NEWSದೇಶ-ವಿದೇಶನಮ್ಮರಾಜ್ಯ

“ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು” ಅವಕಾಶ ಇಲ್ಲ: ಭಾರತ ಸಂವಿಧಾನ

"ಸಂಸ್ಥೆಯ ಆರ್ಥಿಕ ಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಕನಿಷ್ಠ ವೇತನ, ಸಮಾನ ವೇತನ ನಿರಾಕರಿಸುವಂತಿಲ್ಲ. ಆರ್ಥಿಕ ಅಸಮರ್ಥತೆ ನೆಪ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನದ ಆಶಯಕ್ಕೆ ಅದು ವಿರುದ್ಧ."

ವಿಜಯಪಥ ಸಮಗ್ರ ಸುದ್ದಿ

1. ಮೂಲಭೂತ ಹಕ್ಕುಗಳು – ಭಾಗ III
ಅನುಚ್ಛೇದ 14 – ಕಾನೂನಿನ ಮುಂದೆ ಸಮಾನತೆ

ಸರ್ಕಾರಿ ನೌಕರರಿಗೆ 7ನೇ ವೇತನ ಆಯೋಗ ಕೊಟ್ಟು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ನೌಕರನಿಗೆ ಮಾತ್ರ “ನಷ್ಟ” ಅಂತ ವೇತನ ಹೆಚ್ಚಳ ಮಾಡದೇ ಇರುವುದು ತಾರತಮ್ಯ. ಇದು ಭಾರತ ಸಂವಿಧಾನದ 14ನೇ ವಿಧಿ ಉಲ್ಲಂಘನೆ.

ಸುಪ್ರೀಂ ಕೋರ್ಟ್: Randhir Singh v/s Union of India (1982) – “ಸಮಾನ ಕೆಲಸಕ್ಕೆ ಸಮಾನ ವೇತನ ಸಾಂವಿಧಾನಿಕ ಹಕ್ಕು.”

ಅನುಚ್ಛೇದ 21 – ಜೀವಿಸುವ ಹಕ್ಕು
ಸುಪ್ರೀಂ ಕೋರ್ಟ್: Olga Tellis v/s BMC (1985) – “ಜೀವಿಸುವ ಹಕ್ಕು ಅಂದ್ರೆ ಕೇವಲ ಪ್ರಾಣ ಉಳಿಸಿಕೊಳ್ಳೋದು ಅಲ್ಲ. ಗೌರವಯುತವಾಗಿ ಬದುಕುವ ಹಕ್ಕು.”

ಅನುಚ್ಛೇದ 23 – ಬಲವಂತದ ದುಡಿಮೆ ನಿಷೇಧ: “ಅಗತ್ಯ ಸೇವೆ” ಅಂತ ಮುಷ್ಕರ ಹಕ್ಕು ಕಿತ್ತುಕೊಂಡು, ಅದೇ ಸಮಯಕ್ಕೆ ನ್ಯಾಯಯುತ ವೇತನ ಕೊಡದಿದ್ದರೆ ಅದು ಬಲವಂತದ ದುಡಿಮೆ. 23ನೇ ವಿಧಿ ಇದನ್ನು ನಿಷೇಧಿಸುತ್ತೆ.

2. ರಾಜ್ಯ ನೀತಿ ನಿರ್ದೇಶಕ ತತ್ವಗಳು – ಭಾಗ IV: ಇವು ನೇರವಾಗಿ ಕೋರ್ಟ್‌ನಲ್ಲಿ ಜಾರಿ ಮಾಡಿಸೋಕೆ ಆಗಲ್ಲ. ಆದ್ರೆ ಸರ್ಕಾರ ಕಾನೂನು ಮಾಡುವಾಗ ಪಾಲಿಸಲೇಬೇಕು ಅಂತ ಸಂವಿಧಾನವೇ ಹೇಳುತ್ತೆ.

