KSRTC ನೌಕರ ಕೇಶವಮೂರ್ತಿ ಹೃದಯಾಘಾತದಿಂದ ನಿಧನ
ಶಾಸಕ ಸಿಮೆಂಟ್ ಮಂಜು ಅವರ ಶಾಲಾ ದಿನಗಳ ಸಹಪಾಠಿಯಾಗಿದ್ದ ಕೇಶವಮೂರ್ತಿ ಕ್ರಿಕೆಟ್ ಸೇರಿದಂತೆ ವಿವಿಧ ಆಟಗಳಲ್ಲಿ ಕ್ರೀಡಾಪಟುವಾಗಿ ಹೆಸರು ಮಾಡಿದ್ದರು.
Deva26.05.2026

ಸಕಲೇಶಪುರ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (KSRTC) ಸಕಲೇಶಪುರ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಕೇಶವಮೂರ್ತಿ (45) ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

ಶಾಸಕ ಸಿಮೆಂಟ್ ಮಂಜು ಅವರ ಶಾಲಾ ದಿನಗಳ ಸಹಪಾಠಿಯಾಗಿದ್ದ ಕೇಶವಮೂರ್ತಿ ಕ್ರಿಕೆಟ್ ಸೇರಿದಂತೆ ವಿವಿಧ ಆಟಗಳಲ್ಲಿ ಕ್ರೀಡಾಪಟುವಾಗಿ ಹೆಸರು ಮಾಡಿದ್ದರು. ಇತ್ತೀಚೆಗಷ್ಟೇ ಡಿಪೋದಲ್ಲಿ ಅಂಬೇಡ್ಕರ್ ಜಯಂತಿಯನ್ನು ಅದ್ದೂರಿಯಾಗಿ ನಡೆಸಲು ಪ್ರಮುಖ ಪಾತ್ರ ವಹಿಸಿದ್ದರು.
ಕೇಶವಮೂರ್ತಿ ಅವರ ನಿಧನಕ್ಕೆ ಶಾಸಕ ಸಿಮೆಂಟ್ ಮಂಜು, ಬಿಜೆಪಿ ಮುಖಂಡರಾದ ಸುದೀಶ್, ನೇಮಾನ್ ಶೇಕ್, ನವೀನ್ ಶೆಟ್ಟಿ, ಬೈರಮುಡಿ ಕೃತೀಶ್ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಮೃತರ ಅಂತ್ಯಕ್ರಿಯೆ ಪಟ್ಟಣದ ಹಿಂದೂ ರುದ್ರ ಭೂಮಿಯಲ್ಲಿ ಮಧ್ಯಾಹ್ನ ನೆರವೇರಿಸಲಾಯಿತು.
Related


Deva







