NEWSನಮ್ಮಜಿಲ್ಲೆ

ಬನ್ನೂರು: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾರ ಅಣ್ಣ ವಾಸುದೇವನ್ ನಿಧನ

ಜಯಲಲಿತಾ ಅವರ ತಂದೆ ಜಯರಾಮ್ ಅವರ ಮೊದಲ ಪತ್ನಿ ಎಲ್.ಕೆ. ಜಯಮ್ಮಾಳ್ ದಂಪತಿಯ ಏಕೈಕ ಪುತ್ರ ಎನ್.ಜೆ. ವಾಸುದೇವನ್. ಜಯರಾಮ್ ಅವರ ಎರಡನೇ ಪತ್ನಿ ವೇದವಲ್ಲಿ (ಸಂಧ್ಯಾ) ಅವರ ಮಗಳೇ ಜೆ.ಜಯಲಲಿತಾ.

ವಿಜಯಪಥ ಸಮಗ್ರ ಸುದ್ದಿ

ತಿ.ನರಸೀಪುರ: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ದಿ.ಜೆ.ಜಯಲಲಿತಾ ಅವರ ಸಹೋದರ ಎನ್.ಜೆ. ವಾಸುದೇವನ್ (92) ಅವರು ಇಂದು ಬೆಳಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.

ವಾಸುದೇವನ್ ಅವರು ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕಿನ ಬನ್ನೂರು ನರಸಭೆಯ ಚಾಮನಹಳ್ಳಿಯಲ್ಲಿರುವ ತಮ್ಮ ಸಾಕು ಮಗಳ ಮನೆಯಲ್ಲಿ ವಾಸವಾಗಿದ್ದು ಇಂದು ಬೆಳಗ್ಗೆ ಅವರ ಮನೆಯಲ್ಲಿ ಇಹಲೋಕತ್ಯೆಜಿಸಿದ್ದಾರೆ.

ಮೃತರ ಅಂತ್ಯಕ್ರಿಯೆಯು ಇಂದು ಸಂಜೆ ಸಮೀಪದ ರಂಗರಾಜಪುರದಲ್ಲಿ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಕಳೆದ ಕೆಲವು ದಿನಗಳಿಂದ ವಯೋಸಹಜ ಆರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಅವರು ನಿಧನರಾಗಿದ್ದಾರೆ.

ಜಯಲಲಿತಾ ಅವರ ಕುಟುಂಬದ ಹಿರಿಯ ಸದಸ್ಯರಾಗಿದ್ದ ವಾಸುದೇವನ್ ಅವರ ನಿಧನಕ್ಕೆ ಆಪ್ತರು ಮತ್ತು ಸ್ಥಳೀಯರು ಸಂತಾಪ ಸೂಚಿಸಿದ್ದಾರೆ.

ಸಂಬಂಧ ಹೇಗೆ?: ಜಯಲಲಿತಾ ಅವರ ತಂದೆ ಜಯರಾಮ್ ಅವರ ಮೊದಲ ಪತ್ನಿ ಎಲ್.ಕೆ. ಜಯಮ್ಮಾಳ್ ದಂಪತಿಯ ಏಕೈಕ ಪುತ್ರ ಎನ್.ಜೆ. ವಾಸುದೇವನ್. ಜಯರಾಮ್ ಅವರ ಎರಡನೇ ಪತ್ನಿ ವೇದವಲ್ಲಿ (ಸಂಧ್ಯಾ) ಅವರ ಮಗಳೇ ಜೆ.ಜಯಲಲಿತಾ. ಈ ಮೂಲಕ ವಾಸುದೇವನ್ ಅವರು ಜಯಲಲಿತಾ ಅವರಿಗೆ ತಂದೆಯ ಕಡೆಯಿಂದ ಅಣ್ಣ ಆಗಿದ್ದರು.

ಜಯಲಲಿತಾ ಅವರು ಬದುಕಿದ್ದಾಗ ವಾಸುದೇವನ್ ಅವರೊಂದಿಗೆ ಯಾವುದೇ ಸಾರ್ವಜನಿಕ ಅಥವಾ ಕುಟುಂಬದ ನಿಕಟ ಸಂಬಂಧವನ್ನು ಹೊಂದಿರಲಿಲ್ಲ. ಜಯಲಲಿತಾ ಅವರ ನಿಧನದ ನಂತರ, ವಾಸುದೇವನ್ ಅವರು ತಾವೂ ಕೂಡ ಜಯಲಲಿತಾ ಅವರ ನೇರ ರಕ್ತಸಂಬಂಧಿ ಎಂದು ಹೇಳಿ ಅವರ ಆಸ್ತಿಯಲ್ಲಿ ಶೇ.50 ರಷ್ಟು ಪಾಲನ್ನು ಕೋರಿ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಕೋರ್ಟ್ ಜಯಲಲಿತಾ ಅವರ ಒಡಹುಟ್ಟಿದ ಸಹೋದರನ ಮಕ್ಕಳಾದ ಜೆ.ದೀಪಾ ಮತ್ತು ಜೆ. ದೀಪಕ್ ಅವರನ್ನು ಕಾನೂನುಬದ್ಧ ವಾರಸುದಾರರು ಎಂದು ಘೋಷಿಸಿರುವುದನ್ನು ಅವರು ಪ್ರಶ್ನಿಸಿದ್ದರು.