ಅನುಚ್ಛೇದ 38(1): ಜನರ ಕಲ್ಯಾಣ ಉತ್ತೇಜಿಸುವ ಸಾಮಾಜಿಕ ವ್ಯವಸ್ಥೆ ರೂಪಿಸಬೇಕು.
ಅನುಚ್ಛೇದ 39(d): ಪುರುಷರು ಮತ್ತು ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ.
ಅನುಚ್ಛೇದ 41: ಕೆಲಸ ಮಾಡುವ ಹಕ್ಕು, ನ್ಯಾಯಯುತ ಕೆಲಸದ ಪರಿಸ್ಥಿತಿ.
ಅನುಚ್ಛೇದ 43: ಎಲ್ಲ ಕಾರ್ಮಿಕರಿಗೆ ಜೀವನ ವೇತನ, ಯೋಗ್ಯ ಜೀವನಮಟ್ಟ.

* ಸಾರಿಗೆ ನಿಗಮ “ನಷ್ಟದಲ್ಲಿದೆ” ಅಂತ ಹೇಳಿ 43ನೇ ವಿಧಿಯನ್ನು ಗಾಳಿಗೆ ತೂರುವಂತಿಲ್ಲ. ನಷ್ಟ ಸರಿದೂಗಿಸುವುದು ಸರ್ಕಾರದ ಜವಾಬ್ದಾರಿ, ನೌಕರನದ್ದಲ್ಲ.

3. ಸಂವಿಧಾನ “ನಷ್ಟ” ಅಂತ ಎಲ್ಲಾದರೂ ಹೇಳಿದೆಯಾ?: ಇಲ್ಲ. ಸಂವಿಧಾನದ ಯಾವ ಮೂಲೆಯಲ್ಲೂ “ಸಾರ್ವಜನಿಕ ಸೇವಾ ಇಲಾಖೆ ನಷ್ಟದಲ್ಲಿದ್ದರೆ ನೌಕರರಿಗೆ ಸಂಬಳ ಕೊಡಬೇಕಿಲ್ಲ” ಅಂತ ಬರೆದಿಲ್ಲ.

ಬದಲಾಗಿ ಅನುಚ್ಛೇದ 282 ಹೇಳುತ್ತೆ: “ರಾಜ್ಯ ಸರ್ಕಾರ ಸಾರ್ವಜನಿಕ ಉದ್ದೇಶಕ್ಕಾಗಿ ಹಣ ಮಂಜೂರು ಮಾಡಬಹುದು.” KSRTC ನಷ್ಟ ಭರಿಸುವುದು “ಸಾರ್ವಜನಿಕ ಉದ್ದೇಶ”. ಏಕೆಂದರೆ ಅದು 1 ಕೋಟಿ ಜನರಿಗೆ ದಿನನಿತ್ಯ ಸೇವೆ ಕೊಡುತ್ತೆ.

ಸುಪ್ರೀಂ ಕೋರ್ಟ್ ತೀರ್ಪು: State of Punjab v/s Jagjit Singh (2016): “ಸಂಸ್ಥೆಯ ಆರ್ಥಿಕ ಸ್ಥಿತಿ ಸರಿ ಇಲ್ಲ ಎಂಬ ಕಾರಣಕ್ಕೆ ಕನಿಷ್ಠ ವೇತನ, ಸಮಾನ ವೇತನ ನಿರಾಕರಿಸುವಂತಿಲ್ಲ. ಆರ್ಥಿಕ ಅಸಮರ್ಥತೆ ನೆಪ ಒಪ್ಪಲು ಸಾಧ್ಯವಿಲ್ಲ. ಏಕೆಂದರೆ ಸಂವಿಧಾನದ ಆಶಯಕ್ಕೆ ಅದು ವಿರುದ್ಧ.”

ಕರ್ನಾಟಕ ಹೈಕೋರ್ಟ್: KSRTC Employees Federation v/s State (2018): “KSRTC ನೌಕರರಿಗೆ ವೇತನ ಪರಿಷ್ಕರಣೆ ವಿಳಂಬ ಮಾಡುವುದು ಅನುಚ್ಛೇದ 21 ರ ಉಲ್ಲಂಘನೆ ಎಂದು ಹೇಳಿದೆ. ಈ ಬಗ್ಗೆ ಎಲ್ಲ ನೌಕರರ ಸಂಘಟನೆಗಳು ಅರಿತು ನಡೆದರೆ ನ್ಯಾಯ ಸಿಗಲಿದೆ. ಇಲ್ಲದಿದ್ದರೆ…!?

