ಕೊಳ್ಳೇಗಾಲ: ಎಳನೀರು ಕೀಳುವ ವೇಳೆ ಆಯತಪ್ಪಿ ತೆಂಗಿನಮರದಿಂದ ಬಿದ್ದು 17 ವರ್ಷದ ಬಾಲಯುವಕ ಮೃತಪಟ್ಟಿರುವ ಘಟನೆ ಸತ್ತೇಗಾಲದ ತೆಂಗಿನ ತೋಟವೊಂದರಲ್ಲಿ ನಡೆದಿದೆ.
ಮಳ್ಳವಳ್ಳಿ ತಾಲೂಕಿನ ಕ್ಯಾತನಹಳ್ಳಿಯ ಬಾಲಕನೆ ಮೃತಪಟ್ಟಿರುವುದು. ಈತ ಎಳೆನೀರು ಮಾರುತ್ತಿದ್ದು, ಸತ್ತೇಗಾಲ ಕೃಷ್ಣ ಎಂಬುವರ ಜತೆ ಕೂಲಿ ಕೆಲಸ ಮಾಡುತ್ತಿದ್ದ. ಇಂದು ಮುಂಜಾನೆ ಗುರುಸ್ವಾಮಿ ಎಂಬುವರಿಗೆ ಸೇರಿದ ತೆಂಗಿನ ತೋಟದಲ್ಲಿ ಎಳೆನೀರು ಕೀಳಲು ಮರ ಹತ್ತಿದಾಗ ಆಯಾತಪ್ಪಿ ಕೆಳಗೆ ಬಿದ್ದು ಅಸುನೀಗಿದ್ದಾನೆ.
ಮೃತಪಟ್ಟಿರುವುದನ್ನು ಮರೆಮಾಚಲು ಶವವನ್ನು ಕಾವೇರಿ ಪೇಪರ್ ಮಿಲ್ಗೆ ಸೇರಿದ ತೆಂಗಿನ ತೋಟಕ್ಕೆ ಸ್ಥಳಾಂತರಿಸಿದ್ದಾರೆ. ಈ ಸಂಬಂಧ ತೋಟದ ಮಾಲೀಕ ಗುರುಸ್ವಾಮಿ ಹಾಗೂ ಶವ ಸ್ಥಳಾಂತರಿಸಿದ ಕೃಷ್ಣನ ವಿರುದ್ಧ ದೂರು ದಾಖಲಿಸಲಾಗಿದೆ. ಈಗಾಗಲೇ ಕೃಷ್ಣ ಎಂಬುವನನ್ನು ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.