ಬೆಂಗಳೂರು: ಈಗಿರುವ ವಾತಾವರಣದಲ್ಲಿ ರಾಜ್ಯ, ದೇಶದಲ್ಲಿ ನಿಷ್ಪಕ್ಷಪಾತವಾಗಿ ಚುನಾವಣೆ ನಡೆಸುವುದು ಅಸಾಧ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಹೇಳಿದ್ದಾರೆ.
ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆ ನಡೆಯುತ್ತಿರುವ ಎರಡು ಕ್ಷೇತ್ರದಲ್ಲಿ ನಮ್ಮ ಹೋರಾಟ ಮುಂದುವರಿಯಲಿದೆ. ಎರಡೂ ಕ್ಷೇತ್ರಗಳಲ್ಲಿ ಗೆಲ್ಲುವ ವಿಶ್ವಾಸವಿದೆ. ಪ್ರಜ್ವಲ್, ನಿಖಿಲ್, ಕುಮಾರಸ್ವಾಮಿ ನಾನು ಮತ್ತು ಪಕ್ಷದ ಎಲ್ಲ ಮುಖಂಡರು ಪ್ರಚಾರ ಮಾಡುತ್ತಿದ್ದೇವೆ. ತುಮಕೂರು ಜಿಲ್ಲೆಯಲ್ಲಿ ಕೆಲಸ ಮಾಡಲು ನಮಗೆ ಎನೂ ತೊಂದರೆ ಇಲ್ಲ. ಬೇರೆಯವರು ಹಣ ಖರ್ಚು ಮಾಡುವ ಬಗ್ಗೆ ನಾನು ಮಾತಾನಾಡುವುದಿಲ್ಲ.ಅಂತವರ ವಿರುದ್ಧ ಜನರೇ ತಿರ್ಮಾನ ಮಾಡುತ್ತಾರೆ ಎಂದು ಕಾಂಗ್ರೆಸ್ ಮತ್ತು ಬಿಜೆಪಿ ಅಭ್ಯರ್ಥಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಜೆಡಿಎಸ್ ಪಕ್ಷಕ್ಕೆ ರಾಜ್ಯದಲ್ಲಿ ಅಸ್ತಿತ್ವವೇ ಇರುವುದಿಲ್ಲವೆಂದು ಕೆಲವರು (ಸಿದ್ದರಾಮಯ್ಯ) ಹೇಳುತ್ತಿದ್ದಾರೆ. ಇಂಥ ಹೇಳಿಕೆ ನೀಡುವವರು ಪಕ್ಷದಲ್ಲಿದ್ದು ಅಧಿಕಾರ ಅನುಭವಿಸಿ ಹೋಗಿದ್ದಾರೆ. ಅಂತವರ ಹೇಳಿಕೆ ಕೇಳಿ ಸ್ವಲ್ಪ ಬೇಸರ ಆಯ್ತು. ಇನ್ನು ಮೈತ್ರಿ ಸರ್ಕಾರವನ್ನು ಯಾರು ಪತನಗೊಳಿಸಿದರು ಎಂಬುದು ಇಡಿ ರಾಜ್ಯಕ್ಕೆ ಗೊತ್ತಿದೆ.16 ಶಾಸಕರನ್ನು ಯಾರು ಮುಂಬೈಗೆ ಕಳಿಸಿದರು ಎಂಬುದನ್ನು ಅಲ್ಲಿಗೆ ಹೋದ ಶಾಸಕರೇ ಹೇಳಿದ್ದಾರೆ. ಕೆಲವರು ಮಾಧ್ಯಮಗಳ ಇಂಟರ್ ವ್ಯೂ ಅಲ್ಲಿ ಎಲ್ಲಾ ವಿಷಯ ಹೇಳಿದ್ದಾರೆ ಎಂದು ಪರೋ ಕ್ಷವಾಗಿ ಸಿದ್ದರಾಮಯ್ಯ ಅವರ ಬಗ್ಗೆ ಪರೋಕ್ಷವಾಗಿ ತಿಳಿಸಿದರು.
ಅಂದು ಕಾಂಗ್ರೆಸ್ ಹೈಕಮಾಂಡ್ ಅವರ ಒತ್ತಾಯದ ಮೇರೆಗೆ ಕುಮಾರಸ್ವಾಮಿ ಅವರನ್ನು ಮೈತ್ರಿ ಸರ್ಕಾರ ಮಾಡಲು ಹೇಳಿದೆ. ಆದರೆ ಕಾಂಗ್ರೆಸ್ ನಾಯಕರ ಅಸಹಕಾರದಿಂದ ಸರ್ಕಾರ ಪತನವಾಗಿದೆ ಎಂದು ಸರ್ಕಾರದ ಪತನದ ಘಟನೆಯನ್ನು ಸ್ಮರಿಸಿದರು.
