ಮೇ 11ರಂದು KSRTC ನೌಕರರಿಗೆ 11 ತಿಂಗಳು- KKRTC ನೌಕರರಿಗೆ 12 ತಿಂಗಳುಗಳ ವೇತನ ಹಿಂಬಾಕಿ ಪಾವತಿಗೆ ಆದೇಶ
ಬಿಎಂಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮದಿಂದ ಎಷ್ಟು ತಿಂಗಳುಗಳ ಹಿಂಬಾಕಿ ಪಾವತಿಸಬೇಕು ಎಂಬ ಬಗ್ಗೆ ಅಧಿಕೃತ ಆದೇಶವನ್ನು ಇನ್ನೂ ಹೊರಡಿಸಿಲ್ಲ

ಬೆಂಗಳೂರು/ ಕಲಬುರಗಿ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ನೌಕರರಿಗೆ ವೇತನ ಪರಿಷ್ಕರಣೆ ಹಿಂಬಾಕಿ ಪಾವತಿಸಲು ಅಧಿಕೃತವಾಗಿ ಆದೇಶ ಹೊರಡಿಸಲಾಗಿದೆ.

ಇದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳು/ ನೌಕರರಿಗೆ ನಿನ್ನೆ ವಿಜಯಪಥದಲ್ಲಿ ವರದಿ ಮಾಡಿದಂತೆ 11 ತಿಂಗಳ ವೇತನ ಹಿಂಬಾಕಿ ಪಾವತಿ ಮಾಡಲು ನಿಗಮದ ವ್ಯವಸ್ಥಾಪಕ ನಿರ್ದೇಶಕರು ಶುಕ್ರವಾರ ಆದೇಶ ಹೊರಡಿಸಿದ್ದಾರೆ.
ಅದರಂತೆ ಇಂದ ಮೇ 9ರ ಶನಿವಾರ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಮುಖ್ಯ ಲೆಕ್ಕಾಧಿಕಾರಿಗಳು 12 ತಿಂಗಳ ವೇತನ ಹಿಂಬಾಕಿ ಪಾವತಿಸಲು ಸೂಕ್ತಾಧಿಕಾರಿಗಳ ಆದೇಶದ ಮೇರೆಗೆ ಎಲ್ಲ ವಿಭಾಗಗಳಿಗೂ ಸೂಚನೆ ನೀಡಿದ್ದಾರೆ.
ಹೀಗಾಗಿ ಕೆಎಸ್‌ಆರ್‌ಟಿಸಿ ಹಾಗೂ ಕೆಕೆಆರ್‌ಟಿಸಿ ಎಲ್ಲ ಹಿರಿಯ/ ವಿಭಾಗೀಯ ನಿಯಂತ್ರಣಾಧಿಕಾರಿಗಳು, ಕಾರ್ಯ ವ್ಯವಸ್ಥಾಪಕರು, ಪ್ರಾದೇಶಿಕ ಕಾರ್ಯಾಗಾರ, ಕಾರ್ಯ ನಿರ್ವಾಹಕ ಅಭಿಯಂತರರಿಗೆ ಈಗಾಗಲೇ ಆದೇಶ ಮಾಡಲಾಗಿದೆ. ಮೇ 11ರಂದು ಎಲ್ಲ ಅಧಿಕಾರಿಗಳು/ ನೌಕರರ ಬ್ಯಾಂಕ್ ಖಾತೆಗೆ ಹಣ ಜಮೆ ಆಗಲಿದೆ.
ಕೆಎಸ್‌ಆರ್‌ಟಿಸಿ ಆದೇಶ: ಈ ವಿಷಯಕ್ಕೆ ಸಂಬಂಧಿಸಿದಂತೆ. ಸರ್ಕಾರದ ಆದೇಶ ಸಂಖ್ಯೆ 12 ಟಿಸಿಬಿ 2023, ಬೆಂಗಳೂರು ದಿನಾಂಕ 17.03.2023 ರಲ್ಲಿ ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆಗಳ ಸಿಬ್ಬಂದಿ/ ಅಧಿಕಾರಿಗಳಿಗೆ (ಪೂರ್ವ ಕಿಂಕೋ ಸಿಬ್ಬಂದಿ/ ಅಧಿಕಾರಿಗಳೂ ಸೇರಿದಂತೆ ದಿನಾಂಕ 31.12.2019 ರಂದು ಪಡೆಯುತ್ತಿದ್ದ ಮೂಲವೇತನವನ್ನು ಶೇ.15 ರಷ್ಟು ಹೆಚ್ಚಿಸಿ ದಿನಾಂಕ 01.03.2023 ರಿಂದ ವೇತನ ಪರಿಷ್ಕರಿಸಿ ಜಾರಿಗೊಳಿಸಲು ಅನುಮೋದಿಸಿರುವಂತೆ ನಿಗಮದಿಂದ ಸುತ್ತೋಲೆ ಹೊರಡಿಸಿ ಪರಿಷ್ಕರಿಸಲು ಆದೇಶಿಸಲಾಗಿದೆ.
