NEWSನಮ್ಮಜಿಲ್ಲೆನಮ್ಮರಾಜ್ಯ

NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ!

ನೌಕರರಿಗೆ 01.01.2021ರಿಂದ 30.11.2021 ರವರೆಗಿನ ಅಂದರೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮೇ 11ರಂದು ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಬ್ಯಾಂಕ್‌ಗೆ ಜಮೆ ಆಗಿರುವುದು ಏಪ್ರಿಲ್‌ 2021ರಿಂದ ನವೆಂಬರ್‌ 2021ರವರೆಗೆ ಎಂದು ತೋರಿಸುತ್ತಿದೆ. ಅಂದರೆ ಕೇವಲ 8 ತಿಂಗಳ ಹಿಂಬಾಕಿ ಮಾತ್ರ ಪಾವತಿಯಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮುಖ್ಯಲೆಕ್ಕಾಧಿಕಾರಿಗಳು ಸ್ಪಷ್ಟನೆ ನೀಡಬೇಕು

ವಿಜಯಪಥ ಸಮಗ್ರ ಸುದ್ದಿ

ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಹಾಲಿ ಸೇವೆಯಲ್ಲಿರುವ ನೌಕರರಿಗೆ 11 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿಯನ್ನು ಮೇ 11ರಂದು ಪಾವತಿಸಲು ಹಾಗೂ ನಿವೃತ್ತ ನೌಕರರಿಗೆ ಮೇ 15ರಂದು ಪಾವತಿಸಲು ನಿಗಮದ ಮುಖ್ಯಲೆಕ್ಕಾಧಿಕಾರಿ ಅಧಿಕೃತವಾಗಿ ಆದೇಶ ಹೊರಡಿಸಿ ಅದರಂತೆ ಬ್ಯಾಂಕ್‌ ಖಾತೆಗೆ ಹಣ ಜಮಾ ಆಗಿದೆ.

ಆದರೆ, ನೌಕರರಿಗೆ 11 ತಿಂಗಳ ಹಿಂಬಾಕಿ ಪಾವತಿಯಾಗುತ್ತದೆ ಎಂದು ಆದೇಶದಲ್ಲಿ ಸ್ಪಷ್ಟವಾಗಿ ತಿಳಿಸಿದ್ದು, ಈಗ ಏಪ್ರಿಲ್‌ 2021ರಿಂದ ನವೆಂಬರ್‌ 2021ರ ವರೆಗಿನ ಹಿಂಬಾಕಿ ಕೊಡಲಾಗಿದೆ ಎಂದು ಬ್ಯಾಂಕ್‌ ಖಾತೆಗೆ ಜಮೆ ಆಗಿರುವ ಬಗ್ಗೆ ಪಾಸ್‌ ಬುಕ್‌ನಲ್ಲಿ ನಮೂದಾಗಿದೆ. ಇದರಿಂದ ನೌಕರರು ಗೊಂಲಕ್ಕೆ ಒಳಗಾಗಿದ್ದು ನಮಗೆ ಎಷ್ಟು ತಿಂಗಳ ಹಿಂಬಾಕಿ ಹಾಕಿದ್ದೀರಾ ಎಂದು ಕೇಳುತ್ತಿದ್ದಾರೆ.

ಆದರೆ, ಲೆಕ್ಕ ಶಾಖೆಯ ಅಧಿಕಾರಿಗಳು ನೌಕರರಿಗೆ ಸಮಂಜಸವಾದ ಉತ್ತರ ನೀಡುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದು ವಿವರವಾದ ಒಂದು ಲೆಕ್ಕವನ್ನೊಳಗೊಂಡ ಟಿಪ್ಪಣಿ ಕೊಡಿ ಎಂದು ಮನವಿ ಮಾಡುತ್ತಿದ್ದಾರೆ. ಅಲ್ಲದೆ ಈ ಬಗ್ಗೆ ವಾಟ್ಸ್‌ಆಪ್‌ ಗ್ರೂಪ್‌ನಲ್ಲಿ ಹಾಕಿ ಎಂದು ಕೇಳುತ್ತಿದ್ದಾರೆ. ಆದರೆ ಯಾವುದೇ ಉತ್ತರ ಕೊಡುತ್ತಿಲ್ಲ ಎಂದು ನೌಕರರು ಬೇಸರ ಮಾಡಿಕೊಂಡಿದ್ದಾರೆ.

