ಮೈಸೂರು: ಜಿಲ್ಲೆಯ ತಿ. ನರಸೀಪುರ ತಾಲೂಕಿನ ಬೀಡನಹಳ್ಳಿಯ ಎರಡನೇ ವಾರ್ಡ್‌ನಿಂದ ಕಣಕ್ಕಿಳಿದಿದ್ದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಯಶೋಧಮ್ಮ ವಿರಭದ್ರಶೆಟ್ಟಿ 202 ಮತಗಳನ್ನು ಪಡೆದು 89 ಅಂತರದಲ್ಲಿ ಜಯಗಳಿದ್ದಾರೆ. ಇವರ ಪ್ರತಿಸ್ಪರ್ಧಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಲಕ್ಷ್ಮಮ್ಮ ನಂಜುಂಡಶೆಟ್ಟಿ 112 ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.
ಚಾಮರಾಜನಗರದ ಹನೂರು ತಾಲೂಕಿನ ಮಂಗಲ ಗ್ರಾಮ ಪಂಚಾಯಿತಿಯಲ್ಲಿ ಪ್ರಮೀಳಾ ಎಂಬ ಅಭ್ಯರ್ಥಿ ಒಂದು ಮತದಿಂದ ಗೆದ್ದಿದ್ದಾರೆ.
ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನ ಕ್ಕಕೇರಿಯಿಂದ ಕಣಕ್ಕಿಳಿದಿದ್ದ ಸಿ. ಬಿ. ಅಂಬೋಜಿ 414 ಮತಗಳನ್ನು ಪಡೆದು ಜಯಗಳಿಸಿದ್ದಾರೆ. ಡಿಸೆಂಬರ್ 27ರಂದು ಅಂಬೋಜಿ ಮೃತಪಟ್ಟಿದ್ದಾರೆ.
ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಸಾಲೂರು ಗ್ರಾಮ ಪಂಚಾಯಿತಿ ಬಿಜೆಪಿ ಪಾಲಾಗಿದೆ. ಕಳೆದ ಚುನಾವಣೆಯಲ್ಲಿ ಒಂದು ಸ್ಥಾನದಲ್ಲಿಯೂ ಬಿಜೆಪಿ ಗೆದ್ದಿರಲಿಲ್ಲ. ಈ ಬಾರಿ 8 ಸ್ಥಾನಗಳ ಪೈಕಿ 5ರಲ್ಲಿ ಬಿಜೆಪಿ ಜಯಗಳಿಸಿದೆ.
ಉಡುಪಿ ಜಿಲ್ಲೆ ಗ್ರಾಮ ಪಂಚಾಯಿತಿ ಚುನಾವಣೆ ಫಲಿತಾಂಶ. ಬಿಜೆಪಿ ಬೆಂಬಲಿತ 140, ಕಾಂಗ್ರೆಸ್ ಬೆಂಬಲಿತ 41, ಎಸ್ ಡಿ ಪಿ ಐನ ಇಬ್ಬರಿಗೆ ಗೆಲುವು.
ಕೋಲಾರದ ಬಂಗಾರಪೇಟೆ ತಾಲೂಕಿನ ಮತ ಎಣಿಕೆ ವೇಳೆ ಟಾಸ್ ಹಾಕಿ ವಿಜೇತರನ್ನು ಆಯ್ಕೆ ಮಾಡಲಾಗಿದೆ. ಅಭ್ಯರ್ಥಿ ಅರುಣ್ ರೆಡ್ಡಿ ಎಳೇಸಂದ್ರ ಗ್ರಾಮ ಪಂಚಾಯಿತಿಯ ದಿನ್ನೇಕೊತ್ತೂರು ಗ್ರಾಮದಿಂದ ಆಯ್ಕೆಯಾಗಿದ್ದಾರೆ. ಅಭ್ಯರ್ಥಿಗಳು ತಲಾ 106 ಮತ ಪಡೆದಿದ್ದರಿಂದ, ತಹಶೀಲ್ದಾರ್ ದಯಾನಂದ್ ಸಮ್ಮುಖದಲ್ಲಿ ಟಾಸ್ ಹಾಕಲಾಯಿತು.