Deva
the authorDeva

Leave a Reply

error: Content is protected !!
Latest news
ನಾಳೆ ಮಧ್ಯಾಹ್ನದ ಬಳಿಕ ವಿಧಾನ ಸೌಧ, ವಿಕಾಸ ಸೌಧ, ಬಹುಮಹಡಿಗಳ ಕಟ್ಟಡದ ನೌಕರರಿಗೆ ರಜೆ ಘೋಷಿಸಿ ಸರ್ಕಾರದ ಆದೇಶ ಮುಂದಿನ 5 ವರ್ಷದಲ್ಲಿ ಉದ್ಯೋಗವಿಲ್ಲದ ಪದವೀಧರರ ಸಂಖ್ಯೆ ಹೆಚ್ಚಾಗಲಿದೆ, ಇತ್ತ ಪ್ಲಂಬರ್, ಎಲೆಕ್ಟ್ರಿಷಿಯನ್ಸ್‌ ಸಿಗಲ್ಲ–... ಬನ್ನೂರು: ತಮಿಳುನಾಡಿನ ಮಾಜಿ ಸಿಎಂ ದಿ. ಜಯಲಲಿತಾರ ಅಣ್ಣ ವಾಸುದೇವನ್ ನಿಧನ ಅದೃಷ್ಟ ಅಂದರೆ ಇದೇ ಅಲ್ವಾ- ನಾಲ್ಕಾರು ಮನೆಗೆಲಸ ಮಾಡಿ ಜೀವನ ಸಾಗಿಸುತ್ತಿದ್ದಾಕಿ ಈಗ ಪಶ್ಚಿಮ ಬಂಗಾಳದ ಮಂತ್ರಿ ! NWKRTC: ನೌಕರರ 11 ತಿಂಗಳ ಹಿಂಬಾಕಿ ಕುರಿತು ವಿವರಣೆ ಸ್ಲಿಪ್‌ ನೀಡಲು ಆದೇಶ ಮಾಡುತ್ತೇನೆ- ನೌಕರರಿಗೆ ಎಂಡಿ ಭರವಸೆ ಸರ್ಕಾರಿ ನೌಕರ ಪರೋಕ್ಷವಾಗಿ ಬೇರೊಬ್ಬರ ಮೂಲಕ ಲಂಚ ಪಡೆದರೂ ಆತ ತಪ್ಪಿತಸ್ಥನೆ: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಇಂದಿನಿಂದ ಜಾರಿ: ಕರೆಂಟ್‌ ಬಿಲ್‌ಕೊಟ್ಟ ದಿನದಿಂದ ರಜೆ ಹೊರತುಪಡಿಸಿ ಕನಿಷ್ಠ 15 ದಿನಗಳ ಪಾವತಿ ಅವಧಿ ಕಡ್ಡಾಯ ಸರ್ಕಾರಿ ಸಾರಿಗೆ ಚಾಲನಾ, ತಾಂತ್ರಿಕಾ ಸಿಬ್ಬಂದಿ ಕಾರ್ಮಿಕರಲ್ಲ: “ಸಂಸ್ಥೆ ನಿಯಮಗಳ ಮೂಲಕ ಯಾರು ನೇಮಕವಾಗಿದ್ದಾರೋ ಅವರೇ ಅ... ನಾಲ್ಕೂ ರಸ್ತೆ ಸಾರಿಗೆ ಸಂಸ್ಥೆ ಎಂಡಿಗಳಿಗೆ ಪತ್ರ ಬರೆದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಾಳೆ ವೇತನ ಹೆಚ್ಚಳದ 11 ತಿಂಗಳ ಹಿಂಬಾಕಿಯ ವ್ಯತ್ಯಾಸ ತಿಳಿಯಲು ಸಾರಿಗೆ ನೌಕರರಿಂದ NWKRTC ಎಂಡಿ ಭೇಟಿ