ಮುಂದುವರೆದು ಸರ್ಕಾರದ ಆದೇಶ ಮೂರರಲ್ಲಿ ದಿನಾಂಕ 01.01.2021 ರಿಂದ 28.02.2023 ರವರೆಗಿನ 26 ತಿಂಗಳ ಹಿಂಬಾಕಿಯನ್ನು ಪಾವತಿಸಲು ಅನುಮೋದನೆ ನೀಡಿರುವಂತೆ ನಿಗಮದ ಎಲ್ಲ ಅರ್ಹ ಸಿಬ್ಬಂದಿ/ ಅಧಿಕಾರಿಗಳಿಗೆ (ಸೇವಾ ವಿಮುಕ್ತಿ ಹೊಂದಿದ ಸಿಬ್ಬಂದಿ/ ಅಧಿಕಾರಿಗಳು ಒಳಗೊಂಡಂತೆ) ದಿನಾಂಕ 01.01.2021 ರಿಂದ 30.11.2021 ರವರೆಗಿನ ಒಟ್ಟು 11 ತಿಂಗಳುಗಳ ಹಿಂಬಾಕಿಯನ್ನು ಮೇ 11ರಂದು ಪಾವತಿಸಲು ಅಗತ್ಯ ಕ್ರಮಕೈಗೊಳ್ಳಲು ಎಂಡಿ ಸೂಚನೆ ನೀಡಿದ್ದಾರೆ.
ಕೆಕೆಆರ್‌ಟಿಸಿ ಸಂಸ್ಥೆಯ ಆದೇಶ: 01.01.2021 ರಿಂದ 28.02.2023 ರವರೆಗೆ ವೇತನ ಪರಷ್ಕರಣೆಯ 26 ತಿಂಗಳ ಹಿಂದಾಕಿ ಮೊತ್ತದಲ್ಲಿ ಮೊದಲ 12 ತಿಂಗಳ ಹಿಂಬಾಕಿ ಮೊತ್ತವನ್ನು ಪಾವತಿಸಲು ಇಂದು ಸೂಕ್ತಾಧಿಕಾರಿಯಾದ ವ್ಯವಸ್ಥಾಪಕ ನಿರ್ದೇಶಕರು ಅನುಮೋದನೆ ನೀಡಿದ್ದು ಅದರನ್ವಯ ಆದೇಶ ಹೊರಡಿಸಲಾಗಿದೆ.
01.01.2021 ರಿಂದ 28.02.2023 ವೇತನ ಪರಷ್ಕರಣೆಯ 26 ತಿಂಗಳ ಹಿಂಬಾಕಿ ಮೊತ್ತದ ನಿಧಿಯನ್ನು ಬಿಡುಗಡೆಗೊಳಿಸುವ ಕುರಿತು ಉಲ್ಲೇಖ 1 ರನ್ವಯ ಕರ್ನಾಟಕ ಸರ್ಕಾರವು ಆದೇಶ ಹೋರಡಿಸಿದೆ.
ಅದರಂತೆ ಉಲ್ಲೇಖ 2ರಲ್ಲಿ ಸರ್ಕಾರವು ಮೊದಲ ಕಂತಿನಲ್ಲಿ ಕೆಕೆಆರ್‌ಟಿಸಿ ನಿಗಮಕ್ಕೆ 81.91 ಕೋಟಿ ರೂ. ಬಿಡುಗಡೆ ಮಾಡಿ ಆದೇಶಿಸಿದ್ದು ಅದರನ್ವಯ ನಿಗಮದಲ್ಲಿ 01.01.2021 ರಿಂದ 31.12.2021 ವರೆಗೆ ಒಟ್ಟು 12 ತಿಂಗಳ ಹಿಂಬಾಕಿ ಮೊತ್ತವನ್ನು ಮೇ 11ರಂದು ಎಲ್ಲ ಅರ್ಹ ಅಧಿಕಾರಿ/ ನೌಕರರಿಗೆ (ನಿವೃತ್ತ ಅಧಿಕಾರಿ/ನೌಕರರು ಒಳಗೊಂಡಂತೆ) ಶಾಸನಬದ್ದ ಕಡಿತಗಳನ್ನು ಕಡಿತಗೊಳಿಸಿ ಪಾವತಿಸಲು ಉಲ್ಲೇಖ 03 ರನ್ವಯ ವ್ಯವಸ್ಥಾಪಕ ನಿರ್ದೇಶಕರವರು ಅನುಮೋದನೆ ನೀಡಿದ್ದಾರೆ. ಅದರಂತೆ ಹಿಂಬಾಕಿ ಪಾವತಿಯ ಕ್ರಮವಹಿಸಲು ಈ ಮೂಲಕ ತಿಳಿಸಲಾಗಿದೆ ಎಂದು ಮುಖ್ಯಲೆಕ್ಕಾಧಿಕಾರಿ ಸೂಚನೆ ನೀಡಿದ್ದಾರೆ.
ಇನ್ನು ಬಿಎಂಟಿಸಿ ಹಾಗೂ ಎನ್‌ಡಬ್ಲ್ಯುಕೆಆರ್‌ಟಿಸಿ ನಿಗಮದಿಂದ ಎಷ್ಟು ತಿಂಗಳುಗಳ ಹಿಂಬಾಕಿ ಪಾವತಿಸಬೇಕು ಎಂಬ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ ಆದರೆ ಇಂದು ಸಂಜೆಯೊಳಗೆ ಈ ಎರಡು ನಿಗಮಗಳು ಆದೇಶ ಹೊರಡಿಸಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Related