ವಿಶೇಷ ಸೂಚನೆ: ಇದು ಕೇವಲ ಕಾನೂನಿನ ಮಾಹಿತಿಗಾಗಿ.

Megha
the authorMegha

Leave a Reply

error: Content is protected !!
Latest news
KSRTC ನೌಕರರ ಸರಿಸಮಾನ ವೇತನ ವಿಚಾರ: ಮಠದ ಪರಮ ಭಕ್ತ ಸಿಎಂಗೆ ಸಲಹೆ ನೀಡಿ ಅಂತ ಅಜ್ಜಯ್ಯನವರಲ್ಲಿ ನಿವೇದಿಸಿಕೊಂಡ ಕೂಟ BMTC: ಎಲೆಕ್ಟ್ರಿಕ್‌ ಬಸ್‌ಗಳ ನಿರ್ವಾಹಕರು ಡ್ಯೂಟಿಗೆ ಹಾಜರಾದರೂ ರಜೆ ಪಡೆಯುವುದ ತಪ್ಪಿಸಿ- ಎಂಡಿಗೆ ಮನವಿ ಮಾಡಿದ ಶ್ರೀನ... ನಮ್ಮ ಪತ್ರಿಕೋದ್ಯಮದ ಮೂಲ ತತ್ವವೇ 'ಮೂಲಗಳ ಗೌಪ್ಯತೆ ಕಾಯ್ದುಕೊಳ್ಳುವುದು' ಕೇಂದ್ರ ಸಚಿವ ಸಂಪುಟ ಪುನರ್ರಚನೆ ಕಸರತ್ತು: 48 ಗಂಟೆಯೊಳಗೆ ಪ್ರಧಾನಿ ಮೋದಿ ಪಡೆಯಲ್ಲಿ ಆಗುತ್ತಾ ಭಾರಿ ಬದಲಾವಣೆ? ಉದ್ಯೋಗಾಕಾಂಕ್ಷಿಗಳಿಗೆ ಸಿಹಿ ಸುದ್ದಿ: 72,186 ಹುದ್ದೆಗಳ ನೇರ ನೇಮಕಾತಿ- 6 ತಿಂಗಳ ಡೆಡ್‌ಲೈನ್ ಇಟ್ಟ ರಾಜ್ಯ ಸರ್ಕಾರ ಬಿಡದಿ ಟೌನ್‌ಶಿಪ್ ವಿವಾದ: ಡಿಕೆಶಿ-ಎಚ್‌ಡಿಕೆ ನಡುವೆ ಮುಂದುವರಿದ ಸಮರ ವೆನೆಜುವೆಲಾ ಭೂಕಂಪ: ಮೃತರ ಸಂಖ್ಯೆ 588ಕ್ಕೆ ಏರಿಕೆ, 126 ವರ್ಷಗಳಲ್ಲೇ ಅತ್ಯಂತ ಭೀಕರ ಸಾವು ನೋವು ​ಮೆಟ್ರೋ ಪಿಲ್ಲರ್‌ಗೆ ಬೆಳಕಿನ ವ್ಯವಸ್ಥೆ ಕಾಮಗಾರಿ ವೇಳೆ ವಿದ್ಯುತ್ ತಂತಿ ತಗುಲಿ ಗುತ್ತಿಗೆ ಕಾರ್ಮಿಕ ಮೃತ ಬೀಜಿಂಗ್ ಗಗನಚುಂಬಿ ಕಟ್ಟಡಕ್ಕೆ ಅಪ್ಪಳಿಸಿದ ಲಘು ವಿಮಾನ: ತುಂಡುಗಳಾಗಿ ಬಿದ್ದ ವಿಮಾನ- ಭೀಕರ ದುರಂತದ ವಿಡಿಯೋ ವೈರಲ್ ಪ್ರಾಮಾಣಿಕತೆಗೆ ಅಂಬಾಸೆಡರ್‌ ಈ 75 ವರ್ಷದ ಪತ್ರಿಕಾ ವಿತರಕ ಸುಬ್ರಮಣಿ: ರಾಜಾಜಿನಗರ ಶಾಸಕ ಸುರೇಶ್‌ ಕುಮಾರ್‌ ಶ್ಲಾಘನೆ