CrimeNEWSನಮ್ಮರಾಜ್ಯರಾಜಕೀಯ

ಧರ್ಮೇಗೌಡರ ಸಾವಿಗೆ ಪರಿಷತ್‌ ಎಲ್ಲಾ ಸದಸ್ಯರೇ ಕಾರಣ- ಅವರನ್ನು ಬಂಧಿಸಿ: ಎಎಪಿಯ ಮೋಹನ್ ದಾಸರಿ ಆಗ್ರಹ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಮಗ್ರ ಸುದ್ದಿ
    ಬೆಂಗಳೂರು: ಪ್ರಜೆಗಳಿಗೆ, ಪ್ರಜಾಪ್ರಭುತ್ವಕ್ಕೆ, ಸದನಕ್ಕೆ ಮಾಡಿದ ಅಗೌರವದಿಂದ ಮತ್ತೊಂದು ದುರ್ಘಟನೆ ನಡೆದಿದ್ದು ಉಪ ಸಭಾಪತಿ ಧರ್ಮೇಗೌಡ ಅವರು ಅವಮಾನಕ್ಕೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿರುವುದಕ್ಕೆ ಎಲ್ಲಾ ಸದಸ್ಯರು ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾರಣ. ಈ ಕೂಡಲೇ ಎಲ್ಲಾ ಸದಸ್ಯರನ್ನು ಬಂಧಿಸಬೇಕು ಎಂದು ಆಮ್ ಆದ್ಮಿ ಪಕ್ಷ ಬೆಂಗಳೂರು ಘಟಕದ ಅಧ್ಯಕ್ಷ ಮೋಹನ್ ದಾಸರಿ ಆಗ್ರಹಿಸಿದರು.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಭಾಪತಿ ಸ್ಥಾನಕ್ಕೆ ನಡೆದ ಜಟಾಪಟಿಯನ್ನು ಇಡೀ ರಾಜ್ಯದ ಜನ ಮಾಧ್ಯಮಗಳ ಮೂಲಕ ನೋಡಿದ್ದಾರೆ. ಈ ಜಟಾಪಟಿ ವೇಳೆ ಉಪಸಭಾಪತಿ ಧರ್ಮೇಗೌಡರನ್ನು ಅನೇಕ ಸದಸ್ಯರು ಎಳೆದಾಡಿದ್ದರು, ಇದಕ್ಕೆ ಸಾಕಷ್ಟು ವಿಡಿಯೋ ದಾಖಲೆಗಳಿವೆ, ಫೋಟೋಗಳಿವೆ.

ಈ ವೇಳೆ ಸೂಕ್ಷ್ಮ ಮನಸ್ಸಿನ ಧರ್ಮೇಗೌಡರಿಗೆ ಘಾಸಿಯಾಗಿ ಈ ದುರ್ಘಟನೆ ನಡೆದಿದೆ, ಇತರೇ ಸಂದರ್ಭಗಳಲ್ಲಿ ಆತ್ಮಹತ್ಯೆಗೆ ಪ್ರಚೋದನೆ ಕೊಟ್ಟವರನ್ನು ಬಂಧಿಸುವ ಪೊಲೀಸರು ಈಗ ಏಕೆ ಮೌನವಾಗಿದ್ದಾರೆ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರೇ ಉತ್ತರಿಸಿ ಎಂದರು.

ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ.ಸದಂ ಮಾತನಾಡಿ, ಮಾಜಿ ಪ್ರಧಾನಿ ದೇವೆಗೌಡರು, ಸಭಾಪತಿ ಇಲ್ಲದ ವೇಳೆ ಕುರ್ಚಿಯಲ್ಲಿ ಕೂರಬೇಡ ಎಂದು ಹೇಳಿದ್ದರೂ ಅವರಿಗೆ ಕುಮಾರಸ್ವಾಮಿ ಅವರು ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಒತ್ತಡದಿಂದ ಕುಳಿತು ಅವಮಾನ ಅನುಭವಿಸುವಂತಾಯಿತು. “ಧರ್ಮೇಗೌಡರು ವಿಧಾನ ಪರಿಷತ್‌ನಲ್ಲಿ ನಡೆದ ಘಟನೆಯಿಂದ ಘಾಸಿಗೊಳಗಾಗಿದ್ದರು” ಎಂದು ದೇವಗೌಡರಾದಿಯಾಗಿ ಅನೇಕ ನಾಯಕರು ಮಾಧ್ಯಮಗಳ ಮುಂದೆ ಹೇಳಿಕೆ ನೀಡಿದ್ದರು.

