ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕು ನಿಗಮಗಳ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಿ ಸರ್ಕಾರಿ ಸೌಲಭ್ಯಗಳನ್ನು ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟ ನವೆಂಬರ್ 10ರಂದು ಪ್ರಧಾನಮಂತ್ರಿಗಳಿಗೆ ಪತ್ರ ಚಳವಳಿಯನ್ನು ಹಮ್ಮಿಕೊಂಡಿದೆ.
ರಾಜ್ಯದ ಎಲ್ಲಾ ಸರ್ಕಾರಿ ಇಲಾಖೆಗಳ ಮತ್ತು ಅನೇಕ ನಿಗಮ-ಮಂಡಳಿಗಳ ನೌಕರರು ಕೊರೊನಾದ ಇಂತಹ ತುರ್ತುಪರಿಸ್ಥಿತಿಯ ಸಮಯದಲ್ಲಿ ಸಕಾಲದಲ್ಲಿ ಸರ್ಕಾರಿ ವೇತನದ ಜೊತೆ ಸರ್ಕಾರದ ಹಲವು ಸವಲತ್ತುಗಳನ್ನು ಪಡೆಯುತ್ತಿದ್ದಾರೆ. ಸಾರಿಗೆ ನೌಕರರ ರೀತಿಯಲ್ಲಿ ಬೇರೆ ಇಲಾಖೆ ಮತ್ತು ನಿಗಮ ಮಂಡಳಿಯ ನೌಕರರು ಅನ್ಯಾಯಕ್ಕೆ ಒಳಗಾಗಿಲ್ಲ. ಯಾವ ದೃಷ್ಟಿಕೋನದಿಂದ ನೋಡಿದರೂ ಸಾರಿಗೆ ಸಂಸ್ಥೆಯ ನೌಕರರಿಗೆ ಅನ್ಯಾಯವಾಗುತ್ತಿದೆ.
ಬೆಳಗ್ಗೆ 6 ಗಂಟೆಗೆ ಡಿಪೋಗಳಿಗೆ ಹೋಗಬೇಕು. ರಾತ್ರಿ 8-9ಗಂಟೆಗೆ ಮನೆ ಸೇರಬೇಕು. ಇಂಥ ಪರಿಸ್ಥಿತಿ ನಿರ್ಮಾಣವಾಗಿದ್ದು, ನಾವು ಯಾರಿಗೂ ಹೇಳಿಕೊಳ್ಳಲಾದ ಯಾತನೆಯನ್ನು ಅನುಭವಿಸುತ್ತಿದ್ದೇವೆ. ಹಾಗಾಗಿ ಎಲ್ಲಾ ನೌಕರರು ಒಗ್ಗಟ್ಟಾಗಿ ಹೋರಾಟಕ್ಕೆ ಕೈ ಜೋಡಿಸಿ ನಮ್ಮ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದು ಒಕ್ಕೂಟ ಕರೆ ನೀಡಿದೆ.
ಯಾವ ದೃಷ್ಟಿಕೋನದಿಂದ ನೋಡಿದರೂ ಸಾರಿಗೆ ಸಂಸ್ಥೆಯ ನೌಕರರಿಗೆ ಅನ್ಯಾವಾಗುತ್ತಿದ್ದು, ಕಷ್ಟಗಳನ್ನು ಅನುಭವಿಸಿದ್ದು ಸಾಕು. ನಷ್ಟ ಮಾಡಿಕೊಂಡಿದ್ದು ಸಾಕು. ಈಗಲಾದರೂ ಬನ್ನಿ ಮತ್ತೆ ಹೋರಾಟ ಪ್ರಾರಂಭಿಸೋಣ ಎಂದು ಹೇಳಿದೆ.
ಕೆಎಸ್‌ಆರ್‌ಟಿ, ಎನ್‌ಡಬ್ಲ್ಯುಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿ ಮತ್ತು ಬಿಎಂಟಿಸಿ ನೌಕರರನ್ನು ಸರ್ಕಾರಿ ನೌಕರರು ಎಂದು ಘೋಷಿಸಿ ಸರ್ಕಾರಿ ಸವಲತ್ತು ನೀಡುವಲ್ಲಿ ಸರ್ಕಾರ ತಾರತಮ್ಯ ಧೋರಣೆ ಅನುಸರಿಸುತ್ತಿದೆ. ಹೀಗಾಗಿ ನಮಗೆ ಹೋರಾಟ ಅನಿವಾರ್ಯವಾಗಿದೆ ಎಂದು ತಿಳಿಸಿದೆ.
ಯಾವತ್ತು ಏನು ಹೋರಾಟ?
- ನವಂಬರ್ 10ರಂದು ಪ್ರಧಾನಮಂತ್ರಿಗಳಿಗೆ ಪತ್ರ ಚಳುವಳಿ,
- ಡಿಸೆಂಬರ್ 1ರಂದು ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ತೋರುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಪ್ರಧಾನಮಂತ್ರಿಗಳಿಗೆ ಬೃಹತ್ ಟ್ವಿಟ್ಟರ್ ಅಭಿಯಾನ.
- ಡಿಸೆಂಬರ್ 1ರಂದು ರಾಜ್ಯ ರಸ್ತೆ ಸಾರಿಗೆ ನೌಕರರಿಗೆ ತೋರುತ್ತಿರುವ ಮಲತಾಯಿ ಧೋರಣೆ ಖಂಡಿಸಿ ಕಪ್ಪುಪಟ್ಟಿ ಧರಿಸಿ ಸೇವೆ.
ಈ ಚಳವಳಿಯನ್ನು ಪ್ರತಿಯೊಬ್ಬ ನೌಕರರು ಬೆಂಬಬಲಿಸಿ ಭಾಗವಹಿಸಬೇಕು ಎಂದು ಒಕ್ಕೂಟ ಮನವಿ ಮಾಡಿದೆ.