮಾಡಲಾಗುತ್ತದೆ ಎಂದರು.
ಕೇಂದ್ರ ಸರ್ಕಾರದ ಈ ಬೋನಸ್ ನೀಡುವ ಕ್ರಮದಿಂದ ದೇಶದ ಆರ್ಥಿಕತೆಗೆ ಪುಷ್ಟಿ ಸಿಗುತ್ತದೆಂದು ಜಾವಡೇಕರ್ ನಿರೀಕ್ಷಿಸಿದ್ದಾರೆ. ಮುಂಬರುವ ಹಬ್ಬದ ಸೀಸನ್ನಲ್ಲಿ ಜನರಿಗೆ ಕೊಳ್ಳುವ ಶಕ್ತಿ ಹೆಚ್ಚಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.