NEWSಸಿನಿಪಥ

ನಾಳೆ ‘ಪೊಗರು’ ತೆಲುಗು ಟೀಸರ್​ ರಿಲೀಸ್‌ಗೆ ಸಜ್ಜಾದ ಚಿತ್ರತಂಡ

ವಿಜಯಪಥ ಸಮಗ್ರ ಸುದ್ದಿ
  • ವಿಜಯಪಥ ಸಿನಿಸುದ್ದಿ
    ಬೆಂಗಳೂರು: ನಿರ್ದೇಶಕ ನಂದ ಕಿಶೋರ್ ಆ್ಯಕ್ಷನ್​ ಕಟ್ ಹೇಳಿರುವ ಹಾಗೂ ಧ್ರುವ ಸರ್ಜಾ ನಟಿಸಿರುವ ಪೊಗರು ಸಿನಿಮಾ ರಿಲೀಸ್​ಗೆ ಸಜ್ಜಾಗಿದೆ. ಈ ನಡುವೆ ತೆಲುಗಿನಲ್ಲಿ ಈಗಾಗಲೇ ಖರಾಬು ಹಾಡು ರಿಲೀಸ್ ಮಾಡಿರುವ ಚಿತ್ರತಂಡ ಈಗ, ಟೀಸರ್​ ರಿಲೀಸ್​ಗೆ ಸಜ್ಜಾಗಿದೆ. ಹೊಸ ವರ್ಷದ ಪ್ರಯುಕ್ತ ಪೊಗರು ಚಿತ್ರತಂಡ ತೆಲುಗು ಟೀಸರ್​ ರಿಲೀಸ್​ ಮಾಡಲಿದೆ.

ಈ ಬಗ್ಗೆ ಧ್ರುವ ಸರ್ಜಾ ಟ್ವೀಟ್​ ಮಾಡಿದ್ದಾರೆ. ಅಂತ್ಯಯೇ ಧ್ರುವ ಅವರನ್ನು ಬೆಳ್ಳಿ ತೆರೆಯ ಮೇಲೆ ನೋಡಿ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಆರಂಭವಾದಾಗಿನಿಂದ ಸುದ್ದಿಯಲ್ಲಿರುವ ಸಿನಿಮಾ ಪೊಗರು.

ಪೊಗರು ಸಿನಿಮಾದ ಹಾಡು, ಡೈಲಾಗ್​ ಟೀಸರ್​​ ಹೀಗೆ ಎಲ್ಲವೂ ಸಿನಿಮಾ ಬಗ್ಗೆ ಇದ್ದ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿವೆ. ಅಲ್ಲದೆ ಈ ಸಿನಿಮಾ ಕನ್ನಡದ ಜತೆಗೆ ತೆಲುಗು ಹಾಗೂ ತಮಿಳಿನಲ್ಲೂ ರಿಲೀಸ್​ ಆಗಲಿದೆ. ಇತ್ತೀಚೆಗಷ್ಟೆ ತಮಿಳಿನ ಟೈಟಲ್​ ಪೋಸ್ಟರ್​ ಅನ್ನು ನಿರ್ದೇಶಕ ನಂದ ಕಿಶೋರ್​ ಹಂಚಿಕೊಂಡಿದ್ದಾರೆ.

ಸೆಮ್ಮಾ ತಿಮಿರ್​ ಹೆಸರಿನಲ್ಲಿ ಕಾಲಿವುಡ್​ನಲ್ಲಿ ಕನ್ನಡದ ಪೊಗರು ತೆರೆ ಕಾಣಲಿದೆ. ಇನ್ನು ತೆಲುಗಿನಲ್ಲಿ ಪೊಗರು ಸಿನಿಮಾಗೆ ಮತ್ತೊಂದು ಪ್ಲಸ್​ ಪಾಯಿಂಟ್ ಎಂದರೆ ರಶ್ಮಿಕಾ. ಈಗಾಗಲೇ ಟಾಲಿವುಡ್​ನಲ್ಲಿ ಹೆಸರು ಮಾಡಿರುವ ರಶ್ಮಿಕಾಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ಇದರಿಂದಾಗಿ ಪೊಗರು ಸಿನಿಮಾ ಟಾಲಿವುಡ್​ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಲಿದೆ ಎಂದು ಅಂದಾಜಿಸಲಾಗುತ್ತಿದೆ.

ನಾಳೆ ಅಂದರೆ ಹೊಸ ವರ್ಷದಂದು ಮಧ್ಯಾಹ್ನ 12.12ಕ್ಕೆ ತೆಲುಗು ಟೀಸರ್ ಆದಿತ್ಯ ಮ್ಯೂಸಿಕ್​ನಲ್ಲಿ ಬಿಡುಗಡೆಯಾಗಲಿದೆ. ಈಗಾಗಲೇ ರಿಲೀಸ್​ ಆಗಿರುವ ಖರಾಬು ವಿಡಿಯೋ ಹಾಡು ಸಹ ಇನ್ನೂ ಸದ್ದು ಮಾಡುತ್ತಿದೆ. 5 ಕೋಟಿ ವೀಕ್ಷಣೆ ಪಡೆದುಕೊಂಡಿದೆ.