ಈ ವಿಚಾರವಾಗಿ ಅವಮಾನಕ್ಕೆ ಒಳಗಾಗಿದ್ದ ಧರ್ಮೇಗೌಡರ ಬಳಿ ಕುಮಾರಸ್ವಾಮಿ ಅವರು ಸೇರಿ ಇತರೇ ನಾಯಕರು ಮಾತನಾಡಿ ಈ ಘಟನೆಗಳು ಸಾಮಾನ್ಯ ಎಂದು ಹೇಳಿ ಸಮಾಧಾನ ಮಾಡಲಾಗಿತ್ತು. ಆದರೂ ಘನತೆವೆತ್ತ ಈ ಹುದ್ದೆಗೆ ಎಲ್ಲಾ ಸದಸ್ಯರು ಸೇರಿ ಮಾಡಿದ ಅವಮಾನದಿಂದ ಸೂಕ್ಷ್ಮ ಮನಸ್ಸಿನ ವ್ಯಕ್ತಿಗೆ ಸಾರ್ವಜನಿಕವಾಗಿ ಅವಮಾನವಾಗಿ ಈ ದುರ್ಘಟನೆ ನಡೆದಿದೆ, ಈ ಕೂಡಲೇ ಕ್ರಮ ತೆಗೆದುಕೊಳ್ಳಿ ಎಂದು ಹೇಳಿದರು.

ಜನಸಾಮಾನ್ಯ ಮಾಸ್ಕ್ ಹಾಕಿಲ್ಲ ಎಂದು ಠಾಣೆಗೆ ಕರೆದುಕೊಂಡು ಹೋಗಲಾಗುತ್ತಿದೆ. ಆದರೆ ಇಂತಹ ಘೋರ ಘಟನೆ ನಡೆದರು ಏಕೆ ಶೀಘ್ರ ಕ್ರಮ ತೆಗೆದುಕೊಳ್ಳುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

Leave a Reply

error: Content is protected !!
LATEST
ಫ್ರಿಡ್ಜ್‌ನಲ್ಲಿದ್ದ ಮಹಾಲಕ್ಷ್ಮೀ ದೇಹದ 32 ಪೀಸ್‌ಗಳು ಹೇಳುತ್ತಿವೆ ಭಯಾನಕ ಸತ್ಯ ಬಡವರು-ಮಧ್ಯಮ ವರ್ಗದವರಿಗೆ ಕೈಗೆಟುಕುವ ದರದಲ್ಲಿ ನಿವೇಶನ ವಿತರಣೆ: ಡಾ.ಬಸ್ತಿ ರಂಗಪ್ಪ KSRTC ನಿರ್ದೇಶಕರ ಆದೇಶಕ್ಕೂ ಕಿಮ್ಮತ್ತಿಲ್ಲ: ಅಮಾನತು ತೆರವು ಮಾಡದೆ ಚಾಲಕನಿಗೆ ಮಾನಸಿಕ ಹಿಂಸೆ ಕೊಡುತ್ತಿರುವ ತುಮಕೂರು ... ಪ್ರಜ್ವಲ್ ರೇವಣ್ಣ ಪ್ರಕರಣ: ಅಶ್ಲೀಲ ವಿಡಿಯೋಗಳ ಹಂಚಿಕೆ ಅತ್ಯಂತ ಪಾಪ ಕೃತ್ಯ, ಸಂತ್ರಸ್ತೆಯರಿಗೆ ಅವಮಾನ- ಹೈಕೋರ್ಟ್ ವಿಶ್ವವಿಖ್ಯಾತ ಮೈಸೂರು ದಸರಾ ಗಂಡಾನೆಗಳ ನಡುವೆ ಕಿತ್ತಾಟ: ದಿಕ್ಕಾಪಾಲಾಗಿ ಓಡಿದ ಜನರು ಬನ್ನೂರು: ಬಸವನಹಳ್ಳಿ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಹೆಣ್ಣು ಚಿರತೆ ಸಾವು ಅ.3ರಿಂದ ಶಾಲೆಗಳಿಗೆ ದಸರಾ ರಜೆ: ಶಾಲಾ ಶಿಕ್ಷಣ ಇಲಾಖೆ ಆದೇಶ BMTC ನೌಕರರ ₹400 ಕೋಟಿ ಗ್ರಾಚ್ಯುಟಿ, ಗಳಿಕೆ ರಜೆ ನಗದೀಕರಣ ಬಿಡುಗಡೆಗೆ ಮೀನಮೇಷ..!! KSRTC ಬಸ್‌ ರಿಪೇರಿ ಮಾಡಿದ ಖರ್ಚಿನ ಬಿಲ್‌ನಲ್ಲಿ ಸ್ಕ್ರಾಪ್‌ನ ಹಣ ತೋರಿಸದೆ ಗುಳುಂ: ಕ್ರಮಕ್ಕಾಗಿ ಎಂಡಿಗೆ ದೂರು 160 ಕ್ಯಾಬಿನೆಟ್ ಸೆಕ್ರೆಟರಿಯೇಟ್, ಡೆಪ್ಯೂಟಿ ಫೀಲ್ಡ್ ಆಫೀಸರ್ ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