ಸಂಸ್ಥೆಯ ಆದೇಶದಲ್ಲೇನಿದೆ?: ನಿಗಮದ ವ್ಯವಸ್ಥಾಪಕ ನಿರ್ದೇಶಕರಾದ ಎಂ.ಪ್ರಿಯಾಂಗಾ ಅವರು ಆದೇಶ ಹೊರಡಿಸಿದ್ದು, ನಿಗಮದ ಮುಖ್ಯಲೆಕ್ಕಾಧಿಕಾರಿ ಈ ಸಂಬಂಧ ಅಧಿಕೃತವಾಗಿ ಸೂಚನೆ ನೀಡಿದ್ದಾರೆ. ಪ್ರಮುಖವಾಗಿ ಕರ್ನಾಟಕ ಸರ್ಕಾರವು ರಾಜ್ಯದ ನಾಲ್ಕೂ ಸಾರಿಗೆ ಸಂಸ್ಥೆಗಳ ಅಧಿಕಾರಿ/ನೌಕರರಿಗೆ 01.01.2021 ರಿಂದ 26.02.2023ರವರೆಗೆ ಒಟ್ಟು 26 ತಿಂಗಳ 2020ರ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳನ್ನು ಪಾವತಿಸಲು ಅನುಮೋದನೆ ನೀಡಿ ಆದೇಶಿಸಿದೆ.

ಮುಂದುವರೆದು, ಕರ್ನಾಟಕ ಸರ್ಕಾರವು ನಾಲ್ಕೂ ಸಾರಿಗೆ ನಿಗಮಗಳ ಅಧಿಕಾರಿ/ ನೌಕರರ (ಪೂರ್ವ ಕಿಂಕೂ ನೌಕರರು ಸೇರಿದಂತೆ) 01.01.2021 ರಿಂದ 28.02.2023 ರವರೆಗೆ ಒಟ್ಟು 26 ತಿಂಗಳ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತ 1271.92 ಕೋಟಿ ರೂ.ಗಳಲ್ಲಿ ಪ್ರಸ್ತುತ 450 ಕೋಟಿ ರೂ.ಗಳನ್ನು (ನಾಲ್ಕು ನೂರಾ ಐವತ್ತು ಕೋಟಿಗಳು ಮಾತ್ರ) ಷರತ್ತುಗಳಿಗೊಳಪಟ್ಟು ನಿಗಮವಾರು ಬಿಡುಗಡೆಗೊಳಿಸಿ ಆದೇಶಿಸಿದೆ.

ಅದರಂತೆ ಹಂಚಿಕೆಯಲ್ಲಿ NWKRTC ಸಂಸ್ಥೆಗೆ ಒಟ್ಟು 87 ಕೋಟಿ ರೂ.ಗಳನ್ನು ಬಿಡುಗಡೆಗೊಳಿಸಿದೆ. ಈ ಬಿಡುಗಡೆಗೊಳಿಸಿರುವ ಮೊತ್ತದಲ್ಲಿ 01.01.2021 ರಿಂದ 30.11.2021 ರವರೆಗೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತ ಪಾವತಿಸುವ ವಿಷಯವಾಗಿ ಈ ಕೆಳಗಿನಂತೆ ಕ್ರಮ ವಹಿಸಲು ಸೂಕ್ತಾಧಿಕಾರಿಗಳು ಆದೇಶಿಸ ಹೊರಡಿಸಿದ್ದಾರೆ ಎಂದು ಮುಖ್ಯ ಲೆಕ್ಕಾಧಿಕಾರಿ ತಿಳಿಸಿದ್ದಾರೆ.

1) ಸಂಸ್ಥೆಯ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರಿಗೆ 01.01.2021ರಿಂದ 30.11.2021 ರವರೆಗಿನ ಅಂದರೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮೇ 11ರಂದು ಪಾವತಿಸುವುದು.

2) 01.01.2021 ರಿಂದ 30.11.2021 ರವರೆಗಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ವಿಮುಕ್ತರಾದ (ನಿವೃತ್ತಿ/ ಸ್ವಯಂ ನಿವೃತ್ತಿ/ ವಜಾ/ ಮರಣ/ ರಾಜೀನಾಮೆ ಸೇರಿದಂತೆ) ಎಲ್ಲ ಅರ್ಹ ಅಧಿಕಾರಿ/ ನೌಕರರಿಗೆ ವೇತನ ಪರಿಷ್ಕರಣೆ ಹಿಂಬಾಕಿ ಮೊತ್ತವನ್ನು ಮೇ 15 ರಂದು ಪಾವತಿಸುವುದು.

