ಸಚಿವ ಸಂಪುಟ ವಿಸ್ತರಣೆ ವಿಳಂಬಕ್ಕೆ ಎಂಟಿಬಿ ನಾಗರಾಜ್, ಶಕರ್ ಅಸಮಾಧಾನ
ಬೆಂಗಳೂರು: ರಾಜ್ಯ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಮತ್ತಷ್ಟು ವಿಳವಾಗುತ್ತಿದೆ. ಈ ಹಿನ್ನೆಲೆಯಲ್ಲಿ ವಲಸಿಗ ಬಿಜೆಪಿ ಎಂಎಲ್‌ಎಗಳಾದ ಎಂಟಿಬಿ ನಾಗರಾಜ್ ಮತ್ತು ಶಂಕರ್ ಅಸಮಾಧಾನವನ್ನು ಹೊರಹಾಕಿದ್ದಾರೆ.
ಪ್ರತಿಬಾರಿಯೂ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ಹೇಳುತ್ತಾರೆ ಮತ್ತೆ ಮುಂದೂಡುತ್ತಿದ್ದಾರೆ. ಇದರಿಂದ ನಮಗೆ ತುಂವ ಬೇಸವಾಗಿದೆ ಎಂದು ಇಂದು ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಇಬ್ಬರು ನಾಯಕರು ಬೇಸರ ವ್ಯಕ್ತಪಡಿಸಿದರು.
ನಾವು ಹೋದಾಗೆಲ್ಲ ಹೇಳುತ್ತಾರೆ ಸಂಪುಟ ವಿಸ್ತರಣೆ ಆಗುತ್ತದೆ ಎಂದು ಆದರೆ ಅದು ವಿಳಂಬವಾಗುತ್ತಿದೆ. ಇದರಿಂದ ನಮಗೆ ಬೇಜಾರಾಗಿದೆ. ನಾಯಕರು ಮನಸ್ಸು ಮಾಡಿದರೆ ಇಂದೇ ವಿಸ್ತರಣೆ ಮಾಡಬಹುದು ಎಂದು ಶಕರ್ ಹೇಳಿದರು.
ಇನ್ನು 17ಜರ ಪೈಕಿ ನಾಲ್ವರನ್ನು ಮಾತ್ರ ಸಂಪುಟಕ್ಕೆ ಸೇರಿಸಿಕೊಳ್ಳಲು ವಿಳಂಬ ಮಾಡುತ್ತಿದ್ದು, ಇದರಿಂದ ನಮ್ಮ ಸಮುದಾಯದವರ ಅಭಿವೃದ್ಧಿ ಬಗ್ಗೆ ನಾವು ಶ್ರಮಿಸಲಾಗುತ್ತಿಲ್ಲ ಎಂಬ ನೋವು ನಮ್ಮನ್ನು ಬಾಧಿಸುತ್ತಿದೆ ಎಂದು ಎಂಟಿಬಿ ನಾಗರಾಜ್ ಕೂಡ ಹೇಳಿದ್ದು, ಶೀಘ್ರದಲ್ಲೇ ನಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.