NEWSನಮ್ಮರಾಜ್ಯಸಿನಿಪಥ

ಸರ್ಜಾ ಮನೆಗೆ ಇಂದು ಎಂಟ್ರಿಕೊಟ್ಟ ಜೂನಿಯರ್ ಚಿರು: ಸರಿಯಿತು ಕಾರ್ಮೋಡ

ವಿಜಯಪಥ ಸಮಗ್ರ ಸುದ್ದಿ

ಬೆಂಗಳೂರು: ಇಂದು ಸರ್ಜಾ ಮನೆಯಲ್ಲಿ ಸಂತಸವೋ ಸಂತಸ. ಕಾರಣ ಕುಟುಂಬಕ್ಕೆ ಜೂನಿಯರ್ ಚಿರು ಸರ್ಜಾ ಎಂಟ್ರಿಯಾಗಿದೆ. ಹೌದು! ಮೇಘನಾ ರಾಜ್ ಸರ್ಜಾ ಇಂದು (ಗುರುವಾರ) ಬೆಳಗ್ಗೆ ನಗರದ ಅಕ್ಷ ಆಸ್ಪತ್ರೆಯಲ್ಲಿ 11 ಗಂಟೆ 7 ನಿಮಿಷಕ್ಕೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

ನವರಾತ್ರಿ ಹಬ್ಬದ ಸಂದರ್ಭದಲ್ಲಿ ಮಗು ಜನಿಸಿದೆ. ಇದು ಚಿರು ಅಭಿಮಾನಿಗಳು ಕುಣಿದು ಕುಪ್ಪಳಿಸುವಂತೆ ಮಾಡಿದೆ. ನಮ್ಮ ಚಿರು ಅಣ್ಣ ಎಲ್ಲೂ ಹೋಗಿಲ್ಲ, ಎಲ್ಲರ ಜತೆಯಲ್ಲಿದ್ದಾರೆ, ಮಗುವಿನ ರೂಪದಲ್ಲಿ ಮತ್ತೆ ಬಂದಿದ್ದಾರೆ ಎಂದು ಸಂಭ್ರಮದಿಂದ ಆಸ್ಪತ್ರೆಯ ಹೊರಗೆ ಪಟಾಕಿಸಿಡಿಸಿ, ಸಿಹಿ ಹಂಚಿ ಸಂಭ್ರಮವನ್ನು ವ್ಯಕ್ತಪಡಿಸಿದ್ದಾರೆ ಅಭಿಮಾನಿಗಳು.

2017ರ ಅಕ್ಟೋಬರ್ 22ರಂದು ಮೇಘನಾ ರಾಜ್ ಮತ್ತು ಚಿರಂಜೀವಿ ಸರ್ಜಾ ಅವರ ಮದುವೆ ನಿಶ್ಚಿತಾರ್ಥ ನೆರವೇರಿತ್ತು. ಇದೀಗ ಅದೇ ದಿನಾಂಕದಂದು ಅವರ ಪ್ರೇಮದ ಕಾಣಿಕೆ ಮಗು ಜನನವಾಗಿದ್ದು ಕಾಕತಾಳೀಯ ಎನ್ನಬಹುದು. ಆ.17ರಂದು ಚಿರಂಜೀವಿ ಸರ್ಜಾ ಹುಟ್ಟುಹಬ್ಬವಾಗಿತ್ತು. ಅಂದು ಮಗು ಜನನವಾಗಲಿದೆ, ಅವಳಿ ಮಗುವಾಗಲಿದೆ ಎಂಬಿತ್ಯಾದಿ ಸುದ್ದಿಗಳು ಹರಿದಾಡಿದವು.

ಕಳೆದ ಜೂನ್ 7ರಂದು ಚಿರಂಜೀವಿ ಸರ್ಜಾ ಹಠಾತ್ತಾಗಿ ಹೃದಯಾಘಾತದಿಂದ ನಿಧನ ಹೊಂದಿ ಕುಟುಂಬ ವರ್ಗ, ಅಪಾರ ಬಂಧು-ಮಿತ್ರರು, ಅಭಿಮಾನಿಗಳು ದುಃಖ ಸಾಗರದಲ್ಲಿ ಮುಳುಗುವಂತೆ ಮಾಡಿದ್ದರು. ಆಗ ಮೇಘನಾ ರಾಜ್ 4 ತಿಂಗಳ ಗರ್ಭಿಣಿ. 5 ತಿಂಗಳ ನಂತರ ಇದೀಗ ಜೂನಿಯರ್ ಚಿರು ಆಗಮನ ಎಲ್ಲ ದುಃಖವನ್ನು ಮರೆಸಿದೆ.

ಮೇಘನಾ ರಾಜ್ ತಂದೆ ತಾಯಿ ಸುಂದರ್ ರಾಜ್ ಮತ್ತು ಪ್ರಮೀಳಾ ಜೋಷಾಯ್ ಸುದ್ದಿಗಾರರೊಂದಿಗೆ ಮಾತನಾಡಿ, ಕತ್ತಲೆಯ ದುಃಖದ ಕಾರ್ಮೋಡ ಸರಿದು ನಮ್ಮ ಕುಟುಂಬಕ್ಕೆ ನವರಾತ್ರಿಯ ಶುಭ ಸಂದರ್ಭದಲ್ಲಿ ಖುಷಿ ತಂದಿದೆ. ಮಗು ಚಿರುಥರಾನೇ ಇದ್ದಾನೆ. ಇಡೀ ಕರ್ನಾಟಕದ, ಕನ್ನಡಿಗರ ಹಾರೈಕೆ ನಮ್ಮ ಮೇಲಿದೆ, ನಮ್ಮ ಕಷ್ಟದ ಸಂದರ್ಭದಲ್ಲಿ ಎಲ್ಲರೂ ನಮ್ಮ ಜತೆಗಿದ್ದು ಹಾರೈಸಿದ್ದಾರೆ, ಅವರಿಗೆ ಧನ್ಯವಾದಗಳು ಎಂದು ಆನಂದ ಭಾಷ್ಪದೊಂದಿಗೆ ಇಂದಿನ ಖುಷಿ ಹಂಚಿಕೊಂಡರು.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...