- ವಿಜಯಪಥ ಸಮಗ್ರ ಸುದ್ದಿ
ಲಂಡನ್: ಬಹುಕೋಟಿ ರೂ. ಸಾಲಗಾರ ಉದ್ಯಮಿ ವಿಜಯ್ ಮಲ್ಯ ವಿರುದ್ಧ ದಿವಾಳಿತನದ ಆದೇಶ ಹೊರಡಿಸುವಂತೆ ಕೋರಿ ಎಸ್ಬಿಐ ನೇತೃತ್ವದ ಭಾರತೀಯ ಬ್ಯಾಂಕ್ಗಳ ಒಕ್ಕೂಟ ಲಂಡನ್ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಚೀಫ್ ಇನ್ಸಾಲ್ವೆನ್ಸಿಯಸ್ ಆ್ಯಂಡ್ ಕಂಪನೀಸ್ ನ್ಯಾಯಾಲಯವು (ಐಸಿಸಿ) ವಿಚಾರಣೆ ನಡೆಸಿತು.
ವಿವಿಧ ಭಾರತೀಯ ಬ್ಯಾಂಕ್ಗಳಲ್ಲಿ ಸಾವಿರ ಸಾವಿರ ರೂ. ಸಾಲ ಪಡೆದು ಈಗ ಲಂಡನ್ನಲ್ಲಿ ಜಾಂಡ್ ಹೂಡಿರುವ ವಿಜಯ್ ಮಲ್ಯ ಅವರ ವಿರುದ್ಧ ಬ್ಯಾಂಕ್ಗಳ ಒಕ್ಕೂಟ ಸಮರ ಸಾರಿದ್ದು, ಸಾಲ ವಸೂತಿಗಾಗಿ ಬಹುಶಃ ಕೊನೆ ಅಸ್ತ್ರವನ್ನು ಪ್ರಯೋಗಿಸಿದೆ.
ಈ ಹಿನ್ನೆಲೆಯಲ್ಲಿ ಕೋರ್ಟ್ ಮೆಟ್ಟಿಲೇರಿರುವ ಒಕ್ಕೂಟ ಮಲ್ಯ ದಿವಾಳಿತನ ಆದೇಶಕ್ಕೆ ಮನವಿ ಮಾಡಿದೆ. ಈ ಸಂಬಂಧ ವಿಡಿಯೊ ಮೂಲಕ ನಡೆದ ವಿಚಾರಣೆಯಲ್ಲಿ ನ್ಯಾಯಾಧೀಶ ಮೈಕಲ್ ಬ್ರಿಗ್ಸ್ ಅವರು ಅರ್ಜಿದಾರರು ಹಾಗೂ ಪ್ರತಿವಾದಿಗಳ ವಾದ ಆಲಿಸಿದರು.
ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯ ಮೂರ್ತಿಗಳಾದ ದೀಪಕ್ ವರ್ಮಾ ಹಾಗೂ ಗೋಪಾಲ ಗೌಡ ಅವರು ಕ್ರಮವಾಗಿ ಮಲ್ಯ ಹಾಗೂ ಬ್ಯಾಂಕ್ಗಳ ಒಕ್ಕೂಟದ ಪರ ಭಾರತೀಯ ಕಾನೂನಿನ ಪರಿಣಿತರಾಗಿ ವಿಚಾರಣೆಯಲ್ಲಿ ಭಾಗವಹಿಸಿದ್ದರು.
ವಾಣಿಜ್ಯ ಉದ್ದಿ ಮೆಯಾಗಿರುವ ಬ್ಯಾಂಕೊಂದು ನೀಡಿರುವ ಸಾಲವನ್ನು ಹಿಂಪಡೆಯುವ ಸಲುವಾಗಿ ಸಾಲಗಾರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬಹುದು. ಆ ಹಕ್ಕು ಬ್ಯಾಂಕಿಗಿದೆ’ ಎಂದು ಬ್ಯಾಂಕ್ಗಳ ಒಕ್ಕೂಟದ ಪರ ಬ್ಯಾರಿಸ್ಟರ್ ಮಾರ್ಸಿಯಾ ಶೆಕರ್ಡೆಮಿಯಾನ್ ವಾದಿಸಿದರು.
ಮಲ್ಯ ಪರ ಬ್ಯಾರಿಸ್ಟರ್ ಫಿಲಿಪ್ ಮಾರ್ಷಲ್ ಇದನ್ನು ವಿರೋಧಿಸಿದರು. ಒಂದು ಹಂತದಲ್ಲಿ ವಾದ–ಪ್ರತಿವಾದ ಜೋರಾಗಿ ಕಾವೇರಿದ ವಾತಾ ವರಣ ನಿರ್ಮಾಣವಾಯಿತು. ಮಧ್ಯಪ್ರವೇಶಿಸಿದ ನ್ಯಾಯಾಧೀಶರು ಅಸಮಂಜಸ ಪ್ರಶ್ನೆಗಳನ್ನು ಕೇಳುವ ಮೂಲಕ ವಿಚಾರಣೆಯ ದಿಕ್ಕು ತಪ್ಪಿಸಬಾರದು ಎಂದು ಸೂಚಿಸಿದರು. ಬಳಿಕ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು. ಮಲ್ಯ ಕೂಡ ವಿಡಿಯೊ ಲಿಂಕ್ ಮೂಲಕ ವಿಚಾರಣೆ ಎದುರಿಸಿದರು.