3) ಇನ್ನು 01.01.2021 ರಿಂದ 30.11.2021ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಅಂತರ ನಿಗಮ/ ಸಂಸ್ಥೆಗಳಿಗೆ ವರ್ಗಾವಣೆಗೊಂಡ ಅಧಿಕಾರಿ/ ನೌಕರರ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮೇ 18 ರಂದು ಆಯಾ ನಿಗಮ/ ಸಂಸ್ಥೆಗಳಿಗೆ ವರ್ಗಾವಣೆ ಮಾಡಲು ಕ್ರಮ ಕೈಗೊಳ್ಳುವುದು.

4) ಹಾಲಿ ಕರ್ತವ್ಯ ನಿರ್ವಹಿಸುತ್ತಿತುವ ಅಧಿಕಾರಿ/ ನೌಕರರ ಹಿಂಬಾಕಿ ಪಾವತಿಗಾಗಿ ನಿಧಿ ವರ್ಗಾವಣೆ ಬೇಡಿಕೆಯನ್ನು ಕೇಂದ್ರ ಕಚೇರಿಗೆ ಮೇ 10 ರಂದು ಈ ಕೆಳಗಿನಂತೆ ಮಾಹಿತಿ ನೀಡುವುದು. ಈ ಸಂಬಂಧ 11/05/2026 ರಂದು ನಿಧಿ ವರ್ಗಾವಣೆ ಮಾಡಲಾಗುವುದು. ಈ ನಿಧಿಯನ್ನು ಬಳಿಸಿಕೊಂಡು ಎಲ್ಲ ಅರ್ಹ ಅಧಿಕಾರಿ/ ನೌಕರರಿಗೆ ಈ ಮೇಲೆ ತಿಳಿಸಿರುವಂತೆ ಕ್ರಮವಹಿಸಿ ಪಾವತಿಸಬೇಕು ಎಂದು ತಿಳಿಸಿದ್ದಾರೆ.

5) 01.01.2021 ರಿಂದ 30.11.2021 ರವರೆಗಿನ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಸೇವಾ ವಿಮುಕ್ತರಾದ (ನಿವೃತ್ತಿ/ ಸ್ವಯಂ ನಿವೃತ್ತಿ/ ವಜಾ/ ಮರಣ/ ರಾಜೀನಾಮೆ ಸೇರಿದಂತೆ) ಅಧಿಕಾರಿ/ನೌಕರರ ಹಾಗೂ .01.01.2021 ರಿಂದ 30.11.2021 ರ ಅವಧಿಯಲ್ಲಿ ಕರ್ತವ್ಯ ನಿರ್ವಹಿಸಿ ಅಂತರ ನಿಗಮ/ಸಂಸ್ಥೆಗಳಿಗೆ ವರ್ಗಾವಣೆಗೊಂಡ ಅಧಿಕಾರಿ/ ನೌಕರರ ಹಿಂಬಾಕಿ ಪಾವತಿಗಾಗಿ ನಿಧಿ ವರ್ಗಾವಣೆ ಬೇಡಿಕೆಯನ್ನು ಕೇಂದ್ರ ಕಚೇರಿಗೆ ಅನುಕ್ರಮವಾಗಿ 13/05/2026 ಹಾಗೂ 15/05/2026 ರಂದು ಮಾಹಿತಿ ನೀಡುವುದು. ಈ ಸಂಬಂಧ ನಿಧಿ ವರ್ಗಾವಣೆ ಮಾಡಲಾಗುವುದು. ಈ ನಿಧಿಯನ್ನು ಬಳಿಸಿಕೊಂಡು ಎಲ್ಲ ಅರ್ಹ ಅಧಿಕಾರಿ/ನೌಕರರಿಗೆ ಈ ಮೇಲೆ ತಿಳಿಸಿರುವಂತೆ ಕ್ರಮವಹಿಸಿ ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ.