ಶಿರಾದಲ್ಲಿ ಮುಖ್ಯಮಂತ್ರಿ ಪುತ್ರ ವಿಜಯೇಂದ್ರ ಚುನಾವಣಾ ತಂತ್ರ ವಿಚಾರದ ಪ್ರಸ್ತಾಪಿಸಿ, ಅವರು ಚುನಾವಣೆ ನಡೆಸೋ ಬಗ್ಗೆ ನನಗೆ ಗೊತ್ತಿದೆ. ಅವರು ಯಾವ ರೀತಿ ಚುನಾವಣೆ ನಡೆಸ್ತಾರೆ ಎಂಬ ಬಗ್ಗೆ ವರದಿ ಕೂಡ ಇದೆ. ಪೊಲೀಸರ ಮೂಲಕ ದುಡ್ಡು ಹಂಚುತ್ತಿದ್ದಾರೆ ಎಂದು ಕೆಲವರು ಆರೋಪಿಸುತ್ತಿದ್ದಾರೆ. ಈ ಬಗ್ಗೆ ಕೆಲವರು ದೂರು ಕೊಟ್ರು ಯಾವುದೇ ಕ್ರಮ ಜರುಗುಸುತ್ತಿಲ್ಲ. ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೀನಿ. ಇದರ ಬಗ್ಗೆ ಮಾತನಾಡುತ್ತಾ ಕೂತರೆ ಯಾವುದೇ ಉಪಯೋಗವಿಲ್ಲ. ನೀವೇ ಹೇಳಿ ಈ ರಾಜ್ಯದಲ್ಲಿ ನಿಷ್ಪಕ್ಷಪಾತವಾದ ಚುನಾ ವಣೆ ನಡೆಸಲು ಸಾಧ್ಯವೆ? ಯಾಕೆಂದರೆ ರಾಷ್ಟ್ರದಲ್ಲೇ ಆ ರೀತಿ ಆಗಿ ಹೋಗಿದೆ ಏನ್ ಮಾಡೋದು ? ಎಂದು ತಮ್ಮ ಅಸಹಾಯಕತೆ ವ್ಯಕ್ತಪಡಿಸಿದರು.
4 ವಿಧಾನಪರಿಷತ್ ಚುನಾವಣೆಯಲ್ಲಿ ಪ್ರಾಮಾಣಿಕವಾಗಿ ನಮ್ಮ ಹೋರಾಟ ಮಾಡಿದ್ದೇವೆ. ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗೆ ನಮ್ಮ ಬೆಂಬಲ ನೀಡಿದ್ದೇವೆ. ಚುನಾವಣಾ ಉಸ್ತುವಾರಿಯನ್ನು ವಿಧಾನ ಪರಿಷ ತ್ ಸದಸ್ಯರ ಬಸವರಾಜ ಹೊರಟ್ಟಿ ಅವರಿಗೆ ವಹಿಸಲಾಗಿದೆ. ನಾನು ಮತ್ತೊಂದು ಸುತ್ತು ಶಿರಾದಲ್ಲಿ ಪ್ರಚಾರ ಮಾಡ್ತೇನೆ. ನಾವು ಮಾಡ್ತಿರೋ ಹೋರಾಟ ಯಾರ ವಿರುದ್ಧದ ಚಾಲೆಂಜ್ ಗೆ ಅಲ್ಲ. ಈ ರಾಜ್ಯದ ಏಳಿಗೆಗಾಗಿ ಕೊನೆವರೆಗೂ ಹೋರಾಡುತ್ತೇನೆ ಎಂದರು.
ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನೆರೆ ಹಾವಳಿಗೆ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದೇನೆ. ರಾಜಕಾಲುವೆಗಳು ಒತ್ತುವರಿಯಾಗದಂತೆ ಕೆರೆಗಳ ಅಭಿವೃದ್ಧಿಗೆ ಒತ್ತು ಕೊಟ್ಟಿದ್ದೇವೆ. ಇಂದು ಎರಡು ರಾಷ್ಟೀಯ ಪಕ್ಷಗಳು ಒಬ್ಬರ ಮೇಲೊಬ್ಬರು ಟೀಕೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವನ್ನು ನೋಡಿದರೆ ಮನಸ್ಸಿಗೆ ತುಂಬಾ ನೋವುಂಟಾಗುತ್ತದೆ. ಜನರ ಸಮಸ್ಯೆ ಬಗ್ಗೆ ಇವರುಗಳಿಗೆ ಕಿಂಚಿತ್ತೂ ಕಾಳಜಿ ಇಲ್ಲ. ನಾನು ಈಗ ಇದರ ಬಗ್ಗೆ ಮಾತನಾಡೋದಿ ಲ್ಲ ಜನರೇ ತೀರ್ಮಾನ ಮಾಡಬೇಕಿದೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.