ಊಹಿಸಿದಂತೆ ಕ್ರಿಸ್ಮಸ್​ಗೆ ಈ ಸಿನಿಮಾ ರಿಲೀಸ್​ ಆಗಲಿಲ್ಲ. ಇನ್ನು ಜ.14ರಂದು ಅಂದರೆ ಸಂಕ್ರಾಂತಿಗೆ ಪೊಗರು ರಿಲೀಸ್​ ಆಗಲಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ಬಗ್ಗೆ ಚಿತ್ರತಂಡ ಇನ್ನೂ ಯಾವ ಅಪ್ಡೇಟ್​ ಸಹ ನೀಡಿಲ್ಲ.

ಧ್ರುವ ಸರ್ಜಾ ಹಾಗೂ ನಂದ ಕಿಶೋರ್​ ಅವರ ಕಾಂಬಿನೇಷನ್​ನಲ್ಲಿ ಮತ್ತೊಂದು ಸಿನಿಮಾ ಬರುತ್ತಿದ್ದು, ಚಿರು ಹುಟ್ಟಿದ ಹಬ್ಬದಂದೇ ಈ ಸಿನಿಮಾದ ಸ್ಕ್ರಿಪ್ಟ್​ ಪೂಜೆ ನಡೆದಿತ್ತು. ಇನ್ನು ಇತ್ತೀಚೆಗಷ್ಟೆ ಈ ಸಿನಿಮಾ ಟೈಟಲ್​ ಪೋಸ್ಟರ್​ ಸಹ ರಿಲೀಸ್​ ಮಾಡಲಾಯಿತು. ಆ ಸಿನಿಮಾಗೆ ದುಬಾರಿ ಎಂದು ಹೆಸರಿಡಲಾಗಿದೆ.

Leave a Reply

error: Content is protected !!
LATEST
ಸರ್ಕಾರದ ತಾತ್ಸಾರದಿಂದಾಗಿ ಆರ್ಥಿಕವಾಗಿ ಸಬಲವಾಗಿದ್ದರೂ ಸಂಕಷ್ಟದ ಪರಿಸ್ಥಿತಿ ತಲುಪಿದ KSRTC ಸಾರಿಗೆ ನಿಗಮಗಳು! KSRTC ಚಾಲನಾ ಸಿಬ್ಬಂದಿ ಕಾರ್ಮಿಕರಲ್ಲ ನೌಕರರು - ಹುದ್ದೆ ಅರಿವಿಲ್ಲದವರು ಕಾರ್ಮಿಕ ಪದ ಬಳಸುತ್ತಿದ್ದಾರೆ..! ಸಾರಿಗೆ ಸಿಬ್ಬಂದಿಗಳಿಗೆ ಮೋಸ ಮಾಡಿರುವ ನಿಮಗೆ ಯಾವ ನೈತಿಕತೆ ಇದೆ: ಬಿಜೆಪಿಗರ ತರಾಟೆಗೆ ತೆಗೆದುಕೊಂಡ ರಾಮಲಿಂಗಾರೆಡ್ಡಿ ನ.27 "ನಿಧಿ ಆಪ್ಕೆ ನಿಕಟ್" ಇಪಿಎಸ್ ಪಿಂಚಣಿದಾರರ ಪ್ರತಿಭಟನೆ ಬೆಂಗ್ರಾ: ವಿವೇಕಾನಂದರ ಜನ್ಮ ದಿನ ಅಂಗವಾಗಿ ನ.30ರಂದು ಯುವ ಜನೋತ್ಸವ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲೇ ಸರಿ ಸಮಾನ ವೇತನ ಘೋಷಣೆ ಮಾಡಿದೆ: ಸರ್ಕಾರ ಕೊಡಲು ಸಿದ್ಧವಿದ್ದರೂ ಕ್ರಿಯಾ ಸಮಿತಿ ಕ್... ಸರಿಸಮಾನ ವೇತನದ ನಿರ್ಧಾರ: ನಮಗೆ ಸಾರಿಗೆ ಸಚಿವರು ಕೊಟ್ಟ ಭರವಸೆ ಶೀಘ್ರ ಈಡೇರಲಿದೆ ಎಂದ ಅಧಿಕಾರಿ, ಮೇಲ್ವಿಚಾರಕರ ಮುಖಂಡ... KSRTC: ಸ್ವಯಂ ಘೋಷಿತ ಕಾರ್ಮಿಕ ನಾಯಕರ "ಚೌಕಾಶಿ" ವೇತನ ಒಪ್ಪಂದಕ್ಕೆ ಇತೀಶ್ರೀ ಹಾಡಿ - ಎಂಡಿಗೆ ಮನವಿ NWKRTC: ತಾಂತ್ರಿಕ ದೋಷದಿಂದ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಬಸ್‌- ಚಾಲನಾ ಸಿಬ್ಬಂದಿಗಳಿಗೆ ಗಾಯ ನಿರುದ್ಯೋಗಿ ಯುವಕ - ಯುವತಿಯರಿಗೆ ಮಾತ್ರ: PM ಇಂಟರ್ನ್​ಶಿಪ್ಪ್‌ಗೆ ಅರ್ಜಿ ಹಾಕಿ -ಪ್ರತಿ ತಿಂಗಳು ₹5000 ಭತ್ಯೆ ಪಡೆಯಿರ...