ಇಲ್ಲಿ ಸಂಸ್ಥೆಯ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿ/ ನೌಕರರಿಗೆ 01.01.2021ರಿಂದ 30.11.2021 ರವರೆಗಿನ ಅಂದರೆ 11 ತಿಂಗಳ ವೇತನ ಪರಿಷ್ಕರಣೆಯ ಹಿಂಬಾಕಿ ಮೊತ್ತವನ್ನು ಮೇ 11ರಂದು ಪಾವತಿಸಬೇಕು ಎಂದು ಆದೇಶ ಹೊರಡಿಸಿದ್ದಾರೆ. ಆದರೆ ಬ್ಯಾಂಕ್‌ಗೆ ಜಮೆ ಆಗಿರುವುದು ಏಪ್ರಿಲ್‌ 2021ರಿಂದ ನವೆಂಬರ್‌ 2021ರವರೆಗೆ ಎಂದು ತೋರಿಸುತ್ತಿದೆ. ಅಂದರೆ ಕೇವಲ 8 ತಿಂಗಳ ಹಿಂಬಾಕಿ ಮಾತ್ರ ಪಾವತಿಯಾಗಿದೆ ಎಂದು ನೌಕರರು ಹೇಳುತ್ತಿದ್ದಾರೆ. ಈ ಬಗ್ಗೆ ಸಂಬಂಧಪಟ್ಟ ಮುಖ್ಯಲೆಕ್ಕಾಧಿಕಾರಿಗಳು ಸ್ಪಷ್ಟನೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.

Megha
the authorMegha

Leave a Reply

error: Content is protected !!
Latest news
ಸಾರಿಗೆ ನೌಕರರಿಗೆ ಶೇ.12.5 ರಷ್ಟು ವೇತನ ಹೆಚ್ಚಳ ತೀವ್ರ ಖಂಡನೀಯ: ನೌಕರರ ಹಕ್ಕಿಗಾಗಿ ಹೋರಾಟಕ್ಕೆ ಸಿದ್ಧ: ಬೀದರ್‌ ಬಿಎಂ... ಚಿನ್ನ ಇಂದು ಬಲುಭಾರ: 1ಗ್ರಾಂ 22K ಚಿನ್ನದ ಬೆಲೆ ₹1275 ಏರಿಕೆ, ಬೆಳ್ಳಿ ₹20 ಸಾವಿರ ಏರಿಕೆ NWKRTC: ನೌಕರರಿಗೆ 11ತಿಂಗಳ ಬದಲಿಗೆ 8 ತಿಂಗಳ ವೇತನ ಹೆಚ್ಚಳದ ಹಿಂಬಾಕಿ ಹಾಕಿದ್ದಾರಾ? ಗೊಂದಲದಲ್ಲಿ ಸಿಬ್ಬಂದಿ! "ನಷ್ಟದ ನೆಪದಲ್ಲಿ ವೇತನ ತಡೆಹಿಡಿಯಲು" ಅವಕಾಶ ಇಲ್ಲ: ಭಾರತ ಸಂವಿಧಾನ ಮಿಲನ ಕಳನಾಯಕ ಖ್ಯಾತಿಯ, ಹಿಟ್ಲರ್ ಕಲ್ಯಾಣ’ ಧಾರವಾಹಿಯ ಹೀರೋ ದಿಲೀಪ್ ರಾಜ್ ಇನ್ನಿಲ್ಲ KSRTC ನೌಕರರ ವೇತನ ಪರಿಷ್ಕರಣೆಯ ಆದೇಶದಲ್ಲೇನಿದೆ, ನೌಕರರಿಗೆ ಎಷ್ಟು ತಿಂಗಳ ಹಿಂಬಾಕಿ ಕೊಡಬೇಕು..? KSRTC: ಸಾರಿಗೆ ನೌಕರರಿಗೆ ಶೇ.12.5ರಷ್ಟು ವೇತನ ಹೆಚ್ಚಳ ನುಂಗಲಾರದ ತುತ್ತಾಯಿತೆ!? KSRTC: ಶೇ.12.5ರಷ್ಟು ವೇತನ ಹೆಚ್ಚಳ ಖಚಿತ, ಒಂದೆರಡು ಗಂಟೆಯಲ್ಲೇ ಅಧಿಕೃತ ಆದೇಶ ! KSRTC: ಶೇ.12-15ರ ನಡುವೆ ವೇತನ ಹೆಚ್ಚಳ ಬಹುತೇಕ ಖಚಿತ, ಅಧಿಕೃತ ಆದೇಶ ಹೊರಬೀಳುವುದೊಂದೆ ಬಾಕಿ ! ಜನರ ಆಶೀರ್ವಾದವಿರುವ ನಮ್ಮ 'ಕುರ್ಚಿ'ಗಳು ಭದ್ರವಾಗಿವೆ, ಕನ್ನಡಿಗರು ಕೇಳುತ್ತಿರುವ ಈ ಪ್ರಶ್ನೆಗಳಿಗೆ ಮೊದಲು ಉತ್ತರ ನೀಡಿ...